
ನವರಾತ್ರಿ ಹಬ್ಬದ ಸಮಯದಲ್ಲಿ ರಾಣಿ ಮಾತೆಯ ಒಂಬತ್ತು ದೈವಿಕ ರೂಪಗಳ ಆರಾಧನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ
April 05th, 09:02 am
ನವರಾತ್ರಿ ಹಬ್ಬದ ಸಮಯದಲ್ಲಿ ರಾಣಿ ಮಾತೆಯ ಒಂಬತ್ತು ದೈವಿಕ ರೂಪಗಳ ಆರಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಕುರಿತ ಭಜನೆಯನ್ನು ಹಂಚಿಕೊಂಡಿದ್ದಾರೆ.
ಮಾತಾ ಜಗದಾಂಬೆಯ ಅನುಗ್ರಹ ಭಕ್ತರ ಜೀವನದಲ್ಲಿ ಸಂತೋಷದ ಹೊಸ ಉದಯ ತರಲಿದೆ - ಪ್ರಧಾನಮಂತ್ರಿ ಪ್ರತಿಪಾದನೆ
April 04th, 08:28 am
ಮಾತಾ ಜಗದಾಂಬೆಯ ಅನುಗ್ರಹವು ಭಕ್ತರ ಜೀವನದಲ್ಲಿ ಸಂತೋಷದ ಹೊಸ ಹೊನಲು ತರಲಿದೆ ಎಂಬ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಿಳಿಸಿದ್ದಾರೆ. . ಶ್ರೀಮತಿ ಲತಾ ಮಂಗೇಶ್ಕರ್ ಅವರ ಪ್ರಾರ್ಥನೆಯನ್ನು ಸಹ ಅವರು ಹಂಚಿಕೊಂಡಿದ್ದಾರೆ.
ನವರಾತ್ರಿಯ ಸಂದರ್ಭದಲ್ಲಿ ಮಾ ದುರ್ಗೆಯ ಆರಾಧನೆಯೊಂದಿಗೆ ಭಕ್ತರ ಜೀವನದಲ್ಲಿ ಹೊಸ ಶಕ್ತಿ ಮತ್ತು ಸಂಕಲ್ಪ ತುಂಬುತ್ತದೆ ಎಂದು ಪ್ರಧಾನಮಂತ್ರಿಯವರು ವಿವರಿಸಿದರು
April 03rd, 06:57 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯಲ್ಲಿ ಮಾ ದುರ್ಗೆಯ ಆರಾಧನೆಯೊಂದಿಗೆ ಭಕ್ತರ ಜೀವನದಲ್ಲಿ ಹೊಸ ಶಕ್ತಿ ಮತ್ತು ಸಂಕಲ್ಪವನ್ನು ವಿವರಿಸಿದರು. ಅವರು ಶ್ರೀಮತಿ ಅನುರಾಧಾ ಪೌಡ್ವಾಲ್ ಅವರ ಭಜನೆಯನ್ನೂ ಸಹ ಹಂಚಿಕೊಂಡರು.ಮಾತೆ ಅಂಬೆಯ ಆರಾಧನೆಯೊಂದಿಗೆ ನವರಾತ್ರಿಯ ಪವಿತ್ರತೆಯನ್ನು ಪ್ರಧಾನಮಂತ್ರಿಯವರು ಪ್ರತಿಬಿಂಬಿಸುತ್ತಾರೆ
April 02nd, 10:06 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾತೆ ಅಂಬೆಯ ಆರಾಧನೆಯೊಂದಿಗೆ ನವರಾತ್ರಿಯ ಪವಿತ್ರ ಆಚರಣೆಯನ್ನು ಮಾಡಿದರು. ದೇವಿ ಮಾತೆಯ ರೂಪಗಳಿಗೆ ಸಮರ್ಪಿತವಾದ ಪ್ರಾರ್ಥನೆಯನ್ನು ಎಲ್ಲರೂ ಕೇಳುವಂತೆ ಒತ್ತಾಯಿಸಿದರು, ಮತ್ತು ಅವರು ಪ್ರಾರ್ಥನೆಯನ್ನು ಹಂಚಿಕೊಂಡರು.ನವರಾತ್ರಿಯಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸು ಅಪಾರ ಪ್ರಶಾಂತತೆಯಿಂದ ತುಂಬಿರಲಿದೆ - ಪ್ರಧಾನಮಂತ್ರಿ ಪ್ರತಿಪಾದನೆ
April 01st, 10:02 am
ನವರಾತ್ರಿಯಲ್ಲಿ ಮಾತಾ ದೇವಿಯ ಆರಾಧನೆಯಿಂದ ಮನಸ್ಸು ಅಪಾರ ಪ್ರಶಾಂತತೆಯಿಂದ ಕೂಡಿರಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿವರಿಸಿದ್ದಾರೆ. ಪಂಡಿತ್ ಭೀಮಸೇನ್ ಜೋಶಿಯವರ ಭಜನೆಯನ್ನೂ ಅವರು ಹಂಚಿಕೊಂಡಿದ್ದಾರೆ.ಪ್ರಧಾನಮಂತ್ರಿಗಳಿಂದ ನವರಾತ್ರಿ ಆಚರಣೆಗೆ ಶಾಂತಿ, ಸಂತೋಷ ಮತ್ತು ನವಚೈತನ್ಯದ ಸಂದೇಶ
March 31st, 09:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಶುಭಾಶಯ ಕೋರುತ್ತಾ, ದುರ್ಗಾ ದೇವಿಯ ದೈವಿಕ ಆಶೀರ್ವಾದ ಬಗ್ಗೆ ಒತ್ತಿ ಹೇಳಿದ್ದಾರೆ. ದೇವಿಯ ಅನುಗ್ರಹವು ಭಕ್ತರಿಗೆ ಶಾಂತಿ, ಸಂತೋಷ ಮತ್ತು ನವಚೈತನ್ಯವನ್ನು ಹೇಗೆ ತರಬಲ್ಲದು ಎಂಬುದನ್ನು ಅವರು ವಿವರಿಸಿದ್ದಾರೆ. ಶ್ರೀಮತಿ ರಾಜಲಕ್ಷ್ಮೀ ಸಂಜಯ್ ಅವರ ಪ್ರಾರ್ಥನೆಯನ್ನು ಸಹ ಪ್ರಧಾನಿ ಹಂಚಿಕೊಂಡಿದ್ದಾರೆ.Government is running a special campaign for the development of tribal society: PM Modi in Bilaspur, Chhattisgarh
March 30th, 06:12 pm
PM Modi laid the foundation stone and inaugurated development projects worth over Rs 33,700 crore in Bilaspur, Chhattisgarh. He highlighted that three lakh poor families in Chhattisgarh are entering their new homes. He acknowledged the milestone achieved by women who, for the first time, have property registered in their names. The PM said that the Chhattisgarh Government is observing 2025 as Atal Nirman Varsh and reaffirmed the commitment, We built it, and we will nurture it.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸಗಢದ ಬಿಲಾಸಪುರದಲ್ಲಿ 33,700 ಕೋಟಿ ರೂ.ಗೂ ಹೆಚ್ಚು ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
March 30th, 03:30 pm
ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಸುಸ್ಥಿರ ಜೀವನೋಪಾಯವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ತೀಸಗಢದ ಬಿಲಾಸಪುರದಲ್ಲಿ 33,700 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಕಾಮಗಾರಿ ಆರಂಭ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಮಾತಾ ಮಹಾಮಾಯೆಯ ನಾಡು ಮತ್ತು ಮಾತಾ ಕೌಶಲ್ಯೆಯ ತವರು ಮನೆಯಾದ ಛತ್ತೀಸಗಢಕ್ಕೆ ಹೊಸ ವರ್ಷದ ಶುಭ ಆರಂಭ ಮತ್ತು ನವರಾತ್ರಿಯ ಮೊದಲ ದಿನವಾದ ಇಂದಿನ ಮಹತ್ವವನ್ನು ಅವರು ಒತ್ತಿ ಹೇಳಿದರು. ರಾಜ್ಯಕ್ಕೆ ಸ್ತ್ರೀ ದೈವತ್ವಕ್ಕೆ ಮೀಸಲಾದ ಈ ಒಂಬತ್ತು ದಿನಗಳ ವಿಶೇಷ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ನವರಾತ್ರಿಯ ಮೊದಲ ದಿನದಂದು ಛತ್ತೀಸಗಢದಲ್ಲಿರುವುದು ತಮಗೆ ದೊರೆತ ಗೌರವ ಎಂದು ಅವರು ಹೇಳಿದರು ಮತ್ತು ಇತ್ತೀಚೆಗೆ ಭಕ್ತ ಶಿರೋಮಣಿ ಮಾತಾ ಕರ್ಮ ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆ ತಿಳಿಸಿದರು. ನವರಾತ್ರಿ ಉತ್ಸವವು ರಾಮನವಮಿಯ ಆಚರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದರು, ಇದು ಛತ್ತೀಸಗಢದಲ್ಲಿ ರಾಮನ ಮೇಲಿನ ಅನನ್ಯ ಭಕ್ತಿಯನ್ನು, ವಿಶೇಷವಾಗಿ ರಾಮನಾಮಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ರಾಮನಾಮಿ ಸಮಾಜದ ಅಸಾಧಾರಣ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು. ಛತ್ತೀಸಗಢದ ಜನರನ್ನು ಭಗವಾನ್ ರಾಮನ ತಾಯಿಯ ಕುಟುಂಬ ಎಂದು ಕರೆಯುವ ಮೂಲಕ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.ಮಹಾರಾಷ್ಟ್ರದ ನಾಗಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
March 30th, 11:53 am
ಗುಡಿ ಪಾಡ್ವ ಮತ್ತು ಹೊಸ ವರ್ಷಕ್ಕೆ ನಾನು ನಿಮಗೆಲ್ಲರಿಗೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತೇನೆ! ಅತ್ಯಂತ ಗೌರವಾನ್ವಿತ ಸರ್ಸಂಘಚಾಲಕ್ ಜಿ, ಡಾ. ಮೋಹನ್ ಭಾಗವತ್ ಜಿ, ಸ್ವಾಮಿ ಗೋವಿಂದ್ ಗಿರಿ ಜಿ ಮಹಾರಾಜ್, ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್, ಮಹಾರಾಷ್ಟ್ರದ ಜನಪ್ರಿಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ ಜಿ, ಡಾ. ಅವಿನಾಶ್ ಚಂದ್ರ ಅಗ್ನಿಹೋತ್ರಿ ಜಿ, ಇತರ ಗಣ್ಯರೇ ಹಾಗು ಇಲ್ಲಿ ಉಪಸ್ಥಿತರಿರುವ ಎಲ್ಲಾ ಹಿರಿಯ ಸಹೋದ್ಯೋಗಿಗಳೇ, ಇಂದು ರಾಷ್ಟ್ರ ಯಜ್ಞದ ಈ ಪವಿತ್ರ ಆಚರಣೆಯಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಇಂದು, ಚೈತ್ರ ಶುಕ್ಲ ಪ್ರತಿಪದದ ಈ ದಿನವು ತುಂಬಾ ವಿಶೇಷವಾಗಿದೆ. ನವರಾತ್ರಿಯ ಪವಿತ್ರ ಹಬ್ಬ ಇಂದಿನಿಂದ ಆರಂಭವಾಗುತ್ತಿದೆ. ಇಂದು ದೇಶದ ವಿವಿಧ ಭಾಗಗಳಲ್ಲಿ ಗುಡಿ-ಪಾಡ್ವ, ಯುಗಾದಿ ಮತ್ತು ನವರೆಹ್ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇಂದು ಭಗವಾನ್ ಜುಲೇಲಾಲ್ ಜಿ ಮತ್ತು ಗುರು ಅಂಗದ್ ದೇವ್ ಜಿ ಅವರ ಜನ್ಮ ದಿನಾಚರಣೆಯೂ ಆಗಿದೆ. ಇದು ನಮ್ಮ ಸ್ಫೂರ್ತಿ, ಅತ್ಯಂತ ಗೌರವಾನ್ವಿತ ಡಾಕ್ಟರ್ ಸಾಹೇಬ್ ಅವರ ಜನ್ಮ ದಿನಾಚರಣೆಯೂ ಆಗಿದೆ. ಮತ್ತು ಈ ವರ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅದ್ಭುತ ಪ್ರಯಾಣದ 100 ವರ್ಷಗಳು ಪೂರ್ಣಗೊಂಡಿವೆ. ಇಂದು ಈ ಸಂದರ್ಭದಲ್ಲಿ, ಸ್ಮೃತಿ ಮಂದಿರಕ್ಕೆ ಭೇಟಿ ನೀಡುವ ಮತ್ತು ಗೌರವಾನ್ವಿತ ಡಾಕ್ಟರ್ ಸಾಹೇಬ್ ಮತ್ತು ಗೌರವಾನ್ವಿತ ಗುರೂಜಿ ಅವರಿಗೆ ಗೌರವ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ.ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು
March 30th, 11:52 am
ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಪ್ರಧಾನಮಂತ್ರಿಯವರು ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪವಿತ್ರ ನವರಾತ್ರಿ ಉತ್ಸವದ ಆರಂಭವನ್ನು ಸೂಚಿಸುವ ಚೈತ್ರ ಶುಕ್ಲ ಪ್ರತಿಪದದ ಮಹತ್ವದ ಬಗ್ಗೆ ತಿಳಿಸಿದರು. ದೇಶಾದ್ಯಂತ ಇಂದು ಗುಡಿ ಪಡ್ವಾ, ಯುಗಾದಿ ಮತ್ತು ನವರೇಹ್‌ನಂತಹ ಹಬ್ಬಗಳನ್ನು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಗವಾನ್ ಜುಲೇಲಾಲ್ ಮತ್ತು ಗುರು ಅಂಗದ್ ದೇವ್ ಅವರ ಜನ್ಮ ದಿನಾಚರಣೆಯೊಂದಿಗೆ ಈ ದಿನವು ಹೊಂದಿಕೆಯಾಗುವುದರಿಂದ ಈ ದಿನದ ಮಹತ್ವವನ್ನು ಅವರು ವಿವರಿಸಿದರು. ಈ ಸಂದರ್ಭವನ್ನು ಸ್ಪೂರ್ತಿದಾಯಕ ಡಾ. ಕೆ. ಬಿ. ಹೆಡ್ಗೆವಾರ್ ಅವರ ಜನ್ಮ ವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶ್ರೇಷ್ಠ ಪ್ರಯಾಣದ ಶತಮಾನೋತ್ಸವ ವರ್ಷವೆಂದು ತಿಳಿಸಿದರು. ಈ ಮಹತ್ವದ ದಿನದಂದು ಡಾ. ಹೆಡ್ಗೆವಾರ್ ಮತ್ತು ಶ್ರೀ ಗೋಲ್ವಾಲ್ಕರ್ ಗುರೂಜಿ ಅವರಿಗೆ ಗೌರವ ಸಲ್ಲಿಸಲು ಸ್ಮೃತಿ ಮಂದಿರಕ್ಕೆ ಭೇಟಿ ನೀಡಿರುವುದು ನನಗೆ ಸಿಕ್ಕ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ
March 30th, 11:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಮಾತೃದೇವತೆಯ ಆರಾಧನೆಗೆ ಸಮರ್ಪಿತವಾದ ಪಂಡಿತ್ ಜಸರಾಜ್ ಜೀ ಅವರ ಸ್ತುತಿಗೀತೆಯನ್ನೂ ಅವರು ಹಂಚಿಕೊಂಡರು.ಪಾಡ್‌ಕ್ಯಾಸ್ಟ್ ನಲ್ಲಿ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಪ್ರಧಾನಮಂತ್ರಿಯವರ ಮಾತುಕತೆಯ ಕನ್ನಡ ಅನುವಾದ
March 16th, 11:47 pm
ಪ್ರಧಾನಮಂತ್ರಿ ನರೇಂದ್ರ ಮೋದಿ: ನನ್ನ ಶಕ್ತಿ ಇರುವುದು ಮೋದಿಯಾಗಿರುವುದರಲ್ಲಿ ಅಲ್ಲ; ಅದು 140 ಕೋಟಿ ಭಾರತೀಯರಿಂದ ಬಂದಿದೆ, ಸಾವಿರಾರು ವರ್ಷಗಳ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಿಂದ ಬಂದಿದೆ. ಅದೇ ನನ್ನ ನಿಜವಾದ ಶಕ್ತಿ. ನಾನು ಎಲ್ಲಿಗೆ ಹೋದರೂ, ಮೋದಿಯಾಗಿ ಹೋಗುವುದಿಲ್ಲ - ವೇದಗಳಿಂದ ವಿವೇಕಾನಂದರವರೆಗೆ ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಹಳೆಯ ಶ್ರೇಷ್ಠ ಸಂಪ್ರದಾಯಗಳನ್ನು ನನ್ನೊಂದಿಗೆ ಕೊಂಡೊಯ್ಯತೇನೆ. ನಾನು 140 ಕೋಟಿ ಜನರನ್ನು, ಅವರ ಕನಸುಗಳನ್ನು ಮತ್ತು ಅವರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೇನೆ. ಅದಕ್ಕಾಗಿಯೇ, ನಾನು ಯಾವುದೇ ವಿಶ್ವ ನಾಯಕರೊಂದಿಗೆ ಕೈಕುಲುಕಿದಾಗ, ಅದು ಕೇವಲ ಮೋದಿಯವರ ಕೈ ಆಗಿರುವುದಿಲ್ಲ - ಅದು 140 ಕೋಟಿ ಭಾರತೀಯರ ಸಾಮೂಹಿಕ ಕೈ ಆಗಿರುತ್ತದೆ. ನನ್ನ ಶಕ್ತಿ ಮೋದಿಯದ್ದಲ್ಲ; ಅದು ಭಾರತದ ಶಕ್ತಿ. ನಾವು ಶಾಂತಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಜಗತ್ತು ಕೇಳುತ್ತದೆ, ಏಕೆಂದರೆ ಇದು ಬುದ್ಧನ ನಾಡು, ಮಹಾತ್ಮ ಗಾಂಧಿಯವರ ನಾಡು. ನಾವು ಸಂಘರ್ಷದ ಪ್ರತಿಪಾದಕರಲ್ಲ; ನಾವು ಸಾಮರಸ್ಯವನ್ನು ಪ್ರತಿಪಾದಿಸುತ್ತೇವೆ. ನಾವು ಪ್ರಕೃತಿಯೊಂದಿಗೆ ಸಂಘರ್ಷ ಅಥವಾ ರಾಷ್ಟ್ರಗಳ ನಡುವಿನ ಕಲಹವನ್ನು ಬಯಸುವುದಿಲ್ಲ - ನಾವು ಸಹಕಾರದಲ್ಲಿ ನಂಬಿಕೆ ಇಡುವ ಜನರು ಮತ್ತು ನಾವು ಶಾಂತಿಯನ್ನು ಉತ್ತೇಜಿಸಲು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾದರೆ, ನಾವು ಯಾವಾಗಲೂ ಅದನ್ನು ಮಾಡಲು ಪ್ರಯತ್ನಿಸುತ್ತೇವೆ. ನನ್ನ ಜೀವನವು ಅತ್ಯಂತ ಬಡತನದಿಂದ ಬಂದಿದೆ, ಆದರೂ ನಾವು ಅದರ ಹೊರೆಯನ್ನು ಎಂದಿಗೂ ಅನುಭವಿಸಲಿಲ್ಲ. ಜೀವನದುದ್ದಕ್ಕೂ ಬೂಟುಗಳನ್ನು ಧರಿಸಿದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಅವುಗಳಿಲ್ಲದೆ ಹೋದರೆ ಅವನು ಕಷ್ಟಪಡಬೇಕಾಗಬಹುದು. ಆದರೆ ಎಂದಿಗೂ ಬೂಟುಗಳನ್ನು ಧರಿಸದವರಿಗೆ, ಅಭಾವದ ಭಾವನೆಯೇ ಇರುವುದಿಲ್ಲ - ನಾವು ನಮ್ಮ ಜೀವನವನ್ನು ಅದು ಇದ್ದಂತೆಯೇ ಸರಳವಾಗಿ ಬದುಕಿದ್ದೇವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು
March 16th, 05:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಇಂದು ವಿವಿಧ ವಿಷಯಗಳ ಬಗ್ಗೆ ʻಪಾಡ್‌ಕಾಸ್ಟ್ʼನಲ್ಲಿ ಸಂವಾದ ನಡೆಸಿದರು. ಪ್ರಾಮಾಣಿಕವಾದ, ಮನದಾಳದ ಮಾತುಕತೆಯ ವೇಳೆ ಪ್ರಧಾನಿ ಅವರನ್ನು ನೀವು ಏಕೆ ಉಪವಾಸ ಮಾಡುತ್ತೀರಿ ಮತ್ತು ಹೇಗೆ ನಿರ್ವಹಿಸುತ್ತೀರಿ ಎಂದು ಕೇಳಿದಾಗ, ಪ್ರಧಾನಿಯವರು ತಮ್ಮ ಮೇಲಿನ ಗೌರವದ ಸಂಕೇತವಾಗಿ ಉಪವಾಸ ಮಾಡಿದ ಪಾಡ್‌ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ ಎಂದು ಶ್ರೀ ಮೋದಿ ಹೇಳಿದರು. ಹಿಂದೂ ಧರ್ಮವು ಕೇವಲ ಆಚರಣೆಗಳ ಕುರಿತಾದದ್ದಲ್ಲ. ಅದು ಜೀವನಕ್ಕೆ ಮಾರ್ಗದರ್ಶನ ನೀಡುವ ತತ್ವಶಾಸ್ತ್ರವಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು ಈ ಕುರಿತು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನವನ್ನು ಉಲ್ಲೇಖಿಸಿದರು. ಉಪವಾಸವು ಶಿಸ್ತನ್ನು ಬೆಳೆಸಲು ಹಾಗೂ ಮನಸ್ಸು ಹಾಗೂ ದೇಹವನ್ನು ಸಮತೋಲನಗೊಳಿಸಲು ಒಂದು ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವು ಇಂದ್ರಿಯಗಳ ಪ್ರಜ್ಞೆಯನ್ನು ಹೆಚ್ಚಿಸುತ್ತದೆ, ಅವುಗಳನ್ನು ಹೆಚ್ಚು ಸೂಕ್ಷ್ಮ ಮತ್ತು ಜಾಗೃತಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಪವಾಸದ ಸಮಯದಲ್ಲಿ, ಅತ್ಯಂತ ಸೂಕ್ಷ್ಮವಾದ ಸುವಾಸನೆ ಮತ್ತು ವಿವರಗಳನ್ನು ಸಹ ಹೆಚ್ಚು ಸ್ಪಷ್ಟವಾಗಿ ಗ್ರಹಿಸಬಹುದು ಎಂದು ಅವರು ಹೇಳಿದರು. ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ ಮತ್ತು ರೂಢಿಗತವಲ್ಲದ ರೀತಿಯಲ್ಲಿ (ಔಟ್ ಆಫ್ ದಿ ಬಾಕ್ಸ್) ಆಲೋಚನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸವೆಂದರೆ ಕೇವಲ ಆಹಾರವನ್ನು ತ್ಯಜಿಸುವುದಷ್ಟೇ ಅಲ್ಲ ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು. ಇದು ಪೂರ್ವ ಸಿದ್ಧತೆ ಮತ್ತು ನಿರ್ವಿಷೀಕರಣದ (ಡಿಟಾಕ್ಸಿಕೇಷನ್) ವೈಜ್ಞಾನಿಕ ಪ್ರಕ್ರಿಯೆಯನ್ನು ಒಳಗೊಂಡಿದೆ. ಹಲವಾರು ದಿನಗಳ ಮುಂಚಿತವಾಗಿ ಆಯುರ್ವೇದ ಮತ್ತು ಯೋಗ ಅಭ್ಯಾಸಗಳನ್ನು ಅನುಸರಿಸುವ ಮೂಲಕ ತಮ್ಮ ದೇಹವನ್ನು ಉಪವಾಸಕ್ಕಾಗಿ ಸಜ್ಜುಗೊಳಿಸುವುದಾಗಿ ಅವರು ಒತ್ತಿ ಹೇಳಿದರು ಮತ್ತು ಈ ಅವಧಿಯಲ್ಲಿ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ಉಪವಾಸ ಪ್ರಾರಂಭವಾದ ನಂತರ, ಅವರು ಅದನ್ನು ಭಕ್ತಿ ಮತ್ತು ಸ್ವಯಂ ಶಿಸ್ತಿನ ಕ್ರಿಯೆಯಾಗಿ ನೋಡುವುದಾಗಿ, ಮತ್ತು ಇದು ಆಳವಾದ ಆತ್ಮಾವಲೋಕನ ಮತ್ತು ಏಕಾಗ್ರತೆಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ತಮ್ಮ ಶಾಲಾ ದಿನಗಳಲ್ಲಿ ಉಪವಾಸದ ಅಭ್ಯಾಸವು ವೈಯಕ್ತಿಕ ಅನುಭವದಿಂದ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿಪಡೆದ ಆಂದೋಲನದಿಂದ ಅದು ಶುರುವಾಯಿತು ಎಂದು ಪ್ರಧಾನಿ ಹಂಚಿಕೊಂಡರು. ಅವರು ತಮ್ಮ ಮೊದಲ ಉಪವಾಸದ ಸಮಯದಲ್ಲಿ ಶಕ್ತಿ ಮತ್ತು ಜಾಗೃತಿಯಲ್ಲಿ ಉಂಟಾದ ತೀವ್ರತೆಯ ಅನುಭವನ್ನು ವಿವರಿಸಿದರು. ಅದು ಉಪವಾಸದ ಪರಿವರ್ತಕ ಶಕ್ತಿಯನ್ನು ತಮಗೆ ಮನವರಿಕೆ ಮಾಡಿಕೊಟ್ಟಿತು ಎಂದರು. ಉಪವಾಸವು ತಮ್ಮನ್ನು ತಾಮಸ ಅಥವಾ ನಿಧಾನಗೊಳಿಸುವುದಿಲ್ಲ. ಬದಲಾಗಿ, ಇದು ಆಗಾಗ್ಗೆ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಉಪವಾಸದ ಸಮಯದಲ್ಲಿ, ಅವರ ಆಲೋಚನೆಗಳು ಹೆಚ್ಚು ಮುಕ್ತವಾಗಿ ಮತ್ತು ಸೃಜನಶೀಲವಾಗಿ ಹರಿಯುತ್ತವೆ, ಇದು ತಮ್ಮನ್ನು ವ್ಯಕ್ತಪಡಿಸಲು ಅದ್ಭುತ ಅನುಭವವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
October 11th, 08:29 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದರು.ನವರಾತ್ರಿಯ ಎಂಟನೇ ದಿನದಂದು ಪ್ರಧಾನಮಂತ್ರಿಗಳಿಂದ ದೇವಿ ಮಹಾಗೌರಿಯ ಪ್ರಾರ್ಥನೆ
October 10th, 07:35 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಎಂಟನೇ ದಿನದಂದು ದೇವಿ ಮಹಾಗೌರಿಯನ್ನು ಪ್ರಾರ್ಥಿಸಿದ್ದಾರೆ.ನವರಾತ್ರಿಯ ಏಳನೇ ದಿನದಂದು ಪ್ರಧಾನಮಂತ್ರಿಯವರು ಕಾಳರಾತ್ರಿ ದೇವಿಯನ್ನು ಪ್ರಾರ್ಥಿಸಿದರು
October 09th, 08:56 am
ಇಂದು ನವರಾತ್ರಿಯ ಏಳನೇ ದಿನ ಪ್ರಧಾನಮಂತ್ರಿ, ಶ್ರೀ ನರೇಂದ್ರ ಮೋದಿ ಅವರು ಕಾಳರಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.ನವರಾತ್ರಿಯ ಆರನೇ ದಿನದಂದು ಕಾತ್ಯಾಯನಿ ದೇವಿಗೆ ಪ್ರಧಾನಮಂತ್ರಿ ಅವರು ಪ್ರಾರ್ಥಿಸಿದರು
October 08th, 09:07 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಆರನೇ ದಿನದಂದು ಕಾತ್ಯಾಯನಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ರಚನೆಯ ಗಾರ್ಬಾ ಗೀತೆ ‘ಆವತಿ ಕಾಲಯ ಮಾದಿ ಕಾಲಯ’ ಹಂಚಿಕೊಂಡಿದ್ದಾರೆ
October 07th, 10:44 am
ದುರ್ಗಾ ದೇವಿಗೆ ಗೌರವ ಸೂಚಕವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಆವತಿ ಕಾಲಯ ಮಾದಿ ವಾಯಾ ಕಾಲಯ' ಎಂಬ ಶೀರ್ಷಿಕೆಯ ಗಾರ್ಬಾ ಗೀತೆಯನ್ನು ರಚಿಸಿದ್ದಾರೆ.ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
October 07th, 08:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.ನವರಾತ್ರಿಯ ನಾಲ್ಕನೇ ದಿನದಂದು ಪ್ರಧಾನಮಂತ್ರಿಯವರು ಕೂಷ್ಮಾಂಡಾ ದೇವಿಯನ್ನು ಪ್ರಾರ್ಥಿಸಿದರು
October 06th, 08:40 am
ನವರಾತ್ರಿಯ ನಾಲ್ಕನೇ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೂಷ್ಮಾಂಡಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.