PM Modi meets with the Prime Minister of Barbados
November 21st, 09:13 am
PM Modi met Barbados PM Mia Amor Mottley during the India-CARICOM Summit, discussing cooperation in health, pharma, climate action, and cultural ties. They reviewed bilateral relations, global institutional reforms, and India’s leadership in the Global South.ಗಯಾನದ ಅಧ್ಯಕ್ಷರೊಂದಿಗೆ ಅಧಿಕೃತ ಮಾತುಕತೆ ನಡೆಸಿದ ಪ್ರಧಾನಮಂತ್ರಿ
November 21st, 04:23 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ನವೆಂಬರ್ 20ರಂದು ಜಾರ್ಜ್ ಟೌನ್ ನ ಸ್ಟೇಟ್ ಹೌಸ್ ನಲ್ಲಿ ಅಧ್ಯಕ್ಷ ಗೌರವಾನ್ವಿತ ಡಾ.ಮೊಹಮ್ಮದ್ ಇರ್ಫಾನ್ ಆಲಿ ಅವರನ್ನು ಭೇಟಿ ಮಾಡಿದ್ದರು. ಪ್ರಧಾನಿ ಅವರು ಸ್ಟೇಟ್ ಹೌಸ್ ಗೆ ಆಗಮಿಸುತ್ತಿದ್ದಂತೆಯೇ ಅಧ್ಯಕ್ಷ ಆಲಿ ಅವರು ಸ್ವಾಗತಿಸಿದರು ಮತ್ತು ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಿದರು.ಗಯಾನಾಕ್ಕೆ ಪ್ರಧಾನಮಂತ್ರಿಯವರ ಅಧಿಕೃತ ಭೇಟಿ (ನವೆಂಬರ್ 19-21, 2024): ಫಲಪ್ರದತೆಯ ಪಟ್ಟಿ
November 20th, 09:55 pm
ಈ ವಿಷಯದಲ್ಲಿನ ಸಹಕಾರವು ಕಚ್ಚಾ ತೈಲದ ಮೂಲ, ನೈಸರ್ಗಿಕ ಅನಿಲದಲ್ಲಿ ಸಹಯೋಗ, ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯ ವರ್ಧನೆ ಮತ್ತು ಸಂಪೂರ್ಣ ಹೈಡ್ರೋಕಾರ್ಬನ್ ಮೌಲ್ಯ ಸರಪಳಿಯಲ್ಲಿ ಪರಿಣತಿ ಹಂಚಿಕೊಳ್ಳುವುದನ್ನು ಒಳಗೊಂಡಿದೆ.ಚಿಲಿ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
November 20th, 08:36 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವೆಂಬರ್ 19ರಂದು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಚಿಲಿ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಗೇಬ್ರಿಯಲ್ ಬೋರಿಕ್ ಫಾಂಟ್ ಅವರನ್ನು ಭೇಟಿಯಾದರು. ಇದು ಅವರ ಮೊದಲ ಭೇಟಿಯಾಗಿತ್ತು.ಪ್ರಧಾನಮಂತ್ರಿ ಅವರಿಂದ ಬ್ರೆಜಿಲ್ ಅಧ್ಯಕ್ಷರ ಭೇಟಿ
November 20th, 08:05 pm
ರಿಯೊ ಡಿ ಜನೈರೊದಲ್ಲಿ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರನ್ನು ನವೆಂಬರ್ 19 ರಂದು ಭೇಟಿಯಾದರು. ಅಧ್ಯಕ್ಷ ಲುಲಾ ಅವರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿಗಳು ಧನ್ಯವಾದ ಅರ್ಪಿಸಿ ಬ್ರೆಜಿಲ್ನ ಜಿ-20 ಮತ್ತು ಐ ಬಿ ಎಸ್ ಎ ಅಧ್ಯಕ್ಷತೆಯ ಯಶಸ್ಸಿಗೆ ಅವರನ್ನು ಅಭಿನಂದಿಸಿದರು. ಬಡತನ ಮತ್ತು ಹಸಿವಿನ ವಿರುದ್ಧ ಜಾಗತಿಕ ಒಕ್ಕೂಟವನ್ನು ಸ್ಥಾಪಿಸುವ ಬ್ರೆಜಿಲಿಯನ್ ಉಪಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಅದಕ್ಕೆ ಭಾರತದ ದೃಢ ಬೆಂಬಲವನ್ನು ತಿಳಿಸಿದರು. ಜಿ 20 ತ್ರಿ ಸದಸ್ಯ ರಾಷ್ಟ್ರವಾಗಿ, ಜಾಗತಿಕ ದಕ್ಷಿಣದ ಒಳಿತಿಗೆ ಆದ್ಯತೆ ನೀಡಿರುವ ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆಡಳಿತ ಸುಧಾರಣೆಯ ಮೇಲೆ ಕೇಂದ್ರೀಕರಿಸಿದ ಬ್ರೆಜಿಲ್ ನ ಜಿ 20 ಕಾರ್ಯಸೂಚಿಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಮುಂದಿನ ವರ್ಷ ಬ್ರಿಕ್ಸ್ ಮತ್ತು ಸಿಒಪಿ 30ರ ಬ್ರೆಜಿಲ್ ನ ನಾಯಕತ್ವಕ್ಕಾಗಿ ಅವರು ಶುಭ ಕೋರಿದರು ಮತ್ತು ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ)ಯಲ್ಲಿ ಬಹುಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
October 29th, 01:28 pm
ಈ ಅರ್ಥಪೂರ್ಣ ಸಮಾರಂಭದಲ್ಲಿ ಉಪಸ್ಥಿತರಿರುವ ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಜಿ, ಮನ್ಸುಖ್ ಮಾಂಡವಿಯಾ ಜಿ, ಪ್ರತಾಪ್ ರಾವ್ ಜಾಧವ್ ಜಿ, ಶ್ರೀಮತಿ. ಅನುಪ್ರಿಯಾ ಪಟೇಲ್ ಜಿ, ಮತ್ತು ಶೋಭಾ ಕರಂದ್ಲಾಜೆ ಜಿ, ಈ ಭಾಗದ ನನ್ನ ಸಂಸದ, ಶ್ರೀ ರಾಮ್‌ವೀರ್ ಸಿಂಗ್ ಬಿಧುರಿ ಜಿ, ವಿವಿಧ ರಾಜ್ಯಗಳಿಂದ ವಾಸ್ತವಿಕ(ವರ್ಚುವಲ್) ಸಂಪರ್ಕ ಹೊಂದಿರುವ ಗೌರವಾನ್ವಿತ ರಾಜ್ಯಪಾಲರು, ಮಾನ್ಯ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಇತರೆ ಎಲ್ಲ ಗೌರವಾನ್ವಿತ ಪ್ರತಿನಿಧಿಗಳು, ವೈದ್ಯರು, ಆಯುರ್ವೇದ ವೈದ್ಯರು ಮತ್ತು ದೇಶದ ವಿವಿಧ ಭಾಗಗಳಿಂದ ಆರೋಗ್ಯ ಸಂಸ್ಥೆಗಳಿಗೆ ಸಂಬಂಧಿಸಿದ ಆಯುಷ್ ಮತ್ತು ಆರೋಗ್ಯ ವೃತ್ತಿಪರರು, ಆರೋಗ್ಯ ವ್ಯವಸ್ಥೆಯಲ್ಲಿ ತೊಡಗಿರುವ ಸಹೋದರ ಸಹೋದರಿಯರೆ, ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ, ಮಹಿಳೆಯರು ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12,850 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
October 29th, 01:00 pm
ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆಯಲ್ಲಿ (ಎಐಐಎ) ಸುಮಾರು 12,850 ಕೋಟಿ ರೂಪಾಯಿ ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.ಭಾರತಕ್ಕೆ ಸ್ಪೇನ್ ಸರ್ಕಾರದ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಭಾರತ-ಸ್ಪೇನ್ ಜಂಟಿ ಹೇಳಿಕೆ (ಅಕ್ಟೋಬರ್ 28-29, 2024)
October 28th, 06:32 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಸ್ಪೇನ್ ಸರ್ಕಾರದ ಅಧ್ಯಕ್ಷರಾದ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು 28-29 ಅಕ್ಟೋಬರ್ 2024 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಇದು ಅಧ್ಯಕ್ಷ ಸ್ಯಾಂಚೆಜ್ ಅವರ ಭಾರತಕ್ಕೆ ಮೊದಲ ಭೇಟಿ ಮತ್ತು ಮೊದಲನೆಯದು ಮತ್ತು 18 ವರ್ಷಗಳ ನಂತರ ಭಾರತಕ್ಕೆ ಸ್ಪೇನ್ ಸರ್ಕಾರದ ಅಧ್ಯಕ್ಷರ ಭೇಟಿ ಇದಾಗಿದೆ. ಸ್ಪೇನ್ ಸರ್ಕಾರದ ಸಾರಿಗೆ ಮತ್ತು ಸುಸ್ಥಿರ ಚಲನಶೀಲತೆ ಸಚಿವರು, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿ ಮತ್ತು ಉದ್ಯಮ ರಂಗದ ನಿಯೋಗದೊಂದಿಗೆ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.ಅಕ್ಟೋಬರ್ 29 ರಂದು ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು 12,850 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ
October 28th, 12:47 pm
ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 29 ರಂದು ಮಧ್ಯಾಹ್ನ 12:30 ಕ್ಕೆ ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ)ಯಲ್ಲಿ ಸುಮಾರು 12,850 ಕೋಟಿ ರೂಪಾಯಿಗಳ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಚಾಲನೆಯನ್ನು ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.ಸಿ -295 ವಿಮಾನ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
October 28th, 10:45 am
ಗೌರವಾನ್ವಿತ ಪೆಡ್ರೊ ಸ್ಯಾಂಚೆಜ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜೀ, ಭಾರತದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜೀ, ವಿದೇಶಾಂಗ ಸಚಿವರಾದ ಶ್ರೀ ಎಸ್. ಜೈಶಂಕರ್ ಜೀ, ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸ್ಪೇನ್ ಮತ್ತು ರಾಜ್ಯ ಸರ್ಕಾರದ ಸಚಿವರು, ಏರ್ ಬಸ್ ಮತ್ತು ಟಾಟಾ ತಂಡಗಳ ಎಲ್ಲಾ ಸದಸ್ಯರು, ಮಹಿಳೆಯರೇ ಮತ್ತು ಮಹನೀಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ಪೇನ್ ದೇಶದ ಪ್ರಧಾನಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್ ನ ವಡೋದರಾದಲ್ಲಿ ಸಿ-295 ವಿಮಾನಗಳನ್ನು ತಯಾರಿಸಲು ಟಾಟಾ ವಿಮಾನ ತಯಾರಿಕಾ ಸಂಕೀರ್ಣವನ್ನು ಜಂಟಿಯಾಗಿ ಉದ್ಘಾಟಿಸಿದರು
October 28th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಮಂತ್ರಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು ಇಂದು ಗುಜರಾತ್ ನ ವಡೋದರದಲ್ಲಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕ್ಯಾಂಪಸ್ ನಲ್ಲಿ ಸಿ-295 ವಿಮಾನಗಳನ್ನು ತಯಾರಿಸುವ ಟಾಟಾ ವಿಮಾನ ತಯಾರಿಕಾ ಸಂಕೀರ್ಣ (ಟಾಟಾ ಏರ್ ಕ್ರಾಫ್ಟ್ ಕಾಂಪ್ಲೆಕ್ಸ್) ವನ್ನು ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನವನ್ನು ಇಬ್ಬರು ಪ್ರಧಾನಿಗಳೂ ವೀಕ್ಷಿಸಿದರು.ಭಾರತ-ಪೋಲೆಂಡ್ ನಡುವೆ ಕಾರ್ಯತಂತ್ರ ಸಹಭಾಗಿತ್ವದ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ (2024-2028)
