
Government is running a special campaign for the development of tribal society: PM Modi in Bilaspur, Chhattisgarh
March 30th, 06:12 pm
PM Modi laid the foundation stone and inaugurated development projects worth over Rs 33,700 crore in Bilaspur, Chhattisgarh. He highlighted that three lakh poor families in Chhattisgarh are entering their new homes. He acknowledged the milestone achieved by women who, for the first time, have property registered in their names. The PM said that the Chhattisgarh Government is observing 2025 as Atal Nirman Varsh and reaffirmed the commitment, We built it, and we will nurture it.
PM Modi lays foundation stone, inaugurates development works in Bilaspur, Chhattisgarh worth over ₹33,700 crore
March 30th, 03:30 pm
PM Modi laid the foundation stone and inaugurated development projects worth over Rs 33,700 crore in Bilaspur, Chhattisgarh. He highlighted that three lakh poor families in Chhattisgarh are entering their new homes. He acknowledged the milestone achieved by women who, for the first time, have property registered in their names. The PM said that the Chhattisgarh Government is observing 2025 as Atal Nirman Varsh and reaffirmed the commitment, We built it, and we will nurture it.
Our youth, imbued with the spirit of nation-building, are moving ahead towards the goal of Viksit Bharat by 2047: PM Modi in Nagpur
March 30th, 11:53 am
PM Modi laid the foundation stone of Madhav Netralaya Premium Centre in Nagpur, emphasizing its role in quality eye care. He highlighted India’s healthcare strides, including Ayushman Bharat, Jan Aushadhi Kendras and AIIMS expansion. He also paid tribute to Dr. Hedgewar and Pujya Guruji, acknowledging their impact on India’s cultural and social consciousness.PM Modi lays foundation stone of Madhav Netralaya Premium Centre in Nagpur, Maharashtra
