ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಂದೇಶ

January 12th, 11:00 am

ಇಂದು ಎಲ್ಲಾ ಭಾರತೀಯರಿಗೆ ಮತ್ತು ವಿಶ್ವಾದ್ಯಂತ ಹರಡಿರುವ ಭಗವಾನ್ ರಾಮನ ಭಕ್ತರಿಗೆ ಇದು ಪವಿತ್ರ ಸಂದರ್ಭವಾಗಿದೆ! ಎಲ್ಲೆಲ್ಲೂ ರಾಮನ ಭಕ್ತಿಯ ಮೋಹಕ ವಾತಾವರಣ! ರಾಮನ ಸುಮಧುರ ಕೀರ್ತನೆಗಳು, ಎಲ್ಲಾ ದಿಕ್ಕುಗಳಲ್ಲಿಯೂ ರಾಮ ಭಜನೆಗಳ ಸೊಗಸಾದ ಸೌಂದರ್ಯ! ಜನವರಿ 22ರ ಆ ಐತಿಹಾಸಿಕ ಪವಿತ್ರ ಕ್ಷಣಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆಗೆ ಇನ್ನು ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಕಲ್ಪನೆಗೂ ಮೀರಿದ ಕ್ಷಣಗಳನ್ನು ಅನುಭವಿಸುವ ಸಮಯ ಇದು.

ಶ್ರೀ ರಾಮಲಾಲಾ ಪ್ರಾಣ ಪ್ರತಿಷ್ಠೆಗಾಗಿ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸಿದ ಪ್ರಧಾನ ಮಂತ್ರಿ

January 12th, 10:31 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 22ರಂದು ಅಯೋಧ್ಯ ಧಾಮ ದೇವಸ್ಥಾನದಲ್ಲಿ ಶ್ರೀ ರಾಮಲಾಲಾ ಅವರ ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸಿದರು. “ಇದೊಂದು ಬಹುದೊಡ್ಡ ಜವಾಬ್ದಾರಿ. ನಮ್ಮ ಧರ್ಮಗ್ರಂಥಗಳಲ್ಲಿ ಹೇಳಿರುವಂತೆ, ಯಾಗ ಮತ್ತು ದೇವರ ಆರಾಧನೆಗಾಗಿ ನಮ್ಮಲ್ಲಿ ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು. ಇದಕ್ಕಾಗಿ ಧರ್ಮಗ್ರಂಥಗಳಲ್ಲಿ ಉಪವಾಸ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ನಿಗದಿಪಡಿಸಲಾಗಿದೆ, ಅದನ್ನು ಪವಿತ್ರೀಕರಣದ ಮೊದಲು ಅನುಸರಿಸಬೇಕು. ಆದ್ದರಿಂದ, ನಾನು ಕೆಲವು ಪುಣ್ಯಾತ್ಮರು ಮತ್ತು ಆಧ್ಯಾತ್ಮಿಕ ಪ್ರಯಾಣದ ಮಹಾಪುರುಷರಿಂದ ಪಡೆದ ಮಾರ್ಗದರ್ಶನದ ಪ್ರಕಾರ, ಅವರು ಸೂಚಿಸಿದ ‘ಯಮ-ನಿಯಮ’ಗಳ ಪ್ರಕಾರ, ನಾನು ಇಂದಿನಿಂದ 11 ದಿನಗಳ ವಿಶೇಷ ಪೂಜಾ ಆಚರಣೆ ಆರಂಭಿಸುತ್ತಿದ್ದೇನೆ.