ʻಇಂಡಿಯಾ ಟುಡೇ ಕಾನ್‌ಕ್ಲೇವ್ʼನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

March 18th, 11:17 pm

`ಇಂಡಿಯಾ ಟುಡೇ ಕಾನ್‌ಕ್ಲೇವ್‌ʼನಲ್ಲಿ ನಮ್ಮೊಂದಿಗಿರುವ ಎಲ್ಲ ಗಣ್ಯರಿಗೆ ಶುಭಾಶಯಗಳು! ಡಿಜಿಟಲ್ ಮಾಧ್ಯಮದ ಮೂಲಕ ನಮ್ಮೊಂದಿಗೆ ಸೇರಿದ ಭಾರತ ಮತ್ತು ವಿದೇಶಗಳ ವೀಕ್ಷಕರು ಮತ್ತು ಓದುಗರಿಗೆ ಶುಭಾಶಯಗಳು. ಈ ಸಮಾವೇಶದ ವಿಷಯ - ʻಭಾರತದ ಘಳಿಗೆʼ (ದಿ ಇಂಡಿಯಾ ಮೂಮೆಂಟ್) ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಇಂದು, ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರು, ವಿಶ್ಲೇಷಕರು, ಚಿಂತಕರು ಇದು ʻಭಾರತದ ಘಳಿಗೆʼ ಎಂದು ಒಗ್ಗಟ್ಟಿನಿಂದ ಹೇಳುತ್ತಿದ್ದಾರೆ. ಆದರೆ ʻಇಂಡಿಯಾ ಟುಡೇ ಸಮೂಹʼವು ಈ ಆಶಾವಾದವನ್ನು ವ್ಯಕ್ತಪಡಿಸಿರುವುದು 'ಮತ್ತಷ್ಟು ವಿಶೇಷ'ವಾಗಿದೆ. ಅಂದಹಾಗೆ, 20 ತಿಂಗಳ ಹಿಂದೆ ನಾನು ಕೆಂಪು ಕೋಟೆಯಿಂದ ಮಾಡಿದ ಭಾಷಣದ ವೇಳೆ – ಭಾರತಕ್ಕೆ ʻಇದು ಸರಿಯಾದ ಸಮಯ, ಇದೇ ಸಮಯʼ ಎಂದು ಹೇಳಿದ್ದೆ. ಆದರೆ ಈ ಸ್ಥಾನವನ್ನು ತಲುಪಲು 20 ತಿಂಗಳುಗಳು ಬೇಕಾಯಿತು. ಆಗಲೂ - ʻಇದು ಭಾರತದ ಘಳಿಗೆʼ ಎಂಬುದೇ ಸ್ಫೂರ್ತಿಯಾಗಿತ್ತು.

ʻಇಂಡಿಯಾ ಟುಡೇ ಕಾನ್‌ಕ್ಲೇವ್‌ʼ ಉದ್ದೇಶಿಸಿ ಪ್ರಧಾನಿ ಭಾಷಣ

March 18th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ `ಹೋಟೆಲ್ ತಾಜ್ ಪ್ಯಾಲೇಸ್’ನಲ್ಲಿ ನಡೆದ `ಇಂಡಿಯಾ ಟುಡೇ ಕಾನ್‌ಕ್ಲೇವ್‌ʼ ಉದ್ದೇಶಿಸಿ ಮಾತನಾಡಿದರು.

‘ಮನ್ ಕಿ ಬಾತ್’ ಸಾರ್ವಜನಿಕ ಸಹಭಾಗಿತ್ವದ ಅಭಿವ್ಯಕ್ತಿಗೆ ಅದ್ಭುತ ಮಾಧ್ಯಮವಾಗಿದೆ: ಪ್ರಧಾನಿ ಮೋದಿ

February 26th, 11:00 am

ಸ್ನೇಹಿತರೇ, ಇಂದು ಈ ಸಂದರ್ಭದಲ್ಲಿ ನನಗೆ ಲತಾ ಮಂಗೇಶ್ಕರ್, ಲತಾ ದೀದಿಯ ನೆನಪು ಬರುವುದು ಬಹಳ ಸಹಜವಾಗಿದೆ. ಏಕೆಂದರೆ ಈ ಸ್ಪರ್ಧೆ ಪ್ರಾರಂಭವಾದಾಗ, ಲತಾ ಅವರು ದೇಶದ ಜನತೆ ಈ ಸ್ಪರ್ಧೆಯಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬೇಕೆಂದು ಟ್ವೀಟ್ ಮೂಲಕ ಮನವಿ ಮಾಡಿದ್ದರು.

ಭಾರತ ಮತ್ತು ಸಿಂಗಾಪುರದ ನಡುವಿನ UPI-PayNow ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್

February 21st, 11:00 am

ಭಾರತದ ಯೂನಿಫೈಡ್ ಪೆಮೆಂಟ್ ಇಂಟರ್ಫೇಸ್ (UPI) ಮತ್ತು ಸಿಂಗಾಪುರದ ಪೆ ನೌ ನಡುವಿನ ವಾಸ್ತವ ಪಾವತಿ ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮತ್ತು ಸಿಂಗಾಪುರ ಪ್ರಧಾನಿ ಶ್ರೀ ಲೀ ಸಿಯೆನ್ ಲೂಂಗ್ ಭಾಗವಹಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಮೆನನ್ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿ ಪರಸ್ಪರ ಗಡಿಯಾಚೆಗಿನ ವಹಿವಾಟು ಮಾಡಿದರು.

​​​​​​​ಉಭಯ ದೇಶಗಳ ನಡುವೆ ನೈಜ ಸಮಯದ ಪಾವತಿ ವ್ಯವಸ್ಥೆಗಳ ಸಂಪರ್ಕದ ಚಾಲನೆಗೆ ಫೆಬ್ರವರಿ 21 ರಂದು ಭಾರತ ಮತ್ತು ಸಿಂಗಾಪುರದ ಪ್ರಧಾನ ಮಂತ್ರಿಗಳು ಸಾಕ್ಷಿಯಾಗಲಿದ್ದಾರೆ

February 20th, 12:52 pm

ಭಾರತದ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮತ್ತು ಸಿಂಗಾಪುರದ ಪೇ ನೌ ನಡುವಿನ ಗಡಿಯಾಚೆಗಿನ ಸಂಪರ್ಕದ ಚಾಲನೆಗೆ ಫೆಬ್ರವರಿ 21, 2023 ರಂದು ಬೆಳಿಗ್ಗೆ 11 ಗಂಟೆಗೆ (ಭಾರತೀಯ ಕಾಲಮಾನ) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಮಂತ್ರಿ ಶ್ರೀ ಲೀ ಸಿಯೆನ್ ಲೂಂಗ್ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ. ಸಾಕ್ಷಿಯಾಗಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ ಬಿ ಐ) ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ (ಎಂ ಎ ಎಸ್) ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಮೆನನ್ ಅವರು ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.