ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶಕ್ಕೆ ಪ್ರಧಾನಮಂತ್ರಿಯವರ ಭೇಟಿ

September 15th, 02:11 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10:45ರ ಸುಮಾರಿಗೆ ಪ್ರಧಾನಮಂತ್ರಿಯವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಅರಣ್ಯಕ್ಕೆ ಬಿಡುಗಡೆ ಮಾಡುವ ಕಾರ್ಯಕ್ರಮ ನಡೆಸಿಕೊಡುವರು. ಅದರ ನಂತರ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ, ಅವರು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು/ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಕರಹಾಲ್, ಶಿಯೋಪುರದಲ್ಲಿ ಸ್ವಸಹಾಯ ಸಂಘ ಸಮ್ಮೇಳನದಲ್ಲಿ ಭಾಗವಹಿಸುವರು.

ಆತ್ಮನಿರ್ಭರ್ ನಾರಿಶಕ್ತಿ ಸೆ ಸಂವಾದ' ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಭಾಷಣ

August 12th, 12:32 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ್ ನಾರಿಶಕ್ತಿ ಸೆ ಸಂವಾದ’ದಲ್ಲಿ ಭಾಗವಹಿಸಿದರು ಮತ್ತು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ -ಎನ್ಆರ್ಎಲ್ಎಂ) ಅಡಿಯಲ್ಲಿ ಬಡ್ತಿ ಪಡೆದ ಮಹಿಳಾ ಸ್ವ ಸಹಾಯ ಗುಂಪು (ಎಸ್ ಹೆಚ್ ಜಿ ) ಸದಸ್ಯರು/ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ, ದೇಶದಾದ್ಯಂತದ ಮಹಿಳಾ ಎಸ್‌ಹೆಚ್‌ಜಿ ಸದಸ್ಯರ ಯಶೋಗಾಥೆಗಳ ಸಂಗ್ರಹ ಮತ್ತು ಕೃಷಿ ಜೀವನೋಪಾಯಗಳ ಸಾರ್ವತ್ರೀಕರಣದ ಕೈಪಿಡಿಯನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು.

‘ಆತ್ಮನಿರ್ಭರ ನಾರಿಶಕ್ತಿ ಸೆ ಸಂವಾದ’ದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳೊಂದಿಗೆ ಪ್ರಧಾನಮಂತ್ರಿ ಸಂವಾದ

August 12th, 12:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆತ್ಮನಿರ್ಭರ ನಾರಿಶಕ್ತಿ ಸೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು(ಎಸ್ಎಚ್ ಜಿ) ಸದಸ್ಯರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಕಾರ್ಯಕ್ರಮದ ವೇಳೆ ದೇಶಾದ್ಯಂತ ಎಲ್ಲಾ ಭಾಗಗಳ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರ ಯಶೋಗಾಥೆಗಳನ್ನು ಒಳಗೊಂಡ ಸಂಕಲನ ಮತ್ತು ಕೃಷಿ ಜೀವನೋಪಾಯ ಸಾರ್ವತ್ರೀಕರಣ ಕುರಿತ ಕೈಪಿಡಿಯನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು.

ನಾಳೆ ‘ಆತ್ಮನಿರ್ಭರ್ ನಾರಿಶಕ್ತಿ ಸೆ ಸಂವಾದ್’; ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರ ಜತೆ ಪ್ರಧಾನ ಮಂತ್ರಿ ನೇರ ಸಂವಾದ

August 11th, 01:51 pm

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್|ರಾಜ್ ಖಾತೆ ಸಚಿವ ಶ್ರೀ ಗಿರಿರಾಜ್ ಸಿಂಗ್, ಆಹಾರ ಸಂಸ್ಕರಣೆ ಉದ್ಯಮಗಳ ಖಾತೆ ಸಚಿವ ಶ್ರೀ ಪುಷ್ಪಪತಿ ಕುಮಾರ್ ಪಾರಸ್, ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಶ್ರೀ ಫಗ್ಗಾನ್ ಸಿಂಗ್ ಕುಲಾಸ್ತೆ, ಪಂಚಾಯತ್|ರಾಜ್ ಖಾತೆ ಸಹಾಯಕ ಸಚಿವ ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್, ಆಹಾರ ಸಂಸ್ಕರಣೆ ಉದ್ಯಮಗಳ ಖಾತೆ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.