ʻಜಿ 20ʼ ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ

June 21st, 03:00 pm

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ!

ಜಿ-20 ಪ್ರವಾಸೋದ್ಯಮ ಸಚಿವ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

June 21st, 02:29 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಸಂದೇಶದ ಮೂಲಕ ಗೋವಾದಲ್ಲಿ ನಡೆದ ಜಿ-20 ಪ್ರವಾಸೋದ್ಯಮ ಸಚಿವರ ಸಭೆ ಉದ್ದೇಶಿಸಿ ಭಾಷಣ ಮಾಡಿದರು.

ವಾರಾಣಸಿಯ ರುದ್ರಕಾಶ್ ಕನ್ವೆನ್ಷನ್ ಸೆಂಟರ್‌ನಲ್ಲಿ 'ಒನ್ ವರ್ಲ್ಡ್ ಟಿಬಿ ಶೃಂಗಸಭೆ' ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

March 24th, 10:20 am

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಜಿ, ಉಪಮುಖ್ಯಮಂತ್ರಿ ಶ್ರೀ ಬ್ರಿಜೇಶ್ ಪಾಠಕ್ ಜಿ, ವಿವಿಧ ದೇಶಗಳ ಆರೋಗ್ಯ ಸಚಿವರು, ವಿಶ್ವ ಆರೋಗ್ಯ ಸಂಘಟನೆಯ ಪ್ರಾದೇಶಿಕ ನಿರ್ದೇಶಕರು, ಇಲ್ಲಿರುವ ಎಲ್ಲಾ ಗಣ್ಯರು, ಸ್ಟಾಪ್ ಟಿಬಿ ಪಾರ್ಟ್ ನರ್ ಶಿಪ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳೆಯರೆ ಮತ್ತು ಮಹನೀಯರೆ!

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಒಂದು ವಿಶ್ವ ಕ್ಷಯರೋಗ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

March 24th, 10:15 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯ ರುದ್ರಾಕ್ಷ್ ಸಮಾವೇಶ ಕೇಂದ್ರದಲ್ಲಿ ಒಂದು ವಿಶ್ವ ಟಿಬಿ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಅವರು ಟಿಬಿ ಮುಕ್ತ ಪಂಚಾಯತ್, ಅಲ್ಪಾವಧಿಯ ಟಿಬಿ ತಡೆಗಟ್ಟುವ ಚಿಕಿತ್ಸೆಗೆ (ಟಿಪಿಟಿ)ನ್ನು ಭಾರತದಾದ್ಯಂತ ಅಧಿಕೃತ ಅನುಷ್ಠಾನ, ಕ್ಷಯರೋಗಕ್ಕೆ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ಭಾರತದ ವಾರ್ಷಿಕ ಟಿಬಿ ವರದಿ 2023 ರ ಬಿಡುಗಡೆ ಸೇರಿದಂತೆ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ಹೈ ಕಂಟೈನ್ಮೆಂಟ್ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ವಾರಣಾಸಿಯಲ್ಲಿ ಮೆಟ್ರೋಪಾಲಿಟನ್ ಸಾರ್ವಜನಿಕ ಆರೋಗ್ಯ ಕಣ್ಗಾವಲು ಘಟಕದ ತಾಣವನ್ನು ಉದ್ಘಾಟಿಸಿದರು. ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿಗಾಗಿ ಆಯ್ದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಿಗೆ ಪ್ರಧಾನಮಂತ್ರಿಯವರು ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ಹಾಗೂ ಜಿಲ್ಲಾ ಮಟ್ಟದಲ್ಲಿ ನೀಲಗಿರಿ, ಪುಲ್ವಾಮಾ ಮತ್ತು ಅನಂತ್ ನಾಗ್ ಈ ಪ್ರಶಸ್ತಿಗಳನ್ನು ಪಡೆದಿವೆ.

