ಸಾಮಾನ್ಯ ಜನರ ಜೀವನವನ್ನು ಸರಳಗೊಳಿಸಲು ಡಿಜಿಟಲ್ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ: ಪ್ರಧಾನಿ ಮೋದಿ
July 09th, 05:35 pm
ಪ್ರಧಾನಿ ಮೋದಿ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರು ನೋಯ್ಡಾದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಘಟಕವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವನ್ನು ಉತ್ಪಾದನಾ ಕೇಂದ್ರವಾಗಿ ಮಾಡಲು ಮತ್ತು 'ಮೇಕ್ ಇನ್ ಇಂಡಿಯಾ' ಪ್ರಗತಿಯನ್ನು ಬಲಪಡಿಸುವ ಸರಕಾರದ ದೃಷ್ಟಿಕೋನವನ್ನು ಉತ್ಪಾದನಾ ಘಟಕವು ಗುರುತಿಸಿದೆ. ಕೈಗೆಟುಕುವ ಸ್ಮಾರ್ಟ್ಫೋನ್ಗಳು ಮತ್ತು ಅಗ್ಗದ ಮಾಹಿತಿಯೊಂದಿಗೆ ಡಿಜಿಟಲ್ ತಂತ್ರಜ್ಞಾನವು ಸಾಮಾನ್ಯ ನಾಗರಿಕರ ಜೀವನವನ್ನು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಪೂರೈಸುವ ಮೂಲಕ ಹೇಗೆ ಬದಲಾಯಿಸುತ್ತಿದೆ ಎಂದುಪ್ರಧಾನಮಂತ್ರಿ ತಿಳಿಸಿದ್ದಾರೆ .ಮಾನ್ಯ ಪ್ರಧಾನಮಂತ್ರಿಗಳು ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷರಿಂದ ನೋಯಿಡಾದಲ್ಲಿ ಮೊಬೈಲ್ ಉತ್ಪಾದನಾ ಘಟಕಕ್ಕೆ ಚಾಲನೆ.
July 09th, 05:34 pm
ಮಾನ್ಯ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರು ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷರಾದ ಶ್ರೀ ಮೂನ್ ಜೇ-ಇನ್ ಅವರು ನೋಯಿಡಾದಲ್ಲಿ ಇಂದು ಸ್ಯಾಮ್ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ನ ಬೃಹತ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದರು.