ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ದಿಮೆಯ ಮೌಲ್ಯವರ್ಧನೆಗೆ ಪ್ರಧಾನಿ ನರೇಂದ್ರ ಮೋದಿ ಕರೆ
January 04th, 03:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಜ್ಞಾನದ ಮೌಲ್ಯ–ಸೃಷ್ಟಿ ಚಕ್ರದಿಂದ ಸಮೂಹ ಸೃಷ್ಟಿ ಉತ್ತೇಜಿಸುವಂತೆ ವೈಜ್ಞಾನಿಕ ಸಮುದಾಯಕ್ಕೆ ಪ್ರೋತ್ಸಾಹಿಸಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ, ರಾಷ್ಟ್ರೀಯ ಪರಿಸರ ಮಾನದಂಡಗಳ ಪ್ರಯೋಗಾಲಕ್ಕೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರೀಯ ಆಣ್ವಯಿಕ ಕಾಲ ಮಾಪಕ ಮತ್ತು ಭಾರತೀಯ ನಿರ್ದೇಶಕ ದ್ರವ್ಯ ಪ್ರಣಾಳಿಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ ರಾಷ್ಟ್ರೀಯ ಮಾಪನ ಸಮಾವೇಶ 2021 ಉದ್ದೇಶಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ
January 04th, 11:01 am
ಇಂದು, ನಮ್ಮ ವಿಜ್ಞಾನಿಗಳು ರಾಷ್ಟ್ರೀಯ ಪರಮಾಣು ಸಮಯ–ಪ್ರಮಾಣದ ಮತ್ತು ʼಭಾರತೀಯ ನಿರ್ದೇಶಕ್ ದ್ರವ್ಯ ಪ್ರಣಾಲಿಯನ್ನುʼ ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ ಮತ್ತು ದೇಶದ ಮೊದಲ ರಾಷ್ಟ್ರೀಯ ಪರಿಸರ ಗುಣಮಟ್ಟ ಪ್ರಯೋಗಾಲಯಕ್ಕೆ ಶಂಖುಸ್ಥಾಪನೆಯನ್ನು ಸಹ ಮಾಡಲಾಗುತ್ತಿದೆ. ಹೊಸ ದಶಕದಲ್ಲಿ ಈ ಕಾರ್ಯಕ್ರಮಗಳು ದೇಶದ ಗೌರವವನ್ನು ಹೆಚ್ಚಿಸಲಿವೆ.ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
January 04th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ನೇ ರಾಷ್ಟ್ರೀಯ ಮಾಪನಶಾಸ್ತ್ರ ಶೃಂಗಸಭೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಅವರು ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಪರಮಾಣು ಕಾಲಮಾಪಕ ಮತ್ತು ಭಾರತೀಯ ನಿರ್ದೇಶಕ ದ್ರವ್ಯ ಪ್ರನಳಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ರಾಷ್ಟ್ರೀಯ ಪರಿಸರ ಮಾನದಂಡಗಳ ಪ್ರಯೋಗಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಮಾವೇಶವನ್ನು ನವದೆಹಲಿಯಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ – ರಾಷ್ಟ್ರೀಯ ಭೌತಿಕ ಪ್ರಯೋಗಾಲಯ(ಸಿಎಸ್ಐಆರ್–ಎನ್ ಪಿಎಲ್) ಸ್ಥಾಪನೆಯ 75ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿತ್ತು. ಈ ಸಮಾವೇಶದ ಘೋಷ ವಾಕ್ಯ “ರಾಷ್ಟ್ರದ ಸಮಗ್ರ ಬೆಳವಣಿಗೆಗೆ ಮಾಪನಶಾಸ್ತ್ರ’’ ಎಂಬುದಾಗಿದೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಡಾ. ವಿಜಯ್ ರಾಘವನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ
October 30th, 06:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ವನ್ಯಮೃಗಗಳ ಉದ್ಯಾನ ಮತ್ತು ಭೂಮಿಯಂತೆ ಗೋಳಾಕಾರದ ಪಂಜರ ಉದ್ಘಾಟಿಸಿದರು. ಕೆವಾಡಿಯಾ ಸಮಗ್ರ ಅಭಿವೃದ್ಧಿ ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಪಥದರ್ಶಕ ಕಾಲುವೆ, ನೂತನ ಗೋರಾ ಸೇತುವೆ, ಗರುಡೇಶ್ವರ್ ಅಣೆಕಟ್ಟು, ಸರ್ಕಾರಿ ವಸತಿಗೃಹಗಳು, ಬಸ್ ಬೇ ಟರ್ಮಿನಸ್, ಏಕತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, ಬುಡಕಟ್ಟು ಹೋಂ ಸ್ಟೇ ಸೇರಿವೆ. ಜೊತೆಗೆ ಪ್ರಧಾನಿ ಏಕತಾ ಪ್ರತಿಮೆವರೆಗಿನ ಏಕತಾ ಕ್ರ್ಯೂಸ್ ಸೇವೆಗೂ ಹಸಿರು ನಿಶಾನೆ ತೋರಿದರು.