ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ- ಆರ್ ಕೆ ವಿ ವೈ) ಮತ್ತು ಸ್ವಾವಲಂಬನೆಗಾಗಿ ಆಹಾರ ಭದ್ರತೆಯನ್ನು ಸಾಧಿಸಲು ಕೃಷೋನ್ನತಿ ಯೋಜನೆ (ಕೆವೈ) ಗೆ ಸಂಪುಟ ಅನುಮೋದನೆ ನೀಡಿದೆ

October 03rd, 09:18 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ಕೃಷಿ ಮತ್ತು ರೈತರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು (ಸಿ ಎಸ್ ಎಸ್) ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ- ಆರ್ ಕೆ ವಿ ವೈ) ಮತ್ತು ಕೃಷೋನ್ನತಿ ಯೋಜನೆ (ಕೆವೈ) ಎಂಬ ಎರಡು ಸಮೂಹ ಯೋಜನೆಗಳಾಗಿ ತರ್ಕಬದ್ಧಗೊಳಿಸುವ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ (ಡಿಎ ಮತ್ತು ಎಫ್ ಡಬ್ಲ್ಯು) ಪ್ರಸ್ತಾವನೆಯನ್ನು ಅನುಮೋದಿಸಿತು. ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಪಿಎಂ- ಆರ್ ಕೆ ವಿ ವೈ) ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ, ಕೃಷೋನ್ನತಿ ಯೋಜನೆಯು ಆಹಾರ ಭದ್ರತೆ ಮತ್ತು ಕೃಷಿ ಸ್ವಾವಲಂಬನೆಯನ್ನು ಸಾಧಿಸುತ್ತದೆ. ವಿವಿಧ ಘಟಕಗಳ ದಕ್ಷ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಘಟಕಗಳು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ.

2024-25 ರಿಂದ 2030-31ರವರೆಗೆ ಖಾದ್ಯ ತೈಲಗಳು-ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್‌ (ಎನ್‌ಎಂಇಒ-ಎಣ್ಣೆಕಾಳುಗಳು) ಗೆ ಸಂಪುಟದ ಅನುಮೋದನೆ

October 03rd, 09:06 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೇಶೀಯ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಖಾದ್ಯ ತೈಲಗಳಲ್ಲಿಸ್ವಾವಲಂಬನೆ (ಆತ್ಮನಿರ್ಭರ ಭಾರತ್‌) ಸಾಧಿಸುವ ಗುರಿಯನ್ನು ಹೊಂದಿರುವ ಹೆಗ್ಗುರುತು ಉಪಕ್ರಮವಾದ ಖಾದ್ಯ ತೈಲಗಳು - ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್‌ (ಎನ್‌.ಎಂ.ಇ.ಒ-ಎಣ್ಣೆಕಾಳುಗಳು)ಗೆ ತನ್ನ ಅನುಮೋದನೆ ನೀಡಿದೆ. ಈ ಮಿಷನ್‌ ಅನ್ನು 2024-25 ರಿಂದ 2030-31 ರವರೆಗೆ ಏಳು ವರ್ಷಗಳ ಅವಧಿಯಲ್ಲಿ10,103 ಕೋಟಿ ರೂ.ಗಳ ಹಣಕಾಸು ವೆಚ್ಚದೊಂದಿಗೆ ಜಾರಿಗೆ ತರಲಾಗುವುದು.