ನವದೆಹಲಿಯಲ್ಲಿ ನಡೆದ ಬಿ-20 ಶೃಂಗಸಭೆ `ಭಾರತ 2023’ ಉದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

August 27th, 03:56 pm

ಇಡೀ ದೇಶದಾದ್ಯಂತ ನಮ್ಮಲ್ಲಿ ಹಬ್ಬದ ವಾತಾವರಣವಿರುವ ಸಮಯದಲ್ಲಿ ಉದ್ಯಮಿಗಳಾದ ನೀವೆಲ್ಲರೂ ಭಾರತಕ್ಕೆ ಬಂದಿದ್ದೀರಿ. ಭಾರತದಲ್ಲಿ ಸುದೀರ್ಘ ವಾರ್ಷಿಕ ಹಬ್ಬದ ಋತುವನ್ನು ಒಂದು ರೀತಿಯಲ್ಲಿ ಮುಂದೂಡಲಾಗಿದೆ. ಈ ಹಬ್ಬದ ಋತುವೆಂದರೆ, ಅದು ನಮ್ಮ ಸಮಾಜ ಹಾಗೂ ನಮ್ಮ ವ್ಯಾಪಾರಿಗಳು ಸಂಭ್ರಮಾಚರಣೆ ಮಾಡುವ ಸಮಯ. ಈ ಬಾರಿ, ಅದು ಆಗಸ್ಟ್ 23ರಿಂದಲೇ ಪ್ರಾರಂಭವಾಗಿದೆ. ಈ ಆಚರಣೆಯು ಚಂದ್ರನ ಮೇಲೆ ʻಚಂದ್ರಯಾನ-3’ದ ಆಗಮನದ ಪ್ರಯುಕ್ತವಾಗಿದೆ. ನಮ್ಮ ಬಾಹ್ಯಾಕಾಶ ಸಂಸ್ಥೆ ʻಇಸ್ರೋʼ ಭಾರತದ ಚಂದ್ರಯಾನದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ ಇದೇ ವೇಳೆ, ಭಾರತೀಯ ಉದ್ಯಮವು ಅಪಾರ ಬೆಂಬಲವನ್ನು ನೀಡಿದೆ. ಚಂದ್ರಯಾನದಲ್ಲಿ ಬಳಸಲಾದ ಅನೇಕ ಉಪಕರಣಗಳನ್ನು ನಮ್ಮ ಉದ್ಯಮ, ಖಾಸಗಿ ಕಂಪನಿಗಳು ಮತ್ತು ʻಎಂಎಸ್ಎಂಇʼಗಳು ಅಭಿವೃದ್ಧಿಪಡಿಸಿವೆ ಮತ್ತು ಅಗತ್ಯ ಸಮಯದೊಳಗೆ ಅವು ಇಸ್ರೋಗೆ ಲಭ್ಯವಾಗುವಂತೆ ಮಾಡಿವೆ. ಒಂದು ರೀತಿಯಲ್ಲಿ, ಈ ಯಶಸ್ಸು ವಿಜ್ಞಾನ ಮತ್ತು ಉದ್ಯಮ ಎರಡಕ್ಕೂ ಸೇರಿದೆ. ಈ ಬಾರಿ ಇಡೀ ಜಗತ್ತು ಭಾರತದೊಂದಿಗೆ ಈ ಸಾಧನೆಯನ್ನು ಸಂಭ್ರಮಿಸುತ್ತಿದೆ. ಎಂಬುದು ಸಹ ಮುಖ್ಯವಾಗಿದೆ. ಈ ಸಂಭ್ರಮಾಚರಣೆಯು ʻಜವಾಬ್ದಾರಿಯುತ ಬಾಹ್ಯಾಕಾಶ ಕಾರ್ಯಕ್ರಮʼವನ್ನು ನಡೆಸುವ ಕುರಿತದ್ದಾಗಿದೆ. ಈ ಆಚರಣೆಯು ದೇಶದ ಅಭಿವೃದ್ಧಿಯನ್ನು ವೇಗಗೊಳಿಸುವ ಕುರಿತದ್ದಾಗಿದೆ. ಈ ಆಚರಣೆಯು ನಾವೀನ್ಯತೆ ಕುರಿತದ್ದಾಗಿದೆ. ಈ ಆಚರಣೆಯು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಸುಸ್ಥಿರತೆ ಮತ್ತು ಸಮಾನತೆಯನ್ನು ತರುವ ಕುರಿತದ್ದಾಗಿದೆ. ಇದು ʻಬಿ-20 ಶೃಂಗಸಭೆ - ರೈಸ್ʼನ ವಿಷಯವೂ ಆಗಿದೆ. ಇದು ಜವಾಬ್ದಾರಿ, ವೇಗವರ್ಧನೆ, ನಾವೀನ್ಯತೆ, ಸುಸ್ಥಿರತೆ ಮತ್ತು ಸಮಾನತೆಯ ಕುರಿತಾದದ್ದು. ಇದು ಮಾನವೀಯತೆಯ ಕುರಿತಾದದ್ದು. ಇದು ʻಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼವನ್ನು ಕುರಿತಾದದ್ದು.

ವ್ಯಾಪಾರ-20(ಬಿ-20) ಶೃಂಗಸಭೆ ಇಂಡಿಯಾ 2023 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

August 27th, 12:01 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಬಿ20 ಶೃಂಗಸಭೆ ಇಂಡಿಯಾ-2023 ಉದ್ದೇಶಿಸಿ ಮಾತನಾಡಿದರು. ಬಿ20 ಶೃಂಗಸಭೆ ಇಂಡಿಯಾವು ಬಿ20 ಇಂಡಿಯಾ ವಿಷಯ ಅಥವಾ ಸಂವಹನವನ್ನು ಉದ್ದೇಶಪೂರ್ವಕವಾಗಿ ಚರ್ಚಿಸಲು ವಿಶ್ವಾದ್ಯಂತದಿಂದ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ತಜ್ಞರನ್ನು ಕರೆತಂದಿದೆ. ಬಿ20 ಇಂಡಿಯಾ ಗೋಷ್ಠಿಯು(ಕಮ್ಯುನಿಕ್) ಜಿ20 ಸದಸ್ಯ ರಾಷ್ಟ್ರಗಳಿಗೆ ಸಲ್ಲಿಸಲು 54 ಶಿಫಾರಸುಗಳು ಮತ್ತು 172 ನೀತಿ ಕ್ರಮಗಳನ್ನು ಒಳಗೊಂಡಿದೆ ಎಂದರು.

ಭೂಮಿ ದಿನದ ಸಂದರ್ಭದಲ್ಲಿ ನಮ್ಮ ಗ್ರಹವನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವವರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ

April 22nd, 09:53 am

ಭೂಮಿ ದಿನದ ಸಂದರ್ಭದಲ್ಲಿ ನಮ್ಮ ಗ್ರಹವನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವವರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು

Lifestyle of the planet, for the planet and by the planet: PM Modi at launch of Mission LiFE

October 20th, 11:01 am

At the launch of Mission LiFE in Kevadia, PM Modi said, Mission LiFE emboldens the spirit of the P3 model i.e. Pro Planet People. Mission LiFE, unites the people of the earth as pro planet people, uniting them all in their thoughts. It functions on the basic principles of Lifestyle of the planet, for the planet and by the planet.

PM launches Mission LiFE at Statue of Unity in Ekta Nagar, Kevadia, Gujarat

October 20th, 11:00 am

At the launch of Mission LiFE in Kevadia, PM Modi said, Mission LiFE emboldens the spirit of the P3 model i.e. Pro Planet People. Mission LiFE, unites the people of the earth as pro planet people, uniting them all in their thoughts. It functions on the basic principles of Lifestyle of the planet, for the planet and by the planet.

ವಿಶ್ವ ಭೂ ದಿನದಂದು ಭೂಮಿ ತಾಯಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಡಿಯೋ ಹಂಚಿಕೊಂಡ ಪ್ರಧಾನಮಂತ್ರಿ

April 22nd, 11:29 am

ಭೂ ತಾಯಿಯ ದಯೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ನಮ್ಮ ಗ್ರಹದ ಬಗ್ಗೆ ಕಾಳಜಿ ವಹಿಸುವ ನಮ್ಮ ಬದ್ಧತೆಗಳನ್ನು ಪುನರುಚ್ಚರಿಸುವುದೇ ಭೂಮಿ ದಿನಾಚರಣೆಯ ಅರ್ಥವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ದೃಶ್ಯಾವಳಿಯನ್ನು ಸಹ ಹಂಚಿಕೊಂಡಿದ್ದಾರೆ.

ಜಾಮ್‌ನಗರದಲ್ಲಿಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯುಎಚ್‌ ಒನ ಜಾಗತಿಕ ಕೇಂದ್ರದ ಶಂಕುಸ್ಥಾಪನೆ ಸಮಾರಂಭದಲ್ಲಿಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

April 19th, 03:49 pm

ಮಾರಿಷಸ್‌ ಪ್ರಧಾನಮಂತ್ರಿ ಶ್ರೀ ಪ್ರವಿಂದ್‌ ಕುಮಾರ್‌ ಜುಗ್ನಾತ್‌ ಜೀ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್‌, ಗುಜರಾತ್‌ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್‌, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಸರ್ಬಾನಂದ ಸೋನೊವಾಲ್‌ ಜೀ, ಡಾ. ಮನ್ಸುಖ್‌ ಮಾಂಡವಿಯಾ ಜೀ, ಶ್ರೀ ಮುಂಜಪಾರ ಮಹೇಂದ್ರಭಾಯಿ, ಇಲ್ಲಿಉಪಸ್ಥಿತರಿರುವ ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! ಇಂದು, ನಾವೆಲ್ಲರೂ ಪ್ರಪಂಚದಾದ್ಯಂತ ಆರೋಗ್ಯ ಮತ್ತು ಸ್ಥಾಸ್ಥ್ಯಕ್ಕಾಗಿ ಒಂದು ಭವ್ಯವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್‌ ಅವರಿಗೆ ನಾನು ಆಭಾರಿಯಾಗಿದ್ದೇನೆ. ಡಾ. ಟೆಡ್ರೋಸ್‌ ಅವರು ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಕ್ಕಾಗಿ ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ

April 19th, 03:48 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರ (ಜಿಸಿಟಿಎಂ) ಕ್ಕೆ ಮಾರಿಷಸ್ ಪ್ರಧಾನಿ ಶ್ರೀ ಪ್ರವಿಂದ್ ಕುಮಾರ್ ಜುಗ್ನಾಥ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಜಿಸಿಟಿಎಂ ಸಾಂಪ್ರದಾಯಿಕ ಔಷಧಕ್ಕಾಗಿ ವಿಶ್ವದ ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವಾಗಿದೆ. ಇದು ಜಾಗತಿಕ ಸ್ವಾಸ್ಥ್ಯದ ಅಂತಾರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮಲಿದೆ. ಬಾಂಗ್ಲಾದೇಶ, ಭೂತಾನ್, ನೇಪಾಳದ ಪ್ರಧಾನ ಮಂತ್ರಿಗಳು ಮತ್ತು ಮಾಲ್ಡೀವ್ಸ್ ಅಧ್ಯಕ್ಷರ ವೀಡಿಯೊ ಸಂದೇಶಗಳನ್ನು ಈ ಸಂದರ್ಭದಲ್ಲಿ ಬಿತ್ತರಿಸಲಾಯಿತು. ಕೇಂದ್ರ ಸಚಿವರಾದ ಡಾ ಮನ್ಸುಖ್ ಮಾಂಡವಿಯಾ, ಶ್ರೀ ಸಬಾನಂದ ಸೋನೋವಾಲ್, ಶ್ರೀ ಮುಂಜಾಪರಾ ಮಹೇಂದ್ರಭಾಯಿ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಉಪಸ್ಥಿತರಿದ್ದರು.