ಎನ್ ಡಿ ಟಿ ವಿ ವಿಶ್ವ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ
October 21st, 10:25 am
ನಾವು ಹಿಂದಿನ 4-5 ವರ್ಷಗಳ ಚರ್ಚೆಗಳನ್ನು ನೋಡಿದರೆ ಬಹುತೇಕ ಚರ್ಚೆಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ ಎಂಬುದನ್ನು ಗಮನಿಸಬಹುದು. ಅದುವೇ ಭವಿಷ್ಯದ ಬಗ್ಗೆ ಕಾಳಜಿ/ಕಳವಳ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಇತ್ತು. ಕೋವಿಡ್ ಹರಡುತ್ತಿದ್ದಂತೆ, ಜಾಗತಿಕ ಆರ್ಥಿಕತೆಯ ಬಗ್ಗೆ ಕಳವಳಗಳು ಹೆಚ್ಚಾದವು. ಸಾಂಕ್ರಾಮಿಕ ರೋಗವು ಹಣದುಬ್ಬರ, ನಿರುದ್ಯೋಗ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಚಿಂತೆಗಳನ್ನು ಹೆಚ್ಚಿಸಿತು. ನಂತರ, ಭುಗಿಲೆದ್ದ ಯುದ್ಧಗಳು ಈ ಕುರಿತಾದ ಚರ್ಚೆಗಳು ಮತ್ತು ಆತಂಕಗಳನ್ನು ತೀವ್ರಗೊಳಿಸಿತು. ಜಾಗತಿಕ ಪೂರೈಕೆ ಸರಪಳಿಗೆ ಅಡೆತಡೆಗಳು ಮತ್ತು ಅನೇಕ ಅಮಾಯಕ ಜೀವಿಗಳು ಪ್ರಾಣ ಕಳೆದುಕೊಳ್ಳಬೇಕಾದ ಬಗ್ಗೆ ಆತಂಕ ಉಂಟಾಗಿತ್ತು. ಜಾಗತಿಕ ಶೃಂಗಸಭೆಗಳು ಮತ್ತು ಉಪನ್ಯಾಸಗಳಲ್ಲಿ ಉದ್ವಿಗ್ನತೆಗಳು, ಸಂಘರ್ಷಗಳು ಮತ್ತು ಒತ್ತಡಗಳು ಚರ್ಚಾ ವಿಷಯಗಳಾದವು. ಜಾಗತಿಕವಾಗಿ ಪ್ರಸ್ತುತದ ಚರ್ಚೆಗಳು ಈ ಕಳವಳದ ಬಗ್ಗೆ ಕೇಂದ್ರೀಕೃತವಾಗಿರುವಾಗ, ಭಾರತದಲ್ಲಿ ಯಾವ ರೀತಿಯ ಚಿಂತನೆ ನಡೆಯುತ್ತಿದೆ? ಇದು ಜಾಗತಿಕ ಚಿಂತೆಗೆ ವ್ಯತಿರಿಕ್ತವಾಗಿದೆ. ಭಾರತದಲ್ಲಿ ನಾವು ಈ ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ “ಭಾರತೀಯ ಶತಮಾನ”ದ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತ ಆಶಾಕಿರಣವಾಗಿದೆ. ಜಗತ್ತು ಚಿಂತೆಯಲ್ಲಿ ಮುಳುಗಿರುವಾಗ, ಭಾರತವು ಭರವಸೆಯನ್ನು ಹರಡುತ್ತಿದೆ. ಹಾಗೆಂದ ಮಾತ್ರಕ್ಕೆ ಜಾಗತಿಕ ಸನ್ನಿವೇಶಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದಲ್ಲ – ಅದು ಪ್ರಭಾವವನ್ನು ಖಂಡಿತವಾಗಿಯೂ ಬೀರಲಿದೆ. ಭಾರತವು ಸವಾಲುಗಳನ್ನು ಎದುರಿಸುತ್ತಿದೆ, ಆದರೆ ಇಲ್ಲಿ ಸಕಾರಾತ್ಮಕತೆಯ ಭಾವವಿದೆ, ನಾವೆಲ್ಲರೂ ಅದರ ಅನುಭೂತಿ ಪಡೆಯಬಹುದು. ಹೀಗಾಗಿ 'ದಿ ಇಂಡಿಯನ್ ಸೆಂಚುರಿ – (ಭಾರತದ ಶತಮಾನದ)' ದ ಬಗ್ಗೆ ಮಾತು ಕೇಳಿಬರುತ್ತಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು
October 21st, 10:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಶೃಂಗಸಭೆಯಲ್ಲಿ ಹಲವು ವಿಷಯಗಳನ್ನು ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವಿವಿಧ ವಲಯಗಳ ಜಾಗತಿಕ ನಾಯಕರ ಉಪಸ್ಥಿತಿಯನ್ನು ಅವರು ಶ್ಲಾಘಿಸಿದರು.ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
August 31st, 12:16 pm
