ಬಿಹಾರದ ಜಮುಯಿಯಲ್ಲಿ ಆಯೋಜಿತವಾಗಿದ್ದ ಜನಜಾತಿಯ ಗೌರವ್ ದಿವಸ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 15th, 11:20 am

ಬಿಹಾರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಬಿಹಾರದ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಜುಯಲ್ ಓರಾಮ್ ಜಿ, ಜಿತನ್ ರಾಮ್ ಮಾಂಝಿ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ, ಮತ್ತು ಯು ಕೆ ದುರ್ಗಾದಾಸ್ ಜಿ ಮತ್ತು ಇಂದು ನಮ್ಮೆಲ್ಲರ ನಡುವೆ ಬಿರ್ಸಾ ಮುಂಡಾ ಜಿ ಅವರ ವಂಶಸ್ಥರು ಇದ್ದಾರೆ ಎಂಬುದು ನಮ್ಮೆಲ್ಲರ ಸೌಭಾಗ್ಯ. ಇಂದು ಅವರ ಮನೆಯಲ್ಲಿ ಪ್ರಮುಖ ಧಾರ್ಮಿಕ ಆಚರಣೆ ಇದ್ದರೂ. ಅವರ ಕುಟುಂಬ ಧಾರ್ಮಿಕ ವಿಧಿಗಳಲ್ಲಿ ನಿರತರಾಗಿದ್ದರೂ, ಬುಧ್ರಾಮ್ ಮುಂಡಾ ಜಿ ಅವರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ, ಸಿಧು ಕನ್ಹು ಅವರ ವಂಶಸ್ಥರಾದ ಮಂಡಲ್ ಮುರ್ಮು ಜಿ ಅವರು ನಮ್ಮೊಂದಿಗೆ ಇರುವುದು ನಮಗೆ ಸಮಾನ ಗೌರವವಾಗಿದೆ. ಇಂದು ಭಾರತೀಯ ಜನತಾ ಪಕ್ಷದಲ್ಲಿ ಅತ್ಯಂತ ಹಿರಿಯ ನಾಯಕರಿದ್ದರೆ, ಒಂದು ಕಾಲದಲ್ಲಿ ಲೋಕಸಭೆಯ ಉಪಸ್ಪೀಕರ್ ಆಗಿ ಸೇವೆ ಸಲ್ಲಿಸಿದ ನಮ್ಮ ಕರಿಯ ಮುಂಡಾಜಿ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಎಂದು ಹೇಳಲು ನನಗೆ ಸಂತೋಷದ ವಿಷಯವಾಗಿದೆ. ಇದು ಇನ್ನೂ ನಮಗೆ ಮಾರ್ಗದರ್ಶನ ನೀಡುತ್ತಿದೆ. ಜುಯಲ್ ಓರಾಮ್ ಜಿ ಉಲ್ಲೇಖಿಸಿದಂತೆ, ಅವರು ನನಗೆ ತಂದೆಯಂತಿದ್ದಾರೆ. ಕರಿಯಾ ಮುಂಡಾ ಜಿ ಅವರು ಜಾರ್ಖಂಡ್‌ನಿಂದ ಇಲ್ಲಿಗೆ ವಿಶೇಷವಾಗಿ ಪ್ರಯಾಣಿಸಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ವಿಜಯ್ ಕುಮಾರ್ ಸಿನ್ಹಾ ಜಿ, ಸಾಮ್ರಾಟ್ ಚೌಧರಿ ಜಿ, ಬಿಹಾರ ಸರ್ಕಾರದ ಸಚಿವರು, ಸಂಸದರು, ವಿಧಾನಸಭಾ ಸದಸ್ಯರು, ಇತರೆ ಸಾರ್ವಜನಿಕ ಪ್ರತಿನಿಧಿಗಳು, ದೇಶದ ಮೂಲೆ ಮೂಲೆಗಳಿಂದ ಬಂದಿರುವ ಗಣ್ಯ ಅತಿಥಿಗಳು ಮತ್ತು ಜಮುಯಿಯ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.

