ಗುಜರಾತ್ ನ ದ್ವಾರಕಾದಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

February 25th, 01:01 pm

ವೇದಿಕೆಯಲ್ಲಿ ಉಪಸ್ಥಿತರಿರುವ ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಗುಜರಾತ್ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ ಸಿ.ಆರ್. ಪಾಟೀಲ್, ಇತರ ಗೌರವಾನ್ವಿತ ಗಣ್ಯರು ಮತ್ತು ಗುಜರಾತ್ ನ ನನ್ನ ಸಹೋದರ ಸಹೋದರಿಯರೇ,

ಗುಜರಾತ್ ನ ದ್ವಾರಕಾದಲ್ಲಿ 4150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಮಂತ್ರಿಗಳು

February 25th, 01:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ದ್ವಾರಕಾದಲ್ಲಿ 4,150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಓಖಾ ಮುಖ್ಯ ಭೂಮಿ ಮತ್ತು ಬೇತ್ ದ್ವಾರಕಾವನ್ನು ಸಂಪರ್ಕಿಸುವ ಸುದರ್ಶನ ಸೇತು, ವಾಡಿನಾರ್ ಮತ್ತು ರಾಜ್‌ಕೋಟ್-ಓಖಾದಲ್ಲಿ ಪೈಪ್‌ಲೈನ್ ಯೋಜನೆ, ರಾಜ್‌ಕೋಟ್-ಜೇತಲ್ಸರ್‌-ಸೋಮನಾಥ್ ಮತ್ತು ಜೇತಲ್ಸರ್‌-ವನ್ಸ್‌ಜಾಲಿಯಾ ರೈಲು ವಿದ್ಯುದ್ದೀಕರಣ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಹೆದ್ದಾರಿ 927ರ ಧೋರಾಜಿ-ಜಮಕಂದೋರ್ನಾ-ಕಲವಾಡ್ ವಿಭಾಗದ ಅಗಲೀಕರಣ, ಜಾಮ್‌ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಜಾಮ್‌ನಗರದ ʻಸಿಕ್ಕಾ ಉಷ್ಣ ವಿದ್ಯುತ್ ಸ್ಥಾವರʼದಲ್ಲಿ ʻಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ʼ(ಎಫ್‌ಜಿಡಿ) ವ್ಯವಸ್ಥೆಯ ಸ್ಥಾಪನೆಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಗುಜರಾತ್‌ ನ ಓಖಾದಿಂದ ಮತ್ತು ಬೇಂಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಸುದರ್ಶನ ಸೇತುವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು.

February 25th, 11:49 am

ಸುಮಾರು ರೂ.980 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಓಖಾ ಮುಖ್ಯಭೂಮಿ ಮತ್ತು ಬೇಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಸುದರ್ಶನ ಸೇತುವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಇದು ಸುಮಾರು 2.32 ಕಿಮೀ ಉದ್ದವಿದ್ದು, ದೇಶದಲ್ಲೇ ಅತಿ ಉದ್ದದ ಕೇಬಲ್-ಆಧಾರಿತ ಸೇತುವೆಯಾಗಿದೆ.