ಕ್ವಾಡ್ ನಾಯಕರ ಕ್ಯಾನ್ಸರ್ ಮೂನ್‌ಶಾಟ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
September 22nd, 06:25 am
ಈ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಅಧ್ಯಕ್ಷ ಬೈಡೆನ್ ಅವರನ್ನು ಅಭಿನಂದಿಸುತ್ತೇನೆ. ಇದು ಕೈಗೆಟುಕುವ, ಸುಲಭವಾಗಿ ಲಭ್ಯವಿರುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗೆ ನಮ್ಮ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ಇಂಡೋ-ಪೆಸಿಫಿಕ್‌ಗಾಗಿ ಕ್ವಾಡ್ ಲಸಿಕೆ ಉಪಕ್ರಮ ವನ್ನು ಆರಂಭಿಸಿದ್ದೇವೆ. ಮತ್ತು ಕ್ವಾಡ್ ನಲ್ಲಿ ಗರ್ಭಕಂಠದ ಕ್ಯಾನ್ಸರ್ ನಂತಹ ಸವಾಲನ್ನು ಎದುರಿಸಲು ನಾವು ಒಟ್ಟಾಗಿ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ.ಕ್ವಾಡ್ ಕ್ಯಾನ್ಸರ್ ಮೂನ್ ಶಾಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
September 22nd, 06:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಲವೇರ್ ನ ವಿಲ್ಮಿಂಗ್ಟನ್ ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯ ಸಂದರ್ಭದಲ್ಲಿ ಅದ್ಯಕ್ಷರಾದ ಶ್ರೀ ಜೋಸೆಫ್ ಆರ್ ಬೈಡನ್ ಜೂನಿಯರ್ ಅವರು ಆಯೋಜಿಸಿದ್ದ ಕ್ವಾಡ್ ಕ್ಯಾನ್ಸರ್ ಮೂನ್ ಶಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ʼಜಾಗತಿಕ ದಕ್ಷಿಣ ಶೃಂಗಸಭೆಯ ಮೂರನೇ ಧ್ವನಿʼಯ ನಾಯಕರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಉದ್ಘಾಟನಾ ಭಾಷಣದ ಇಂಗ್ಲಿಷ್ ಅವತರಿಣಿಕೆ
August 17th, 10:00 am
ಭಾರತದ 140 ಕೋಟಿ ಭಾರತೀಯರ ಪರವಾಗಿ ತಮ್ಮೆಲ್ಲರಿಗೂ ʼಜಾಗತಿಕ ದಕ್ಷಿಣ ಶೃಂಗಸಭೆಯ ಮೂರನೇ ಧ್ವನಿʼ ಸಮ್ಮೇಳನಕ್ಕೆ (3ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ) ಆತ್ಮೀಯ ಸ್ವಾಗತ. ಕಳೆದ ಎರಡು ಶೃಂಗಸಭೆಗಳಲ್ಲಿ, ನಿಮ್ಮಲ್ಲಿ ಹಲವರೊಂದಿಗೆ ನಿಕಟವಾಗಿ ಕಾರ್ಯನಿವಹಿಸುವ ಅವಕಾಶ ನನಗೆ ಒದಗಿ ಬಂದಿತ್ತು. ಈ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ತರುವಾಯ ಮತ್ತೊಮ್ಮೆ ಈ ವೇದಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ.ವಿಶ್ವ ಗಾಯತ್ರಿ ಪರಿವಾರ್ ಆಯೋಜಿಸಿದ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡಿದ್ದ ಪ್ರಧಾನಮಂತ್ರಿಯವರ ವೀಡಿಯೊ ಸಂದೇಶದ ಅನುವಾದ
February 25th, 09:10 am