ಅಶ್ವಿನಿ ವೈಷ್ಣವ್ ಜೀ ಸೇರಿದಂತೆ ಕೇಂದ್ರ ಸರ್ಕಾರದ ನನ್ನ ಗೌರವಾನ್ವಿತ ಸಹೋದ್ಯೋಗಿಗಳೇ; ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಜೀ; ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ; ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ನನ್ನ ಇತರ ಸಂಪುಟ ಸಹೋದ್ಯೋಗಿಗಳೇ; ರಾಜ್ಯಗಳ ಉಪ ಮುಖ್ಯಮಂತ್ರಿಗಳು; ಮಂತ್ರಿಗಳು; ಸಂಸತ್ ಸದಸ್ಯರು; ಮತ್ತು ದೇಶದಾದ್ಯಂತದ ಇತರ ಸಾರ್ವಜನಿಕ ಪ್ರತಿನಿಧಿಗಳು, ಮಹಿಳೆಯರೇ ಮತ್ತು ಮಹನೀಯರೇ!ವಿಡಿಯೋ ಕಾನ್ಪರೆನ್ಸ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
August 31st, 11:55 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಪ್ರಧಾನಮಂತ್ರಿಯವರ ‘ಭಾರತದಲ್ಲೇ ತಯಾರಿಸು - ಮೇಕ್ ಇನ್ ಇಂಡಿಯಾ’ ಮತ್ತು ಸ್ವಾವಲಂಬಿ ಭಾರತ” ದೃಷ್ಟಿಕೋನದ ಮಹತ್ವ ಕುರಿತು ಬೆಳಕು ಚೆಲ್ಲಿದರು. ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ-ನಾಗರ್‌ಕೋಯಿಲ್ ಮೂರು ಮಾರ್ಗಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತಿದೆ. ಈ ಮೂರು ರೈಲುಗಳು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಪರ್ಕ ವ್ಯವಸ್ಥೆಗೆ ಪುಷ್ಟಿ ನೀಡಲಿದೆ.India’s GDP Soars: A Win For PM Modi’s GDP plus Welfare
December 01st, 09:12 pm
Exceeding all expectations and predictions, India's Gross Domestic Product (GDP) has demonstrated a remarkable annual growth of 7.6% in the second quarter of FY2024. Building on a strong first-quarter growth of 7.8%, the second quarter has outperformed projections with a growth rate of 7.6%. A significant contributor to this growth has been the government's capital expenditure, reaching Rs. 4.91 trillion (or $58.98 billion) in the first half of the fiscal year, surpassing the previous year's figure of Rs. 3.43 trillion.ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ 41ನೇ ಪ್ರಗತಿ ಸಂವಾದ
February 22nd, 07:17 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಆಡಳಿತ ಪರವಾದ ಮತ್ತು ಸಕಾಲಿಕ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ 41ನೇ ಆವೃತ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 11th, 12:32 pm
ಈ ಮಹಾನ್ ವ್ಯಕ್ತಿಗಳನ್ನು ಗೌರವಿಸುವಾಗ, ನಾವು ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಸಶಕ್ತಗೊಳಿಸುತ್ತಿದ್ದೇವೆ. ಇಂದು ಕರ್ನಾಟಕವು ಮೊದಲ ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲನ್ನು ಪಡೆಯಿತು. ಈ ರೈಲು ಚೆನ್ನೈ, ದೇಶದ ಸ್ಟಾರ್ಟ್ ಅಪ್ ರಾಜಧಾನಿ ಬೆಂಗಳೂರು ಮತ್ತು ಪಾರಂಪರಿಕ ನಗರಿ ಮೈಸೂರನ್ನು ಸಂಪರ್ಕಿಸುತ್ತದೆ. ಕರ್ನಾಟಕದ ಜನರನ್ನು ಅಯೋಧ್ಯೆ, ಪ್ರಯಾಗ್ ರಾಜ್ ಮತ್ತು ಕಾಶಿಗೆ ಕರೆದೊಯ್ಯುವ ಭಾರತ್ ಗೌರವ್ ಕಾಶಿ ದರ್ಶನ್ ರೈಲು ಸಹ ಇಂದು ಪ್ರಾರಂಭವಾಗಿದೆ. ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಸಹ ಉದ್ಘಾಟಿಸಲಾಯಿತು. ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನ ಕೆಲವು ಚಿತ್ರಗಳನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದೆ. ಆದರೆ ನನ್ನ ಭೇಟಿಯ ಸಮಯದಲ್ಲಿ, ಚಿತ್ರಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದ ಹೊಸ ಟರ್ಮಿನಲ್ ಇನ್ನೂ ಹೆಚ್ಚು ಭವ್ಯ ಮತ್ತು ಆಧುನಿಕವಾಗಿದೆ ಎಂದು ನಾನು ಕಂಡುಕೊಂಡೆ. ಇದು ಬೆಂಗಳೂರಿನ ಜನರ ಅತ್ಯಂತ ಹಳೆಯ ಬೇಡಿಕೆಯಾಗಿದ್ದು, ಅದನ್ನು ಈಗ ನಮ್ಮ ಸರ್ಕಾರ ಈಡೇರಿಸಿದೆ.PM Modi attends a programme at inauguration of 'Statue of Prosperity' in Bengaluru
November 11th, 12:31 pm
PM Modi addressed a public function in Bengaluru, Karnataka. Throwing light on the vision of a developed India, the PM said that connectivity between cities will play a crucial role and it is also the need of the hour. The Prime Minister said that the new Terminal 2 of Kemepegowda Airport will add new facilities and services to boost connectivity.ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅವತರಣಿಕೆ
September 17th, 05:38 pm
ದೇಶವು ಇಂದು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಭಾರತದಲ್ಲಿ ವೇಗವಾಗಿ ಕೊನೆಯ ಮೈಲಿಯವರೆಗೂ ಸರಕು, ಸೇವೆಗಳು ವಿತರಣೆಯಾಗಬೇಕು, ಸಾರಿಗೆಗೆ ಸಂಬಂಧಿಸಿದ ಸವಾಲುಗಳನ್ನು ನಿವಾರಿಸಬೇಕು ಮತ್ತು ನಮ್ಮ ಉತ್ಪಾದಕರ ಹಾಗು ಕೈಗಾರಿಕೆಗಳ ಸಮಯ ಮತ್ತು ಹಣ ಎರಡನ್ನೂ ಉಳಿಸಬೇಕು. ಅದೇ ರೀತಿ, ನಮ್ಮ ಕೃಷಿ ಉತ್ಪನ್ನಗಳ ಸಾಗಾಟ ವಿಳಂಬದಿಂದಾಗಿ ಉಂಟಾಗುವ ನಷ್ಟವನ್ನು ನಾವು ಹೇಗೆ ತಡೆಗಟ್ಟಬಹುದು? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಿರಂತರ ಪ್ರಯತ್ನ ನಡೆದಿದೆ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು ಅದರ ಒಂದು ಭಾಗವಾಗಿದೆ.PM launches National Logistics Policy
September 17th, 05:37 pm
PM Modi launched the National Logistics Policy. He pointed out that the PM Gatishakti National Master Plan will be supporting the National Logistics Policy in all earnest. The PM also expressed happiness while mentioning the support that states and union territories have provided and that almost all the departments have started working together.ಸೆಪ್ಟೆಂಬರ್ 17 ರಂದು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ
September 16th, 06:47 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 17ರಂದು ಸಂಜೆ 5.30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (ಎನ್ಎಲ್ ಪಿ ) ಗೆ ಚಾಲನೆ ನೀಡಲಿದ್ದಾರೆ.ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕುರಿತ ವೆಬಿನಾರಿನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
March 02nd, 10:49 am
ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ನಮ್ಮ ಸರಕಾರಕ್ಕೆ ಪ್ರತ್ಯೇಕವಾದ ವಲಯವಾಗಿ ಉಳಿದಿಲ್ಲ. ಇಂದು ಆರ್ಥಿಕ ವಲಯದಲ್ಲಿ ನಮ್ಮ ಚಿಂತನೆ ಡಿಜಿಟಲ್ ಆರ್ಥಿಕತೆ ಮತ್ತು ಫಿನ್ ಟೆಕ್ ನಂತಹ ಮೂಲ ತಳಹದಿಯ ಸಂಗತಿಗಳಿಗೆ ಸಂಬಂಧಿಸಿದುದಾಗಿದೆ. ಮೂಲ ಸೌಕರ್ಯಗಳಲ್ಲಿ ನಮ್ಮ ಅಭಿವೃದ್ಧಿ ಚಿಂತನೆ ಆಧುನಿಕ ತಂತ್ರಜ್ಞಾನವನ್ನು ಆಧರಿಸಿದೆ. ಸಾರ್ವಜನಿಕ ಸೇವೆಗಳು ಮತ್ತು ಕಟ್ಟ ಕಡೆಯ ಹಂತದವರೆಗೂ ಸೇವಾ ಒದಗಣೆ ಈಗ ದತ್ತಾಂಶಗಳ ಮೂಲಕ ಡಿಜಿಟಲ್ ವೇದಿಕೆಗಳಿಗೆ ಜೋಡಿಸಲ್ಪಟ್ಟಿದೆ. ತಂತ್ರಜ್ಞಾನ ನಮಗೆ ದೇಶದ ಜನ ಸಾಮಾನ್ಯರನ್ನು ಸಶಕ್ತೀಕರಣಗೊಳಿಸಲು ಇರುವ ಪ್ರಮುಖ ಶಕ್ತಿಶಾಲೀ ಮಾಧ್ಯಮ. ನಮಗೆ ತಂತ್ರಜ್ಞಾನ ಎನ್ನುವುದು ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ತಳಹದಿ ಮತ್ತು ನಾನು ಭಾರತದ ಸ್ವಾವಲಂಬನೆ ಬಗ್ಗೆ ಮಾತನಾಡುವಾಗ, ನೀವು ಇಂದು ಬೆಳಗ್ಗೆ ಅಮೆರಿಕಾ ಅಧ್ಯಕ್ಷ ಬೈಡನ್ ಅವರ ಮಾತುಗಳನ್ನು ಕೇಳಿರಬಹುದು. ಅವರು ಕೂಡಾ ಅಮೆರಿಕಾವನ್ನು ಸ್ವಾವಲಂಬಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ಕೂಡಾ ಇಂದು ’ಅಮೆರಿಕಾ ನಿರ್ಮಿತ” ಕ್ಕೆ ಬಹಳ ಒತ್ತು ಕೊಟ್ಟಿದ್ದಾರೆ. ಮತ್ತು ಹಾಗಾಗಿ ವಿಶ್ವದಲ್ಲಿ ಹೊಸ ವ್ಯವಸ್ಥೆಯೊಂದು ಜಾರಿಗೆ ಬರುವ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದುದರಿಂದ ಸ್ವಾವಲಂಬನೆಯೊಂದಿಗೆ ಮುಂದುವರಿಯುವುದು ನಮಗೆ ಬಹಳ ಮುಖ್ಯ ಮತ್ತು ಅದು ಉತ್ತಮ ಕೂಡಾ. ಮತ್ತು ನೀವು ಕೂಡಾ ಇಂತಹ ಸಂಗತಿಗಳಿಗೆ ಬಜೆಟಿನಲ್ಲಿ ಹೆಚ್ಚು ಒತ್ತು ನೀಡಿರುವುದನ್ನು ಗಮನಿಸಿರಬಹುದು.'ತಂತ್ರಜ್ಞಾನ ಆಧರಿತ ಅಭಿವೃದ್ಧಿ' ಕುರಿತು ವೆಬಿನಾರ್ ಉದ್ದೇಶಿಸಿ ಪ್ರಧಾನಿ ಭಾಷಣ