March 30th, 11:52 am
PM Modi laid the foundation stone of Madhav Netralaya Premium Centre in Nagpur, emphasizing its role in quality eye care. He highlighted India’s healthcare strides, including Ayushman Bharat, Jan Aushadhi Kendras and AIIMS expansion. He also paid tribute to Dr. Hedgewar and Pujya Guruji, acknowledging their impact on India’s cultural and social consciousness.Prime Minister Narendra Modi to Visit Maharashtra and Chhattisgarh
March 28th, 02:15 pm
PM Modi will visit Maharashtra and Chhattisgarh on 30th March. In Nagpur, he will undertake Darshan at Smruti Mandir, pay tribute at Deekshabhoomi, lay the foundation of Madhav Netralaya, and inaugurate a UAV testing facility. In Bilaspur, he will unveil projects worth ₹33,700 crore, boosting growth, connectivity, and regional development.ವಿಶ್ವ ಜಲ ದಿನದಂದು ಜಲ ಸಂರಕ್ಷಣೆಯ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ
March 22nd, 10:13 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜಲ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಮಾನವ ನಾಗರಿಕತೆಯಲ್ಲಿ ನೀರಿನ ಮಹತ್ವದ ಪಾತ್ರವನ್ನು ಒತ್ತಿ ಹೇಳಿರುವ ಅವರು, ಭವಿಷ್ಯದ ಪೀಳಿಗೆಗೆ ಈ ಅತ್ಯಮೂಲ್ಯ ಸಂಪನ್ಮೂಲವನ್ನು ರಕ್ಷಿಸಲು ಸಾಮೂಹಿಕ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಮಂತ್ರಿ ಶ್ರೀ ನವೀನಚಂದ್ರ ರಾಮಗೂಲಮ್ ಅವರು ಮಾರಿಷಸ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವೀನ್ಯತೆ ಸಂಸ್ಥೆಯನ್ನು ಜಂಟಿಯಾಗಿ ಉದ್ಘಾಟಿಸಿದರು
March 12th, 03:13 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಶ್ರೀ ನವೀನಚಂದ್ರ ರಾಮಗೂಲಮ್ ಅವರು ಇಂದು ಮಾರಿಷಸ್ ನ ರೆಡ್ಯೂಟ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವೀನ್ಯತೆ ಸಂಸ್ಥೆಯನ್ನು ಜಂಟಿಯಾಗಿ ಉದ್ಘಾಟಿಸಿದರು. ಭಾರತ-ಮಾರಿಷಸ್ ಅಭಿವೃದ್ಧಿ ಸಹಭಾಗಿತ್ವದ ಅಡಿಯಲ್ಲಿ ಜಾರಿಗೆ ತರಲಾದ ಈ ಮಹತ್ವದ ಯೋಜನೆಯು ಸಾಮರ್ಥ್ಯ ವೃದ್ಧಿಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.ವ್ಯೂಹಾತ್ಮಕ ಪಾಲುದಾರಿಕೆ ವೃದ್ಧಿಗಾಗಿ ಭಾರತ-ಮಾರಿಷಸ್ ಜಂಟಿ ದೂರದೃಷ್ಟಿ
