2023 ಆಗಸ್ಟ್ 10ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ(ಗೊತ್ತುವಳಿ)ಕ್ಕೆ ಪ್ರಧಾನ ಮಂತ್ರಿ ಉತ್ತರ

August 10th, 04:30 pm

ಕಳೆದ 3 ದಿನಗಳಿಂದ ಗೌರವಾನ್ವಿತ ಹಲವು ಹಿರಿಯ ಸದಸ್ಯರು ತಮ್ಮ ಆಲೋಚನೆ, ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಅವರ ಬಹುತೇಕ ಎಲ್ಲಾ ಅಭಿಪ್ರಾಯಗಳು ನನಗೆ ವಿವರವಾಗಿ ಮುಟ್ಟಿವೆ. ಕೆಲವು ಭಾಷಣಗಳನ್ನು ನಾನೇ ಕೇಳಿದ್ದೇನೆ. ಗೌರವಾನ್ವಿತ ಸಭಾಧ್ಯಕ್ಷರೇ, ಇಂದು, ನಮ್ಮ ಸರ್ಕಾರದ ಮೇಲೆ ಪದೇಪದೆ ಅಪಾರ ನಂಬಿಕೆ ತೋರಿಸುತ್ತಿರುವ ಈ ದೇಶದ ಕೋಟ್ಯಂತರ ನಾಗರಿಕರಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸಲು ನಾನು ಇಲ್ಲಿದ್ದೇನೆ. ಗೌರವಾನ್ವಿತ ಸ್ಪೀಕರ್, ದೇವರು ತುಂಬಾ ಕರುಣಾಮಯಿ ಎಂದು ಹೇಳಲಾಗುತ್ತದೆ. ಅವನು ತನ್ನ ಆಸೆಗಳನ್ನು ಯಾರಾದರೂ ಅಥವಾ ಇನ್ನೊಬ್ಬರ ಮೂಲಕ ಪೂರೈಸುತ್ತಾನೆ, ಯಾರನ್ನಾದರೂ ಮಾಧ್ಯಮವನ್ನಾಗಿ ಮಾಡುವುದು ದೇವರ ಇಚ್ಛೆಯಾಗಿದೆ. ದೇವರ ಇಚ್ಛೆಯಂತೆ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ. 2018ರಲ್ಲಿ ವಿರೋಧ ಪಕ್ಷದ ನನ್ನ ಸಹೋದ್ಯೋಗಿಗಳು ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ದೇವರ ಆಜ್ಞೆಯೂ ಇದೇ ಆಗಿತ್ತು. ಅವಿಶ್ವಾಸ ಗೊತ್ತುವಳಿಯು ನಮ್ಮ ಸರ್ಕಾರಕ್ಕೆ ಸದನದ ಪರೀಕ್ಷೆ ಅಲ್ಲ, ಬದಲಿಗೆ ಅದು ಅವರ ಸ್ವಂತ ಅಂತಸ್ತಿನ ಪರೀಕ್ಷೆ ಎಂದು ನಾನು ಆ ಸಮಯದಲ್ಲಿ ಹೇಳಿದ್ದೆ. ಆ ದಿನವೂ ಹೇಳಿದ್ದೆ. ಮತ್ತು ಅದು ಬದಲಾದಂತೆ, ಪ್ರತಿಪಕ್ಷಗಳು ಮತದಾನ ನಡೆದಾಗ ಅವರು ಹೊಂದಿದ್ದಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ನಾವು ಜನರ ಬಳಿಗೆ (ಮತ ಕೇಳಲು) ಹೋದಾಗ, ಜನರು ಪೂರ್ಣ ಬಲದಿಂದ ಅವರ ಮೇಲೆ ಅವಿಶ್ವಾಸ ಘೋಷಿಸಿದರು. ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತು. ಚುನಾವಣೆಯಲ್ಲಿ ಬಿಜೆಪಿಯೂ ಸಹ ಹೆಚ್ಚು ಸ್ಥಾನಗಳನ್ನು ಗಳಿಸಿತು. ಒಂದು ರೀತಿಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ನಮಗೆ ಮಂಗಳಕರವಾಗಿದ್ದು, 2024ರ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಬಿಜೆಪಿ ಜನರ ಆಶೀರ್ವಾದದೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಅಭೂತಪೂರ್ವ ಗೆಲುವು ಸಾಧಿಸಲು ನೀವೆಲ್ಲಾ ನಿರ್ಧರಿಸಿದ್ದೀರಿ ಎಂದು ನಾನು ಇಂದೇ ನೋಡುತ್ತಿದ್ದೇನೆ.

ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿಗೆ ಪ್ರಧಾನಿಗಳಿಂದ ಉತ್ತರ

August 10th, 04:00 pm

ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರದ ಮೇಲೆ ತಮ್ಮ ನಂಬಿಕೆಯನ್ನು ಪದೇ ಪದೇ ತೋರಿಸಿದ್ದಕ್ಕಾಗಿ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಂದಿದ್ದೇನೆ ಎಂದರು. 2018ರಲ್ಲಿ ಪ್ರತಿಪಕ್ಷಗಳು ಅವಿಶ್ವಾಸ ನಿಲುವಳಿ ತಂದಿದ್ದನ್ನು ಸ್ಮರಿಸಿದ ಪ್ರಧಾನಿಯವರು, ಇದು ಸರ್ಕಾರದ ಪಾಲಿಗೆ ವಿಶ್ವಾಸಮತ ನಿರ್ಣಯವಲ್ಲ, ಬದಲಿಗೆ ಸದನದಲ್ಲಿ ಅದನ್ನು ಮಂಡಿಸಿದವರ ಪಾಲಿಗೇ ಅವಿಶ್ವಾಸ ನಿರ್ಣಯ ಎಂದರು. ನಾವು 2019ರಲ್ಲಿ ಚುನಾವಣೆಗೆ ಹೋದಾಗ, ಪ್ರತಿಪಕ್ಷಗಳ ಮೇಲೆ ಜನರು ಅತ್ಯಂತ ಬಲವಾದ ಅವಿಶ್ವಾಸವನ್ನು ಪ್ರದರ್ಶಿಸಿದರು ಎಂದು ಪ್ರಧಾನಿ ಹೇಳಿದರು. ಎನ್‌ಡಿಎ ಮತ್ತು ಬಿಜೆಪಿ ಎರಡೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿವೆ ಎಂದು ಒತ್ತಿ ಹೇಳಿದರು. ಒಂದು ರೀತಿಯಲ್ಲಿ, ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಸರ್ಕಾರದ ಪಾಲಿಗೆ ಅದೃಷ್ಟ ಎಂದು ಪ್ರಧಾನಿ ಬಣ್ಣಿಸಿದರು. ಜನರ ಆಶೀರ್ವಾದದಿಂದ ಎನ್‌ಡಿಎ ಮತ್ತು ಬಿಜೆಪಿ ಎಲ್ಲಾ ದಾಖಲೆಗಳನ್ನು ಮುರಿಯುತ್ತವೆ ಮತ್ತು 2024ರಲ್ಲಿ ವಿಜಯಶಾಲಿಯಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜರ್ಮನಿಯ ಚಾನ್ಸಲರ್ ಅವರ ಭಾರತ ಭೇಟಿ ವೇಳೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ (ನವೆಂಬರ್ 1, 2019)

November 01st, 03:26 pm

ಜರ್ಮನಿಯ ಚಾನ್ಸಲರ್ ಅವರ ಭಾರತ ಭೇಟಿ ವೇಳೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ/ಒಪ್ಪಂದಗಳ ಪಟ್ಟಿ (ನವೆಂಬರ್ 1, 2019)

India-Bangladesh Joint Statement during Official Visit of Prime Minister of Bangladesh to India

October 05th, 06:40 pm

The two Prime Ministers recalled the shared bonds of history, culture, language, secularism and other unique commonalities that characterize the partnership.

Film and society are a reflection of each other: PM Modi

January 19th, 05:24 pm

PM Modi today inaugurated National Museum of Indian Cinema in Mumbai. Speaking at the event, the PM mentioned about the global impact of Indian cinema. The PM also assured the film fraternity that in order to curb piracy, the government was taking adequate steps to make amendments to the Cinematograph Act, 1952.

ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ.

January 19th, 05:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮುಂಬಯಿಯಲ್ಲಿ ಭಾರತೀಯ ಸಿನೆಮಾಕ್ಕಾಗಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಹೊಸ ಕಟ್ಟಡವನ್ನು ಉದ್ಘಾಟಿಸಿದರು.