ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳಿಂದ ದೇಶದ ಯುವಕರು ಪ್ರಯೋಜನ ಪಡೆದಿದ್ದಾರೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ
August 25th, 11:30 am
ನನ್ನ ಪ್ರಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ಸ್ವಾಗತ. ಇಂದು ಮತ್ತೊಮ್ಮೆ ನಾವು ದೇಶದ ಸಾಧನೆಗಳು ಮತ್ತು ದೇಶದ ಜನತೆಯ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡಲಿದ್ದೇವೆ. 21 ನೇ ಶತಮಾನದ ಭಾರತದಲ್ಲಿ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ, ಇದೇ ಆಗಸ್ಟ್ 23 ರಂದು, ನಾವೆಲ್ಲರೂ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದೆವು. ನೀವೆಲ್ಲರೂ ಈ ದಿನವನ್ನು ಆಚರಿಸಿರಬಹುದು ಎಂದು ನಾನು ಭಾವಿಸುತ್ತೇನೆ, ಮತ್ತೊಮ್ಮೆ ಚಂದ್ರಯಾನ-3 ರ ಯಶಸ್ಸನ್ನು ಆಚರಿಸಿರಬಹುದು. ಕಳೆದ ವರ್ಷ, ಇದೇ ದಿನದಂದು, ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿರುವ ಶಿವ-ಶಕ್ತಿ ಪಾಯಿಂಟ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು. ಭಾರತ ಈ ಅಮೋಘ ಸಾಧನೆ ಮಾಡಿದ ವಿಶ್ವದ ಮೊದಲ ದೇಶವಾಯಿತು.ಬಾಹ್ಯಾಕಾಶ ಜಗತ್ತಿನಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ: ಪ್ರಧಾನ ಮಂತ್ರಿ
August 23rd, 12:00 pm
ಬಾಹ್ಯಾಕಾಶ ಜಗತ್ತಿನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ದೇಶದ ಪ್ರಗತಿಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಎತ್ತಿ ತೋರಿಸಿದ್ದಾರೆ.ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನ: ದೇಶದ ಜನತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯ
August 23rd, 09:39 am
ಇಂದು ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.ಪೋಲೆಂಡ್ ನ ವಾರ್ಸಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
August 21st, 11:45 pm
ಈ ನೋಟ ನಿಜಕ್ಕೂ ಅದ್ಭುತ. ಮತ್ತು ನಿಮ್ಮ ಉತ್ಸಾಹವೂ ಅದ್ಭುತವಾಗಿದೆ. ನಾನು ಇಲ್ಲಿಗೆ ಕಾಲಿಟ್ಟ ಕ್ಷಣದಿಂದ, ನೀವು ದಣಿದಿಲ್ಲ. ನೀವೆಲ್ಲರೂ ಪೋಲೆಂಡ್ ನ ವಿವಿಧ ಭಾಗಗಳಿಂದ, ವಿಭಿನ್ನ ಭಾಷೆಗಳು, ಉಪಭಾಷೆಗಳು ಮತ್ತು ಪಾಕಪದ್ಧತಿಗಳ ಹಿನ್ನೆಲೆಯಿಂದ ಬಂದಿದ್ದೀರಿ. ಆದರೆ ಪ್ರತಿಯೊಬ್ಬರೂ ಭಾರತೀಯತೆಯ ಪ್ರಜ್ಞೆಯಿಂದ ಪರಸ್ಪರ ಸಂಪರ್ಕ ಹೊಂದಿದ್ದೀರಿ. ನೀವು ಇಲ್ಲಿ ನನಗೆ ಅದ್ಭುತ ಸ್ವಾಗತವನ್ನು ನೀಡಿದ್ದೀರಿ, ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮತ್ತು ಪೋಲೆಂಡ್ ಜನರಿಗೆ ಈ ಸ್ವಾಗತಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ.ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
August 21st, 11:30 pm
ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಪ್ರಸ್ತುತ ಜಾಗತಿಕ ಕಾರ್ಯತಂತ್ರವು ಬಲವಾದ ಅಂತರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸಲು ಮತ್ತು ಶಾಂತಿಯನ್ನು ಪೋಷಿಸಲು ಒತ್ತು ನೀಡುತ್ತದೆ ಎಂದು ಪ್ರಧಾನಿ ವ್ಯಕ್ತಪಡಿಸಿದರು. ಪ್ರತಿ ರಾಷ್ಟ್ರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಭಾರತದ ವಿಧಾನವು ಬದಲಾಗಿದೆ. ಜಾಗತಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಭಾರತದ ಐತಿಹಾಸಿಕ ಮೌಲ್ಯಗಳಾದ ಏಕತೆ ಮತ್ತು ಸಹಾನುಭೂತಿಯ ಮೇಲೆ ಗಮನ ಕೇಂದ್ರೀಕರಿಸಿದೆ.ಕೇರಳದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
February 27th, 12:24 pm
ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಜೀ, ನನ್ನ ಸಹೋದ್ಯೋಗಿ ಮತ್ತು ರಾಜ್ಯ ಸಚಿವ ಶ್ರೀ ವಿ. ಮುರಳೀಧರನ್, ಇಸ್ರೋ ಕುಟುಂಬದ ಎಲ್ಲರೂ ನಮಸ್ಕಾರ!ಕೇರಳದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಭೇಟಿ
February 27th, 12:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ ಎಸ್ ಸಿ)ಗೆ ಭೇಟಿ ನೀಡಿದ್ದರು ಮತ್ತು ಸುಮಾರು 1800 ಕೋಟಿ ರೂ. ಮೌಲ್ಯದ ಮೂರು ಪ್ರಮುಖ ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಯೋಜನೆಗಳಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎಸ್ ಎಲ್ ವಿ ಇಂಟಿಗ್ರೇಷನ್ ಫೆಸಿಲಿಟಿ (ಪಿಐಎಫ್ ); ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಹೊಸ 'ಸೆಮಿ-ಕ್ರಯೋಜೆನಿಕ್ಸ್ ಇಂಟಿಗ್ರೇಟೆಡ್ ಇಂಜಿನ್ ಮತ್ತು ಸ್ಟೇಜ್ ಟೆಸ್ಟ್ ಸೌಲಭ್ಯ'; ಮತ್ತು ತಿರುವನಂತಪುರಂನ ವಿಎಸ್ ಎಸ್ ಸಿಯಲ್ಲಿ ‘ಟ್ರೈಸಾನಿಕ್ ವಿಂಡ್ ಟನಲ್’ ಒಳಗೊಂಡಿವೆ. ಶ್ರೀ ನರೇಂದ್ರ ಮೋದಿ ಅವರು ಗಗನಯಾನ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ನಾಲ್ಕು ಗಗನಯಾತ್ರಿಗಳಿಗೆ 'ಗಗನಯಾತ್ರಿ ರೆಕ್ಕೆಗಳನ್ನು' ನೀಡಿದರು. ಆ ಗಗನಯಾತ್ರಿಗಳೆಂದರೆ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ.ʻಜಿ-20 ಯೂನಿವರ್ಸಿಟಿ ಕನೆಕ್ಟ್ʼ ಫಿನಾಲೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
September 26th, 04:12 pm
