ದೇಶದಾದ್ಯಂತ ಕೋವಿಡ್-19, ಓಮೈಕ್ರಾನ್ ಸ್ಥಿತಿ ಮತ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
December 23rd, 10:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೋವಿಡ್-19 ಮತ್ತು ಒಮೈಕ್ರಾನ್ ಸ್ಥಿತಿ ಗತಿ, ಹೊಸ ರೂಪಾಂತರಿ (ವಿ.ಓ.ಸಿ.)ಮತ್ತು ಅದರ ಸಮಸ್ಯೆ, ಕೋವಿಡ್ -19 ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ಕ್ರಮಗಳು, ಔಷಧಗಳ ಲಭ್ಯತೆ ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ, ಆಮ್ಲಜನಕ ಸಿಲಿಂಡರ್ ಗಳು ಮತ್ತು ಸಾಂದ್ರಕಗಳು, ವೆಂಟಿಲೇಟರ್ ಗಳು, ಪಿ.ಎಸ್.ಎ. ಘಟಕಗಳು, ಐ.ಸಿ.ಯು/ಆಮ್ಲಜನಕ ಸೌಲಭ್ಯದ ಹಾಸಿಗೆಗಳು, ಮಾನವ ಸಂಪನ್ಮೂಲಗಳು, ಐಟಿ ಮಧ್ಯಸ್ಥಿಕೆಗಳು ಮತ್ತು ಲಸಿಕೆ ಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪಿ.ಎಂ. ಕೇರ್ಸ್ ನಿಂದ ನಿರ್ಮಿಸಿರುವ ಪಿಎಸ್ಎ ಆಮ್ಲಜನಕ ಘಟಕಗಳನ್ನು ಅಕ್ಟೋಬರ್ 7 ರಂದು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ
October 06th, 02:54 pm
35 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂ ಕೇರ್ಸ್ ನಿಂದ ನಿರ್ಮಿಸಿರುವ ಒತ್ತಡ ಹೀರಿಕೊಳ್ಳುವ [ಪಿಎಸ್ಎ] ಆಮ್ಲಜನಕ ಘಟಕಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. 2021 ರ ಅಕ್ಟೋಬರ್ 7 ರಂದು ಪ್ರಧಾನಮಂತ್ರಿ ಅವರು ಉತ್ತರಾಖಂಡದ ರಿಷಿಕೇಶ್ ದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಇವುಗಳನ್ನು ಉದ್ಘಾಟಿಸಲಿದ್ದಾರೆ. ಈ ಮೂಲಕ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಪಿಎಸ್ಎ ಆಮ್ಲಜನಕ ಘಟಕಗಳನ್ನು ಹೊಂದಿದಂತಾಗಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಪ್ರಾಂಗಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು.
August 15th, 03:02 pm
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪವಿತ್ರ ದಿನವಾದ ಇಂದು, ದೇಶವು ತನ್ನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ಹಗಲಿರುಳು ತಮ್ಮನ್ನು ಸಮರ್ಪಿಸಿಕೊಂಡಿರುವ ವೀರರಿಗೆ ತಲೆಬಾಗಿ ನಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ಒಂದು ಸಾಮೂಹಿಕ ಆಂದೋಲನವನ್ನಾಗಿ ಮಾಡಿದ ಪೂಜ್ಯ ಬಾಪು, ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಿಸ್ಮಿಲ್ ಮತ್ತು ಅಶ್ಫಖುಲ್ಲಾ ಖಾನ್ ರಂತಹ ಮಹಾನ್ ಕ್ರಾಂತಿಕಾರಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನೂ ದೇಶವು ಸ್ಮರಿಸಿಕೊಳ್ಳುತ್ತಿದೆ; ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ ಅಥವಾ ರಾಣಿ ಗಾಯಿಡಿನ್ಲಿಯು ಅಥವಾ ಮಾತಂಗಿನಿಹಜ್ರಾ ಅವರ ಶೌರ್ಯ; ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರೂ, ದೇಶವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಾರತದ ಭವಿಷ್ಯಕ್ಕೆ ದಿಕ್ಕು ತೋರಿದ ಬಾಬಾ ಸಾಹೇಬ್ ಅಂಬೇಡ್ಕರ್. ಈ ಎಲ್ಲ ಮಹಾನ್ ವ್ಯಕ್ತಿಗಳಿಗೆ ದೇಶ ಚಿರಋಣಿಯಾಗಿದೆ.ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ
August 15th, 07:38 am
ನಿಮ್ಮೆಲ್ಲರಿಗೂ ಶುಭಾಶಯಗಳು. ಭಾರತವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಭಾರತವನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಪ್ರೀತಿಸುವ ವಿಶ್ವದೆಲ್ಲೆಡೆ ಇರುವ ಜನರಿಗೆ 75ನೇ ಸ್ವಾತಂತ್ರ್ಯೋತ್ಸವದ ಶುಭ ಕಾಮನೆಗಳನ್ನು ಅರ್ಪಿಸುತ್ತೇನೆ.ಭಾರತ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ
August 15th, 07:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಾ ದೇಶವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಭಾಷಣದ ಸಮಯದಲ್ಲಿ, ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು ಮತ್ತು ಭವಿಷ್ಯದ ಯೋಜನೆಗಳನ್ನು ಹಾಕಿದರು. ಅವರು ತಮ್ಮ ಜನಪ್ರಿಯ ಘೋಷಣೆಯಾದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಅನ್ನು ಸೇರಿಸಿದರು. ಈ ಗುಂಪಿಗೆ ಇತ್ತೀಚಿನ ಪ್ರವೇಶವು ಸಬ್ಕಾ ಪ್ರಯಾಸ್ ಆಗಿದೆ.ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಟೀಕಾ: ಪಿಎಂ ಮೋದಿ ಅವರ ತಂತ್ರವನ್ನು ನಾವು ಮುಂದುವರಿಸಬೇಕಾಗಿದೆ
July 16th, 12:07 pm
ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿ ಕೋವಿಡ್ ಸಂಬಂಧಿತ ಪರಿಸ್ಥಿತಿ ಕುರಿತು ಚರ್ಚಿಸಿದರು. ಮೈಕ್ರೋ-ಕಂಟೈನ್‌ಮೆಂಟ್ ವಲಯಗಳ ಮೇಲೆ ವಿಶೇಷ ಗಮನ ಹರಿಸುವಾಗ ನಾವು ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಟೀಕಾ (ವ್ಯಾಕ್ಸಿನೇಷನ್) ಕಾರ್ಯತಂತ್ರವನ್ನು ಮುಂದುವರಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕೋವಿಡ್ ಪರಿಸ್ಥಿತಿಯ ಕುರಿತಂತೆ ಚರ್ಚಿಸಲು 6 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಲಿರುವ ಪ್ರಧಾನಮಂತ್ರಿ
July 16th, 12:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್ ಸಂಬಂಧಿತ ಪರಿಸ್ಥಿತಿಯ ಕುರಿತು ಚರ್ಚಿಸಲು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಗೃಹ ಸಚಿವರು, ಆರೋಗ್ಯ ಸಚಿವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಕೋವಿಡ್ ಎದುರಿಸಲು ಎಲ್ಲ ಸಾಧ್ಯ ನೆರವು ಒದಗಿಸಿದ ಪ್ರಧಾನಮಂತ್ರಿಯವರಿಗೆ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು. ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಸೋಂಕು ತಡೆಯಲು ಕೈಗೊಂಡಿರುವ ಕ್ರಮಗಳು ಮತ್ತು ಲಸಿಕಾ ಕಾರ್ಯಕ್ರಮದ ಪ್ರಗತಿಯ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಲಸಿಕಾ ಕಾರ್ಯತಂತ್ರದ ಕುರಿತಂತೆ ತಮ್ಮ ಪ್ರತಿಕ್ರಿಯೆಯನ್ನೂ ನೀಡಿದರು.ಈಶಾನ್ಯ ರಾಜ್ಯಗಳಲ್ಲಿ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಪ್ರಧಾನ ಮಂತ್ರಿ ಅವರ ಸಂವಾದ
