ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ನಡೆದ ʻಅಹ್ಲನ್ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
February 13th, 11:19 pm
ಇಂದು, ನೀವು ಅಬುಧಾಬಿಯಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಅರಬ್ ಸಂಯುಕ್ತ ಸಂಸ್ಥಾನದ(ಯುಎಇ) ವಿವಿಧ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ನೀವು ಬಂದಿದ್ದೀರಿ, ಆದರೆ ಎಲ್ಲರ ಹೃದಯಗಳು ಪರಸ್ಪರ ಬೆಸೆದುಕೊಂಡಿವೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಮಿಡಿತವು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿʼ! ಪ್ರತಿ ಉಸಿರು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹ ಚಿರಾಯುವಾಗಲಿ! ಪ್ರತಿಯೊಂದು ಧ್ವನಿಯೂ ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿ! ನಾವು ಈ ಕ್ಷಣವನ್ನು ಪೂರ್ಣವಾಗಿ ಬದುಕಬೇಕು. ಇಂದು, ನಾವು ಜೀವಮಾನವಿಡೀ ನಮ್ಮೊಂದಿಗೆ ಉಳಿಯುವ ನೆನಪುಗಳನ್ನು ಸಂಗ್ರಹಿಸಬೇಕಾಗಿದೆ - ಜೀವಮಾನವಿಡೀ ನನ್ನೊಂದಿಗೆ ಉಳಿಯುವ ನೆನಪುಗಳು...ಯು.ಎ.ಇ.ಯಲ್ಲಿ ನಡೆದ ಭಾರತೀಯ ಸಮುದಾಯದ -''ಅಹ್ಲಾನ್ ಮೋದಿ'' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಸಂವಾದ
February 13th, 08:30 pm
ಯು.ಎ.ಇ.ಯಲ್ಲಿನ ಭಾರತೀಯ ಸಮುದಾಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾರ್ಥವಾಗಿ ಆಯೋಜಿಸಿದ ''ಅಹ್ಲಾನ್ ಮೋದಿ'' ಕಾರ್ಯಕ್ರಮದಲ್ಲಿ ಯು.ಎ.ಇ.ಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ಯು.ಎ.ಇ.ಯ 7 ಎಮಿರೇಟ್ಸ್ ನಾದ್ಯಂತ ಭಾರತೀಯ ಅನಿವಾಸಿ ಸಮುದಾಯ (ಡಯಾಸ್ಪೊರಾ) ಬೃಹತ್ ಪ್ರಮಾಣದಲ್ಲಿ ಭಾಗವಹಿಸುವಿಕೆ ಮತ್ತು ಎಲ್ಲಾ ಸಮುದಾಯಗಳ ಭಾರತೀಯರನ್ನು ''ಅಹ್ಲಾನ್ ಮೋದಿ'' ಕಾರ್ಯಕ್ರಮ ಒಳಗೊಂಡಿತ್ತು. ಯು.ಎ.ಇ.ಯ ಪ್ರಜೆಗಳಾದ ಅರಬಿ(ಎಮಿರಾಟಿ)ಗಳು ಸಹ ಪ್ರೇಕ್ಷಕರಾಗಿ ಒಳಗೊಂಡಿದ್ದರು.ʻಜಿ 20ʼ ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ
June 21st, 03:00 pm
ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ!ಜಿ-20 ಪ್ರವಾಸೋದ್ಯಮ ಸಚಿವ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
June 21st, 02:29 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಂದೇಶದ ಮೂಲಕ ಗೋವಾದಲ್ಲಿ ನಡೆದ ಜಿ-20 ಪ್ರವಾಸೋದ್ಯಮ ಸಚಿವರ ಸಭೆ ಉದ್ದೇಶಿಸಿ ಭಾಷಣ ಮಾಡಿದರು.ನವದೆಹಲಿಯಲ್ಲಿ ನಡೆದ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
March 18th, 02:43 pm
