ರಿಪಬ್ಲಿಕ್ ಟಿವಿ ಕಾನ್‌ಕ್ಲೇವ್‌ನಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

April 26th, 08:01 pm

ಅರ್ನಾಬ್ ಗೋಸ್ವಾಮಿ ಅವರೇ, ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಎಲ್ಲಾ ಸಹೋದ್ಯೋಗಿಗಳೇ, ದೇಶ ಮತ್ತು ವಿದೇಶಗಳಲ್ಲಿನ ರಿಪಬ್ಲಿಕ್ ಟಿವಿಯ ಎಲ್ಲಾ ವೀಕ್ಷಕರೇ, ಮಹಿಳೆಯರೇ ಮತ್ತು ಮಹನೀಯರೇ! ನಾನು ಮೊದಲು, ನನ್ನ ಬಾಲ್ಯದಲ್ಲಿ ಕೇಳಿದ ಒಂದು ಹಾಸ್ಯ ಪ್ರಸಂಗವನ್ನು ಹೇಳಲು ಬಯಸುತ್ತೇನೆ. ʼಒಬ್ಬ ಪ್ರಾಧ್ಯಾಪಕರು ಇದ್ದರು, ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು, ಜೀವನದಿಂದ ಬೇಸತ್ತಿದ್ದೇನೆ, ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ಬರೆದ ಪತ್ರವಿತ್ತು. ಏನಾದರು ಕುಡಿದು ಕಂಕರಿಯಾ ಕೆರೆಗೆ ಹಾರಿ ಸಾಯುತ್ತೇನೆ ಎಂದು ಆಕೆ ಬರೆದಿದ್ದಳು. ಮರುದಿನ ಬೆಳಿಗ್ಗೆ, ತನ್ನ ಮಗಳು ಮನೆಯಲ್ಲಿ ಇಲ್ಲದಿರುವುದು ಪ್ರಾಧ್ಯಾಪಕರಿಗೆ ತಿಳಿಯಿತು. ಅವರು ಅವಳ ಕೋಣೆಗೆ ಹೋಗಿ ನೋಡದಾಗ ಪತ್ರ ಸಿಕ್ಕಿತು. ಪತ್ರವನ್ನು ಓದಿದ ಅವರಿಗೆ ತುಂಬಾ ಕೋಪ ಬಂತು. ‘ನಾನು ಪ್ರೊಫೆಸರ್ ಆಗಿದ್ದೇನೆ, ನಾನು ಇಷ್ಟು ವರ್ಷ ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ಆತ್ಮಹತ್ಯೆ ಪತ್ರದಲ್ಲಿ ಅವಳು ಕಂಕಾರಿಯಾ ಕಾಗುಣಿತವನ್ನು ತಪ್ಪಾಗಿ ಬರೆದಿದ್ದಾಳೆ.’ ಅರ್ನಾಬ್ ಉತ್ತಮ ಹಿಂದಿ ಮಾತನಾಡಲು ಪ್ರಾರಂಭಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅವರು ಏನು ಮಾತುನಾಡುತ್ತಿದ್ದಾರೆ ಎಂದು ನಾನು ಕೇಳಿಸಿಕೊಳ್ಳಲಿಲ್ಲ, ಆದರೆ ಅವರ ಹಿಂದಿ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿದ್ದೆ. ಬಹುಶಃ, ಮುಂಬೈನಲ್ಲಿ ವಾಸಿಸಿದ ನಂತರ ನಿಮ್ಮ ಹಿಂದಿ ಸುಧಾರಿಸಿದೆ.

ನವದೆಹಲಿಯಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಪ್ರಧಾನಿ ಭಾಷಣ

April 26th, 08:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಾಜ್ ಪ್ಯಾಲೇಸ್‌ ಹೋಟೆಲ್‌ನಲ್ಲಿ ಗಣರಾಜ್ಯ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.

ಭಾರತವನ್ನು ಆರೋಗ್ಯವಾಗಿಡಲು ಅವರ ಪ್ರಯತ್ನಗಳಿಗಾಗಿ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

March 16th, 03:00 pm

ಭಾರತವನ್ನು ಆರೋಗ್ಯವಾಗಿಡಲು ಎಲ್ಲಾ ಆರೋಗ್ಯ ಕಾರ್ಯಕರ್ತರು ಮಾಡಿದ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದ್ದಾರೆ. ರಾಷ್ಟ್ರೀಯ ಲಸಿಕಾ ದಿನದಂದು, ಪ್ರಧಾನಮಂತ್ರಿ ಅವರು ಆರೋಗ್ಯಕರ ಭಾರತವನ್ನು ನಿರ್ಮಿಸುವ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಜನರಿಗೆ ಲಸಿಕೆ ಹಾಕುವಲ್ಲಿ ಭಾರತದ ಪ್ರಗತಿಯನ್ನು ಸ್ಮರಿಸಿದರು.