ಜನಜಾತಿಯ ಗೌರವ್ ದಿವಸ್ ಸಂದರ್ಭದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ

November 15th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಜಮುಯಿಯಲ್ಲಿಂದು ಜನಜಾತಿಯ ಗೌರವ್ ದಿವಸ್ ಅಂಗವಾಗಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ಸುಮಾರು 6,640 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

July 20th, 05:18 pm

ಕೃಷಿಗೆ, ವಿಶೇಷವಾಗಿ ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮತ್ತು ದೇಶೀಯ ಬೀಜ ತಳಿಗಳನ್ನು ರಕ್ಷಿಸಲು ಅವರು ಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

​​​​​​​ಲಕ್ಷದ್ವೀಪದ ಕವರಟ್ಟಿಯಲ್ಲಿ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ವೇಳೆ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

January 03rd, 12:00 pm

ಲಕ್ಷದ್ವೀಪದ ಆಡಳಿತಾಧಿಕಾರಿಯವರಿಗೆ, ಸ್ಥಳೀಯ ಸಂಸತ್ ಸದಸ್ಯ ಶ್ರೀ ಪ್ರಭು ಪಟೇಲ್ ಅವರಿಗೆ ಮತ್ತು ಲಕ್ಷದ್ವೀಪದಲ್ಲಿರುವ ನನ್ನ ಎಲ್ಲ ಕುಟುಂಬ ಸದಸ್ಯರಿಗೆ ಶುಭಾಶಯಗಳು!

ಲಕ್ಷದ್ವೀಪದ ಕವರಟ್ಟಿಯಲ್ಲಿ 1,150 ಕೋಟಿ ರೂ.ಗಿಂತ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ

January 03rd, 11:11 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಕವರಟ್ಟಿಯಲ್ಲಿಂದು 1,150 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಜತೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ತಂತ್ರಜ್ಞಾನ, ಇಂಧನ, ಜಲ ಸಂಪನ್ಮೂಲ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ಒಳಗೊಂಡಿವೆ. ಪ್ರಧಾನ ಮಂತ್ರಿ ಅವರು ಲ್ಯಾಪ್‌ಟಾಪ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ ಅಡಿ, ಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್‌ಗಳನ್ನು ವಿತರಿಸಿದರು. ರೈತರು ಮತ್ತು ಮೀನುಗಾರ ಫಲಾನುಭವಿಗಳಿಗೆ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸಂಸ್ಕೃತದ ಭಾರತೀಯ ವಿದ್ವಾಂಸ ಮತ್ತು ನಡಿಯಾದ್ ನ ಬ್ರಹ್ಮರ್ಷಿ ಸಂಸ್ಕೃತ ಮಹಾವಿದ್ಯಾಲಯದ ಸಂಸ್ಥಾಪಕ ಶ್ರೀ ದಹ್ಯಾಭಾಯಿ ಶಾಸ್ತ್ರಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ.

October 10th, 06:43 pm

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಸಂಸ್ಕೃತ ವಿದ್ವಾಂಸ ಮತ್ತು ನಡಿಯಾದ್ ನ ಬ್ರಹ್ಮರ್ಷಿ ಸಂಸ್ಕೃತ ಮಹಾವಿದ್ಯಾಲಯದ ಸಂಸ್ಥಾಪಕ ಶ್ರೀ ದಹ್ಯಾಭಾಯಿ ಶಾಸ್ತ್ರಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

NDA today stands for N-New India, D-Developed Nation and A-Aspiration of people and regions: PM Modi

July 18th, 08:31 pm

PM Modi during his address at the ‘NDA Leaders Meet’ recalled the role of Atal ji, Advani ji and the various other prominent leaders in shaping the NDA Alliance and providing it the necessary direction and guidance. PM Modi also acknowledged and congratulated all on the completion of 25 years since the establishment of NDA in 1998.

ಎನ್‌ಡಿಎ ನಾಯಕರ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

July 18th, 08:30 pm

‘ಎನ್‌ಡಿಎ ನಾಯಕರ ಸಭೆ’ಯಲ್ಲಿ ಪ್ರಧಾನಿ ಮೋದಿ ಅವರು ಎನ್‌ಡಿಎ ಮೈತ್ರಿಕೂಟವನ್ನು ರೂಪಿಸುವಲ್ಲಿ ಮತ್ತು ಅದಕ್ಕೆ ಅಗತ್ಯವಾದ ನಿರ್ದೇಶನ ಮತ್ತು ಮಾರ್ಗದರ್ಶನ ನೀಡುವಲ್ಲಿ ಅಟಲ್ ಜಿ, ಅಡ್ವಾಣಿ ಜಿ ಮತ್ತು ಇತರ ಪ್ರಮುಖ ನಾಯಕರ ಪಾತ್ರವನ್ನು ಸ್ಮರಿಸಿದರು. 1998ರಲ್ಲಿ ಎನ್‌ಡಿಎ ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ಅಮೆರಿಕದ ಬೌದ್ಧ ವಿದ್ವಾಂಸ ಮತ್ತು ಶಿಕ್ಷಣ ತಜ್ಞ ಪ್ರೊ. ರಾಬರ್ಟ್ ಥುರ್ಮನ್ ಅವರೊಂದಿಗೆ ಪ್ರಧಾನಮಂತ್ರಿ ಅವರ ಸಭೆ

June 21st, 08:26 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕದ ನ್ಯೂಯಾರ್ಕ್ ನಲ್ಲಿ ಅಮೆರಿಕದ ಬೌದ್ಧ ವಿದ್ವಾಂಸ, ಲೇಖಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ರಾಬರ್ಟ್ ಥುರ್ಮನ್ ಅವರನ್ನು ಭೇಟಿ ಮಾಡಿದರು.

18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 91 ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಭಾಷಣದ ಕನ್ನಡ ಅನುವಾದ

April 28th, 10:50 am

ʻಪದ್ಮ ಪ್ರಶಸ್ತಿʼಗಳನ್ನು ಪಡೆದ ಅನೇಕ ವ್ಯಕ್ತಿಗಳು ಇಂದಿನ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇದ್ದಾರೆ. ನಾನು ಅವರನ್ನು ಗೌರವಯುತವಾಗಿ ಸ್ವಾಗತಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ. ʻಆಲ್ ಇಂಡಿಯಾ ರೇಡಿಯೋʼದ ʻಎಫ್ಎಂʼ ಸೇವೆಯ ವಿಸ್ತರಣೆಯು ʻಆಲ್ ಇಂಡಿಯಾ ಎಫ್ಎಂʼ ಆಗುವತ್ತ ಒಂದು ದೊಡ್ಡ ಮತ್ತು ಪ್ರಮುಖ ಹೆಜ್ಜೆಯಾಗಿದೆ. ʻಆಲ್ ಇಂಡಿಯಾ ರೇಡಿಯೋʼದ 91 ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನೆಯು ದೇಶದ 85 ಜಿಲ್ಲೆಗಳ ಎರಡು ಕೋಟಿ ಜನರಿಗೆ ಉಡುಗೊರೆ ಇದ್ದಂತೆ . ಒಂದು ರೀತಿಯಲ್ಲಿ, ಈ ಕಾರ್ಯಕ್ರಮವು ಭಾರತದ ವೈವಿಧ್ಯತೆ ಮತ್ತು ವಿಭಿನ್ನ ವರ್ಣಗಳ ನೋಟವನ್ನು ಸಹ ಹೊಂದಿದೆ. ʻಎಫ್‌ಎಂʼ ಸೇವೆಯ ವಿಸ್ತರಣೆಯಿಂದ ಪ್ರಯೋಜನ ಪಡೆಯಲಿರುವ 85 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳು ಸಹ ಸೇರಿವೆ. ಈ ಸಾಧನೆಗಾಗಿ ನಾನು ʻಆಲ್ ಇಂಡಿಯಾ ರೇಡಿಯೋʼ ಅನ್ನು ಅಭಿನಂದಿಸುತ್ತೇನೆ. ಇದು ಈಶಾನ್ಯದ ನಮ್ಮ ಸಹೋದರ ಸಹೋದರಿಯರಿಗೆ ಮತ್ತು ನಮ್ಮ ಯುವ ಸ್ನೇಹಿತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಹೊಸ ಸೇವೆಗಾಗಿ ನಾನು ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.

ದೇಶದಲ್ಲಿ ಎಫ್‌ ಎಂ ರೇಡಿಯೋ ಪ್ರಸಾರವನ್ನು ಹೆಚ್ಚಿಸಲು 91 ಹೊಸ 100 ವ್ಯಾಟ್ ಎಫ್‌.ಎಂ ಟ್ರಾನ್ಸ್‌ಮಿಟರ್‌ಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು

April 28th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 91 ಹೊಸ 100 ವ್ಯಾಟ್ ರೇಡಿಯೋ ಟ್ರಾನ್ಸ್‌ಮಿಟರ್‌ಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಉದ್ಘಾಟನೆಯು ದೇಶದ ರೇಡಿಯೋ ಸಂಪರ್ಕವನ್ನು ಮತ್ತಷ್ಟು ಉತ್ತೇಜನ ನೀಡಲಿದೆ.

ನಮ್ಮ ದೇಶದ ಯುವಕರ ಸಾಮರ್ಥ್ಯವನ್ನು ಅನ್ಲಾಕ್ ಮಾಡುವುದು ನಮ್ಮ ಧ್ಯೇಯವಾಗಿದೆ: ಪ್ರಧಾನಿ ಮೋದಿ

April 24th, 06:42 pm

ಯುವಂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಮಿಷನ್‌ನ ಚೈತನ್ಯಕ್ಕೆ ಯುವಕರ ಚೈತನ್ಯವು ಅತ್ಯಂತ ಮಹತ್ವದ್ದಾಗಿದೆ ಎಂದು ಒಪ್ಪಿಕೊಂಡರು. ಭಾರತವು ದುರ್ಬಲವಾದ ಐದರಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತನೆಗೊಂಡಿದೆ ಎಂದು ಅವರು ಹೇಳಿದರು. ಬಿಜೆಪಿ ಮತ್ತು ಈ ದೇಶದ ಯುವಕರು ಒಂದೇ ತರಂಗಾಂತರವನ್ನು ಹೊಂದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ನಾವು ಸುಧಾರಣೆಗಳನ್ನು ತರುತ್ತೇವೆ ಮತ್ತು ಯುವಕರು ಯಶಸ್ವಿ ಯುವಕರ ನೇತೃತ್ವದ ಪಾಲುದಾರಿಕೆ ಮತ್ತು ಬದಲಾವಣೆಯನ್ನು ಸಕ್ರಿಯಗೊಳಿಸುವ ಫಲಿತಾಂಶಗಳನ್ನು ತರುತ್ತಾರೆ

ಕೇರಳದಲ್ಲಿ ‘ಯುವಂ’ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

April 24th, 06:00 pm

ಯುವಂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಮಿಷನ್‌ನ ಚೈತನ್ಯಕ್ಕೆ ಯುವಕರ ಚೈತನ್ಯವು ಅತ್ಯಂತ ಮಹತ್ವದ್ದಾಗಿದೆ ಎಂದು ಒಪ್ಪಿಕೊಂಡರು. ಭಾರತವು ದುರ್ಬಲವಾದ ಐದರಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತನೆಗೊಂಡಿದೆ ಎಂದು ಅವರು ಹೇಳಿದರು. ಬಿಜೆಪಿ ಮತ್ತು ಈ ದೇಶದ ಯುವಕರು ಒಂದೇ ತರಂಗಾಂತರವನ್ನು ಹೊಂದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ನಾವು ಸುಧಾರಣೆಗಳನ್ನು ತರುತ್ತೇವೆ ಮತ್ತು ಯುವಕರು ಯಶಸ್ವಿ ಯುವಕರ ನೇತೃತ್ವದ ಪಾಲುದಾರಿಕೆ ಮತ್ತು ಬದಲಾವಣೆಯನ್ನು ಸಕ್ರಿಯಗೊಳಿಸುವ ಫಲಿತಾಂಶಗಳನ್ನು ತರುತ್ತಾರೆ

PM shares artwork presented by Padma Shri awardee Shri Premjit Baria

April 16th, 10:09 am

The Prime Minister has shared artwork of famous landmarks of Diu presented by Padma Shri awardee Shri Premjit Baria Ji.

ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಗಿ

April 05th, 10:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಮಂತ್ರಿಯವರು

March 22nd, 10:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಭಾರತವು ಪ್ರಜಾಪ್ರಭುತ್ವದ ತಾಯಿ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

January 29th, 11:30 am

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇದು 2023 ನೇ ಮೊದಲ ಮನದ ಮಾತು ಜೊತೆಗೆ ಈ ಕಾರ್ಯಕ್ರಮದ 97 ನೇ ಕಂತು ಇದಾಗಿದೆ. ನಿಮ್ಮೆಲ್ಲರೊಂದಿಗೆ ಮತ್ತೊಮ್ಮೆ ಮಾತನಾಡಿ ನನಗೆ ಬಹಳ ಸಂತೋಷವೆನಿಸುತ್ತಿದೆ. ಪ್ರತಿ ವರ್ಷ ಜನವರಿ ತಿಂಗಳು ಬಹಳಷ್ಟು ಕಾರ್ಯಕ್ರಮಗಳಿಂದ ತುಂಬಿ ತುಳುಕುತ್ತದೆ. ಈ ತಿಂಗಳಿನಲ್ಲಿ ಜನವರಿ 14 ರಂದು ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ ದೇಶಾದ್ಯಂತ ಹಬ್ಬಗಳ ಉತ್ಸಾಹವಿರುತ್ತದೆ. ಇದರ ನಂತರ ದೇಶ ತನ್ನ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಈ ವರ್ಷವೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಹಳಷ್ಟು ಅಂಶಗಳ ಬಗ್ಗೆ ಬಹಳಷ್ಟು ಪ್ರಶಂಸೆ ಮೂಡಿಬರುತ್ತಿದೆ. ಜೈಸಲ್ಮೇರ್ ನಿಂದ ಪುಲ್ಕಿತ್ ಅವರು ನನಗೆ ಹೀಗೆ ಬರೆದಿದ್ದಾರೆ - ಜನವರಿ 26 ರ ಕವಾಯತಿನ ಸಂದರ್ಭದಲ್ಲಿ ಕಾರ್ಮಿಕರು ಕರ್ತವ್ಯ ಪಥವನ್ನು ನಿರ್ಮಿಸುತ್ತಿರುವುದನ್ನು ಕಂಡು ಬಹಳ ಸಂತೋಷವಾಯಿತು. ಕಾನ್ಪುರದಿಂದ ಜಯಾ ಅವರು ಮೆರವಣಿಗೆಯಲ್ಲಿ ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಕಂಡು ಆನಂದಿಸಿರುವುದಾಗಿ ಬರೆದಿದ್ದಾರೆ. ಈ ಪರೇಡ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ ಸಿಆರ್‌ಪಿಎಫ್‌ನ ಮಹಿಳಾ ತುಕಡಿ ಕೂಡ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.

ಗಣಿತಶಾಸ್ತ್ರಜ್ಞ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಆರ್. ಎಲ್. ಕಶ್ಯಪ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

November 12th, 11:36 am

ಗಣಿತಶಾಸ್ತ್ರಜ್ಞ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಆರ್. ಎಲ್. ಕಶ್ಯಪ್ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಗೌರವಾರ್ಥ ಔತಣ ಕೂಟ ಏರ್ಪಡಿಸಿದ ಪ್ರಧಾನಮಂತ್ರಿ

July 22nd, 11:22 pm

ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ಗೌರವಾರ್ಥ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಔತಣಕೂಟ ಆಯೋಜಿಸಿದ್ದರು.

ಬಾಬಾ ಯೋಗೇಂದ್ರ ಜೀ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ

June 10th, 04:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಾಬಾ ಯೋಗೇಂದ್ರ, ‘ಪದ್ಮಶ್ರೀ ಮತ್ತು ಸಂಸ್ಕಾರ ಭಾರತಿ’ಯ ರಾಷ್ಟ್ರೀಯ ರಕ್ಷ ಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ನಿಧನವು ಕಲಾ ಪ್ರಪಂಚಕ್ಕೆ ತುಂಬಲಾರದ ನಷ್ಟ ಎಂದು ಪ್ರಧಾನಿ ಬಣ್ಣಿಸಿದ್ದಾರೆ.