ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ (ಪಿಎಂ-ಆಶಾ) ಯೋಜನೆಗಳ ಮುಂದುವರಿಕೆಗೆ ಕ್ಯಾಬಿನೆಟ್ ಅನುಮೋದನೆ

September 18th, 03:16 pm

ರೈತರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಲು ಮತ್ತು ಗ್ರಾಹಕರಿಗೆ ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ನಿಯಂತ್ರಿಸಲು ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನದ (ಪಿಎಂ-ಆಶಾ) ಯೋಜನೆಗಳ ಮುಂದುವರಿಕೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಟ್ಟು ಹಣಕಾಸಿನ ಹೊರಹೋಗುವಿಕೆಯು ರೂ. 2025-26 ರವರೆಗಿನ 15 ನೇ ಹಣಕಾಸು ಆಯೋಗದ ಚಕ್ರದಲ್ಲಿ 35,000 ಕೋಟಿ ರೂಪಾಯಿ.

"2022-23 ರ ಮಾರುಕಟ್ಟೆ ಹಂಗಾಮಿಗೆ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಸಂಪುಟದ ಅನುಮೋದನೆ "

September 08th, 02:49 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2022-23 ರ ಹಿಂಗಾರು ಮಾರುಕಟ್ಟೆ ಹಂಗಾಮಿಗೆ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ (ಎಂಎಸ್‌ಪಿ) ಹೆಚ್ಚಳವನ್ನು ಅನುಮೋದಿಸಿದೆ.

“ಪ್ರಧಾನ್ ಮಂತ್ರಿ ಅನ್ನದಾತಾ ಆಯ್ ಸಂರಕ್ಷಣ ಅಭಿಯಾನ” (ಪಿಎಂ-ಆಶಾ) ನೂತನ ಸುರಕ್ಷಾ (ಅಂಬ್ರೆಲಾ) ಯೋಜನೆಗೆ ಸಂಪುಟದ ಅನುಮೋದನೆ

September 12th, 04:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅನ್ನದಾತರ ಪರ ತನ್ನ ಬದ್ಧತೆ ಮತ್ತು ಸಮರ್ಪಣೆಗೆ ಅನುಗುಣವಾಗಿ, ಹೊಸ ಸುರಕ್ಷಾ (ಅಂಬ್ರೆಲಾ) ಯೋಜನೆ ಪ್ರಧಾನ ಮಂತ್ರಿ ಅನ್ನದಾತಾ ಆಯ್ ಸಂರಕ್ಷಣ ಅಭಿಯಾನ (ಪಿ.ಎಂ. ಆಶಾ)ಕ್ಕೆ ಅನುಮೋದನೆ ನೀಡುವ ಮೂಲಕ ಕೃಷಿಕರ ಪರವಾದ ಉಪಕ್ರಮಗಳಿಗೆ ಮಹತ್ವದ ಇಂಬು ನೀಡಿದೆ. 2018ರ ಬಜೆಟ್ ನಲ್ಲಿ ಘೋಷಿಸಿರುವಂತೆ ರೈತರಿಗೆ ತಮ್ಮ ಉತ್ಪನ್ನಗಳಿಗೆ ಲಾಭದಾಯಕ ದರದ ಖಾತ್ರಿ ಪಡಿಸುವ ಗುರಿಯನ್ನು ಯೋಜನೆ ಹೊಂದಿದೆ.