ನವದೆಹಲಿಯಲ್ಲಿ ನಡೆದ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ

March 18th, 02:43 pm

ಇಂದಿನ ಸಮ್ಮೇಳನದಲ್ಲಿ ನನ್ನ ಜೊತೆಗಿರುವ ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ನರೇಂದ್ರ ತೋಮರ್, ಮನ್ಸುಖ್ ಮಾಂಡವಿಯಾ, ಶ್ರೀ ಪಿಯೂಷ್ ಗೋಯೆಲ್ ಮತ್ತು ಶ್ರೀ ಕೈಲಾಶ್ ಚೌಧರಿ ಅವರೇ; ಗಯಾನಾ, ಮಾಲ್ಡೀವ್ಸ್, ಮಾರಿಷಸ್, ಶ್ರೀಲಂಕಾ, ಸುಡಾನ್, ಸುರಿನಾಮ್ ಮತ್ತು ಗಾಂಬಿಯಾದ ಗೌರವಾನ್ವಿತ ಸಚಿವರೇ; ವಿಶ್ವದ ವಿವಿಧ ಭಾಗಗಳಿಂದ ಬಂದ ಕೃಷಿ, ಪೌಷ್ಠಿಕಾಂಶ ಮತ್ತು ಆರೋಗ್ಯ ಕ್ಷೇತ್ರದ ವಿಜ್ಞಾನಿಗಳು ಮತ್ತು ತಜ್ಞರೇ; ದೇಶದ ವಿವಿಧ ʻಎಫ್ ಪಿ ಒʼ ಗಳು ಮತ್ತು ನವೋದ್ಯಮ ಜಗತ್ತಿನ ಯುವ ಸ್ನೇಹಿತರೇ; ದೇಶದ ಮೂಲೆ ಮೂಲೆಗಳಿಂದ ಹಾಜರಾದ ಲಕ್ಷಾಂತರ ರೈತರೇ; ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ

March 18th, 11:15 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆವರಣದಲ್ಲಿರುವ ʻಎನ್‌ಎಎಸ್‌ಎʼ ಕಾಂಪ್ಲೆಕ್ಸ್‌ನ ʻಸುಬ್ರಮಣ್ಯಂ ಹಾಲ್‌ʼನಲ್ಲಿ ʻಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನʼವನ್ನು ಉದ್ಘಾಟಿಸಿದರು. ಎರಡು ದಿನಗಳ ಈ ಜಾಗತಿಕ ಸಮ್ಮೇಳನವು ಸಿರಿಧಾನ್ಯಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ಒಳಗೊಂಡಿದೆ. ಉದಾಹರಣೆಗೆ ಉತ್ಪಾದಕರು, ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರಲ್ಲಿ ಸಿರಿಧಾನ್ಯಗಳ ಪ್ರಚಾರ ಮತ್ತು ಜಾಗೃತಿ; ಸಿರಿಧಾನ್ಯಗಳ ಮೌಲ್ಯ ಸರಪಳಿ ಅಭಿವೃದ್ಧಿ; ಸಿರಿಧಾನ್ಯಗಳ ಆರೋಗ್ಯ ಮತ್ತು ಪೌಷ್ಠಿಕಾಂಶದ ಅಂಶಗಳು; ಮಾರುಕಟ್ಟೆ ಸಂಪರ್ಕಗಳು; ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿ.

ಜಿ-20ರ ಶೃಂಗಸಭೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

March 02nd, 09:38 am

ಜಿ-20ರ ವಿದೇಶಾಂಗ ಸಚಿವರ ಸಭೆಗೆ ನಾನು ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಭಾರತವು ತನ್ನ ಜಿ-20ರ ಅಧ್ಯಕ್ಷ ಸ್ಥಾನದಿಂದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಘೋಷವಾಕ್ಯವನ್ನು ಆಯ್ಕೆ ಮಾಡಿದೆ. ಈ ಘೋಷವಾಕ್ಯವು ಉದ್ದೇಶದ ಏಕತೆ ಮತ್ತು ಕ್ರಿಯೆಯ ಏಕತೆಯ ಅಗತ್ಯವನ್ನು ಸೂಚಿಸುತ್ತದೆ. ಸಾಮಾನ್ಯ ಮತ್ತು ದೃಢವಾದ ಉದ್ದೇಶಗಳನ್ನು ಸಾಧಿಸಲು ಒಗ್ಗೂಡುವ ಈ ಮನೋಭಾವವನ್ನು ಇಂದಿನ ಈ ಸಭೆ ಪ್ರತಿಬಿಂಬಿಸುತ್ತದೆ ಎಂದು ನಾನು ಭಾವಿಸುತ್ತೇನೆ.

​​​​​​​ಜಿ-20 ವಿದೇಶಾಂಗ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

March 02nd, 09:37 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಜಿ-20 ವಿದೇಶಾಂಗ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

​​​​​​​ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಸಭೆಯಲ್ಲಿ ಪ್ರಧಾನ ಮಂತ್ರಿಯವರ ವೀಡಿಯೊ ಸಂದೇಶದ ಪಠ್ಯ

February 24th, 09:25 am

ನಾನು ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ನಿಮ್ಮ ಸಭೆಯು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಸಚಿವರ ಮಟ್ಟದ ಮೊದಲ ಸಂವಾದವಾಗಿದೆ. ಫಲಪ್ರದ ಸಭೆಗಾಗಿ ನಿಮಗೆ ನನ್ನ ಶುಭಾಶಯಗಳು. ನೀವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನನಗೆ ಅರಿವಿದೆ. ಜಗತ್ತು ಗಂಭೀರ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನೀವು ಜಾಗತಿಕ ಹಣಕಾಸು ಮತ್ತು ಆರ್ಥಿಕತೆಯ ನಾಯಕತ್ವವನ್ನು ಪ್ರತಿನಿಧಿಸುತ್ತಿದ್ದೀರಿ. ಶತಮಾನ ಕಂಡರಿಯದ ಕೋವಿಡ್ ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಗೆ ಹೊಡೆತವನ್ನು ನೀಡಿದೆ. ಅನೇಕ ದೇಶಗಳು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು, ಅದರ ನಂತರದ ಪರಿಣಾಮಗಳನ್ನು ಇನ್ನೂ ನಿಭಾಯಿಸುತ್ತಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳನ್ನು ನಾವು ನೋಡುತ್ತಿದ್ದೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಅಡಚಣೆಗಳು ಉಂಟಾಗಿವೆ. ಬೆಲೆ ಏರಿಕೆಯಿಂದ ಹಲವು ಸಮಾಜಗಳು ಸಂಕಷ್ಟಕ್ಕೆ ಸಿಲುಕಿವೆ. ಆಹಾರ ಮತ್ತು ಇಂಧನ ಸುರಕ್ಷತೆಯು ಪ್ರಪಂಚದಾದ್ಯಂತ ಪ್ರಮುಖ ಕಾಳಜಿಯಾಗಿದೆ. ಅನೇಕ ದೇಶಗಳ ಆರ್ಥಿಕತೆಯು ಸಮರ್ಥನೀಯವಲ್ಲದ ಸಾಲ ಮಟ್ಟಗಳಿಂದ ಬೆದರಿಕೆಗೆ ಒಳಗಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲಿನ ನಂಬಿಕೆ ಕುಸಿದಿದೆ. ಅವುಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ತಡಮಾಡಿವೆ ಎಂಬುದು ಇದಕ್ಕೆ ಭಾಗಶಃ ಕಾರಣವಾಗಿದೆ. ಜಾಗತಿಕ ಆರ್ಥಿಕತೆಗೆ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರುವುದು ವಿಶ್ವದ ಪ್ರಮುಖ ಆರ್ಥಿಕತೆಗಳು ಮತ್ತು ವಿತ್ತೀಯ ವ್ಯವಸ್ಥೆಗಳ ಪಾಲಕರಾದ ನಿಮಗೆ ಸೇರಿದ್ದು. ಇದು ಅಷ್ಟು ಸುಲಭದ ಕೆಲಸವಲ್ಲ.

ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಮೊದಲ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

February 24th, 09:15 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಸಂದೇಶದ ಮೂಲಕ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.

ನವದೆಹಲಿಯ ಎಕನಾಮಿಕ್ ಟೈಮ್ಸ್ ನ ಜಾಗತಿಕ ವ್ಯಾಪಾರ ಶೃಂಗಸಭೆ -2023 ರಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲೀಷ್ ಅನುವಾದ

February 17th, 08:59 pm

ನಾನು ವಿಷಯಕ್ಕೆ ಬರುವ ಮುನ್ನ ಶಿವಭಕ್ತಿ ಮತ್ತು ಲಕ್ಷ್ಮೀ ಆರಾಧನೆಯನ್ನು ಉಲ್ಲೇಖಿಸುತ್ತೇನೆ [ಸಮೀರ್ ಜೀ ಅವರು ಪ್ರಸ್ತಾಪಿಸಿದಂತೆ]. ನೀವು [ಸಮೀರ್ ಜೀ] ಆದಾಯ ತೆರಿಗೆ ಹೆಚ್ಚಿಸುವಂತೆ ಸಲಹೆ ಮಾಡಿದ್ದೀರಿ. ಆದರೆ ಈ ಜನರು [ಹಣಕಾಸು ಇಲಾಖೆಯಲ್ಲಿ] ನಂತರ ಏನು ಮಾಡುತ್ತಾರೆ ಎಂಬುದು ನನಗೆ ತಿಳಿದಿಲ್ಲ. ನಿಮ್ಮ ಮಾಹಿತಿಗಾಗಿ, ವಿಶೇಷವಾಗಿ ಮಹಿಳೆಯರಿಗಾಗಿ ಈ ವರ್ಷದ ಮುಂಗಡಪತ್ರದಲ್ಲಿ ಬಹಳ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡು ವರ್ಷಗಳ ಕಾಲ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಟ್ಟರೆ ಅವರಿಗೆ ವಿಶೇಷವಾದ ಬಡ್ಡಿದರ ಖಚಿತವಾಗುತ್ತದೆ. ಇದು ಶ್ಲಾಘನೀಯ ಹೆಜ್ಜೆ ಎಂದು ನಾನು ಭಾವಿಸುತ್ತೇನೆ ಮತ್ತು ನೀವು ಇದನ್ನು ಇಷ್ಟಪಡುತ್ತೀರಿ. ಈಗ ಈ ಸುದ್ದಿಗೆ ಸೂಕ್ತ ಪ್ರಾತಿನಿಧ್ಯೆ ನೀಡುವುದು ನಿಮ್ಮ ಸಂಪಾದಕೀಯ ವಿಭಾಗದ ಮೇಲಿದೆ. ದೇಶ ಮತ್ತು ಜಗತ್ತಿನಾದ್ಯಂತ ಆಗಮಿಸಿರುವ ವ್ಯಾಪಾರ ವಲಯದ ನಾಯಕರನ್ನು ಸ್ವಾಗತಿಸುತ್ತೇನೆ ಮತ್ತು ಶುಭ ಕೋರುತ್ತೇನೆ.

ದೆಹಲಿಯಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ

February 17th, 08:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ 2023ರ ಉದ್ಘಾಟನಾ ಸಮಾವೇಶದಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಗಳ ಅನುವಾದ

January 12th, 10:53 am

ದಕ್ಷಿಣದ ಜಾಗತಿಕ ನಾಯಕರೇ, ನಮಸ್ಕಾರ! ಈ ಶೃಂಗಸಭೆಯಲ್ಲಿ ನಿಮ್ಮನ್ನು ಸ್ವಾಗತಿಸಲು ನನಗೆ ಬಹಳ ಸಂತೋಷವಾಗುತ್ತಿದೆ. ಪ್ರಪಂಚದ ವಿವಿಧ ಭಾಗಗಳಿಂದ ನಮ್ಮೊಂದಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೊಸ ವರ್ಷವು ಉದಯಿಸುತ್ತಿದ್ದಂತೆ ನಾವು ಭೇಟಿಯಾಗುತ್ತಿದ್ದೇವೆ. ಇದು ಹೊಸ ಭರವಸೆಗಳು ಮತ್ತು ಹೊಸ ಶಕ್ತಿಯನ್ನು ತರುತ್ತದೆ. 1.3 ಶತಕೋಟಿ ಭಾರತೀಯರ ಪರವಾಗಿ, ನಿಮ್ಮೆಲ್ಲರಿಗೂ ಮತ್ತು ನಿಮ್ಮ ದೇಶದವರಿಗೂ 2023ರ ಸಂತೋಷಕರ ಹಾಗೂ ಸಂತೃಪ್ತಿ, ಸಮೃದ್ದಿಗಾಗಿ ನಾನು ಶುಭಾಶಯಗಳನ್ನು ಕೋರುತ್ತೇನೆ.

Our G-20 mantra is - One Earth, One Family, One Future: PM Modi

November 08th, 07:31 pm

PM Modi unveiled the logo, theme and website of India’s G-20 Presidency. Remarking that the G-20 logo is not just any logo, the PM said that it is a message, a feeling that runs in India’s veins. He said, “It is a resolve that has been omnipresent in our thoughts through ‘Vasudhaiva Kutumbakam’. He further added that the thought of universal brotherhood is being reflected via the G-20 logo.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣ ಮಾಡಿದ ಪ್ರಧಾನಮಂತ್ರಿ

November 08th, 04:29 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದರು.