ರಿಪಬ್ಲಿಕ್ ಟಿವಿ ಕಾನ್‌ಕ್ಲೇವ್‌ನಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

April 26th, 08:01 pm

ಅರ್ನಾಬ್ ಗೋಸ್ವಾಮಿ ಅವರೇ, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಎಲ್ಲಾ ಸಹೋದ್ಯೋಗಿಗಳೇ, ದೇಶ ಮತ್ತು ವಿದೇಶಗಳಲ್ಲಿನ ರಿಪಬ್ಲಿಕ್ ಟಿವಿಯ ಎಲ್ಲಾ ವೀಕ್ಷಕರೇ, ಮಹಿಳೆಯರೇ ಮತ್ತು ಮಹನೀಯರೇ! ನಾನು ಮೊದಲು, ನನ್ನ ಬಾಲ್ಯದಲ್ಲಿ ಕೇಳಿದ ಒಂದು ಹಾಸ್ಯ ಪ್ರಸಂಗವನ್ನು ಹೇಳಲು ಬಯಸುತ್ತೇನೆ. ʼಒಬ್ಬ ಪ್ರಾಧ್ಯಾಪಕರು ಇದ್ದರು, ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು, ಜೀವನದಿಂದ ಬೇಸತ್ತಿದ್ದೇನೆ, ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ಬರೆದ ಪತ್ರವಿತ್ತು. ಏನಾದರು ಕುಡಿದು ಕಂಕರಿಯಾ ಕೆರೆಗೆ ಹಾರಿ ಸಾಯುತ್ತೇನೆ ಎಂದು ಆಕೆ ಬರೆದಿದ್ದಳು. ಮರುದಿನ ಬೆಳಿಗ್ಗೆ, ತನ್ನ ಮಗಳು ಮನೆಯಲ್ಲಿ ಇಲ್ಲದಿರುವುದು ಪ್ರಾಧ್ಯಾಪಕರಿಗೆ ತಿಳಿಯಿತು. ಅವರು ಅವಳ ಕೋಣೆಗೆ ಹೋಗಿ ನೋಡದಾಗ ಪತ್ರ ಸಿಕ್ಕಿತು. ಪತ್ರವನ್ನು ಓದಿದ ಅವರಿಗೆ ತುಂಬಾ ಕೋಪ ಬಂತು. ‘ನಾನು ಪ್ರೊಫೆಸರ್ ಆಗಿದ್ದೇನೆ, ನಾನು ಇಷ್ಟು ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ಆತ್ಮಹತ್ಯೆ ಪತ್ರದಲ್ಲಿ ಅವಳು ಕಂಕಾರಿಯಾ ಕಾಗುಣಿತವನ್ನು ತಪ್ಪಾಗಿ ಬರೆದಿದ್ದಾಳೆ.’ ಅರ್ನಾಬ್ ಉತ್ತಮ ಹಿಂದಿ ಮಾತನಾಡಲು ಪ್ರಾರಂಭಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅವರು ಏನು ಮಾತುನಾಡುತ್ತಿದ್ದಾರೆ ಎಂದು ನಾನು ಕೇಳಿಸಿಕೊಳ್ಳಲಿಲ್ಲ, ಆದರೆ ಅವರ ಹಿಂದಿ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿದ್ದೆ. ಬಹುಶಃ, ಮುಂಬೈನಲ್ಲಿ ವಾಸಿಸಿದ ನಂತರ ನಿಮ್ಮ ಹಿಂದಿ ಸುಧಾರಿಸಿದೆ.

ನವದೆಹಲಿಯಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಪ್ರಧಾನಿ ಭಾಷಣ

April 26th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಾಜ್ ಪ್ಯಾಲೇಸ್‌ ಹೋಟೆಲ್‌ನಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.

ಮಣಿಪುರ ಮತ್ತು ತ್ರಿಪುರಾಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ

January 02nd, 03:34 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022 ರ ಜನವರಿ 4 ರಂದು ಮಣಿಪುರ ಮತ್ತು ತ್ರಿಪುರಾ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಸುಮಾರು 11 ಗಂಟೆಗೆ, ಪ್ರಧಾನಮಂತ್ರಿ ಅವರು ಇಂಫಾಲದಲ್ಲಿ 4800 ರೂ.ಗಿಂತ ಹೆಚ್ಚಿನ ಮೌಲ್ಯದ 22 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ, ಮಧ್ಯಾಹ್ನ 2 ಗಂಟೆಗೆ, ಅಗರ್ತಲಾದಲ್ಲಿ ಅವರು, ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಮತ್ತು ಎರಡು ಪ್ರಮುಖ ಅಭಿವೃದ್ಧಿ ಉಪಕ್ರಮಗಳನ್ನು ಪ್ರಾರಂಭಿಸುತ್ತಾರೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 16 ರಾಜ್ಯಗಳ ಎಲ್ಲಾ ಜನವಸತಿ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸುವ ಭಾರತ್‌ನೆಟ್ ಅನುಷ್ಠಾನಕ್ಕೆ ಸಂಪುಟದ ಅನುಮೋದನೆ

June 30th, 07:00 pm

ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಭಾರತ್‌ನೆಟ್ ಪರಿಷ್ಕೃತ ಅನುಷ್ಠಾನ ಕಾರ್ಯತಂತ್ರ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಈ ರಾಜ್ಯಗಳಲ್ಲಿ ಭಾರತ್‌ನೆಟ್ ಈಗ ಗ್ರಾಮ ಪಂಚಾಯಿತಿಗಳನ್ನು (ಜಿಪಿ) ಮೀರಿ ಎಲ್ಲಾ ಜನವಸತಿ ಗ್ರಾಮಗಳಿಗೂ ವಿಸ್ತರಿಸಲಿದೆ. ಪರಿಷ್ಕೃತ ಕಾರ್ಯತಂತ್ರವು ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಬಿಡ್ಡಿಂಗ್ ಪ್ರಕ್ರಿಯೆಯಿಂದ ಆಯ್ಕೆಯಾಗುವ ಗುತ್ತಿಗೆದಾರರಿಂದ ಭಾರತ್‌ನೆಟ್ ರಚನೆ, ಉನ್ನತೀಕರಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಬಳಕೆಯನ್ನು ಒಳಗೊಂಡಿದೆ. ಈ ಪಿಪಿಪಿ ಮಾದರಿಗೆ ಅನುಮೋದಿಸಲಾದ ಅಂದಾಜು ಗರಿಷ್ಠ ಕಾರ್ಯಸಾಧ್ಯತೆಯ ಅಂತರ ನಿಧಿ 19,041 ಕೋಟಿ ರೂ.ಗಳು.

ಉತ್ತರಾಖಂಡದಲ್ಲಿ ನಮಾಮಿ ಗಂಗೆ ಮಿಷನ್ ಅಡಿ ಆರು ಬೃಹತ್ ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಿ

September 28th, 05:32 pm

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿ ನಮಾಮಿ ಗಂಗೆ ಮಿಷನ್ ಅಡಿಯಲ್ಲಿ ಆರು ಬೃಹತ್ ಯೋಜನೆಗಳನ್ನು 2020 ಸೆಪ್ಟೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

#VikasKaBudget: Know more about Budget 2016

February 29th, 03:21 pm



State will undertake ‘Janvahinee’ – a public transport project based on PPP model to ply buses in different cities of Gujarat: Shri Modi

August 15th, 10:25 pm

State will undertake ‘Janvahinee’ – a public transport project based on PPP model to ply buses in different cities of Gujarat: Shri Modi