ಇಂದಿನ ಸಮ್ಮೇಳನದಲ್ಲಿ ನನ್ನ ಜೊತೆಗಿರುವ ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ನರೇಂದ್ರ ತೋಮರ್, ಮನ್ಸುಖ್ ಮಾಂಡವಿಯಾ, ಶ್ರೀ ಪಿಯೂಷ್ ಗೋಯೆಲ್ ಮತ್ತು ಶ್ರೀ ಕೈಲಾಶ್ ಚೌಧರಿ ಅವರೇ; ಗಯಾನಾ, ಮಾಲ್ಡೀವ್ಸ್, ಮಾರಿಷಸ್, ಶ್ರೀಲಂಕಾ, ಸುಡಾನ್, ಸುರಿನಾಮ್ ಮತ್ತು ಗಾಂಬಿಯಾದ ಗೌರವಾನ್ವಿತ ಸಚಿವರೇ; ವಿಶ್ವದ ವಿವಿಧ ಭಾಗಗಳಿಂದ ಬಂದ ಕೃಷಿ, ಪೌಷ್ಠಿಕಾಂಶ ಮತ್ತು ಆರೋಗ್ಯ ಕ್ಷೇತ್ರದ ವಿಜ್ಞಾನಿಗಳು ಮತ್ತು ತಜ್ಞರೇ; ದೇಶದ ವಿವಿಧ ʻಎಫ್ ಪಿ ಒʼ ಗಳು ಮತ್ತು ನವೋದ್ಯಮ ಜಗತ್ತಿನ ಯುವ ಸ್ನೇಹಿತರೇ; ದೇಶದ ಮೂಲೆ ಮೂಲೆಗಳಿಂದ ಹಾಜರಾದ ಲಕ್ಷಾಂತರ ರೈತರೇ; ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ
March 18th, 11:15 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ʻಎನ್ಎಎಸ್ಎʼ ಕಾಂಪ್ಲೆಕ್ಸ್ನ ʻಸುಬ್ರಮಣ್ಯಂ ಹಾಲ್ʼನಲ್ಲಿ ʻಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನʼವನ್ನು ಉದ್ಘಾಟಿಸಿದರು. ಎರಡು ದಿನಗಳ ಈ ಜಾಗತಿಕ ಸಮ್ಮೇಳನವು ಸಿರಿಧಾನ್ಯಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಒಳಗೊಂಡಿದೆ. ಉದಾಹರಣೆಗೆ ಉತ್ಪಾದಕರು, ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರಲ್ಲಿ ಸಿರಿಧಾನ್ಯಗಳ ಪ್ರಚಾರ ಮತ್ತು ಜಾಗೃತಿ; ಸಿರಿಧಾನ್ಯಗಳ ಮೌಲ್ಯ ಸರಪಳಿ ಅಭಿವೃದ್ಧಿ; ಸಿರಿಧಾನ್ಯಗಳ ಆರೋಗ್ಯ ಮತ್ತು ಪೌಷ್ಠಿಕಾಂಶದ ಅಂಶಗಳು; ಮಾರುಕಟ್ಟೆ ಸಂಪರ್ಕಗಳು; ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ.ಜಿ-20ರ ಶೃಂಗಸಭೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ
March 02nd, 09:38 am
ಜಿ-20ರ ವಿದೇಶಾಂಗ ಸಚಿವರ ಸಭೆಗೆ ನಾನು ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಭಾರತವು ತನ್ನ ಜಿ-20ರ ಅಧ್ಯಕ್ಷ ಸ್ಥಾನದಿಂದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಘೋಷವಾಕ್ಯವನ್ನು ಆಯ್ಕೆ ಮಾಡಿದೆ. ಈ ಘೋಷವಾಕ್ಯವು ಉದ್ದೇಶದ ಏಕತೆ ಮತ್ತು ಕ್ರಿಯೆಯ ಏಕತೆಯ ಅಗತ್ಯವನ್ನು ಸೂಚಿಸುತ್ತದೆ. ಸಾಮಾನ್ಯ ಮತ್ತು ದೃಢವಾದ ಉದ್ದೇಶಗಳನ್ನು ಸಾಧಿಸಲು ಒಗ್ಗೂಡುವ ಈ ಮನೋಭಾವವನ್ನು ಇಂದಿನ ಈ ಸಭೆ ಪ್ರತಿಬಿಂಬಿಸುತ್ತದೆ ಎಂದು ನಾನು ಭಾವಿಸುತ್ತೇನೆ.ಜಿ-20 ವಿದೇಶಾಂಗ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ
March 02nd, 09:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಜಿ-20 ವಿದೇಶಾಂಗ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ಗಳ ಮೊದಲ ಸಭೆಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ
February 24th, 09:25 am
ನಾನು ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ಗಳನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ನಿಮ್ಮ ಸಭೆಯು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಸಚಿವರ ಮಟ್ಟದ ಮೊದಲ ಸಂವಾದವಾಗಿದೆ. ಫಲಪ್ರದ ಸಭೆಗಾಗಿ ನಿಮಗೆ ನನ್ನ ಶುಭಾಶಯಗಳು. ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನನಗೆ ಅರಿವಿದೆ. ಜಗತ್ತು ಗಂಭೀರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನೀವು ಜಾಗತಿಕ ಹಣಕಾಸು ಮತ್ತು ಆರ್ಥಿಕತೆಯ ನಾಯಕತ್ವವನ್ನು ಪ್ರತಿನಿಧಿಸುತ್ತಿದ್ದೀರಿ. ಶತಮಾನ ಕಂಡರಿಯದ ಕೋವಿಡ್ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಗೆ ಹೊಡೆತವನ್ನು ನೀಡಿದೆ. ಅನೇಕ ದೇಶಗಳು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು, ಅದರ ನಂತರದ ಪರಿಣಾಮಗಳನ್ನು ಇನ್ನೂ ನಿಭಾಯಿಸುತ್ತಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳನ್ನು ನಾವು ನೋಡುತ್ತಿದ್ದೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡಚಣೆಗಳು ಉಂಟಾಗಿವೆ. ಬೆಲೆ ಏರಿಕೆಯಿಂದ ಹಲವು ಸಮಾಜಗಳು ಸಂಕಷ್ಟಕ್ಕೆ ಸಿಲುಕಿವೆ. ಆಹಾರ ಮತ್ತು ಇಂಧನ ಸುರಕ್ಷತೆಯು ಪ್ರಪಂಚದಾದ್ಯಂತ ಪ್ರಮುಖ ಕಾಳಜಿಯಾಗಿದೆ. ಅನೇಕ ದೇಶಗಳ ಆರ್ಥಿಕತೆಯು ಸಮರ್ಥನೀಯವಲ್ಲದ ಸಾಲ ಮಟ್ಟಗಳಿಂದ ಬೆದರಿಕೆಗೆ ಒಳಗಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲಿನ ನಂಬಿಕೆ ಕುಸಿದಿದೆ. ಅವುಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ತಡಮಾಡಿವೆ ಎಂಬುದು ಇದಕ್ಕೆ ಭಾಗಶಃ ಕಾರಣವಾಗಿದೆ. ಜಾಗತಿಕ ಆರ್ಥಿಕತೆಗೆ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರುವುದು ವಿಶ್ವದ ಪ್ರಮುಖ ಆರ್ಥಿಕತೆಗಳು ಮತ್ತು ವಿತ್ತೀಯ ವ್ಯವಸ್ಥೆಗಳ ಪಾಲಕರಾದ ನಿಮಗೆ ಸೇರಿದ್ದು. ಇದು ಅಷ್ಟು ಸುಲಭದ ಕೆಲಸವಲ್ಲ.ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ಗಳ ಮೊದಲ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 24th, 09:15 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಸಂದೇಶದ ಮೂಲಕ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ಗಳ ಮೊದಲ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.Our G-20 mantra is - One Earth, One Family, One Future: PM Modi
November 08th, 07:31 pm
PM Modi unveiled the logo, theme and website of India’s G-20 Presidency. Remarking that the G-20 logo is not just any logo, the PM said that it is a message, a feeling that runs in India’s veins. He said, “It is a resolve that has been omnipresent in our thoughts through ‘Vasudhaiva Kutumbakam’. He further added that the thought of universal brotherhood is being reflected via the G-20 logo.ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣ ಮಾಡಿದ ಪ್ರಧಾನಮಂತ್ರಿ
November 08th, 04:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದರು.