ನವದೆಹಲಿಯ ನಡೆದ ʻಭಾರತ್ ಟೆಕ್ಸ್-2024ʼ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಭಾಷಣದ ಕನ್ನಡ ಪಠ್ಯಾಂತರ
February 26th, 11:10 am
ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ ಅವರೇ ಮತ್ತು ದರ್ಶನ ಜರ್ದೋಶ್ ಅವರೇ, ವಿವಿಧ ದೇಶಗಳ ರಾಯಭಾರಿಗಳೇ, ಹಿರಿಯ ರಾಜತಾಂತ್ರಿಕರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳೇ, ಫ್ಯಾಷನ್ ಮತ್ತು ಜವಳಿ ಪ್ರಪಂಚದ ಎಲ್ಲಾ ಸಹವರ್ತಿಗಳೇ, ಯುವ ಉದ್ಯಮಿಗಳೇ, ವಿದ್ಯಾರ್ಥಿಗಳೇ, ನಮ್ಮ ನೇಕಾರರು ಮತ್ತು ಕುಶಲಕರ್ಮಿಗಳೇ ಹಾಗೂ ಮಹಿಳೆಯರೇ ಮತ್ತು ಮಹನೀಯರೇ! ಭಾರತ್ ಮಂಟಪದಲ್ಲಿ ʻಭಾರತ್ ಟೆಕ್ಸ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು! ಇಂದಿನ ಕಾರ್ಯಕ್ರಮವು ಖುದ್ದು ಬಹಳ ವಿಶೇಷವಾಗಿದೆ. ಇದು ಏಕೆ ವಿಶೇಷವೆಂದರೆ ಇದು ಭಾರತದ ಎರಡು ಅತಿದೊಡ್ಡ ಪ್ರದರ್ಶನ ಕೇಂದ್ರಗಳಾದ ʻಭಾರತ್ ಮಂಟಪʼ ಮತ್ತು ʻಯಶೋಭೂಮಿʼಯಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಇಂದು, 3,000ಕ್ಕೂ ಹೆಚ್ಚು ಪ್ರದರ್ಶಕರು... 100 ದೇಶಗಳಿಂದ ಸುಮಾರು 3,000 ಖರೀದಿದಾರರು... 40,000ಕ್ಕೂ ಹೆಚ್ಚು ವ್ಯಾಪಾರ ಸಂದರ್ಶಕರು... ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಈ ಕಾರ್ಯಕ್ರಮವು ಜವಳಿ ಪರಿಸರ ವ್ಯವಸ್ಥೆಯ ಎಲ್ಲಾ ಪಾಲುದಾರರನ್ನು ಮತ್ತು ಇಡೀ ಮೌಲ್ಯ ಸರಪಳಿಯನ್ನು ಒಗ್ಗೂಡಿಸಲು ವೇದಿಕೆಯನ್ನು ಒದಗಿಸುತ್ತಿದೆ.ನವದೆಹಲಿಯಲ್ಲಿ ಭಾರತ್ ಟೆಕ್ಸ್ 2024 ಉದ್ಘಾಟಿಸಿದ ಪ್ರಧಾನಿ
February 26th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ದೇಶದಲ್ಲಿ ಆಯೋಜಿಸಿರುವ ಅತಿದೊಡ್ಡ ಜಾಗತಿಕ ಜವಳಿ ಮೇಳ ಎಂದು ಹೆಸರಾಗಿರುವ ಭಾರತ್ ಟೆಕ್ಸ್ 2024 ಅನ್ನು ಉದ್ಘಾಟಿಸಿದರು. ಮೇಳದಲ್ಲಿ ಪ್ರದರ್ಶಿಸಿರುವ ಮಳಿಗೆಗಳಲ್ಲಿ ಓಡಾಡಿದ ಪ್ರಧಾನಿ ಅವರು ಅಲ್ಲಿನ ವಸ್ತುಗಳನ್ನು ವೀಕ್ಷಿಸಿದರು.ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
August 07th, 04:16 pm
ಕೆಲವು ದಿನಗಳ ಹಿಂದೆ ಭಾರತ ಮಂಟಪವನ್ನು ಅದ್ಧೂರಿಯಾಗಿ ಉದ್ಘಾಟಿಸಲಾಗಿತ್ತು. ನಿಮ್ಮಲ್ಲಿ ಕೆಲವರು ಮೊದಲು ಇಲ್ಲಿಗೆ ಬಂದು ನಿಮ್ಮ ಮಳಿಗೆಗಳು ಅಥವಾ ಟೆಂಟ್‌ಗಳನ್ನು ಹಾಕಿದ್ದಿರಿ. ಆದರೆ ಇಂದು ನೀವು ಇಲ್ಲಿ ಪರಿವರ್ತಿತ ರಾಷ್ಟ್ರವನ್ನು ನೋಡುತ್ತಿದ್ದೀರಿ. ಇಂದು ನಾವು ಈ ಭಾರತ ಮಂಟಪದಲ್ಲಿ ರಾಷ್ಟ್ರೀಯ ಕೈಮಗ್ಗ ದಿನ ಆಚರಿಸುತ್ತಿದ್ದೇವೆ. ಭಾರತ ಮಂಟಪದ ಈ ವೈಭವದಲ್ಲಿಯೂ ಭಾರತದ ಕೈಮಗ್ಗ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಾಚೀನ ಮತ್ತು ಆಧುನಿಕತೆಯ ಈ ಸಂಗಮವು ಇಂದಿನ ಭಾರತವನ್ನು ವ್ಯಾಖ್ಯಾನಿಸುತ್ತಿದೆ. ಇಂದಿನ ಭಾರತ ಕೇವಲ ಸ್ಥಳೀಯರ ಬಗ್ಗೆ ಧ್ವನಿಯೆತ್ತದೆ, ವಿಶ್ವವ್ಯಾಪಿಯಾಗಿಸಲು ಜಾಗತಿಕ ವೇದಿಕೆ ಒದಗಿಸುತ್ತಿದೆ. ಸ್ವಲ್ಪ ಸಮಯದ ಹಿಂದೆ, ನಮ್ಮ ಕೆಲವು ನೇಕಾರರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು. ದೇಶಾದ್ಯಂತ ಅನೇಕ ಕೈಮಗ್ಗ ಕ್ಲಸ್ಟರ್‌ಗಳಿಂದ ನಮ್ಮ ನೇಕಾರ ಸಹೋದರರು ಮತ್ತು ಸಹೋದರಿಯರು ನಮ್ಮೊಂದಿಗೆ ಇರಲು ದೂರದೂರುಗಳಿಂದ ಇಲ್ಲಿಗೆ ಬಂದಿದ್ದಾರೆ. ಈ ಭವ್ಯ ಸಮಾರಂಭದಲ್ಲಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ!ನವದೆಹಲಿಯಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ
August 07th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಪ್ರಗತಿ ಮೈದಾನದ `ಭಾರತ್ ಮಂಟಪ’ದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ, ʻರಾಷ್ಟ್ರೀಯ ಫ್ಯಾಶನ್ ಟೆಕ್ನಾಲಜಿ ಸಂಸ್ಥೆʼ ಅಭಿವೃದ್ಧಿಪಡಿಸಿದ 'ಭಾರತೀಯ ವಸ್ತ್ರ ಏವಮ್ ಶಿಲ್ಪ ಕೋಶ್ʼ ಎಂಬ ಜವಳಿ ಮತ್ತು ಕರಕುಶಲ ವಸ್ತುಗಳ ಭಂಡಾರ ಪೋರ್ಟಲ್‌ಗೆ ಅವರು ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನಕ್ಕೂ ಭೇಟಿ ನೀಡಿ, ನೇಕಾರರೊಂದಿಗೆ ಸಂವಾದ ನಡೆಸಿದರು.Revamping cloth industry in Kashi
March 02nd, 06:50 pm
“We have to transform India’s economy. On one hand manufacturing sector is to be enhanced, while on the other side, we have to make sure it directly benefits the youth. They must get jobs so that lives of poorest of the poor stands transformed and they come out of the poverty line. Enhancing their purchasing power would increase the number of manufacturers, manufacturing growth, employment opportunities and expand the market.” –Narendra ModiPM’s interaction through PRAGATI
February 17th, 05:30 pm