ಪ್ರಧಾನಮಂತ್ರಿ ಅವರು ಪೊಯಿಲಾ ಬೋಯಿಶಾಖ್ ವೇಳೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಬಯಸಿದ್ದಾರೆ
April 15th, 09:26 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪೊಯಿಲಾ ಬೋಯಿಶಾಖ್ ಅಂಗವಾಗಿ ಶುಭೋ ನಬೋ ಬರ್ಶೋಗೆ ಸ್ವಾಗತ ಕೋರಿದ್ದಾರೆ!ಬಾಂಗ್ಲಾದೇಶದ ಪ್ರಧಾನಮಂತ್ರಿಯವರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಮಾಧ್ಯಮ ಹೇಳಿಕೆ
April 08th, 01:16 pm
ನಿಮ್ಮ ಭಾರತ ಭೇಟಿ ಒಂದು ಪವಿತ್ರ ಸಂದರ್ಭದಲ್ಲಿ ಆಗಿದೆ, ಇದು ಪೋಯಲಾ ಬೋಡಾಶಾಖ್ ಗೆ ತುಸು ಮೊದಲು ಆಗಿದೆ. ನಾನು ಈ ಸಂದರ್ಭದಲ್ಲಿ ತಮಗೂ ಮತ್ತು ಬಾಂಗ್ಲಾದೇಶದ ಜನತೆಗೂ ಶುಭೋ ನವಾ ವರ್ಷ ಶುಭ ಕೋರುತ್ತೇನೆ. ತಮ್ಮ ಭೇಟಿಯು ನಮ್ಮ ದೇಶ ಮತ್ತು ನಮ್ಮ ಜನತೆಯ ನಡುವಿನ ಸ್ನೇಹಕ್ಕೆ ಶೋನಾಲಿ ಅಧ್ಯಾಯ (ಸುವರ್ಣ ಅಧ್ಯಾಯ) ಬರೆದಿದೆ. ನಮ್ಮ ರಾಷ್ಟ್ರಗಳ ಬಾಂಧವ್ಯದಲ್ಲಿ ಮತ್ತು ನಮ್ಮ ಪಾಲುದಾರಿಕೆಯಲ್ಲಿ ಆಗಿರುವ ಸಾಧನೆ ಅದ್ಭುತ ಪರಿವರ್ತನೆಯಾಗಿದ್ದು, ಇದು ನಿಮ್ಮ ಬಲವಾದ ಮತ್ತು ದೃಢ ನಾಯಕತ್ವದ ಸ್ಪಷ್ಟ ಕುರುಹಾಗಿದೆ. 1971ರ ಯುದ್ಧದ ಕಾಲದಲ್ಲಿ ವಿಮೋಚನೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಭಾರತೀಯ ಯೋಧರನ್ನು ಗೌರವಿಸುವ ನಿಮ್ಮ ನಿರ್ಧಾರ, ಭಾರತದ ಜನರ ಹೃದಯ ತಟ್ಟಿದೆ. ಬಾಂಗ್ಲಾದೇಶವನ್ನು ಭಯೋತ್ಪಾದಕರಿಂದ ವಿಮುಕ್ತಿಗೊಳಿಸುವ ಸಲುವಾಗಿ ಭಾರತೀಯ ಯೋಧರು ಮತ್ತು बीरमुक्तिजोधाಒಗ್ಗೂಡಿ ಹೋರಾಡಿದನ್ನು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಯಿಂದ ತೆಗೆದುಕೊಳ್ಳುತ್ತಾರೆ.