August 22nd, 08:22 pm
ಪೋಲೆಂಡ್ ನ ವಾರ್ಸಾದಲ್ಲಿ 2024 ಆಗಸ್ಟ್ 22ರಂದು ಭಾರತ ಮತ್ತು ಪೋಲೆಂಡ್ ಪ್ರಧಾನ ಮಂತ್ರಿಗಳು ನಡೆಸಿದ ಮಾತುಕತೆ ವೇಳೆ ಸಾಧಿಸಿದ ಒಮ್ಮತಾಭಿಪ್ರಾಯದ ಮೇಲೆ ಕಾರ್ಯತಂತ್ರ ಸಹಭಾಗಿತ್ವ ಸ್ಥಾಪನೆಯಿಂದ ಉಂಟಾದ ದ್ವಿಪಕ್ಷೀಯ ಸಹಕಾರದ ಆವೇಗ ಗುರುತಿಸಿ, ಉಭಯ ನಾಯಕರು 5 ವರ್ಷಗಳ ಕ್ರಿಯಾಯೋಜನೆ(2024-2028) ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಪ್ಪಿಕೊಂಡರು. ಕ್ರಿಯಾಯೋಜನೆಯು 5 ವರ್ಷಗಳ ದ್ವಿಪಕ್ಷೀಯ ಸಹಭಾಗಿತ್ವವನ್ನು ಈ ಕೆಳಗಿನ ವಲಯಗಳಲ್ಲಿ ಆದ್ಯತೆಯಾಗಿ ರೂಪಿಸಲು ಮಾರ್ಗದರ್ಶನ ಮಾಡುತ್ತದೆ:"ಕಾರ್ಯತಂತ್ರ ಸಹಭಾಗಿತ್ವದ ಸ್ಥಾಪನೆ" ಕುರಿತು ಭಾರತ-ಪೋಲೆಂಡ್ ಜಂಟಿ ಹೇಳಿಕೆ
August 22nd, 08:21 pm
ಪೋಲೆಂಡ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಆಗಸ್ಟ್ 21-22ರಂದು ಪೋಲೆಂಡ್‌ಗೆ ಅಧಿಕೃತ ಭೇಟಿ ನೀಡಿದರು. ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಈ ಐತಿಹಾಸಿಕ ಭೇಟಿ ನೀಡಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪೋಲೆಂಡ್ ಪ್ರಧಾನ ಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ಕನ್ನಡ ಅನುವಾದ
August 22nd, 03:00 pm
ಘನತೆವೆತ್ತ ಪ್ರಧಾನ ಮಂತ್ರಿ ಡೊನಾಲ್ಡ್ ಟಸ್ಕ್ ಅವರೇ, ಎರಡೂ ದೇಶಗಳ ಪ್ರತಿನಿಧಿಗಳೇ, ಮಾಧ್ಯಮ ಮಿತ್ರರೇ,ಭಾರತದ ಮೈತ್ರಿಯು ಕೋಮುವಾದ, ಜಾತಿವಾದ ಮತ್ತು ರಾಜವಂಶದ ರಾಜಕೀಯವನ್ನು ಮಾತ್ರ ಹರಡುತ್ತದೆ: ಭಿವಾನಿ-ಮಹೇಂದ್ರಗಢದಲ್ಲಿ ಪ್ರಧಾನಿ ಮೋದಿ
May 23rd, 02:30 pm
2024 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ, ಹರಿಯಾಣದಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಿವಾನಿ-ಮಹೇಂದ್ರಗಢದ ಜನರಿಂದ ಆತ್ಮೀಯ ಸ್ವಾಗತ ಸಿಕ್ಕಿತು. ‘ಬುದ್ಧ ಪೂರ್ಣಿಮೆ’ಯ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸುವ ಮೂಲಕ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಹರಿಯಾಣದಲ್ಲಿ ಹಸಿವು ನೀಗಿಸಲು ಒಂದು ಲೋಟ ರಬ್ಡಿ ಮತ್ತು ಈರುಳ್ಳಿಯೊಂದಿಗೆ ರೊಟ್ಟಿ ಸಾಕು ಎಂದು ಅವರು ಟೀಕಿಸಿದರು. ಉತ್ಸಾಹದ ಜನಸಮೂಹದ ನಡುವೆ, ಪಿಎಂ ಮೋದಿ ಹೇಳಿದರು, ಹರ್ಯಾಣದ ಜನರು ಒಂದೇ ಒಂದು ಭಾವನೆಯನ್ನು ಪ್ರತಿಧ್ವನಿಸುತ್ತಾರೆ: 'ಫಿರ್ ಏಕ್ ಬಾರ್ ಮೋದಿ ಸರ್ಕಾರ್'.ಹರಿಯಾಣದಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿಯವರಿಗೆ ಭಿವಾನಿ-ಮಹೇಂದ್ರಗಢದ ದೊಡ್ಡ ಸ್ವಾಗತ
