ಡಾ. ಹರೇಕೃಷ್ಣಾ ಮಹತಾಬ್ ಅವರ ಒಡಿಶಾ ಇತಿಹಾಸದ ಹಿಂದಿ ಆವೃತ್ತಿಯ ಬಿಡುಗಡೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣ
April 09th, 12:18 pm
ಈ ಸಮಾರಂಭದಲ್ಲಿ ನನ್ನೊಂದಿಗೆ ಹಾಜರಿರುವ ಭರ್ತ್ರುಹರಿ ಮಹತಾಬ್ ಜಿ, ಅವರು ಕೇವಲ ಲೋಕಸಭೆಯಲ್ಲಿ ಸದಸ್ಯರಲ್ಲ, ಉತ್ತಮ ಸಂಸದರು ತಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬಲ್ಲರು ಎನ್ನುವುದಕ್ಕೆ ಜೀವಂತ ಉದಾಹರಣೆ ಅವರು, ಧರ್ಮೇಂದ್ರ ಪ್ರಧಾನ್ ಜಿ, ಇತರ ಹಿರಿಯ ಗಣ್ಯರು, ಮಹಿಳೆಯರೆ ಮತ್ತು ಮಹನೀಯರೆ! ‘ಉತ್ಕಲ್ ಕೇಶರಿ’ಹರೇಕೃಷ್ಣಾ ಮಹತಾಬ್ ಜಿ ಅವರೊಂದಿಗೆ ಸಂಬಂಧಿಸಿದ ಈ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ಸಿಕ್ಕಿದ್ದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ನಾವೆಲ್ಲರೂ ‘ಉತ್ಕಲ್ ಕೇಸರಿ’ ಹರೇಕೃಷ್ಣಾ ಮಹತಾಬ್ ಜಿ ಅವರ 120 ನೇ ಜನ್ಮ ದಿನಾಚರಣೆಯನ್ನು ಬಹಳ ಸ್ಪೂರ್ತಿದಾಯಕ ಸಂದರ್ಭವಾಗಿ ಆಚರಿಸಿದ್ದೇವೆ. ಇಂದು ನಾವು ಅವರ ಪ್ರಸಿದ್ಧ ಪುಸ್ತಕ ‘ಒಡಿಶಾ ಇತಿಹಾಸ್’(ಇತಿಹಾಸ) ನ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಒಡಿಶಾದ ವಿಶಾಲ ಮತ್ತು ವೈವಿಧ್ಯಮಯ ಇತಿಹಾಸವು ದೇಶದ ಜನರನ್ನು ತಲುಪುವುದು ಬಹಳ ಮುಖ್ಯ. ಒಡಿಯಾ ಮತ್ತು ಇಂಗ್ಲಿಷ್ ನಂತರ ಹಿಂದಿ ಆವೃತ್ತಿಯ ಮೂಲಕ ನೀವು ಇದರ ಅಗತ್ಯವನ್ನು ಪೂರೈಸಿದ್ದೀರಿ. ಈ ನವೀನ ಪ್ರಯತ್ನಕ್ಕಾಗಿ ಭಾಯಿ ಭರ್ತ್ರುಹರಿ ಮಹತಾಬ್ ಜಿ, ಹರೇಕೃಷ್ಣಾ ಮಹತಾಬ್ ಫೌಂಡೇಶನ್ ಮತ್ತು ವಿಶೇಷವಾಗಿ ಶಂಕರ್ ಲಾಲ್ ಪುರೋಹಿತ್ ಜಿ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.ಡಾ. ಹರೇಕೃಷ್ಣ ಮಹ್ತಾಬ್ ಅವರ ಒಡಿಶಾ ಇತಿಹಾಸ್ ಪುಸ್ತಕದ ಹಿಂದಿ ಆವೃತ್ತಿ ಲೋಕಾರ್ಪಣೆ ಮಾಡಿದ ಪ್ರಧಾನಿ
April 09th, 12:17 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 'ಉತ್ಕಲ್ ಕೇಶರಿ' ಡಾ. ಹರೇಕೃಷ್ಣ ಮಹ್ತಾಬ್ ಅವರು ರಚಿಸಿರುವ 'ಒಡಿಶಾ ಇತಿಹಾಸ್' ಪುಸ್ತಕದ ಹಿಂದಿ ಅನುವಾದವನ್ನು ಲೋಕಾರ್ಪಣೆ ಮಾಡಿದರು. ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಇಲ್ಲಿಯವರೆಗೆ ಲಭ್ಯವಿದ್ದ ಈ ಪುಸ್ತಕವನ್ನು ಶ್ರೀ ಶಂಕರ್‌ಲಾಲ್ ಪುರೋಹಿತ್ ಅವರು ಹಿಂದಿಗೆ ಅನುವಾದಿಸಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕಟಕ್ ಸಂಸದರಾದ ಶ್ರೀ ಭರ್ತೃಹರಿ ಮಹ್ತಾಬ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.2021ರ ಏಪ್ರಿಲ್ 9ರಂದು ಡಾ. ಹರೇಕೃಷ್ಣ ಮಹ್ತಾಬ್ ಅವರ ʻಒಡಿಶಾ ಇತಿಹಾಸ್ʼ ಹಿಂದಿ ಆವೃತ್ತಿಯನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ
April 07th, 01:56 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಉತ್ಕಲ್ ಕೇಶರಿ' ಡಾ. ಹರೇಕೃಷ್ಣ ಮಹ್ತಾಬ್ ಅವರು ಬರೆದಿರುವ 'ಒಡಿಶಾ ಇತಿಹಾಸ್' ಪುಸ್ತಕದ ಹಿಂದಿ ಅವತರಣಿಕೆಯನ್ನು 2021ರ ಏಪ್ರಿಲ್ 9ರಂದು ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಜನಪಥ್‌ನಲ್ಲಿರುವ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದುವರೆಗೂ ಒಡಿಯಾ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿದ್ದ ಈ ಪುಸ್ತಕವನ್ನು ಶ್ರೀ ಶಂಕರ್‌ಲಾಲ್ ಪುರೋಹಿತ್ ಅವರು ಹಿಂದಿಗೆ ಅನುವಾದಿಸಿದ್ದಾರೆ. ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕಟಕ್ ಸಂಸದರಾದ ಶ್ರೀ ಭರ್ತೃಹರಿ ಮಹ್ತಾಬ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಹರೇಕೃಷ್ಣ ಮಹ್ತಾಬ್ ಪ್ರತಿಷ್ಠಾನ ಈ ಹಿಂದಿ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದೆ.