"ಮಾನವ ಹಕ್ಕುಗಳ ಅತಿದೊಡ್ಡ ಉಲ್ಲಂಘನೆಯು ರಾಜಕೀಯ ದೃಷ್ಟಿಕೋನದಿಂದ ನೋಡಿದಾಗ ನಡೆಯುತ್ತದೆ: ಪ್ರಧಾನಿ "

October 12th, 11:09 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 28 ನೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಂಸ್ಥಾಪನಾ ದಿನ (ಎನ್.ಎಚ್.ಆರ್.ಸಿ)ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಲ್ಗೊಂಡರು. ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ ಸ್ವಾತಂತ್ರ್ಯ ಆಂದೋಲನ ಮತ್ತು ಅದರ ಇತಿಹಾಸ ಮಾನವ ಹಕ್ಕುಗಳಿಗೆ ಪ್ರಮುಖ ಸ್ಫೂರ್ತಿಯಾಗಿದೆ. ಅನ್ಯಾಯ, ದೌರ್ಜನ್ಯದ ವಿರುದ್ಧ ಒಂದು ರಾಷ್ಟ್ರ ಸಂಪೂರ್ಣ ಸಮಾಜವಾಗಿ ಎದುರಿಸಿದ್ದು, ಇದು ಭಾರತದಲ್ಲಿ ಮಾನವ ಹಕ್ಕುಗಳ ಮೌಲ್ಯವಾಗಿದೆ.

28ನೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್.ಎಚ್.ಆರ್.ಸಿ)ದ ಸಂಸ್ಥಾಪನಾ ದಿನ: ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಮಂತ್ರಿ

October 12th, 11:08 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 28 ನೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಂಸ್ಥಾಪನಾ ದಿನ (ಎನ್.ಎಚ್.ಆರ್.ಸಿ)ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಲ್ಗೊಂಡರು. ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತದ ಸ್ವಾತಂತ್ರ್ಯ ಆಂದೋಲನ ಮತ್ತು ಅದರ ಇತಿಹಾಸ ಮಾನವ ಹಕ್ಕುಗಳಿಗೆ ಪ್ರಮುಖ ಸ್ಫೂರ್ತಿಯಾಗಿದೆ. ಅನ್ಯಾಯ, ದೌರ್ಜನ್ಯದ ವಿರುದ್ಧ ಒಂದು ರಾಷ್ಟ್ರ ಸಂಪೂರ್ಣ ಸಮಾಜವಾಗಿ ಎದುರಿಸಿದ್ದು, ಇದು ಭಾರತದಲ್ಲಿ ಮಾನವ ಹಕ್ಕುಗಳ ಮೌಲ್ಯವಾಗಿದೆ. ಶತಮಾನಗಳಿಂದಲೂ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಇಡೀ ಜಗತ್ತಿನಲ್ಲಿ ಹಿಂಸಾಚಾರ ಆವರಿಸಿರುವಾಗ ಭಾರತ ಇಡೀ ಜಗತ್ತಿಗೆ ಹಕ್ಕುಗಳು ಮತ್ತು ಅಹಿಂಸೆ ಪಥವನ್ನು ಅನುಸರಿಸುವಂತೆ ಸಲಹೆ ಮಾಡಿತು ಎಂದರು.

ಅಕ್ಟೋಬರ್ 12 ರಂದು 28ನೇ ಎನ್‌ಎಚ್‌ಆರ್ ಸಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನ ಮಂತ್ರಿ

October 11th, 12:38 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 12ರಂದು ಬೆಳಗ್ಗೆ 11 ಗಂಟೆಗೆ 28ನೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಭಾಷಣ ಮಾಡಲಿದ್ದಾರೆ.