ಗಾಯತ್ರಿ ಪರಿವಾರ ಆಯೋಜಿಸುವ ಯಾವುದೇ ಕಾರ್ಯಕ್ರಮವು ಪಾವಿತ್ರ್ಯತೆಯೊಂದಿಗೆ ಕೂಡಿರುತ್ತೆ, ಅದರಲ್ಲಿ ಭಾಗವಹಿಸುವುದು ದೊಡ್ಡ ಅದೃಷ್ಟದ ವಿಷಯವಾಗಿದೆ. ದೇವ ಸಂಸ್ಕೃತಿ ವಿಶ್ವವಿದ್ಯಾನಿಲಯವು ಇಂದು ಆಯೋಜಿಸಿರುವ ಅಶ್ವಮೇಧ ಯಾಗದ ಭಾಗವಾಗಲು ನನಗೆ ಸಂತೋಷವಾಗಿದೆ. ಈ ಅಶ್ವಮೇಧ ಯಾಗದಲ್ಲಿ ಭಾಗವಹಿಸಲು ಗಾಯತ್ರಿ ಪರಿವಾರದಿಂದ ಆಹ್ವಾನ ಬಂದಾಗ ಸಮಯದ ಅಭಾವದಿಂದ ನನಗೆ ಸಂಕಷ್ಟ ಎದುರಾಗಿದೆ. ವೀಡಿಯೋ ಮೂಲಕ ಈ ಕಾರ್ಯಕ್ರಮವನ್ನು ನೋಡಬೇಕಾಗಿದೆ. ಸಮಸ್ಯೆಯೆಂದರೆ ಅಶ್ವಮೇಧ ಯಾಗವನ್ನು ಸಾಮಾನ್ಯ ಮನುಷ್ಯನು ಶಕ್ತಿಯ ವಿಸ್ತರಣೆ ಎಂದು ಗ್ರಹಿಸುತ್ತಾನೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಶ್ವಮೇಧ ಯಾಗವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಸಹಜ. ಆದರೆ ಈ ಅಶ್ವಮೇಧ ಯಾಗವು ಆಚಾರ್ಯ ಶ್ರೀರಾಮ ಶರ್ಮರ ಚೈತನ್ಯವು ಮುನ್ನಡೆಸುತ್ತಿದೆ ಮತ್ತು ಅಶ್ವಮೇಧ ಯಾಗವನ್ನು ಮರು ವ್ಯಾಖ್ಯಾನಿಸುತ್ತಿದೆ ಎಂದು ನಾನು ಕಂಡುಕೊಂಡೆ, ಆದ್ದರಿಂದ ನನ್ನ ಎಲ್ಲಾ ಸಂದಿಗ್ಧತೆಗಳು ಮಾಯವಾದವು.ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಾಗದಲ್ಲಿ ವಿಡಿಯೋ ಸಂದೇಶ ನೀಡಿದ ಪ್ರಧಾನಮಂತ್ರಿ
February 25th, 08:40 am
ಗಾಯತ್ರಿ ಪರಿವಾರ ಆಯೋಜಿಸಿದ್ದ ಅಶ್ವಮೇಧ ಯಾಗದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶ ನೀಡಿದರು. ಮುಂಬರುವ ಚುನಾವಣೆಗಳ ಬೆಳಕಿನಲ್ಲಿ “ಅಶ್ವಮೇಧ ಯಾಗ”ವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬ ಕಾರಣದಿಂದ ಪ್ರಧಾನಮಂತ್ರಿಯವರು ಸಂದಿಗ್ದತೆಯಿಂದ ತಮ್ಮ ಮಾತು ಆರಂಭಿಸಿದರು. ಅದಾಗ್ಯೂ ಅವರು “ಅಶ್ವಮೇಧ ಯಾಗವನ್ನು ನೋಡುತ್ತಿದ್ದರೆ ಆಚಾರ್ಯ ಶ್ರೀ ರಾಮ ಶರ್ಮಾ ಅವರ ಭಾವನೆಗಳನ್ನು ಎತ್ತಿ ಹಿಡಿದಂತಾಗಿದೆ ಮತ್ತು ಇದು ಹೊಸ ಅರ್ಥವನ್ನು ಒಳಗೊಂಡಿದ್ದು, ನನ್ನ ಸಂದೇಹಗಳು ಕರಗಿಹೋಗಿವೆ” ಎಂದರು.ಭಾರತದ ಜಿ 20 ಅಧ್ಯಕ್ಷತೆ ಭಾರತದ ಸಾಮಾನ್ಯ ನಾಗರಿಕರ ಸಾಮರ್ಥ್ಯವನ್ನು ಹೊರತಂದಿದೆ: ಪ್ರಧಾನಮಂತ್ರಿ
August 15th, 02:24 pm
77 ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಜಿ 20 ಅಧ್ಯಕ್ಷತೆಯು ದೇಶದ ಸಾಮಾನ್ಯ ನಾಗರಿಕರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ವಿವರಿಸಿದರು. ಭಾರತದ ಸಾಮರ್ಥ್ಯ ಮತ್ತು ಭಾರತದ ಸಾಧ್ಯತೆಗಳು ವಿಶ್ವಾಸದ ಹೊಸ ಎತ್ತರವನ್ನು ದಾಟಲಿವೆ ಎಂಬುದು ಖಚಿತವಾಗಿದೆ ಮತ್ತು ವಿಶ್ವಾಸದ ಈ ಹೊಸ ಎತ್ತರವನ್ನು ಹೊಸ ಸಾಮರ್ಥ್ಯದೊಂದಿಗೆ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು. ‘‘ಭಾರತದ ಜಿ 20 ಅಧ್ಯಕ್ಷತೆಯು ಭಾರತದ ಸಾಮಾನ್ಯ ನಾಗರಿಕರ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ. ಇಂದು, ದೇಶದಲ್ಲಿ ಜಿ -20 ಶೃಂಗಸಭೆಯ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. ಮತ್ತು ಕಳೆದ ಒಂದು ವರ್ಷದಿಂದ, ಭಾರತದ ಪ್ರತಿಯೊಂದು ಮೂಲೆಯಲ್ಲೂಇಂತಹ ಅನೇಕ ಜಿ -20 ಕಾರ್ಯಕ್ರಮಗಳನ್ನು ಆಯೋಜಿಸಿದ ರೀತಿ, ಇದು ದೇಶದ ಸಾಮಾನ್ಯ ಮನುಷ್ಯನ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ,’’ ಎಂದು ಅವರು ಹೇಳಿದರು.ವಾರಾಣಸಿಯ ರುದ್ರಕಾಶ್ ಕನ್ವೆನ್ಷನ್ ಸೆಂಟರ್‌ನಲ್ಲಿ 'ಒನ್ ವರ್ಲ್ಡ್ ಟಿಬಿ ಶೃಂಗಸಭೆ' ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
March 24th, 10:20 am
ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಜಿ, ಉಪಮುಖ್ಯಮಂತ್ರಿ ಶ್ರೀ ಬ್ರಿಜೇಶ್ ಪಾಠಕ್ ಜಿ, ವಿವಿಧ ದೇಶಗಳ ಆರೋಗ್ಯ ಸಚಿವರು, ವಿಶ್ವ ಆರೋಗ್ಯ ಸಂಘಟನೆಯ ಪ್ರಾದೇಶಿಕ ನಿರ್ದೇಶಕರು, ಇಲ್ಲಿರುವ ಎಲ್ಲಾ ಗಣ್ಯರು, ಸ್ಟಾಪ್ ಟಿಬಿ ಪಾರ್ಟ್ ನರ್ ಶಿಪ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳೆಯರೆ ಮತ್ತು ಮಹನೀಯರೆ!ಉತ್ತರ ಪ್ರದೇಶದ ವಾರಾಣಸಿಯಲ್ಲಿ ಒಂದು ವಿಶ್ವ ಕ್ಷಯರೋಗ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
March 24th, 10:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯ ರುದ್ರಾಕ್ಷ್ ಸಮಾವೇಶ ಕೇಂದ್ರದಲ್ಲಿ ಒಂದು ವಿಶ್ವ ಟಿಬಿ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಅವರು ಟಿಬಿ ಮುಕ್ತ ಪಂಚಾಯತ್, ಅಲ್ಪಾವಧಿಯ ಟಿಬಿ ತಡೆಗಟ್ಟುವ ಚಿಕಿತ್ಸೆಗೆ (ಟಿಪಿಟಿ)ನ್ನು ಭಾರತದಾದ್ಯಂತ ಅಧಿಕೃತ ಅನುಷ್ಠಾನ, ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ಭಾರತದ ವಾರ್ಷಿಕ ಟಿಬಿ ವರದಿ 2023 ರ ಬಿಡುಗಡೆ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ಹೈ ಕಂಟೈನ್ಮೆಂಟ್ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ವಾರಣಾಸಿಯಲ್ಲಿ ಮೆಟ್ರೋಪಾಲಿಟನ್ ಸಾರ್ವಜನಿಕ ಆರೋಗ್ಯ ಕಣ್ಗಾವಲು ಘಟಕದ ತಾಣವನ್ನು ಉದ್ಘಾಟಿಸಿದರು. ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಗಾಗಿ ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಪ್ರಧಾನಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಜಿಲ್ಲಾ ಮಟ್ಟದಲ್ಲಿ ನೀಲಗಿರಿ, ಪುಲ್ವಾಮಾ ಮತ್ತು ಅನಂತ್ ನಾಗ್ ಈ ಪ್ರಶಸ್ತಿಗಳನ್ನು ಪಡೆದಿವೆ.ನವದೆಹಲಿಯ ಎಕನಾಮಿಕ್ ಟೈಮ್ಸ್ ನ ಜಾಗತಿಕ ವ್ಯಾಪಾರ ಶೃಂಗಸಭೆ -2023 ರಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲೀಷ್ ಅನುವಾದ
February 17th, 08:59 pm
ನಾನು ವಿಷಯಕ್ಕೆ ಬರುವ ಮುನ್ನ ಶಿವಭಕ್ತಿ ಮತ್ತು ಲಕ್ಷ್ಮೀ ಆರಾಧನೆಯನ್ನು ಉಲ್ಲೇಖಿಸುತ್ತೇನೆ [ಸಮೀರ್ ಜೀ ಅವರು ಪ್ರಸ್ತಾಪಿಸಿದಂತೆ]. ನೀವು [ಸಮೀರ್ ಜೀ] ಆದಾಯ ತೆರಿಗೆ ಹೆಚ್ಚಿಸುವಂತೆ ಸಲಹೆ ಮಾಡಿದ್ದೀರಿ. ಆದರೆ ಈ ಜನರು [ಹಣಕಾಸು ಇಲಾಖೆಯಲ್ಲಿ] ನಂತರ ಏನು ಮಾಡುತ್ತಾರೆ ಎಂಬುದು ನನಗೆ ತಿಳಿದಿಲ್ಲ. ನಿಮ್ಮ ಮಾಹಿತಿಗಾಗಿ, ವಿಶೇಷವಾಗಿ ಮಹಿಳೆಯರಿಗಾಗಿ ಈ ವರ್ಷದ ಮುಂಗಡಪತ್ರದಲ್ಲಿ ಬಹಳ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡು ವರ್ಷಗಳ ಕಾಲ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಟ್ಟರೆ ಅವರಿಗೆ ವಿಶೇಷವಾದ ಬಡ್ಡಿದರ ಖಚಿತವಾಗುತ್ತದೆ. ಇದು ಶ್ಲಾಘನೀಯ ಹೆಜ್ಜೆ ಎಂದು ನಾನು ಭಾವಿಸುತ್ತೇನೆ ಮತ್ತು ನೀವು ಇದನ್ನು ಇಷ್ಟಪಡುತ್ತೀರಿ. ಈಗ ಈ ಸುದ್ದಿಗೆ ಸೂಕ್ತ ಪ್ರಾತಿನಿಧ್ಯೆ ನೀಡುವುದು ನಿಮ್ಮ ಸಂಪಾದಕೀಯ ವಿಭಾಗದ ಮೇಲಿದೆ. ದೇಶ ಮತ್ತು ಜಗತ್ತಿನಾದ್ಯಂತ ಆಗಮಿಸಿರುವ ವ್ಯಾಪಾರ ವಲಯದ ನಾಯಕರನ್ನು ಸ್ವಾಗತಿಸುತ್ತೇನೆ ಮತ್ತು ಶುಭ ಕೋರುತ್ತೇನೆ.ದೆಹಲಿಯಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
February 17th, 08:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.Vision of self-reliant India embodies the spirit of global good: PM Modi in Indonesia
November 15th, 04:01 pm
PM Modi interacted with members of Indian diaspora and Friends of India in Bali, Indonesia. He highlighted the close cultural and civilizational linkages between India and Indonesia. He referred to the age old tradition of Bali Jatra” to highlight the enduring cultural and trade connect between the two countries.ಇಂಡೋನೇಷ್ಯಾದ ಬಾಲಿಯಲ್ಲಿ ಭಾರತೀಯ ಸಮುದಾಯ ಮತ್ತು ʻಫ್ರೆಂಡ್ಸ್ ಆಫ್ ಇಂಡಿಯಾʼ ಜೊತೆ ಪ್ರಧಾನಮಂತ್ರಿಯವರ ಸಂವಾದ
November 15th, 04:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ನವೆಂಬರ್ 15ರಂದು ಇಂಡೋನೇಷ್ಯಾದ ಬಾಲಿಯಲ್ಲಿ 800ಕ್ಕೂ ಹೆಚ್ಚು ಭಾರತೀಯ ವಲಸಿಗರು ಮತ್ತು `ಫ್ರೆಂಡ್ಸ್ ಆಫ್ ಇಂಡಿಯಾ’ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಜೊತೆಗೆ ಅವರೊಂದಿಗೆ ಸಂವಾದ ನಡೆಸಿದರು. ಇಂಡೋನೇಷ್ಯಾದ ಮೂಲೆಮೂಲೆಗಳಿಂದ ಭಾರಿ ಸಂಖ್ಯೆಯ ಮತ್ತು ವೈವಿಧ್ಯಮಯ ಜನಸಮೂಹವು ಕಾರ್ಯಕ್ರಮದಲ್ಲಿ ಭಾಗಿಯಾಯಿತು.Our G-20 mantra is - One Earth, One Family, One Future: PM Modi