May 23rd, 02:00 pm
2024 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ, ಹರಿಯಾಣದಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಿವಾನಿ-ಮಹೇಂದ್ರಗಢದ ಜನರಿಂದ ಆತ್ಮೀಯ ಸ್ವಾಗತ ಸಿಕ್ಕಿತು. ‘ಬುದ್ಧ ಪೂರ್ಣಿಮೆ’ಯ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸುವ ಮೂಲಕ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಹರಿಯಾಣದಲ್ಲಿ ಹಸಿವು ನೀಗಿಸಲು ಒಂದು ಲೋಟ ರಬ್ಡಿ ಮತ್ತು ಈರುಳ್ಳಿಯೊಂದಿಗೆ ರೊಟ್ಟಿ ಸಾಕು ಎಂದು ಅವರು ಟೀಕಿಸಿದರು. ಉತ್ಸಾಹದ ಜನಸಮೂಹದ ನಡುವೆ, ಪಿಎಂ ಮೋದಿ ಹೇಳಿದರು, ಹರ್ಯಾಣದ ಜನರು ಒಂದೇ ಒಂದು ಭಾವನೆಯನ್ನು ಪ್ರತಿಧ್ವನಿಸುತ್ತಾರೆ: 'ಫಿರ್ ಏಕ್ ಬಾರ್ ಮೋದಿ ಸರ್ಕಾರ್'.ಭಾರತವು ಅನುಯಾಯಿಯಲ್ಲ, ಆದರೆ ಮೊದಲು ಚಲಿಸುವ ದೇಶ: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ
April 20th, 04:00 pm
ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಬೆಂಗಳೂರಿನ ಪಾತ್ರ ಮಹತ್ವದ್ದು: ಬೆಂಗಳೂರಿನಲ್ಲಿ ಪ್ರಧಾನಿ ಮೋದಿಪ್ರಧಾನಿ ಮೋದಿ ಅವರು ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು
April 20th, 03:45 pm
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ರೋಮಾಂಚಕ ಗುಂಪನ್ನುದ್ದೇಶಿಸಿ ಮಾತನಾಡಿದ ಅವರು, ಎನ್ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದರು ಮತ್ತು ಭವಿಷ್ಯದ ಯೋಜನೆಗಳನ್ನು ವಿವರಿಸಿದರು.ಗ್ರೀಸ್ ನ ಪ್ರಧಾನಮಂತ್ರಿಯವರ ಭಾರತ ಭೇಟಿಯ (ಫೆಬ್ರವರಿ 21, 2024) ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
February 21st, 01:30 pm
ಪ್ರಧಾನಮಂತ್ರಿ ಶ್ರೀ ಮಿತ್ಸೋಟಾಕಿಸ್ ಮತ್ತು ಅವರ ಪ್ರತಿನಿಧಿ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಕಳೆದ ವರ್ಷ ನಾನು ಗ್ರೀಸ್ ದೇಶಕ್ಕೆ ಭೇಟಿ ನೀಡಿದ ನಂತರ, ಅವರ ಭಾರತ ಭೇಟಿಯು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಸಂಕೇತವಾಗಿದೆ, ಮತ್ತು ಹದಿನಾರು ವರ್ಷಗಳ ಸುದೀರ್ಘ ಅಂತರದ ನಂತರ ಗ್ರೀಸ್ ಪ್ರಧಾನಮಂತ್ರಿಯೊಬ್ಬರು ಭಾರತಕ್ಕೆ ಬರುತ್ತಿರುವುದು, ಒಂದು ಐತಿಹಾಸಿಕ ಸಂದರ್ಭವಾಗಿದೆ.ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಸಭೆ
December 01st, 09:36 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 1ರಂದು ಯುಎಇಯಲ್ಲಿ ನಡೆದ ಸಿಒಪಿ-28 ಶೃಂಗಸಭೆಯ ನೇಪಥ್ಯದಲ್ಲಿ ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಶೌಕತ್ ಮಿರ್ಜಿಯೋಯೆವ್ ಅವರನ್ನು ಭೇಟಿ ಮಾಡಿದರು.