ದೇಶದ ವಿವಿಧ ವಿಶ್ವವಿದ್ಯಾಲಯಗಳೇ, ಉಪಕುಲಪತಿಗಳೇ, ಪ್ರಾಧ್ಯಾಪಕರೇ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೇ ಮತ್ತು ನನ್ನ ಯುವ ಸ್ನೇಹಿತರೇ! ʻಭಾರತ್ ಮಂಟಪಂʼನಲ್ಲಿ ಇದ್ದುದ್ದಕ್ಕಿಂತ ಹೆಚ್ಚಿನ ಜನರು ಇಂದು ಆನ್‌ಲೈನ್ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು 'ಜಿ -20 ಯೂನಿವರ್ಸಿಟಿ ಕನೆಕ್ಟ್' ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಎಲ್ಲಾ ಯುವಕರನ್ನು ಅಭಿನಂದಿಸುತ್ತೇನೆ.ಜಿ-20 ವಿಶ್ವವಿದ್ಯಾಲಯ ಸಂಪರ್ಕ ಅಂತಿಮ(ಯೂನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 26th, 04:11 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪದಲ್ಲಿಂದು ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಲ್ಪಿಸುವ ಅಂತಿಮ(ಯುನಿವರ್ಸಿಟಿ ಕನೆಕ್ಟ್ ಫಿನಾಲೆ) ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಿದರು. ಜಿ-20 ವಿಶ್ವವಿದ್ಯಾಲಯ ಸಂಪರ್ಕ ಉಪಕ್ರಮವನ್ನು ಭಾರತದ ಯುವಜನರಲ್ಲಿ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆಯ ಬಗ್ಗೆ ತಿಳುವಳಿಕೆ ಮೂಡಿಸಲು ಮತ್ತು ವಿವಿಧ ಜಿ-20 ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಅವರು ಈ ಸಂದರ್ಭದಲ್ಲಿ 4 ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಅವುಗಳೆಂದರೆ ದಿ ಗ್ರ್ಯಾಂಡ್ ಸಕ್ಸಸ್ ಆಫ್ ಜಿ-20 ಭಾರತ್ ಪ್ರೆಸಿಡೆನ್ಸಿ: ದೂರದೃಷ್ಟಿಯ ನಾಯಕತ್ವ, ಅಂತರ್ಗತ ಕಾರ್ಯವಿಧಾನ; ಭಾರತದ ಜಿ-20 ಪ್ರೆಸಿಡೆನ್ಸಿ: ವಸುಧೈವ ಕುಟುಂಬಕಂ; ಜಿ-20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮದ ಸಂಕಲನ; ಮತ್ತು ಜಿ-20ರಲ್ಲಿ ಭಾರತೀಯ ಸಂಸ್ಕೃತಿಯ ಪ್ರದರ್ಶನ.ಚಂದ್ರಯಾನ-3 ಮಿಷನ್ ನ ಐತಿಹಾಸಿಕ ಯಶಸ್ಸಿನ ಆಚರಣೆ ಕುರಿತು ಸಂಪುಟದ ನಿರ್ಣಯ
August 29th, 04:00 pm
ಚಂದ್ರಯಾನ-3 ಮಿಷನ್ ನ ಐತಿಹಾಸಿಕ ಯಶಸ್ಸಿನ ಆಚರಣೆಯಲ್ಲಿ ಕೇಂದ್ರ ಸಚಿವ ಸಂಪುಟವು ರಾಷ್ಟ್ರದೊಂದಿಗೆ ಜೊತೆಯಾಗುತ್ತದೆ. ನಮ್ಮ ವಿಜ್ಞಾನಿಗಳ ಸ್ಮರಣೀಯ ಸಾಧನೆಯನ್ನೂ ಸಚಿವ ಸಂಪುಟ ಶ್ಲಾಘಿಸುತ್ತದೆ. ಇದು ನಮ್ಮ ಬಾಹ್ಯಾಕಾಶ ಸಂಸ್ಥೆಯ ವಿಜಯ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಗತಿ ಮತ್ತು ಆರೋಹಣದ ಉಜ್ವಲ ಸಂಕೇತವಾಗಿದೆ. ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ವಾಗಿ ಆಚರಿಸುವುದನ್ನು ಸಂಪುಟವು ಸ್ವಾಗತಿಸುತ್ತದೆ.ಚಂದ್ರಯಾನ -3 ಮಿಷನ್ ಯಶಸ್ಸಿನ ಕುರಿತು ಇಸ್ರೊ ತಂಡವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
August 26th, 08:15 am
ಇಂದು, ನಿಮ್ಮೆಲ್ಲರ ನಡುವೆ ನಾನು ಹೊಸ ರೀತಿಯ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಬಹುಶಃ ಬಹಳ ಅಪರೂಪದ ಸಂದರ್ಭಗಳಲ್ಲಿ ಒಬ್ಬರು ಅಂತಹ ಸಂತೋಷವನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಒಬ್ಬರ ಮನಸ್ಸು ಸಂಪೂರ್ಣವಾಗಿ ಸಂತೋಷದಿಂದ ತುಂಬಿದಾಗ ಮತ್ತು ಅದರ ಪರಿಣಾಮವಾಗಿ ಅವನು ಪ್ರಕ್ಷುಬ್ಧನಾಗುವಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಈ ಬಾರಿ ನನಗೂ ಅದೇ ರೀತಿಯದ್ದೊಂದು ಸಂಭವಿಸಿತು, ಮತ್ತು ನಾನು ತುಂಬಾ ಪ್ರಕ್ಷುಬ್ಧನಾಗಿದ್ದೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ, ಮತ್ತು ನಂತರ ಗ್ರೀಸ್ ನಲ್ಲಿ ಒಂದು ಕಾರ್ಯಕ್ರಮವಿತ್ತು. ಆದ್ದರಿಂದ ನಾನು ಅಲ್ಲಿರಬೇಕಾಗಿತ್ತು ಆದರೆ ನನ್ನ ಮನಸ್ಸು ಸಂಪೂರ್ಣವಾಗಿ ನಿಮ್ಮ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಕೆಲವೊಮ್ಮೆ ನಾನು ನಿಮ್ಮೆಲ್ಲರಿಗೂ ಅನ್ಯಾಯ ಮಾಡುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನ ಚಡಪಡಿಕೆ ನಿಮಗೆ ಸಮಸ್ಯೆಯನ್ನು ಸೃಷ್ಟಿಸುತ್ತದೆ. ನೀವು ಮುಂಜಾನೆ ಇಲ್ಲಿಗೆ ಬರಬೇಕಾಯಿತು ಆದರೆ ನಾನು ಬಂದು ನಿಮಗೆ ನಮಸ್ಕರಿಸಲು ಬಯಸುತ್ತೇನೆ. ಇದು ನಿಮಗೆ ಅನಾನುಕೂಲವಾಗಿರಬೇಕು, ಆದರೆ ನಾನು ಭಾರತಕ್ಕೆ ಬಂದಿಳಿದ ಕೂಡಲೇ ನಿಮ್ಮನ್ನು ನೋಡಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ನಮಸ್ಕರಿಸಲು, ನಿಮ್ಮ ಕಠಿಣ ಪರಿಶ್ರಮಕ್ಕೆ ನಮಸ್ಕರಿಸಲು, ನಿಮ್ಮ ತಾಳ್ಮೆಗೆ ನಮಸ್ಕರಿಸಲು, ನಿಮ್ಮ ಉತ್ಸಾಹಕ್ಕೆ ವಂದಿಸಲು, ನಿಮ್ಮ ಚೈತನ್ಯಕ್ಕೆ ವಂದಿಸಲು ಮತ್ತು ನಿಮ್ಮ ಸ್ಫೂರ್ತಿಗೆ ವಂದಿಸಲು ಬಯಸುತ್ತೇನೆ. ನೀವು ದೇಶವನ್ನು ಯಾವ ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎಂಬುದು ಸಾಮಾನ್ಯ ಯಶಸ್ಸಲ್ಲ. ಇದು ಅನಂತ ಬಾಹ್ಯಾಕಾಶದಲ್ಲಿ ಭಾರತದ ವೈಜ್ಞಾನಿಕ ಸಾಮರ್ಥ್ಯದ ಘೋಷಣೆಯಾಗಿದೆ.ಚಂದ್ರಯಾನ-3ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ
August 26th, 07:49 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರೀಸ್ ನಿಂದ ಆಗಮಿಸಿದ ನಂತರ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISTRAC) ಗೆ ಭೇಟಿ ನೀಡಿದರು ಮತ್ತು ಚಂದ್ರಯಾನ-3 ರ ಯಶಸ್ಸಿನ ಕುರಿತು ಇಸ್ರೋ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರು ಚಂದ್ರಯಾನ-3 ಮಿಷನ್ ನಲ್ಲಿ ಭಾಗಿಯಾಗಿರುವ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರಿಗೆ ಚಂದ್ರಯಾನ-3 ಮಿಷನ್ ನಲ್ಲಿನ ಸಂಶೋಧನೆಗಳು ಮತ್ತು ಪ್ರಗತಿಯ ಬಗ್ಗೆ ವಿವರಿಸಲಾಯಿತು.