“ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್” ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣ
August 31st, 10:39 pm
“ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್” ನ ಈ ನೂತನ ಆವೃತ್ತಿಯಲ್ಲಿ ಭಾಗವಹಿಸುತ್ತಿರುವಾಗ, ಹಲವಾರು ಪರಿಚಿತ ಮುಖಗಳನ್ನು ನೋಡಲು ನನಗೆ ಸಂತೋಷವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯದ ಬಗ್ಗೆ ಇಲ್ಲಿ ಅತ್ಯುತ್ತಮ ಚರ್ಚೆಗಳು ನಡೆದಿವೆ ಎಂದು ನನಗೆ ವಿಶ್ವಾಸವಿದೆ, ಅದರಲ್ಲೂ ವಿಶೇಷವಾಗಿ ಇಡೀ ಜಗತ್ತು ಭಾರತದ ಬಗ್ಗೆ ವಿಶ್ವಾಸ ಹೊಂದಿರುವ ಈ ಸಮಯದಲ್ಲಿ ಚರ್ಚೆಗಳು ನಡೆದಿವೆ ಎಂಬುದು ವಿಶೇಷ.ನವದೆಹಲಿಯಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ನಾಯಕರ ವೇದಿಕೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
August 31st, 10:13 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ(ವರ್ಲ್ಡ್ ಲೀಡರ್ಸ್ ಫೋರಂ) ಉದ್ದೇಶಿಸಿ ಭಾಷಣ ಮಾಡಿದರು.ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ವಾಧ್ವಾನ್ ಬಂದರಿನ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
August 30th, 01:41 pm
ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಜೀ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ರಾಜೀವ್ ರಂಜನ್ ಸಿಂಗ್ ಜೀ ಮತ್ತು ಸರ್ಬಾನಂದ ಸೋನೊವಾಲ್ ಜೀ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಜೀ ಮತ್ತು ಅಜಿತ್ ದಾದಾ ಪವಾರ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಇತರ ಸಹೋದ್ಯೋಗಿಗಳು, ಮಹಾರಾಷ್ಟ್ರ ಸರ್ಕಾರದ ಸಚಿವರು, ಇತರ ಗೌರವಾನ್ವಿತ ಅತಿಥಿಗಳು, ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಸುಮಾರು 76,000 ಕೋಟಿ ರೂಪಾಯಿ ಮೌಲ್ಯದ ವಾಧ್ವಾನ್ ಬಂದರಿಗೆ
August 30th, 01:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಯೋಜನೆಗಳಲ್ಲಿ ಸುಮಾರು 76,000 ಕೋಟಿ ರೂ.ಗಳ ವೆಚ್ಚದಲ್ಲಿ ವಾಧ್ವಾನ್ ಬಂದರಿಗೆ ಶಂಕುಸ್ಥಾಪನೆ ಮತ್ತು ಸುಮಾರು 1,560 ಕೋಟಿ ರೂ.ಗಳ 218 ಮೀನುಗಾರಿಕೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸೇರಿವೆ. ಶ್ರೀ ಮೋದಿ ಅವರು ಸುಮಾರು 360 ಕೋಟಿ ರೂ.ಗಳ ವೆಚ್ಚದಲ್ಲಿ ಹಡಗು ಸಂವಹನ ಮತ್ತು ಬೆಂಬಲ ವ್ಯವಸ್ಥೆಯ ರಾಷ್ಟ್ರೀಯ ಮಟ್ಟದ ಕಾರ್ಯಾಚರಣೆಗೆ (ರೋಲ್ ಔಟ್ ಗೆ) ಚಾಲನೆ ನೀಡಿದರು. ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಉನ್ನತೀಕರಣ ಮತ್ತು ಆಧುನೀಕರಣ, ಮೀನು ಇಳಿಯುವ ಕೇಂದ್ರಗಳು ಮತ್ತು ಮೀನು ಮಾರುಕಟ್ಟೆಗಳ ನಿರ್ಮಾಣ ಸೇರಿದಂತೆ ಪ್ರಮುಖ ಮೀನುಗಾರಿಕೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಮೀನುಗಾರರ ಫಲಾನುಭವಿಗಳಿಗೆ ಟ್ರಾನ್ಸ್ ಪಾಂಡರ್ ಸೆಟ್ ಗಳು ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಿದರು.ಆಗಸ್ಟ್ 30 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನ ಮಂತ್ರಿ
August 29th, 04:47 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಆಗಸ್ಟ್ 30 ರಂದು ಮಹಾರಾಷ್ಟ್ರದ ಮುಂಬೈ ಮತ್ತು ಫ;ಲ್ಘರ್ ಗೆ ಭೇಟಿ ನೀಡಲಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನಮಂತ್ರಿಯವರು ಬೆಳಿಗ್ಗೆ 11 ಗಂಟೆಗೆ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ [ಜಿಎಫ್ಎಫ್] 2024 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ತರುವಾಯ ಮಧ್ಯಾಹ್ನ 1;30ಕ್ಕೆ ಪ್ರಧಾನಮಂತ್ರಿಯವರು ಫಲ್ಘರ್ ನ ಸಿಐಡಿಸಿಒ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.'ಮಹಾರಾಷ್ಟ್ರದ ವಧವನ್ ನಲ್ಲಿ ಸರ್ವಋತು ಗ್ರೀನ್‌ಫೀಲ್ಡ್ ಡೀಪ್‌ಡ್ರಾಫ್ಟ್ ಪ್ರಮುಖ ಬಂದರು ಅಭಿವೃದ್ಧಿ'ಗೆ ಸಂಪುಟದ ಅನುಮೋದನೆ
June 19th, 09:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಮಹಾರಾಷ್ಟ್ರದ ದಹಾನು ಬಳಿಯ ವಧವನ್ ನಲ್ಲಿ ಪ್ರಮುಖ ಬಂದರು ಸ್ಥಾಪನೆಗೆ ಅನುಮೋದನೆ ನೀಡಿದೆ. ಯೋಜನೆಯನ್ನು ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ (JNPA) ರಚಿತವಾದ ವಧವನ್ ಪೋರ್ಟ್ ಪ್ರಾಜೆಕ್ಟ್ ಲಿಮಿಟೆಡ್ (VPPL) ಮತ್ತು ಮಹಾರಾಷ್ಟ್ರ ಮಾರಿಟೈಮ್ ಬೋರ್ಡ್ (MMB) ಮೂಲಕ ನಿರ್ಮಿಸಲಾಗುವುದು, ಇವು ಕ್ರಮವಾಗಿ ಶೇ.74 ಮತ್ತು ಶೇ.26 ಷೇರುಗಳನ್ನು ಹೊಂದಿವೆ. ವಧವನ್ ಬಂದರನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಧವನ್ ನಲ್ಲಿ ಸರ್ವಋತು ಗ್ರೀನ್‌ಫೀಲ್ಡ್ ಡೀಪ್ ಡ್ರಾಫ್ಟ್ ಪ್ರಮುಖ ಬಂದರಾಗಿ ಅಭಿವೃದ್ಧಿಪಡಿಸಲಾಗುವುದು.PM expresses sadness on demise of MP from Palghar, Shri Chintaman Wanaga
January 30th, 03:57 pm
PM expressed sadness on demise of MP from Palghar, Shri Chintaman Wanaga. He said, Pained by the unfortunate demise of my colleague and MP from Palghar, Shri Chintaman Wanaga. He played an important role in building the BJP in the Thane region and did commendable work for the welfare of tribals. My thoughts are with his family and supporters in this sad hour.