November 08th, 07:31 pm
PM Modi unveiled the logo, theme and website of India’s G-20 Presidency. Remarking that the G-20 logo is not just any logo, the PM said that it is a message, a feeling that runs in India’s veins. He said, “It is a resolve that has been omnipresent in our thoughts through ‘Vasudhaiva Kutumbakam’. He further added that the thought of universal brotherhood is being reflected via the G-20 logo.ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣ ಮಾಡಿದ ಪ್ರಧಾನಮಂತ್ರಿ
November 08th, 04:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದರು.Today our focus is not only on health, but equally on wellness: PM Modi
February 26th, 02:08 pm
PM Narendra Modi inaugurated the post Union Budget webinar of Ministry of Health and Family Welfare. The Prime Minister said, The Budget builds upon the efforts to reform and transform the healthcare sector that have been undertaken during the last seven years. We have adopted a holistic approach in our healthcare system. Today our focus is not only on health, but equally on wellness.”ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಜೆಟ್ ನಂತರದ ವೆಬಿನಾರ್ ಉದ್ಘಾಟಿಸಿದ ಪ್ರಧಾನಿ
February 26th, 09:35 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ಬಜೆಟ್ ನಂತರದ ವೆಬಿನಾರ್ ಅನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಉದ್ದೇಶಿಸಿ ಮಾತನಾಡಿದ ಬಜೆಟ್ ನಂತರದ ವೆಬಿನಾರ್ಗಳ ಸರಣಿಯಲ್ಲಿ ಇದು ಐದನೇ ವೆಬಿನಾರ್ ಆಗಿದೆ. ಕೇಂದ್ರ ಸಚಿವರು, ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಆರೋಗ್ಯ ವೃತ್ತಿಪರರು ಮತ್ತು ಅರೆ ವೈದ್ಯಕೀಯ, ನರ್ಸಿಂಗ್, ಆರೋಗ್ಯ ನಿರ್ವಹಣೆ, ತಂತ್ರಜ್ಞಾನ ಮತ್ತು ಸಂಶೋಧನೆಯ ವೃತ್ತಿಪರರು ಈ ಸಂದರ್ಭದಲ್ಲಿ ಹಾಜರಿದ್ದರು.ಕೊವಿನ್ ಜಾಗತಿಕ ಸಮಾವೇಶ 2021 ರಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
July 05th, 03:08 pm
ಕೋವಿಡ್ -19 ವಿರುದ್ಧದ ನಮ್ಮ ಹೋರಾಟದಲ್ಲಿ ತಂತ್ರಜ್ಞಾನ ಸಮಗ್ರ ಭಾಗ. ಅದೃಷ್ಟವಶಾತ್, ಸಾಫ್ಟ್ ವೇರ್ ಕ್ಷೇತ್ರ ಸಂಪನ್ಮೂಲಗಳ ಕೊರತೆ ಇಲ್ಲದ ಕ್ಷೇತ್ರಗಳಲ್ಲೊಂದು. ಅದರಿಂದಾಗಿ ನಾವು ನಮ್ಮ ಕೋವಿಡ್ ಪತ್ತೆ ಮತ್ತು ನಿಗಾ ಆಪ್ ನ್ನು ಅದು ತಾಂತ್ರಿಕವಾಗಿ ಅನುಷ್ಠಾನ ಯೋಗ್ಯ ಎಂದಾದ ಕೂಡಲೇ ಮುಕ್ತ ಮೂಲವನ್ನಾಗಿ ಮಾಡಿದೆವು. ಸುಮಾರು 200 ಮಿಲಿಯನ್ ಬಳಕೆದಾರರೊಂದಿಗೆ ಈ “ಆರೋಗ್ಯ ಸೇತು” ಆಪ್ ಅಭಿವೃದ್ಧಿ ಮಾಡುವವರಿಗೆ ತಕ್ಷಣವೇ ಲಭ್ಯವಾಗುವ ಪ್ಯಾಕೇಜ್ ಆಗಿದೆ. ಭಾರತದಲ್ಲಿ ಬಳಕೆಯಾಗುತ್ತಿರುವುದರಿಂದ, ವೇಗ ಮತ್ತು ಪ್ರಮಾಣಕ್ಕೆ ಸಂಬಂಧಿಸಿ ಅದು ನೈಜ ಜಗತ್ತಿನಲ್ಲಿ ಪರೀಕ್ಷಿಸಲ್ಪಟ್ಟಿರುವ ಬಗ್ಗೆ ನಿಮಗೆ ಖಾತ್ರಿ ಇರಬಹುದು.ಕೋವಿಡ್-19 ಅನ್ನು ಮಣಿಸಲು ಭಾರತವು ಕೋ-ವಿನ್ ವೇದಿಕೆಯನ್ನು ಡಿಜಿಟಲ್ ಸಾರ್ವಜನಿಕ ಒಳಿತಾಗಿ ಜಗತ್ತಿಗೆ ಒದಗಿಸುತ್ತಿದ್ದು, ಪ್ರಧಾನಮಂತ್ರಿ ಕೋ-ವಿನ್ ಜಾಗತಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು
July 05th, 03:07 pm
ಕೋವಿಡ್-19 ನಿಗ್ರಹಕ್ಕಾಗಿ ಭಾರತ ಕೋವಿನ್ ವೇದಿಕೆಯನ್ನು ಡಿಜಿಟಲ್ ಸಾರ್ವಜನಿಕ ಒಳಿತಿಗಾಗಿ ಜಗತ್ತಿಗೆ ನೀಡುತ್ತಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೋವಿನ್ ಜಾಗತಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು.ವಿಶ್ವದ ಪ್ರತಿ ಮೂಲೆಗೂ ಯೋಗ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು: ಪ್ರಧಾನಮಂತ್ರಿ ಮೋದಿ
June 21st, 08:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯೋಗ ಆಚಾರ್ಯರು, ಮತ್ತು ಯೋಗ ಪ್ರಚಾರಕರು ಮತ್ತು ಯೋಗದೊಂದಿಗೆ ನಂಟು ಹೊಂದಿರುವ ಪ್ರತಿಯೊಬ್ಬರೂ ವಿಶ್ವದ ಪ್ರತಿ ಮೂಲೆಗೂ ಯೋಗವನ್ನು ತಲುಪಿಸುವುದನ್ನು ಖಾತ್ರಿ ಪಡೆಸಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ. ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.ಕೋವಿಡ್ ಬಾಧಿತ ಜಗತ್ತಿನಲ್ಲಿ ಯೋಗ ಇನ್ನೂ ಆಶಾಕಿರಣವಾಗಿದೆ- ಪ್ರಧಾನಮಂತ್ರಿ ಮೋದಿ
June 21st, 08:37 am
ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಸಾಂಕ್ರಾಮಿಕದ ಈ ಸನ್ನಿವೇಶದಲ್ಲಿ ಯೋಗದ ಪಾತ್ರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಯೋಗವು ಮೂಲ ಶಕ್ತಿ ಮತ್ತು ಸಮತೋಲನವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಯೋಗ ದಿನವನ್ನು ದೇಶಗಳು ಮರೆಯುವುದು ಸುಲಭ, ಏಕೆಂದರೆ ಇದು ಅವರ ಸಂಸ್ಕೃತಿಗೆ ಅಂತರ್ಗತವಾಗಿಲ್ಲ ಆದರೆ, ಜಾಗತಿಕವಾಗಿ ಯೋಗದ ಉತ್ಸಾಹ ಹೆಚ್ಚಾಗಿದೆ ಎಂದು ಅವರು ಹೇಳಿದರು.