March 02nd, 10:32 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಏಳನೇ ವೆಬಿನಾರ್ ಉದ್ದೇಶಿಸಿ ಇಂದು ಮಾತನಾಡಿದರು. ಬಜೆಟ್‌ನ ಪ್ರಸ್ತಾಪಗಳನ್ನು ಕಾಲಮಿತಿಯೊಳಗೆ ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಲು ನಡೆಸುವುದು ಮತ್ತು ಅವರನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವುದು ಈ ಸರಣಿಯ ಉದ್ದೇಶವಾಗಿದೆ. ಬಜೆಟ್‌ಗೆ ಸಂಬಂಧಿಸಿದ ಪ್ರಸ್ತಾಪಗಳನ್ನು ನಾವು ತ್ವರಿತವಾಗಿ, ತಡೆರಹಿತವಾಗಿ ಮತ್ತು ಸೂಕ್ತ ಫಲಿತಾಂಶದೊಂದಿಗೆ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಇದೊಂದು ಸಹಯೋಗದ ಪ್ರಯತ್ನ,” ಎಂದು ಈ ವೆಬಿನಾರ್‌ಗಳ ಹಿಂದಿನ ತಾರ್ಕಿಕತೆಯನ್ನು ಅವರು ವಿವರಿಸಿದರು.This year’s budget has set the ‘Gatishakti’ of India’s development in 21st century: PM Modi
February 28th, 01:05 pm
The Prime Minister, Shri Narendra Modi addressed a webinar on the vision of GatiShakti and its convergence with Union Budget 2022, today. This is sixth webinar in the series of post budget webinars addressed by the Prime Minister.‘ಗತಿಶಕ್ತಿ’ ಯೋಜನೆಯ ದೂರದೃಷ್ಟಿ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ
February 28th, 10:44 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ‘ಗತಿಶಕ್ತಿ’ ದೂರದೃಷ್ಟಿಯ ಮತ್ತು 2022ರ ಕೇಂದ್ರ ಬಜೆಟ್ ನಲ್ಲಿ ಅದನ್ನು ಸಮ್ಮಿಳಿತಗೊಳಿಸುವ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಬಜೆಟ್ ನಂತರದ ಸರಣಿಯಲ್ಲಿ ಪ್ರಧಾನಿ ಅವರು ಭಾಷಣ ಮಾಡಿದ 6ನೇ ವೆಬಿನಾರ್ ಇದಾಗಿದೆ.ಲೋಕ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಅವರ ಉತ್ತರ
February 07th, 05:33 pm
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಲು ನಾನಿಲ್ಲಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿಗಳು ಆತ್ಮ ನಿರ್ಭರ ಭಾರತ ಮತ್ತು ಆಶೋತ್ತರಗಳ ಭಾರತದ ನಿಟ್ಟಿನಲ್ಲಿ ಆಗುತ್ತಿರುವ ಇತ್ತೀಚಿನ ಪ್ರಯತ್ನಗಳ ಬಗ್ಗೆ ತಮ್ಮ ಭಾಷಣದಲ್ಲಿ ಬಹಳ ವಿವರವಾಗಿ ಮಾತನಾಡಿದ್ದಾರೆ.ಈ ಪ್ರಮುಖ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನಾನು ಕೃತಜ್ಞ.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ; ಪ್ರಧಾನ ಮಂತ್ರಿ ಉತ್ತರ
February 07th, 05:32 pm
ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಲೋಕಸಭೆಯಲ್ಲಿ ರಾಷ್ಟ್ರಪತಿ ಅವರು ಮಾಡಿದ ಭಾಷಣಕ್ಕೆ ಸಲ್ಲಿಸಿದ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ನೀಡಿದರು. ಭಾಷಣ ಆರಂಭಿಸುವ ಮುನ್ನ ಅವರು ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂತಾಪ ಸೂಚಿಸಿದರು. “ನಾನು ಭಾಷಣ ಆರಂಭಿಸುವ ಮುನ್ನ ಲತಾ ದೀದಿ ಅವರಿಗೆ ಗೌರವ ನಮನ ಸಲ್ಲಿಸಲು ಬಯಸುತ್ತೇನೆ. ಅವರು ಸಂಗೀತದ ಮೂಲಕ ನಮ್ಮ ದೇಶವನ್ನು ಒಂದುಗೂಡಿಸಿದರು” ಎಂದರು.Focus of Budget is on providing basic necessities to poor, middle class, youth: PM Modi
February 02nd, 11:01 am
Prime Minister Narendra Modi today addressed a conclave on Aatmanirbhar Arthvyavastha organized by the Bharatiya Janata Party. Addressing the gathering virtually, PM Modi said, “There is a possibility of a new world order post-COVID pandemic. Today, the world's perspective of looking at India has changed a lot. Now, the world wants to see a stronger India. With the world's changed perspective towards India, it is imperative for us to take the country forward at a rapid pace by strengthening our economy.”PM Modi addresses at Aatmanirbhar Arthvyavastha programme via Video Conference
February 02nd, 11:00 am
Prime Minister Narendra Modi today addressed a conclave on Aatmanirbhar Arthvyavastha organized by the Bharatiya Janata Party. Addressing the gathering virtually, PM Modi said, “There is a possibility of a new world order post-COVID pandemic. Today, the world's perspective of looking at India has changed a lot. Now, the world wants to see a stronger India. With the world's changed perspective towards India, it is imperative for us to take the country forward at a rapid pace by strengthening our economy.”2022-23ರ ಕೇಂದ್ರ ಬಜೆಟ್ ಮೇಲೆ ಪ್ರಧಾನ ಮಂತ್ರಿ ಅವರ ಭಾಷಣ
February 01st, 02:23 pm
ಈ ಬಜೆಟ್, 100 ವರ್ಷಗಳಲ್ಲೇ ಭಯಾನಕವಾದಂತಹ ವಿಕೋಪದ ನಡುವೆಯೂ ಅಭಿವೃದ್ಧಿಯ ಬಗ್ಗೆ ಹೊಸ ವಿಶ್ವಾಸವನ್ನು ಮೂಡಿಸಿದೆ. ಆರ್ಥಿಕತೆಯನ್ನು ಬಲಗೊಳಿಸುವುದರ ಜೊತೆಗೆ ಈ ಬಜೆಟ್ ಜನಸಾಮಾನ್ಯರಿಗೆ ಅನೇಕ ಹೊಸ ಅವಕಾಶಗಳನ್ನು ರೂಪಿಸಲಿದೆ. ಮೂಲಸೌಕರ್ಯಗಳು, ಹೂಡಿಕೆ, ಬೆಳವಣಿಗೆ ಮತ್ತು ಉದ್ಯೋಗಗಳಿಗೆ ಪೂರ್ಣ ಹೊಸ ಸಾಧ್ಯತೆಗಳನ್ನು ಈ ಬಜೆಟ್ ಒಳಗೊಂಡಿದೆ. ಹೊಸ ವಲಯವನ್ನು ತೆರೆಯಲಾಗಿದೆ ಮತ್ತು ಅದು ಹಸಿರು ಉದ್ಯೋಗಗಳದ್ದು. ಈ ಬಜೆಟ್ ತಕ್ಷಣದ ಆವಶ್ಯಕತೆಗಳಿಗೆ ಗಮನ ಹರಿಸಿದೆ ಮತ್ತು ದೇಶದ ಯುವಜನತೆಯ ಭವ್ಯ ಭವಿತವ್ಯವನ್ನು ಖಾತ್ರಿಗೊಳಿಸಿದೆ.