ಭಾರತದ ಪ್ರಧಾನ ಮಂತ್ರಿಯ ಮಯನ್ಮಾರ್ ಭೇಟಿಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಭಾರತ-ಮಯನ್ಮಾರ್ ಜಂಟಿ ಹೇಳಿಕೆ

September 06th, 10:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೈನಾದ ಕ್ಸಿಮೆನ್ ನಲ್ಲಿ 2017ರ ಸೆಪ್ಟೆಂಬರ್ 3-5ರವರೆಗೆ ನಡೆಯಲಿರುವ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು 2017ರ ಸೆಪ್ಟೆಂಬರ್ 5-7ರವರೆಗೆ ಮ್ಯಾನ್ಮಾರ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಎರಡು ದೇಶಗಳ ನಾಯಕರ ನಡುವಿನ ನಿರಂತರ ಉನ್ನತ ಮಟ್ಟದ ದ್ವಿಪಕ್ಷೀಯ ಸಂಬಂಧಗಳ ಭಾಗವಾಗಿದೆ

ಮ್ಯಾನ್ಮಾರ್ ಅಧ್ಯಕ್ಷರಿಗೆ ಉಡುಗೊರೆ ನೀಡಿದ ಪ್ರಧಾನಮಂತ್ರಿ

September 05th, 09:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 1841ರ ಸಲ್ವೀನ್ ನದಿಯ ಹರಿವಿನ ನಕ್ಷೆಯ ಪುನರ್ ನಿರ್ಮಾಣಮಾಡಿದ ಪ್ರತಿಯನ್ನು ಮ್ಯಾನ್ಮಾರ್ ಅಧ್ಯಕ್ಷ ಘನತೆವೆತ್ತ ಶ್ರೀಯು ಹಿಟಿನ್ ಕ್ವಾ ಅವರಿಗೆ ಉಡುಗೊರೆಯಾಗಿ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮಯನ್ಮಾರ್ ಅಧ್ಯಕ್ಷ ಹೆತಿನ್ ಕ್ವಾವ್ ಅವರನ್ನು ಭೇಟಿಯಾದರು

September 05th, 05:37 pm

ನಯ್ ಪೈ ತವ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಯನ್ಮಾರ್ ಅಧ್ಯಕ್ಷ ಹೆತಿನ್ ಕ್ವಾವ್ ಅವರನ್ನು ಭೇಟಿಯಾದರು . ಎರಡೂ ದೇಶಗಳ ನಡುವಿನ ಅನೇಕ ವಿಷಯಗಳ ಸಹಕಾರವನ್ನು ನಾಯಕರು ಚರ್ಚಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ಮಯನ್ಮಾರ್ ಗೆ ಆಗಮಿಸಿದರು

September 05th, 04:09 pm

ಪ್ರಧಾನಮಂತ್ರಿ ಮೋದಿ ಮಯನ್ಮಾರ್ ಗೆ ಆಗಮಿಸಿದರು . ಅವರ ಭೇಟಿಯ ಸಂಧರ್ಭದಲ್ಲಿ , ಪ್ರಧಾನಿ ಅಧ್ಯಕ್ಷ ಯು. ಹೆಟಿನ್ ಕ್ವಾವ್ ಮತ್ತು ಮಯನ್ಮಾರ್ ಘನತೆವೆತ್ತ ರಾಜ್ಯ ಕೌನ್ಸಿಲರ್ ಡಾ. ಆಂಗ್ ಸಾನ್ ಸೂ ಕಿ ಅವರನ್ನು ಭೇಟಿಯಾಗಲಿದ್ದಾರೆ . ಭಾರತ-ಮಯನ್ಮಾರ್ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಯನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ .