ಕೆಂಪು ಕೋಟೆಯಲ್ಲಿ ನಡೆದ “ಪರಾಕ್ರಮ್ ದಿವಸ್” ಆಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಹಿಂದಿ ಭಾಷಣದ ಕನ್ನಡ ಅವತರಣಿಕೆ
January 23rd, 06:31 pm
ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಕಿಶನ್ ರೆಡ್ಡಿ ಜಿ, ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ, ಶ್ರೀಮತಿ ಮೀನಾಕ್ಷಿ ಲೇಖಿ ಜಿ, ಶ್ರೀ ಅಜಯ್ ಭಟ್ ಜಿ, ಬ್ರಿಗೇಡಿಯರ್ ಆರ್. ಎಸ್. ಚಿಕಾರಾ ಜಿ, ಐ.ಎನ್.ಎ. ಮುಸ್ಸದ್ದಿ ಲೆಫ್ಟಿನೆಂಟ್ ಆರ್ ಮಾಧವನ್ ಜಿ, ಮತ್ತು ನನ್ನ ಪ್ರೀತಿಯ ದೇಶವಾಸಿಗಳೇ!ದಿಲ್ಲಿಯ ಕೆಂಪು ಕೋಟೆಯಲ್ಲಿ ಪರಾಕ್ರಮ ದಿವಸ್ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
January 23rd, 06:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಲ್ಲಿಯ ಕೆಂಪು ಕೋಟೆಯಲ್ಲಿ ನಡೆದ ಪರಾಕ್ರಮ ದಿವಸ್ ಆಚರಣೆಯಲ್ಲಿ ಪಾಲ್ಗೊಂಡರು. ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ರಾಷ್ಟ್ರದ ಶ್ರೀಮಂತ ವೈವಿಧ್ಯತೆಯನ್ನು ಪ್ರದರ್ಶಿಸುವ ಭಾರತ್ ಪರ್ವ್ ಗೆ ಅವರು ಚಾಲನೆ ನೀಡಿದರು. ನೇತಾಜಿ ಕುರಿತ ಛಾಯಾಚಿತ್ರಗಳು, ವರ್ಣಚಿತ್ರಗಳು, ಪುಸ್ತಕಗಳು ಮತ್ತು ಶಿಲ್ಪಗಳನ್ನು ಒಳಗೊಂಡ ರಾಷ್ಟ್ರೀಯ ಪತ್ರಾಗಾರದ ತಂತ್ರಜ್ಞಾನ ಆಧಾರಿತ ಸಂವಾದಾತ್ಮಕ ಪ್ರದರ್ಶನವನ್ನು ಪ್ರಧಾನಿ ವೀಕ್ಷಿಸಿದರು ಮತ್ತು ರಾಷ್ಟ್ರೀಯ ನಾಟಕ ಶಾಲೆ ಪ್ರಸ್ತುತಪಡಿಸಿದ ನೇತಾಜಿ ಅವರ ಜೀವನವನ್ನು ಕುರಿತ ಪ್ರೊಜೆಕ್ಷನ್ ಮ್ಯಾಪಿಂಗ್ ನೊಂದಿಗೆ ಸಂಯೋಜಿಸಿ ಮಾಡಿದ ನಾಟಕಕ್ಕೆ ಸಾಕ್ಷಿಯಾದರು. ಐಎನ್ಎ ನಿವೃತ್ತ ಲೆಫ್ಟಿನೆಂಟ್ ಆರ್.ಮಾಧವನ್ ಅವರನ್ನು ಪ್ರಧಾನ ಮಂತ್ರಿ ಸನ್ಮಾನಿಸಿದರು. ಮಾಧವನ್ ಅವರು ಬದುಕಿರುವ ಏಕೈಕ ಐ.ಎನ್.ಎ. ಹಿರಿಯರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಗಣ್ಯರ ಕೊಡುಗೆಯನ್ನು ಗೌರವಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, 2021 ರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಂದು ಪರಾಕ್ರಮ್ ದಿವಸ್ ಆಚರಿಸಲಾಗುತ್ತಿದೆ.ಪರಾಕ್ರಮ ದಿನದಂದು ಭಾರತದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
January 23rd, 09:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಪರಾಕ್ರಮ ದಿನದಂದು ಭಾರತದ ಜನತೆಗೆ ಶುಭ ಕೋರಿದ್ದಾರೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಡುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
January 23rd, 11:01 am
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ದೇಶದ ಗೃಹ ಸಚಿವ ಶ್ರೀ ಅಮಿತ್ ಭಾಯಿ ಶಾ, ಅಂಡಮಾನ್ ಮತ್ತು ನಿಕೋಬಾರ್ ನ ಲೆಫ್ಟಿನೆಂಟ್ ಗವರ್ನರ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು, ನಮ್ಮ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು, ಭಾರತೀಯ ಕೋಸ್ಟ್ ಗಾರ್ಡ್ ನ ಮಹಾನಿರ್ದೇಶಕರು, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ನ ಕಮಾಂಡರ್-ಇನ್-ಚೀಫ್, ಎಲ್ಲಾ ಅಧಿಕಾರಿಗಳು, ಪರಮವೀರ ಚಕ್ರದ ಧೈರ್ಯಶಾಲಿ ಸೈನಿಕರ ಕುಟುಂಬ ಸದಸ್ಯರು, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ!ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ 21 ಅತಿ ದೊಡ್ಡ ಅನಾಮಧೇಯ ದ್ವೀಪಗಳಿಗೆ 21 ʻಪರಮವೀರ ಚಕ್ರʼ ಪ್ರಶಸ್ತಿ ಪುರಸ್ಕೃತರ ಹೆಸರಿಡುವ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ
January 23rd, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ಅತಿ ದೊಡ್ಡ ಅನಾಮಧೇಯ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡುವ ಸಮಾರಂಭದಲ್ಲಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದರು. ಇದೇ ವೇಳೆ, ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೇತಾಜಿ ಅವರಿಗೆ ಸಮರ್ಪಿತವಾದ ʻರಾಷ್ಟ್ರೀಯ ಸ್ಮಾರಕʼದ ಮಾದರಿಯನ್ನು ಪ್ರಧಾನಮಂತ್ರಿಯವರು ಅನಾವರಣಗೊಳಿಸಿದರು.ಕೋಲ್ಕತ್ತಾದಲ್ಲಿ ಪರಾಕ್ರಮ ದಿವಸ್ ಕುರಿತು ಪ್ರಧಾನಿ ಮೋದಿ ಮಾಡಿದ ಭಾಷಣವನ್ನು ಪ್ರಶಂಸಿಸಿದ್ದಾರೆ ನೆಟ್ಟಿಗರು
January 23rd, 08:45 pm
ಜನವರಿ 23, 2021, ರಂದು ಭಾರತ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಪರಾಕ್ರಮ ದಿವಸ್ ಎಂದು ಆಚರಿಸಲಾಯಿತು . ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೋಲ್ಕತ್ತಾದಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೇತಾಜಿಗೆ ಉನ್ನತ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ನೇತಾಜಿ ಅವರ ಧೈರ್ಯ ಮತ್ತು ಭಾರತಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡರು. ಪ್ರಧಾನಿ ಮೋದಿಯವರ ಭಾಷಣವನ್ನು ದೇಶಾದ್ಯಂತ ನೆಟ್ಟಿಗರು ಶ್ಲಾಘಿಸಿದರು.ಪರಾಕ್ರಮ ದಿವಸ: ನೇತಾಜಿ ಅವರ 125ನೇ ಜಯಂತಿ ಅಂಗವಾಗಿ ಕೋಲ್ಕತ್ತಾದಲ್ಲಿ ನಡೆದ ಆಚರಣೆ ವೇಳೆ ಪ್ರಧಾನಮಂತ್ರಿ ಭಾಷಣ
January 23rd, 08:18 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಲ್ಕತ್ತಾದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ನಡೆದ ‘ಪರಾಕ್ರಮ ದಿನ’ದ ಆಚರಣೆಯನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾಜಿ ಕುರಿತ ಕಾಯಂ ಪ್ರದರ್ಶನ ಮತ್ತು ಪ್ರೊಜಕ್ಷನ್ ಮ್ಯಾಪಿಂಗ್ ಶೋ ಅನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಪ್ರಧಾನಮಂತ್ರಿ ಅವರು ನೇತಾಜಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಸ್ಟಾಂಪ್ ಅನ್ನು ಬಿಡುಗಡೆ ಮಾಡಿದರು. ನೇತಾಜಿ ಆಧರಿಸಿದ ‘ಅಮ್ರಾ ನೂತನ್ ಜೌಬನೇರಿ ದೂತ್ ‘ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ
January 23rd, 05:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಲ್ಕತ್ತಾದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ನಡೆದ ‘ಪರಾಕ್ರಮ ದಿನ’ದ ಆಚರಣೆಯನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾಜಿ ಕುರಿತ ಕಾಯಂ ಪ್ರದರ್ಶನ ಮತ್ತು ಪ್ರೊಜಕ್ಷನ್ ಮ್ಯಾಪಿಂಗ್ ಶೋ ಅನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಪ್ರಧಾನಮಂತ್ರಿ ಅವರು ನೇತಾಜಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಸ್ಟಾಂಪ್ ಅನ್ನು ಬಿಡುಗಡೆ ಮಾಡಿದರು. ನೇತಾಜಿ ಆಧರಿಸಿದ ‘ಅಮ್ರಾ ನೂತನ್ ಜೌಬನೇರಿ ದೂತ್ ‘ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಜನವರಿ 23, ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
January 21st, 02:01 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ 125ನೇ ಜಯಂತಿ ವರ್ಷದ ಅಂಗವಾಗಿ 2021ರ ಜನವರಿ 23ರಂದು ನಡೆಯಲಿರುವ “ಪರಿಕ್ರಮ ದಿವಸ’ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲು ಕೋಲ್ಕತ್ತಾಕ್ಕೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿಯವರು ಅಸ್ಸಾಂನ ಶಿವಸಾಗರ್ ನ ಜರೇಂಗಾ ಪತ್ಹಾರ್ ಗೂ ಭೇಟಿ ನೀಡಲಿದ್ದು, 1.06 ಲಕ್ಷ ಭೂಮಿ ಪಟ್ಟಾ/ಹಂಚಿಕೆ ಪತ್ರ ವಿತರಣೆ ಮಾಡಲಿದ್ದಾರೆ.