July 13th, 03:53 pm
ಮೊದಲಿಗೆ ನಾನು ಹೊಸ ಜವಾಬ್ದಾರಿಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪರಿಚಯಿಸುತ್ತೇನೆ, ಯಾಕೆಂದರೆ ಇದು ನಿಮಗೂ ಉತ್ತಮ. ಶ್ರೀ ಮನ್ ಸುಖ್ ಭಾಯಿ ಮಾಂಡವೀಯ, ಅವರು ಇತ್ತೀಚೆಗಷ್ಟೇ ನಮ್ಮ ಆರೋಗ್ಯ ಸಚಿವರಾಗಿದ್ದಾರೆ. ಅವರ ಜೊತೆ ಕುಳಿತುಕೊಂಡಿರುವ ಡಾ. ಭಾರತೀ ಪವಾರ್ ಜೀ ಅವರು ಎಂ.ಒ.ಎಸ್. ಆಗಿದ್ದಾರೆ. ಅವರು ನಮ್ಮ ಆರೋಗ್ಯ ಇಲಾಖೆಯಲ್ಲಿ ಎಂ.ಒ.ಎಸ್. ಆಗಿ ಕಾರ್ಯ ನಿರ್ವಹಿಸುತ್ತಾರೆ. ನಿಮ್ಮೊಂದಿಗೆ ನಿಯಮಿತವಾಗಿ ವ್ಯವಹರಿಸುವ ಇನ್ನಿಬ್ಬರು ಇಲ್ಲಿದ್ದಾರೆ. ಅವರೆಂದರೆ ಡಿ.ಒ.ಎನ್.ಇ.ಆರ್. ಸಚಿವಾಲಯದ ಹೊಸ ಸಚಿವರಾದ ಶ್ರೀ ಕಿಶನ್ ರೆಡ್ಡಿ ಜೀ ಮತ್ತು ಅವರೊಂದಿಗೆ ಕುಳಿತಿರುವ ಎಂ.ಒ.ಎಸ್. ಶ್ರೀ ಬಿ.ಎಲ್.ವರ್ಮಾ ಜೀ. ಈ ಪರಿಚಯ ನಿಮಗೂ ಅವಶ್ಯಕ.ಕೋವಿಡ್-19 ಪರಿಸ್ಥಿತಿ ಕುರಿತು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
July 13th, 01:02 pm
ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಇಂದು ಸಂವಾದ ನಡೆಸಿದರು. ಸಂವಾದದಲ್ಲಿ ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ಮಣೀಪುರ ಮತ್ತು ಅಸ್ಸಾಂ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಕೋವಿಡ್ ಸಾಂಕ್ರಾಮಿಕ ನಿಭಾಯಿಸುವಲ್ಲಿ ಕೈಗೊಂಡ ಸಕಾಲಿಕ ಕ್ರಮಕ್ಕೆ ಧನ್ಯವಾದ ಸಲ್ಲಿಸಿದರು. ಈಶಾನ್ಯ ರಾಜ್ಯಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ತೋರಿದ ಪ್ರಧಾನಮಂತ್ರಿ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಸಂವಾದದಲ್ಲಿ ಮುಖ್ಯಮಂತ್ರಿಗಳಲ್ಲದೇ ಕೇಂದ್ರ ಗೃಹ, ರಕ್ಷಣೆ, ಆರೋಗ್ಯ, ಈಶಾನ್ಯ ರಾಜ್ಯಗಳ ಅಬಿವೃದ್ಧಿ ಕುರಿತ ಸಚಿವಾಲಯ – ಡಿ.ಒ.ಎನ್.ಇ.ಆರ್ ಮತ್ತು ಇತರೆ ಸಚಿವರು ಸಹ ಭಾಗವಹಿಸಿದ್ದರು.ದೇಶಾದ್ಯಂತ ಆಮ್ಲಜನಕ ಪೂರೈಕೆ ಹೆಚ್ಚಿಸಲು ಪ್ರಧಾನ ಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಪರಾಮರ್ಶೆ ಸಭೆ
July 09th, 01:10 pm
ದೇಶಾದ್ಯಂತ ಆಮ್ಲಜನಕ ಉತ್ಪಾದನೆ, ಪೂರೈಕೆ ಮತ್ತು ಲಭ್ಯತೆ ಮತ್ತು ಘಟಕಗಳ ಸ್ಥಾಪನೆಯ ಪ್ರಗತಿ ಕುರಿತು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿಂದು ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಯಿತು.ಸಿಎಸ್ಐಆರ್ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
June 04th, 10:28 am
ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಸ್‌ಐಆರ್ ಸೊಸೈಟಿಯ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿದ್ದರು. ಕೊರೋನಾ ಸಾಂಕ್ರಾಮಿಕ ಈ ಶತಮಾನದ ಅತಿದೊಡ್ಡ ಸವಾಲಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಹೇಳಿದರು . ಆದರೆ ಹಿಂದೆ ದೊಡ್ಡ ಮಾನವೀಯ ಬಿಕ್ಕಟ್ಟು ಉಂಟಾದಾಗಲೆಲ್ಲಾ ವಿಜ್ಞಾನವು ಉತ್ತಮ ಭವಿಷ್ಯದ ಹಾದಿಯನ್ನು ಸಿದ್ಧಪಡಿಸಿದೆ.ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಸಿಎಸ್ಐಆರ್ ಸೊಸೈಟಿಯ ಸಭೆ
June 04th, 10:27 am
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಸೊಸೈಟಿಯ ಸಭೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.ಕಳೆದ 7 ವರ್ಷಗಳಲ್ಲಿ, ನಾವೆಲ್ಲರೂ 'ಟೀಮ್ ಇಂಡಿಯಾ' ಆಗಿ ಕೆಲಸ ಮಾಡಿದ್ದೇವೆ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
May 30th, 11:30 am
ಸ್ನೇಹಿತರೆ, 2 ನೇ ಅಲೆ ಬಂದಾಗ ಇದ್ದಕ್ಕಿದ್ದಂತೆ ಆಮ್ಲಜನಕದ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ಇದು ಬಹುದೊಡ್ಡ ಸವಾಲಾಗಿತ್ತು. ವೈದ್ಯಕೀಯ ಆಮ್ಲಜನಕವನ್ನು ದೇಶದ ದೂರ ಪ್ರದೇಶಗಳಿಗೆ ತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆಮ್ಲಜನಕದ ಟ್ಯಾಂಕರ್ ಗಳು ಹೆಚ್ಚು ವೇಗವಾಗಿ ತಲುಪಬೇಕು. ಸ್ವಲ್ಪ ಅಲಕ್ಷವಾದರೂ ವಿಸ್ಪೋಟವಾಗುವಂತಹ ಆತಂಕವಿರುತ್ತದೆ. ಔದ್ಯಮಿಕ ಆಮ್ಲಜನಕವನ್ನು ಉತ್ಪಾದಿಸುವ ಅನೇಕ ಘಟಕಗಳು ದೇಶದ ಪೂರ್ವಭಾಗದಲ್ಲಿವೆ. ಅಲ್ಲಿಂದ ದೇಶದ ಇತರ ಭಾಗಗಳಿಗೆ ಆಮ್ಲಜನಕ ಸರಬರಾಜು ಮಾಡಲು ಕೂಡ ಹಲವು ದಿನಗಳು ಬೇಕಾಗುತ್ತವೆ.Continuous efforts are being made to increase the supply of Corona vaccine on a very large scale: PM Modi
May 18th, 11:40 am
Prime Minister Modi through video conference interacted with field officials from States and Districts regarding their experience in handling the Covid-19 pandemic. During the interaction, the officials thanked the Prime Minister for leading the fight against the second wave of Covid from the front.ಕೋವಿಡ್ ಪರಿಸ್ಥಿತಿಯ ಬಗ್ಗೆ ದೇಶಾದ್ಯಂತದ ವೈದ್ಯರೊಂದಿಗೆ ಪ್ರಧಾನಿ ಸಂವಾದ
May 18th, 11:39 am
ಕೋವಿಡ್ ಪರಿಸ್ಥಿತಿ ಕುರಿತು ದೇಶಾದ್ಯಂತದ ವೈದ್ಯರ ಗುಂಪಿನೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.ಕೋವಿಡ್ ಮತ್ತು ಲಸಿಕೆ ಸಂಬಂಧಿತ ಪರಿಸ್ಥಿತಿ ಕುರಿತ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ
May 15th, 02:42 pm
