ಜಂಟಿ ಹೇಳಿಕೆ: 7ನೇ ಭಾರತ ಮತ್ತು ಜರ್ಮನಿ ನಡುವಿನ ಅಂತರ್-ಸರ್ಕಾರಿ ಸಮಾಲೋಚನೆಗಳು(ಐಜಿಸಿ)
October 25th, 08:28 pm
ನವದೆಹಲಿಯಲ್ಲಿ 2024 ಅಕ್ಟೋಬರ್ 25ರಂದು ಆಯೋಜಿತವಾಗಿದ್ದ 7ನೇ ಸುತ್ತಿನ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನಾ(7ನೇ ಐಜಿಸಿ) ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಮಾತುಕತೆ ನಡೆಸಿದರು. ಭಾರತದ ನಿಯೋಗದಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆಗಳು, ಕಾರ್ಮಿಕ ಮತ್ತು ಉದ್ಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ(ಎಂಒಎಸ್) ಮತ್ತು ಕೌಶಲ್ಯ ಅಭಿವೃದ್ಧಿ(ಎಂಒಎಸ್) ಸಚಿವಾಲಯಗಳು ಭಾಗವಹಿಸಿದ್ದವು. ಜರ್ಮನಿಯ ನಿಯೋಗದಲ್ಲಿ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮ, ವಿದೇಶಾಂಗ ವ್ಯವಹಾರಗಳು, ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳು ಮತ್ತು ಶಿಕ್ಷಣ ಮತ್ತು ಸಂಶೋಧನೆ ಸಚಿವಾಲಯಗಳು ಭಾಗವಹಿಸಿದ್ದವು. ಅಲ್ಲದೆ, ಜರ್ಮನಿಯ ಹಣಕಾಸು, ಪರಿಸರ, ಪ್ರಕೃತಿ ಸಂರಕ್ಷಣೆ, ಪರಮಾಣು ಸುರಕ್ಷತೆ ಮತ್ತು ಗ್ರಾಹಕರ ರಕ್ಷಣೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಇಲಾಖೆಗಳ ಸಂಸದೀಯ ಕಾರ್ಯದರ್ಶಿಗಳು ಹಾಗೂ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.ಫಲಿತಾಂಶಗಳ ಪಟ್ಟಿ: 7ನೇ ಅಂತರ-ಸರ್ಕಾರಿ ಸಮಾಲೋಚನೆಗಾಗಿ ಜರ್ಮನಿ ಚಾನ್ಸಲರ್ ಅವರ ಭಾರತ ಭೇಟಿ
October 25th, 07:47 pm
ಮ್ಯಾಕ್ಸ್-ಪ್ಲಾಂಕ್-ಗೆಸೆಲ್ ಸ್ಚಾಫ್ಟ್ ಇ.ವಿ. (ಎಂಪಿಜಿ) ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್ (ಐಸಿಟಿಎಸ್), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿ ಐ ಎಫ್ ಆರ್) ನಡುವಿನ ಒಪ್ಪಂದ7ನೇ ಅಂತರ-ಸರ್ಕಾರಿ ಸಮಾಲೋಚನೆಗಾಗಿ ಜರ್ಮನಿ ಚಾನ್ಸೆಲರ್ ಅವರ ಭಾರತ ಭೇಟಿಯ ಫಲಿತಾಂಶಗಳು
October 25th, 04:50 pm
ಕ್ರಿಮಿನಲ್ ವಿಷಯಗಳಲ್ಲಿ ಪರಸ್ಪರ ಕಾನೂನು ಸಹಾಯ ಒಪ್ಪಂದ (ಎಂ ಎಲ್ ಎ ಟಿ).ಜರ್ಮನಿಯ ಚಾನ್ಸಲರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಭಾಷಾಂತರ
October 25th, 01:50 pm
ಮೊದಲನೆಯದಾಗಿ, ನಾನು ಚಾನ್ಸಲರ್ ಶೋಲ್ಜ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತ ಕೋರಲು ಬಯಸುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ಮೂರನೇ ಬಾರಿಗೆ ನಿಮ್ಮನ್ನು ಭಾರತಕ್ಕೆ ಸ್ವಾಗತಿಸುವ ಅವಕಾಶ ನಮಗೆ ದೊರೆತಿರುವುದಕ್ಕೆ ಸಂತೋಷವಾಗಿದೆ.ಜರ್ಮನ್ ಬ್ಯುಸಿನೆಸಸ್ ಕುರಿತಾದ 18ನೇ ಏಷ್ಯಾ ಫೆಸಿಪಿಕ್ ಸಮ್ಮೇಳನ (ಎಪಿಕೆ 2024)ನಲ್ಲಿ ಪ್ರಧಾನಮಂತ್ರಿ ಮಾಡಿದ ಪ್ರಾಸ್ತಾವಿಕ ಭಾಷಣದ ಕನ್ನಡ ಅನುವಾದ
October 25th, 11:20 am
ಮೊದಲ ಭೇಟಿಯು ಅವರು ಮೇಯರ್ ಆಗಿದ್ದಾಗ ಮತ್ತು ನಂತರದ ಮೂರು ಭೇಟಿಗಳು ಅವರು ಚಾನ್ಸೆಲರ್ ಆದ ನಂತರ. ಇದು ಭಾರತ-ಜರ್ಮನಿ ಸಂಬಂಧಗಳ ಮೇಲೆ ಅವರ ಹೆಚ್ಚಿನ ಗಮನ ಹರಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.ಜರ್ಮನಿ ದೇಶದ ಚಾನ್ಸೆಲರ್ ಅವರೊಂದಿಗೆ ಪ್ರಧಾನಮಂತ್ರಿಯವರ ಸಭೆ
September 10th, 06:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜರ್ಮನಿಯ ಚಾನ್ಸೆಲರ್ ಶ್ರೀ ಓಲಾಫ್ ಸ್ಕೋಲ್ಜ್ ಅವರನ್ನು 10 ಸೆಪ್ಟೆಂಬರ್ 2023 ರಂದು, ಜಿ20 ಶೃಂಗಸಭೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ ಭೇಟಿ ಮಾಡಿದರು. ಫೆಬ್ರವರಿ 2023 ರಲ್ಲಿ ಭಾರತಕ್ಕೆ ನೀಡಿದ ಭೇಟಿಯ ನಂತರ ಇದು ಈ ವರ್ಷ ಭಾರತಕ್ಕೆ ಚಾನ್ಸೆಲರ್ ಅವರ ಎರಡನೇ ಭೇಟಿಯಾಗಿದೆ.ಭಾರತಕ್ಕೆ ಜರ್ಮನಿಯ ಚಾನ್ಸಲರ್ ಭೇಟಿಯ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೀಡಿದ ಪತ್ರಿಕಾ ಹೇಳಿಕೆಯ ಅನುವಾದ
February 25th, 01:49 pm
ನಾನು ನಮ್ಮಮಿತ್ರ ಚಾನ್ಸಲರ್ ಶೋಲ್ಜ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಆಹ್ವಾನಿಸುತ್ತೇನೆ. ಚಾನ್ಸಲರ್ ಶೋಲ್ಜ್ ಹಲವು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು 2012ರಲ್ಲಿ ಭಾರತಕ್ಕೆ ಮೊದಲು ಭೇಟಿ ನೀಡಿದ್ದಾಗ ಹ್ಯಾಂಬರ್ಗ್ ನ ಮೇಯರ್ ಒಬ್ಬರ ಮೊದಲ ಭೇಟಿಯಾಗಿತ್ತು. ಹಾಗಾಗಿ ಅವರು ಭಾರತ-ಜರ್ಮನಿಯ ಸಂಬಂಧಗಳ ಸಾಮರ್ಥ್ಯವನ್ನು ಬಹಳ ಹಿಂದೆಯೇ ಅರ್ಥೈಸಿಕೊಂಡಿದ್ದಾರೆ.Prime Minister’s meeting with Chancellor of the Federal Republic of Germany on the sidelines of G-20 Summit in Bali
November 16th, 02:49 pm
Prime Minister Modi met German Chancellor Olaf Scholz on the sidelines of the G-20 Summit in Bali. The leaders discussed the wide range of bilateral cooperation between India and Germany, which entered a new phase with the signing of the Partnership on Green and Sustainable Development by Prime Minister and Chancellor during the IGC.ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ಗಣರಾಜ್ಯದ ಚಾನ್ಸಲರ್ ಅವರೊಂದಿಗೆ ಪ್ರಧಾನಮಂತ್ರಿಯವರ ಸಮಾಲೋಚನೆ.