March 12th, 02:13 pm
ಗೌರವಾನ್ವಿತ ಮಾರಿಷಸ್ ಪ್ರಧಾನಿ ಡಾ. ನವೀನ್ ಚಂದ್ರ ರಾಮ್ಗೂಲಮ್, ಜಿಸಿಎಸ್ಕೆ, ಎಫ್ಆರ್ಸಿಪಿ ಮತ್ತು ಗೌರವಾನ್ವಿತ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಮಾರ್ಚ್ 11ರಿಂದ 12ರವರೆಗೆ ಮಾರಿಷಸ್ಗೆ ಪ್ರಧಾನಿ ಮೋದಿ ಅವರ ಅಧಿಕೃತ ಭೇಟಿ ಸಂದರ್ಭದಲ್ಲಿ ಮಾರಿಷಸ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯ ಬಗ್ಗೆ ಸಮಗ್ರ ಮತ್ತು ಫಲಪ್ರದ ಚರ್ಚೆ ನಡೆಸಿದರು.ಭಾರತ - ಮಾರಿಷಸ್ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ
March 12th, 12:30 pm
140 ಕೋಟಿ ಭಾರತೀಯರ ಪರವಾಗಿ, ಮಾರಿಷಸ್ ಜನತೆಗೆ ಅವರ ರಾಷ್ಟ್ರೀಯ ದಿನದಂದು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಮತ್ತೊಮ್ಮೆ ಮಾರಿಷಸ್ ಗೆ ಭೇಟಿ ನೀಡುತ್ತಿರುವುದು ನನಗೆ ಅತ್ಯಂತ ಗೌರವದ ವಿಷಯವಾಗಿದೆ. ಈ ಗೌರವಕ್ಕಾಗಿ ಪ್ರಧಾನಿ ನವೀನಚಂದ್ರ ರಾಮಗೂಲಮ್ ಮತ್ತು ಮಾರಿಷಸ್ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ಸಿಲ್ವಾಸ್ಸಾದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಭಾಷಣ
March 07th, 03:00 pm
ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಆಡಳಿತಾಧಿಕಾರಿ ಶ್ರೀ ಪ್ರಫುಲ್ಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀಮತಿ ಕಲ್ಬೆನ್ ಡೆಲ್ಕರ್, ಎಲ್ಲಾ ಗಣ್ಯರೇ, ಸಹೋದರ ಸಹೋದರಿಯರೇ, ನಮಸ್ಕಾರ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಚಾಲನೆ ನೀಡಿದರು
March 07th, 02:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಲ್ವಾಸ್ಸಾ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ 2580 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಅವರು ಸಿಲ್ವಾಸ್ಸಾದಲ್ಲಿ ನಮೋ ಆಸ್ಪತ್ರೆಯನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಪ್ರದೇಶದೊಂದಿಗೆ ಸಂಪರ್ಕ ಸಾಧಿಸಲು ಮತ್ತು ತೊಡಗಿಸಿಕೊಳ್ಳಲು ಅವಕಾಶ ನೀಡಿದ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಮರ್ಪಿತ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಜನರೊಂದಿಗೆ ತಾವು ಹೊಂದಿರುವ ಆತ್ಮೀಯತೆ ಮತ್ತು ದೀರ್ಘಕಾಲದ ಸಂಪರ್ಕವನ್ನು ಅವರು ನೆನಪಿಸಿಕೊಂಡರು, ಈ ಪ್ರದೇಶದೊಂದಿಗಿನ ತಮ್ಮ ಬಂಧವು ದಶಕಗಳಷ್ಟು ಹಳೆಯದು ಎಂಬುದನ್ನವರು ಹಂಚಿಕೊಂಡರು. 2014 ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಪ್ರದೇಶವು ಸಾಧಿಸಿದ ಪ್ರಗತಿಯನ್ನು ಅವರು ಎತ್ತಿ ತೋರಿಸಿದರು, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುಗಳ ಸಾಮರ್ಥ್ಯವನ್ನು ಆಧುನಿಕತೆ ಮತ್ತು ಪ್ರಗತಿಯ ಗುರುತಾಗಿ ಪರಿವರ್ತಿಸಿರುವುದನ್ನು ಅವರು ಪ್ರಸ್ತಾಪಿಸಿದರು.ಮಾರ್ಚ್ 7-8 ರಂದು ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ಮತ್ತು ಗುಜರಾತ್ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಧಾನಮಂತ್ರಿ ಭೇಟಿ ನೀಡಲಿದ್ದಾರೆ
March 07th, 07:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾರ್ಚ್ 7 - 8 ರಂದು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶ ಮತ್ತು ಗುಜರಾತ್ಗೆ ಭೇಟಿ ನೀಡಲಿದ್ದಾರೆ. ಅವರು ಮಾರ್ಚ್ 7 ರಂದು ಸಿಲ್ವಾಸ್ಸಾಗೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ನಮೋ ಆಸ್ಪತ್ರೆಯನ್ನು (I ಹಂತ) ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2:45 ರ ಸುಮಾರಿಗೆ, ಅವರು ಸಿಲ್ವಾಸ್ಸಾದಲ್ಲಿ 2580 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಕೇಂದ್ರಾಡಳಿತ ಪ್ರದೇಶಕ್ಕಾಗಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ, ಅವರು ಸೂರತ್ಗೆ ಪ್ರಯಾಣಿಸಲಿದ್ದಾರೆ ಮತ್ತು ಸಂಜೆ 5 ಗಂಟೆಗೆ ಅವರು ಸೂರತ್ ಆಹಾರ ಭದ್ರತಾ ಸ್ಯಾಚುರೇಶನ್ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ 8 ರಂದು, ಪ್ರಧಾನ ಮಂತ್ರಿ ನವಸಾರಿಗೆ ಪ್ರಯಾಣಿಸಲಿದ್ದಾರೆ ಮತ್ತು ಸುಮಾರು 11:30ಕ್ಕೆ, ಅವರು ಲಕ್ಷಪತಿ ದೀದಿಗಳೊಂದಿಗೆ ಸಂವಾದ ನಡೆಸಲಿದ್ದಾರೆ, ನಂತರ ವಿವಿಧ ಯೋಜನೆಗಳ ಉದ್ಘಾಟನೆಯನ್ನು ಒಳಗೊಂಡ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.ರಿಪಬ್ಲಿಕ್ ಸರ್ವಸದಸ್ಯರ ಸಮಾವೇಶ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
March 06th, 08:05 pm
ನೀವೆಲ್ಲರೂ ದಣಿದಿರಬೇಕು, ಅರ್ನಬ್ ಅವರ ಗಟ್ಟಿಯಾದ ಧ್ವನಿಯಿಂದ ನಿಮ್ಮ ಕಿವಿಗಳು ದಣಿದಿರಬೇಕು, ಅರ್ನಬ್ ಕುಳಿತುಕೊಳ್ಳಿ, ಇದು ಚುನಾವಣಾ ಸಮಯವಲ್ಲ. ಮೊದಲನೆಯದಾಗಿ, ಈ ನವೀನ ಪ್ರಯೋಗಕ್ಕಾಗಿ ನಾನು ರಿಪಬ್ಲಿಕ್ ಟಿವಿಯನ್ನು ಅಭಿನಂದಿಸುತ್ತೇನೆ. ನೀವು ಯುವಕರನ್ನು ತಳಮಟ್ಟದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಇಷ್ಟು ದೊಡ್ಡ ಸ್ಪರ್ಧೆ ಆಯೋಜಿಸಿ ಇಲ್ಲಿಗೆ ಕರೆತಂದಿದ್ದೀರಿ. ದೇಶದ ಯುವಕರು ರಾಷ್ಟ್ರೀಯ ಚರ್ಚೆಯಲ್ಲಿ ತೊಡಗಿಸಿಕೊಂಡಾಗ, ಆಲೋಚನೆಗಳಲ್ಲಿ ಹೊಸತನ ಇರುತ್ತದೆ, ಅದು ಇಡೀ ಪರಿಸರವನ್ನು ಹೊಸ ಶಕ್ತಿಯಿಂದ ತುಂಬುತ್ತದೆ, ಈ ಸಮಯದಲ್ಲಿ ನಾವು ಈ ಹೊಸ ಶಕ್ತಿಯನ್ನು ಅನುಭವಿಸುತ್ತಿದ್ದೇವೆ. ಒಂದು ರೀತಿಯಲ್ಲಿ, ಯುವಕರ ಒಳಗೊಳ್ಳುವಿಕೆಯಿಂದ, ನಾವು ಪ್ರತಿಯೊಂದು ಬಂಧವನ್ನು ಮುರಿಯಲು, ಮಿತಿಗಳನ್ನು ಮೀರಿ ಹೋಗಲು ಸಾಧ್ಯವಾಗುತ್ತದೆ, ಆದರೆ ಸಾಧಿಸಲಾಗದ ಗುರಿ ಇಲ್ಲ. ತಲುಪಲಾಗದ ಯಾವುದೇ ಗಮ್ಯಸ್ಥಾನವಿಲ್ಲ. ಈ ಸಮಾವೇಶ(ಶೃಂಗಸಭೆ)ಕ್ಕಾಗಿ ರಿಪಬ್ಲಿಕ್ ಟಿವಿ ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಿದೆ. ಈ ಶೃಂಗಸಭೆಯ ಯಶಸ್ಸಿಗೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ, ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಸರಿ, ಇದರಲ್ಲಿ ನನ್ನದೂ ಸ್ವಲ್ಪ ಸ್ವಾರ್ಥವಿದೆ, ಒಂದು, ಕಳೆದ ಕೆಲವು ದಿನಗಳಿಂದ ನಾನು 1 ಲಕ್ಷ ಯುವಕರನ್ನು ರಾಜಕೀಯಕ್ಕೆ ತರಬೇಕು, 1 ಲಕ್ಷ ಜನರು ತಮ್ಮ ಕುಟುಂಬಗಳಲ್ಲಿ ಮೊದಲ ಬಾರಿಗೆ ರಾಜಕೀಯಕ್ಕೆ ಬರುವವರು ಎಂದು ಯೋಚಿಸುತ್ತಿದ್ದೇನೆ, ಆದ್ದರಿಂದ ಒಂದು ರೀತಿಯಲ್ಲಿ, ಇಂತಹ ಘಟನೆಗಳು ನನ್ನ ಈ ಗುರಿಗೆ ವೇದಿಕೆಯನ್ನು ಸಿದ್ಧಪಡಿಸುತ್ತಿವೆ. ಎರಡನೆಯದಾಗಿ, ನನ್ನ ವೈಯಕ್ತಿಕ ಲಾಭವಿದೆ, ವೈಯಕ್ತಿಕ ಲಾಭವೆಂದರೆ 2029ರಲ್ಲಿ ಮತ ಚಲಾಯಿಸಲು ಹೋಗುವವರಿಗೆ 2014ಕ್ಕಿಂತ ಮೊದಲು ಪತ್ರಿಕೆಗಳ ಮುಖ್ಯಾಂಶಗಳು ಏನೆಂದು ತಿಳಿದಿರುವುದಿಲ್ಲ, ಅವರಿಗೆ ತಿಳಿದಿಲ್ಲ, 10-10, 12-12 ಲಕ್ಷ ಕೋಟಿ ಹಗರಣಗಳು ಇದ್ದವು, ಅದು ಅವರಿಗೆ ತಿಳಿದಿಲ್ಲ. ಆದರೆ ಅವರು 2029ರಲ್ಲಿ ಮತ ಚಲಾಯಿಸಲು ಹೋಗುವಾಗ, ಹೋಲಿಕೆ ಮಾಡಲು ಅವರ ಮುಂದೆ ಏನೂ ಇರುವುದಿಲ್ಲ. ಆದ್ದರಿಂದ, ನಾನು ಆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು ಮತ್ತು ಈ ವೇದಿಕೆಯು ಆ ಕೆಲಸವನ್ನು ಬಲಪಡಿಸುತ್ತದೆ ಎಂದು ನನಗೆ ಪೂರ್ಣ ನಂಬಿಕೆಯಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಿಪಬ್ಲಿಕ್ ಸಮಗ್ರ ಶೃಂಗಸಭೆ 2025 ಉದ್ದೇಶಿಸಿ ಭಾಷಣ ಮಾಡಿದರು
March 06th, 08:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಡಪಂನಲ್ಲಿ ನಡೆದ ರಿಪಬ್ಲಿಕ್ ಪ್ಲೀನರಿ ಶೃಂಗಸಭೆ 2025ರಲ್ಲಿ ಭಾಗವಹಿಸಿದ್ದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ತಳಮಟ್ಟದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮತ್ತು ಮಹತ್ವದ ಹ್ಯಾಕಥಾನ್ ಸ್ಪರ್ಧೆಯನ್ನು ಆಯೋಜಿಸುವ ನವೀನ ವಿಧಾನಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅಭಿನಂದಿಸಿದರು. ರಾಷ್ಟ್ರದ ಯುವಕರು ರಾಷ್ಟ್ರೀಯ ಸಂವಾದದಲ್ಲಿ ತೊಡಗಿಸಿಕೊಂಡಾಗ, ಅದು ಆಲೋಚನೆಗಳಿಗೆ ಹೊಸತನವನ್ನು ತರುತ್ತದೆ ಮತ್ತು ಅವರ ಶಕ್ತಿಯಿಂದ ಇಡೀ ಪರಿಸರವನ್ನು ತುಂಬುತ್ತದೆ ಎಂದು ಅವರು ಹೇಳಿದರು. ಈ ಶಕ್ತಿಯನ್ನು ಶೃಂಗಸಭೆಯಲ್ಲಿ ಅನುಭವಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಯುವಕರ ಪಾಲ್ಗೊಳ್ಳುವಿಕೆಯು ಎಲ್ಲಾ ಅಡೆತಡೆಗಳನ್ನು ಮುರಿಯಲು ಮತ್ತು ಗಡಿಗಳನ್ನು ಮೀರಿ ಹೋಗಲು ಸಹಾಯ ಮಾಡುತ್ತದೆ, ಪ್ರತಿ ಗುರಿಯನ್ನು ಸಾಧಿಸಬಹುದು ಮತ್ತು ಪ್ರತಿ ಗಮ್ಯಸ್ಥಾನವನ್ನು ತಲುಪಬಹುದು ಎಂದು ಅವರು ಹೇಳಿದರು. ಈ ಶೃಂಗಸಭೆಗಾಗಿ ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಿದ್ದಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಅವರು ಶ್ಲಾಘಿಸಿದರು ಮತ್ತು ಅದರ ಯಶಸ್ಸಿಗೆ ಶುಭ ಹಾರೈಸಿದರು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ಭಾರತದ ರಾಜಕೀಯಕ್ಕೆ ಕರೆತರುವ ತಮ್ಮ ಕಲ್ಪನೆಯನ್ನು ಶ್ರೀ ಮೋದಿ ಪುನರುಚ್ಚರಿಸಿದರು.ಉತ್ತರಾಖಂಡದ ಹರ್ಸಿಲ್ನಲ್ಲಿ ಚಳಿಗಾಲದ ಪ್ರವಾಸೋದ್ಯಮ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
March 06th, 02:07 pm
ಉತ್ತರಾಖಂಡದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು, ನಮಸ್ಕಾರಗಳು!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದ ಹರ್ಸಿಲ್ನಲ್ಲಿ ಚಳಿಗಾಲದ ಪ್ರವಾಸೋದ್ಯಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
March 06th, 11:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದ ಹರ್ಸಿಲ್ನಲ್ಲಿ ಚಾರಣ ಮತ್ತು ಬೈಕ್ ರ್ಯಾಲಿಗೆ ಚಾಲನೆ ನೀಡಿದ ನಂತರ ಚಳಿಗಾಲದ ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರು ಮುಖ್ವಾದಲ್ಲಿ ಮಾ ಗಂಗಾನ ಚಳಿಗಾಲದ ಆಸನದಲ್ಲಿ ಪೂಜೆ ಮತ್ತು ದರ್ಶನವನ್ನು ಮಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಾನ ಗ್ರಾಮದಲ್ಲಿ ನಡೆದ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಈ ಬಿಕ್ಕಟ್ಟಿನ ಸಮಯದಲ್ಲಿ ರಾಷ್ಟ್ರದ ಜನರು ಒಗ್ಗಟ್ಟಿನಿಂದ ನಿಂತಿದ್ದಾರೆ, ಇದು ಸಂತ್ರಸ್ತ ಕುಟುಂಬಗಳಿಗೆ ಅಪಾರ ಶಕ್ತಿಯನ್ನು ನೀಡಿದೆ ಎಂದು ಅವರು ಹೇಳಿದರು.ಗುವಾಹಟಿಯಲ್ಲಿ ನಡೆದ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ
February 25th, 11:10 am
ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜೀ, ಕ್ರಿಯಾಶೀಲ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಜೀ, ಉದ್ಯಮ ನಾಯಕರೇ, ಗಣ್ಯ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ!ಅಡ್ವಾಂಟೇಜ್ ಅಸ್ಸಾಂ 2.0 ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
February 25th, 10:45 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಎಲ್ಲಾ ಗಣ್ಯರನ್ನು ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ ಅವರು, “ಪೂರ್ವ ಭಾರತ ಮತ್ತು ಈಶಾನ್ಯ ಭಾರತ ಇಂದು ಭವಿಷ್ಯದ ಹೊಸ ಪಯಣವನ್ನು ಆರಂಭಿಸುತ್ತಿವೆ ಮತ್ತು ಅಡ್ವಾಂಟೇಜ್ ಅಸ್ಸಾಂ, ಅಸ್ಸಾಂನ ಅದ್ಭುತ ಸಾಮರ್ಥ್ಯ ಮತ್ತು ಪ್ರಗತಿಯನ್ನು ಪ್ರಪಂಚದೊಂದಿಗೆ ಬೆಸೆದುಕೊಳ್ಳುವ ಒಂದು ಬೃಹತ್ ಉಪಕ್ರಮವಾಗಿದೆ’’ ಎಂದು ಹೇಳಿದರು.ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ
February 24th, 10:35 am
ಮೊದಲನೆಯದಾಗಿ, ನಾನು ಇಲ್ಲಿಗೆ ಬರುವುದರಲ್ಲಿ ವಿಳಂಬವಾದದ್ದಕ್ಕೆ ಕ್ಷಮೆಯಿರಲಿ. ನಿನ್ನೆ ನಾನು ಇಲ್ಲಿಗೆ ಬಂದಾಗ, ಇಂದು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿವೆ ಎಂದು ತಿಳಿಯಿತು. ರಾಜಭವನದಿಂದ ನಾನು ಹೊರಡುವ ಸಮಯ ಮತ್ತು ಅವರ ಪರೀಕ್ಷೆಯ ಸಮಯ ಒಂದೇ ಆಗುತ್ತಿತ್ತು. ಭದ್ರತಾ ಕಾರಣಗಳಿಂದ ರಸ್ತೆಗಳನ್ನು ಮುಚ್ಚಿದರೆ, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಲು ತೊಂದರೆಯಾಗುವ ಸಾಧ್ಯತೆ ಇತ್ತು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು, ಎಲ್ಲಾ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಿದ ನಂತರವೇ ರಾಜಭವನದಿಂದ ಹೊರಡಲು ನಿರ್ಧರಿಸಿದೆ. ಆದ್ದರಿಂದ, ನಾನು ಉದ್ದೇಶಪೂರ್ವಕವಾಗಿ 15-20 ನಿಮಿಷಗಳ ಕಾಲ ನನ್ನ ಹೊರಡುವಿಕೆಯನ್ನು ವಿಳಂಬ ಮಾಡಿದೆ. ಇದರಿಂದ ನಿಮಗೆಲ್ಲರಿಗೂ ಸ್ವಲ್ಪ ಅನಾನುಕೂಲವಾಯಿತು. ಮತ್ತೊಮ್ಮೆ ನಿಮ್ಮೆಲ್ಲರಿಗೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 ಅನ್ನು ಉದ್ಘಾಟಿಸಿದರು
February 24th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ (ಜಿಐಎಸ್) 2025 ಅನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಇದ್ದುದರಿಂದ ಮತ್ತು ಕಾರ್ಯಕ್ರಮಕ್ಕೆ ಬರುವ ದಾರಿಯಲ್ಲಿ ತಮ್ಮ ಭದ್ರತಾ ಕ್ರಮಗಳು ವಿದ್ಯಾರ್ಥಿಗಳಿಗೆ ಅನಾನುಕೂಲತೆಯನ್ನುಂಟುಮಾಡಬಹುದಾಗಿದ್ದರಿಂದ ಕಾರ್ಯಕ್ರಮಕ್ಕೆ ಬರುವುದು ವಿಳಂಬವಾಗಿದ್ದಕ್ಕಾಗಿ ಕ್ಷಮೆಯಾಚಿಸಿದರು. ರಾಜ ಭೋಜ ಭೂಮಿಗೆ ಹೂಡಿಕೆದಾರರು ಮತ್ತು ವ್ಯಾಪಾರ ನಾಯಕರನ್ನು ಸ್ವಾಗತಿಸುವುದು ನನಗೆ ಅತ್ಯಂತ ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ದು ಹೇಳಿದರು. ವಿಕಸಿತ ಮಧ್ಯಪ್ರದೇಶ ಅಥವಾ ಅಭಿವೃದ್ಧಿ ಹೊಂದಿದ ಮಧ್ಯಪ್ರದೇಶವು ವಿಕಸಿತ ಭಾರತದತ್ತ ಪ್ರಯಾಣದಲ್ಲಿ ಅಗತ್ಯವಾಗಿರುವುದರಿಂದ ಇಂದಿನ ಕಾರ್ಯಕ್ರಮವು ಮುಖ್ಯವಾಗಿದೆ ಎಂದು ಅವರು ಹೇಳಿದರು. ಶೃಂಗಸಭೆಯ ಅದ್ಭುತ ಸಂಘಟನೆಗಾಗಿ ಅವರು ಮಧ್ಯಪ್ರದೇಶ ಸರ್ಕಾರವನ್ನು ಅಭಿನಂದಿಸಿದರು.