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕೋವಿಡ್, ಪರೀಕ್ಷೆ, ಆಮ್ಲಜನಕ ಲಭ್ಯತೆ, ಆರೋಗ್ಯ ಆರೈಕೆ ಮೂಲಸೌಕರ್ಯ, ಲಸಿಕೆ ಮಾರ್ಗಸೂಚಿಯ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳು ಸವಿವರವಾದ ಪ್ರಾತ್ಯಕ್ಷಿಕೆ ನೀಡಿದರು. ಪ್ರಧಾನಮಂತ್ರಿಯವರು ಸ್ಥಳೀಯ ಕಂಟೈನ್ಮೆಂಟ್ ಕಾರ್ಯತಂತ್ರಗಳು ಅದರಲ್ಲೂ ಜಿಲ್ಲೆಗಳಲ್ಲಿ ಟಿಪಿಆರ್ ಹೆಚ್ಚಿರುವ ರಾಜ್ಯಗಳಲ್ಲಿ ಈ ಹೊತ್ತಿನ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.India won't lose courage. We will fight and win: PM Modi
May 14th, 11:04 am
Prime Minister Shri Narendra Modi released 8th instalment of financial benefit of Rs 2,06,67,75,66,000 to 9,50,67,601 beneficiary farmers under Pradhan Mantri Kisan Samman Nidhi (PM-KISAN) scheme today via video conferencing. Prime Minister also interacted with farmer beneficiaries during the event. Union Agriculture Minister was also present on the occasion.ಪಿಎಂ – ಕಿಸಾನ್ ಅಡಿಯಲ್ಲಿ ಆರ್ಥಿಕ ನೆರವಿನ 8ನೇ ಕಂತು ಬಿಡುಗಡೆ ಮಾಡಿದ ಪ್ರಧಾನಮಂತ್ರಿ
May 14th, 10:48 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 9,50,67,601 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ. ಕಿಸಾನ್) ಅಡಿಯಲ್ಲಿ 2,06,67,75,66,000ರೂ.ಗಳ ಆರ್ಥಿಕ ಪ್ರಯೋಜನದ 8ನೇ ಕಂತನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರೈತ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಕೃಷಿ ಸಚಿವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಭಾರತೀಯ ನೌಕಾಪಡೆ ಕೈಗೊಂಡಿರುವ ಕೋವಿಡ್ ಸಂಬಂಧಿ ಉಪಕ್ರಮಗಳ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ
May 03rd, 07:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು, ನೌಕಾ ಸಿಬ್ಬಂದಿಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಇಂದು ಭೇಟಿ ಮಾಡಿದ್ದರು.ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಸ್ಥಾವರಗಳಾಗಿ ಪರಿವರ್ತಿಸುವುದರ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಮಂತ್ರಿ
May 02nd, 03:34 pm
ಕೋವಿಡ್-19 ಸಾಂಕ್ರಾಮಿಕದಿಂದ ತಲೆದೋರಿಸುವ ಸನ್ನಿವೇಶದ ಹಿನ್ನೆಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಅಗತ್ಯವನ್ನು ಪರಿಗಣಿಸಿ, ಭಾರತ ಸರ್ಕಾರ, ಅಸ್ತಿತ್ವದಲ್ಲಿರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸುವ ಸಾಧ್ಯತೆಯನ್ನು ಪರಿಶೋಧಿಸಿದೆ. ಅಂತಹ ಹಲವಾರು ಸಂಭಾವ್ಯ ಕೈಗಾರಿಕೆಗಳಲ್ಲಿ ಅಸ್ತಿತ್ವದಲ್ಲಿರುವ ಸಾರಜನಕ ಸ್ಥಾವರಗಳನ್ನು ಆಮ್ಲಜನಕ ಉತ್ಪಾದನೆಗೆ ಬಳಸಬಹುದಾಗಿದೆ.