June 27th, 09:27 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 27ರಂದು ಜರ್ಮನಿಯ ಶ್ಲೋಸ್ ಎಲ್ಮೌದಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಜರ್ಮನಿಯ ಫೆಡರಲ್ ಗಣರಾಜ್ಯದ ಚಾನ್ಸಲರ್ ಘನತೆವೆತ್ತ ಶ್ರೀ ಒಲಾಫ್ ಶೋಲ್ಜ್ ಅವರನ್ನು ಭೇಟಿಯಾದರು.ಜರ್ಮನಿ ಮತ್ತು ಯುಎಇಗೆ ಭೇಟಿ ನೀಡುವ ಮುನ್ನ ಪ್ರಧಾನ ಮಂತ್ರಿಗಳ ಪ್ರವಾಸ ಪೂರ್ವ ಹೇಳಿಕೆ (ಜೂನ್ 26-28, 2022).
June 25th, 03:51 pm
ನಾನು ಜರ್ಮನಿಯ ಚಾನ್ಸೆಲರ್ ಗೌರವಾನ್ವಿತ ಶ್ರೀ ಓಲಾಫ್ ಸ್ಕೋಲ್ಜ್, ಅವರ ಆಹ್ವಾನದ ಮೇರೆಗೆ ಜರ್ಮನಿಯ ಶ್ಚೋಲೋಸ್ ಎಲ್ಮೋಗೆ ಭೇಟಿ ನೀಡಲಿದ್ದೇನೆ. ಜರ್ಮನ್ ಅಧ್ಯಕ್ಷತೆಯಲ್ಲಿ ನಡೆಯುವ ಜಿ 7 ಶೃಂಗಸಭೆಗಾಗಿ ಅಲ್ಲಿಗೆ ತೆರಳುತ್ತಿದ್ದೇನೆ. ಕಳೆದ ತಿಂಗಳು ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳ (ಐ.ಜಿ.ಸಿ.) ಯಶಸ್ಸಿನ ನಂತರ ಮತ್ತೊಮ್ಮೆ ಚಾನ್ಸೆಲರ್ ಸ್ಕೋಲ್ಜ್ ಅವರನ್ನು ಭೇಟಿಯಾಗಲು ನನಗೆ ಬಹಳ ಸಂತೋಷವಿದೆ.2022ರ ಜೂನ್ 26ರಿಂದ 28ರವರೆಗೆ ಜರ್ಮನಿ ಮತ್ತು ಯುಎಇಗೆ ಪ್ರಧಾನಮಂತ್ರಿ ಭೇಟಿ.
June 22nd, 06:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 26-27ರಂದು ಜರ್ಮನ್ ಅಧ್ಯಕ್ಷರ ಅಡಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಯ ಚಾನ್ಸಲರ್ ಗೌರವಾನ್ವಿತ ಶ್ರೀ ಒಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಜರ್ಮನಿಯ ಶ್ಲೋಸ್ ಎಲ್ಮೌಗೆ ಭೇಟಿ ನೀಡಲಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಪರಿಸರ, ಇಂಧನ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ಎರಡು ಗೋಷ್ಠಿಗಳಲ್ಲಿ ಮಾತನಾಡುವ ನಿರೀಕ್ಷೆಯಿದೆ. ಈ ಪ್ರಮುಖ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಸಹಯೋಗವನ್ನು ಬಲಪಡಿಸುವ ಪ್ರಯತ್ನದಲ್ಲಿ, ಅರ್ಜೆಂಟೀನಾ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಇತರ ಪ್ರಜಾಪ್ರಭುತ್ವಗಳನ್ನು ಸಹ ಆಹ್ವಾನಿಸಲಾಗಿದೆ. ಶೃಂಗಸಭೆಯ ನೇಪಥ್ಯದಲ್ಲಿ, ಪ್ರಧಾನ ಮಂತ್ರಿ ಅವರು ಭಾಗವಹಿಸುವ ಕೆಲವು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.ಬರ್ಲಿನ್ ನಲ್ಲಿ ದುಂಡು ಮೇಜಿನ ವ್ಯಾಪಾರ ಸಭೆಯ ಸಹ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
May 02nd, 11:40 pm
ಗೌರವಾನ್ವಿತ ಚಾನ್ಸಲರ್ ಶ್ರೀ ಒಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವ್ಯಾಪಾರ ಕುರಿತ ದುಂಡು ಮೇಜಿನ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು, ಸರ್ಕಾರ ಕೈಗೊಂಡಿರುವ ವಿಸ್ತೃತ ಸುಧಾರಣೆಗಳ ಬಗ್ಗೆ ಒತ್ತಿ ಹೇಳಿದರು ಮತ್ತು ಭಾರತದಲ್ಲಿ ನವೋದ್ಯಮಗಳು ಮತ್ತು ಯೂನಿಕಾರ್ನ್ ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಭಾರತದ ಯುವ ಸಮೂಹದ ಮೇಲೆ ಹೂಡಿಕೆ ಮಾಡುವಂತೆ ಅವರು ಉದ್ಯಮ ವಲಯದ ನಾಯಕರನ್ನು ಆಹ್ವಾನಿಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಭಾಷಾಂತರ
May 02nd, 10:09 pm
ಮೊದಲನೆಯದಾಗಿ, ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಚಾನ್ಸಲರ್ ಶೋಲ್ಜ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ವರ್ಷದ ನನ್ನ ಮೊದಲ ವಿದೇಶ ಪ್ರವಾಸವು ಜರ್ಮನಿಯಿಂದ ಆರಂಭವಾಗುತ್ತಿರುವುದು ನನಗೆ ಸಂತೋಷ ತಂದಿದೆ. ಈ ವರ್ಷದ ಆರಂಭದಲ್ಲಿ ವಿದೇಶಿ ನಾಯಕರೊಬ್ಬರೊಂದಿಗೆ ನನ್ನ ಮೊದಲ ದೂರವಾಣಿ ಸಂಭಾಷಣೆ ನಡೆದಿದ್ದೂ, ನನ್ನ ಸ್ನೇಹಿತ ಚಾನ್ಸಲರ್ ಸ್ಕೋಲ್ಜ್ ಅವರೊಂದಿಗೆ. ಇಂದಿನ ಭಾರತ-ಜರ್ಮನಿ ಐಜಿಸಿಯು, ಚಾನ್ಸಲರ್ ಸೋಲ್ಜ್ ಅವರಿಗೂ ಈ ವರ್ಷ ಯಾವುದೇ ದೇಶದೊಂದಿಗಿನ ಮೊದಲ ಐಜಿಸಿಯಾಗಿದೆ. ಈ ಮಹತ್ವದ ಸಹಭಾಗಿತ್ವಕ್ಕೆ ಭಾರತ ಮತ್ತು ಜರ್ಮನಿಗಳೆರಡೂ ಎಷ್ಟು ಆದ್ಯತೆ ನೀಡುತ್ತಿವೆ ಎಂಬುದನ್ನು ಈ ಅನೇಕ ಪ್ರಥಮಗಳು ತೋರಿಸುತ್ತವೆ. ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಭಾರತ ಮತ್ತು ಜರ್ಮನಿ ಅನೇಕ ಸಮಾನ ಮೌಲ್ಯಗಳನ್ನು ಹಂಚಿಕೊಂಡಿವೆ. ಈ ಹಂಚಿಕೆಯ ಮೌಲ್ಯಗಳು ಮತ್ತು ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ, ಅನೇಕ ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ಬಾಂಧವ್ಯಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ.ಜಂಟಿ ಹೇಳಿಕೆ: 6ನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಗಳು
May 02nd, 08:28 pm
ಇಂದು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಮತ್ತು ಭಾರತ ಗಣರಾಜ್ಯದ ಸರ್ಕಾರಗಳು, ಫೆಡರಲ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಹ-ಅಧ್ಯಕ್ಷತೆಯಲ್ಲಿ ಆರನೇ ಸುತ್ತಿನ ಅಂತರ-ಸರ್ಕಾರಿ ಸಮಾಲೋಚನೆಗಳನ್ನು ನಡೆಸಿದವು. ಈ ಇಬ್ಬರು ನಾಯಕರಲ್ಲದೆ, ಎರಡೂ ನಿಯೋಗಗಳಲ್ಲಿ ಮಂತ್ರಿಗಳು ಮತ್ತು ಅನುಬಂಧದಲ್ಲಿ ಉಲ್ಲೇಖಿಸಲಾದ ಸಾಲು-ಸಚಿವಾಲಯಗಳ ಇತರ ಉನ್ನತ ಪ್ರತಿನಿಧಿಗಳು ಇದ್ದರು.ಫೆಡರಲ್ ರಿಪಬ್ಲಿಕ್ (ಸಂಯುಕ್ತ ಗಣರಾಜ್ಯ) ಆಫ್ ಜರ್ಮನಿ ಚಾನ್ಸೆಲರ್ ಅವರೊಂದಿಗಿನ ಪ್ರಧಾನ ಮಂತ್ರಿಯವರ ಭೇಟಿಯ ಕುರಿತು ಪತ್ರಿಕಾ ಪ್ರಕಟಣೆ
May 02nd, 06:15 pm
ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ ಘನತೆವೆತ್ತ ಶ್ರೀ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದ್ವಿಪಕ್ಷೀಯ ಸಭೆ ನಡೆಸಿದರು. ಭಾರತ ಮತ್ತು ಜರ್ಮನಿ ನಡುವಿನ ದ್ವೈವಾರ್ಷಿಕ ಅಂತರ ಸರ್ಕಾರಿ ಸಮಾಲೋಚನೆಗಳ (ಐ.ಜಿ.ಸಿ) ಆರನೇ ಸುತ್ತಿನ ಸಭೆಗೆ ಮುನ್ನ ಈ ದ್ವಿಪಕ್ಷೀಯ ಸಭೆ ನಡೆಯಿತು.ಜರ್ಮನಿಯ ಬರ್ಲಿನ್‌ಗೆ ಆಗಮಿಸಿದ ಪ್ರಧಾನಿ ಮೋದಿ
May 02nd, 10:04 am
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಬರ್ಲಿನ್ ತಲುಪಿದ್ದಾರೆ, ಅಲ್ಲಿ ಅವರು ಜರ್ಮನ್ ಚಾನ್ಸೆಲರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಇತರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.ಜರ್ಮನಿಯ ಫೆಡರಲ್ ಚಾನ್ಸಲರ್ ಘನತೆವೆತ್ತ ಓಲಾಫ್ ಶೋಲ್ಜ್ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
January 05th, 08:23 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜರ್ಮನಿಯ ಫೆಡರಲ್ ಚಾನ್ಸಲರ್ ಘನತೆವೆತ್ತ ಓಲಾಫ್ ಶೋಲ್ಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.ಜರ್ಮನಿಯ ಘನತೆವೆತ್ತ ಫೆಡರಲ್ ಚಾನ್ಸಲರ್ ಆಗಿ ಆಯ್ಕೆಯಾದ ಓಲಾಫ್ ಶೋಲ್ಜ್ ಅವರಿಗೆ ಪ್ರಧಾನಿ ಅಭಿನಂದನೆ
December 09th, 10:12 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜರ್ಮನಿಯ ಘನತೆವೆತ್ತ ಫೆಡರಲ್ ಚಾನ್ಸಲರ್ ಆಗಿ ಆಯ್ಕೆಯಾಗಿರುವ ಓಲಾಫ್ ಶೋಲ್ಜ್ ಅವರನ್ನು ಅಭಿನಂದಿಸಿದ್ದಾರೆ.