ನವೆಂಬರ್ 15 ರಂದು ಆದಿವಾಸಿಗಳ ಗೌರವ ದಿನದಂದು ಪ್ರಧಾನಮಂತ್ರಿಯವರು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ
November 13th, 06:59 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 15 ರಂದು ಬುಡಕಟ್ಟು ಗೌರವ ದಿನವನ್ನು ಆಚರಿಸಲು ಬಿಹಾರದ ಜಮುಯಿಗೆ ಭೇಟಿ ನೀಡಲಿದ್ದಾರೆ. ಇದರೊಂದಿಗೆ ಧರ್ತಿ ಅಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಬಿರ್ಸಾ ಮುಂಡಾ ಅವರ ಗೌರವಾರ್ಥ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಪ್ರಧಾನಮಂತ್ರಿಯವರು ಅನಾವರಣಗೊಳಿಸಲಿದ್ದಾರೆ. ಅವರು ಬುಡಕಟ್ಟು ಸಮುದಾಯಗಳ ಉನ್ನತಿಗೆ ಮತ್ತು ಪ್ರದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ 6,640 ಕೋಟಿ ರೂಪಾಯಿಗಳ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.ತ್ರಿಪುರಾದ ಅಗರ್ತಲಾದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲೀಷ್ ಅನುವಾದ
December 18th, 04:40 pm
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ತ್ರಿಪುರಾ ರಾಜ್ಯಪಾಲರಾದ ಶ್ರೀ ಸತ್ಯದೇವ್ ನಾರಾಯಣ್ ಆರ್ಯಾ ಜೀ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಮಾಣಿಕ್ ಶಾ ಜೀ, ನನ್ನ ಸಹೋದ್ಯೋಗಿಗಳಾದ ಕೇಂದ್ರ ಸಂಪುಟ ಸಚಿವರಾದ ಪ್ರತಿಮಾ ಭೌಮಿಕ್ ಜೀ, ತ್ರಿಪುರಾ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ರತನ್ ಚಕ್ರವರ್ತಿ ಜೀ, ಉಪಮುಖ್ಯಮಂತ್ರಿ ಶ್ರೀ ಜಿಶ್ನು ದೇವ್ ವರ್ಮಾ ಜೀ, ನನ್ನ ಸ್ನೇಹಿತ ಮತ್ತು ಸಂಸದರಾದ ಶ್ರೀ ಬಿಪ್ಲಬ್ ದೇವ್ ಜೀ, ತ್ರಿಪುರಾ ಸರ್ಕಾರದ ಎಲ್ಲಾ ಗೌರವಾನ್ವಿತ ಎಲ್ಲಾ ಸಚಿವರೇ ಮತ್ತು ತ್ರಿಪುರಾದ ಪ್ರೀತಿಯ ಜನರೇ!ತ್ರಿಪುರಾದ ಅಗರ್ತಲಾದಲ್ಲಿ 4350 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಪ್ರಮುಖ ಉಪಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಪ್ರಧಾನಮಂತ್ರಿ
December 18th, 04:29 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 4350 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಪ್ರಮುಖ ಉಪಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸಮರ್ಪಣೆ ನೆರವೇರಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ ಮತ್ತು ಗ್ರಾಮೀಣ ಅಡಿಯಲ್ಲಿ ಫಲಾನುಭವಿಗಳಿಗೆ ಗೃಹಪ್ರವೇಶ ಕಾರ್ಯಕ್ರಮವನ್ನು ಪ್ರಾರಂಭಿಸುವುದು, ಅಗರ್ತಲಾ ಬೈಪಾಸ್ (ಖಯೇರ್ಪುರ್ - ಅಮ್ತಾಲಿ) ರಾಷ್ಟ್ರೀಯ ಹೆದ್ದಾರಿ -08 ರ ಅಗಲೀಕರಣಕ್ಕಾಗಿ ಸಂಪರ್ಕ ಯೋಜನೆಗಳು, ಪಿಎಂಜಿಎಸ್ವೈ 3 ರ ಅಡಿಯಲ್ಲಿ 230 ಕಿಲೋಮೀಟರ್ ಗಿಂತ ಹೆಚ್ಚು ಉದ್ದದ 32 ರಸ್ತೆಗಳಿಗೆ ಶಂಕುಸ್ಥಾಪನೆ ಮತ್ತು 540 ಕಿಲೋಮೀಟರ್ ದೂರವನ್ನು ಕ್ರಮಿಸುವ 112 ರಸ್ತೆಗಳ ಸುಧಾರಣಾ ಯೋಜನೆಗಳು ಈ ಯೋಜನೆಗಳಲ್ಲಿ ಸೇರಿವೆ. ಪ್ರಧಾನಮಂತ್ರಿಯವರು ಆನಂದನಗರದಲ್ಲಿ ರಾಜ್ಯ ಹೋಟೆಲ್ ಮ್ಯಾನೇಜ್ ಮೆಂಟ್ ಸಂಸ್ಥೆ ಮತ್ತು ಅಗರ್ತಲಾ ಸರ್ಕಾರಿ ದಂತ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿದರು.ಸಾಮಾಜಿಕ ಮಾಧ್ಯಮ ಕಾರ್ನರ್ 17 ಸೆಪ್ಟೆಂಬರ್ 2017
September 17th, 07:33 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !ಸರ್ದಾರ್ ಪಟೇಲ್ ಪ್ರಯತ್ನದಿಂದಾಗಿ 'ಏಕ್ ಭಾರತ್, ಶ್ರೇಷ್ಠ ಭಾರತ್' ಕನಸನ್ನು ನಾವು ಅರಿತುಕೊಂಡಿದ್ದೇವೆ : ಪ್ರಧಾನಿ ಮೋದಿ
September 17th, 12:26 pm
ಗುಜರಾತ್ ನ ದಭೋಯಿ ನಲ್ಲಿ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂಗಾಗಿ ಮೋದಿ ಇಂದು ಶಂಕುಸ್ಥಾಪನೆ ಮಾಡಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ವಿರುದ್ಧ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನಪಿಸುತ್ತೇವೆ ಎಂದು ಹೇಳಿದರು.ಸರ್ದಾರ್ ಸರೋವರ ಜಲಾಶಯವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ; ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಮಾಡಿದರು
September 17th, 12:25 pm
ದಬೋಯ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಅಂಗವಾಗಿ ಶಿಲಾನ್ಯಾಸ ನೆರವೇರಿಸಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತೇವೆ ಎಂದು ಹೇಳಿದರು.