'ಏಕ್ ಪೆಡ್ ಮಾ ಕೆ ನಾಮ್' ಅಡಿಯಲ್ಲಿ ಸಸಿ ನೆಟ್ಟ ಉಪರಾಷ್ಟ್ರಪತಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ
July 27th, 10:04 pm
ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಯವರಾದ ಶ್ರೀ ಜಗದೀಪ್ ಧನಕರ್ ಅವರು ತಮ್ಮ ತಾಯಿಯ ಗೌರವಾರ್ಥ ಸಸಿ ನೆಡುತ್ತಿರುವುದು ಸ್ಫೂರ್ತಿದಾಯಕವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಉಪರಾಷ್ಟ್ರಪತಿ ಅವರನ್ನು ಪ್ರಶಂಸಿಸಿದ್ದಾರೆ.ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
June 30th, 11:00 am
'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.ಜಿ 7 ಶೃಂಗಸಭೆಯ ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಅನುವಾದ
June 14th, 09:54 pm
ಮೊದಲನೆಯದಾಗಿ, ಈ ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ನಾನು ಪ್ರಧಾನಿ ಮೆಲೋನಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಾನು ಚಾನ್ಸಲರ್ ಒಲಾಫ್ ಶೋಲ್ಜ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ. ಜಿ -7 ಶೃಂಗಸಭೆಯ ಈ ಘಟನೆ ವಿಶೇಷ ಮತ್ತು ಐತಿಹಾಸಿಕವಾಗಿದೆ. ಈ ಗುಂಪಿನ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜಿ -7 ಯ ಎಲ್ಲಾ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.ಜಿ 7 ಶೃಂಗಸಭೆಯ ಕೃತಕ ಬುದ್ಧಿಮತ್ತೆ ಮತ್ತು ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಕುರಿತ ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಿ ಭಾಗವಹಿಸಿದರು
June 14th, 09:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿಯ ಅಪುಲಿಯಾದಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ, ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಕುರಿತ ಔಟ್ರೀಚ್ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಸಮೂಹವು 50ನೇ ವಾರ್ಷಿಕೋತ್ಸವದ ಮೈಲಿಗಲ್ಲನ್ನು ಸಾಧಿಸಿರುವುದಕ್ಕೆ ಅವರು ಅಭಿನಂದಿಸಿದರು.