ನವದೆಹಲಿಯಲ್ಲಿ ಎನ್ ಸಿಸಿ ಮತ್ತು ಎನ್ ಎಸ್ ಎಸ್ ಕೆಡೆಟ್ ಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

January 24th, 03:26 pm

ನೀವು ಇಲ್ಲಿ ನೀಡಿದ ಸಾಂಸ್ಕೃತಿಕ ಪ್ರಸ್ತುತಿ ಹೆಮ್ಮೆಯ ಭಾವನೆಯನ್ನು ಹುಟ್ಟುಹಾಕುತ್ತಿದೆ. ನೀವು ರಾಣಿ ಲಕ್ಷ್ಮಿಬಾಯಿಯ ಐತಿಹಾಸಿಕ ವ್ಯಕ್ತಿತ್ವ ಮತ್ತು ಇತಿಹಾಸದ ಘಟನೆಗಳನ್ನು ಕೆಲವೇ ಕ್ಷಣಗಳಲ್ಲಿ ಜೀವಂತಗೊಳಿಸಿದ್ದೀರಿ. ನಾವೆಲ್ಲರೂ ಈ ಘಟನೆಗಳೊಂದಿಗೆ ಪರಿಚಿತರಾಗಿದ್ದೇವೆ, ಆದರೆ ನೀವು ಅದನ್ನು ಪ್ರಸ್ತುತಪಡಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿದೆ. ನೀವು ಗಣರಾಜ್ಯೋತ್ಸವದ ಮೆರವಣಿಗೆಯ ಭಾಗವಾಗಲಿದ್ದೀರಿ ಮತ್ತು ಈ ಬಾರಿ ಅದು ಎರಡು ಕಾರಣಗಳಿಗಾಗಿ ಇನ್ನಷ್ಟು ವಿಶೇಷವಾಗಿದೆ. ಇದು 75 ನೇ ಗಣರಾಜ್ಯೋತ್ಸವ, ಮತ್ತು ಎರಡನೆಯದಾಗಿ, ಮೊದಲ ಬಾರಿಗೆ, ಗಣರಾಜ್ಯೋತ್ಸವದ ಮೆರವಣಿಗೆಯನ್ನು ದೇಶದ 'ನಾರಿ ಶಕ್ತಿ' (ಮಹಿಳಾ ಶಕ್ತಿ) ಗೆ ಸಮರ್ಪಿಸಲಾಗಿದೆ. ಇಂದು, ನಾನು ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳನ್ನು ನೋಡುತ್ತಿದ್ದೇನೆ. ನೀವು ಇಲ್ಲಿಗೆ ಒಬ್ಬಂಟಿಯಾಗಿ ಬಂದಿಲ್ಲ; ನೀವೆಲ್ಲರೂ ನಿಮ್ಮ ರಾಜ್ಯಗಳ ಪರಿಮಳವನ್ನು, ವಿವಿಧ ಪದ್ಧತಿಗಳು ಮತ್ತು ಸಂಪ್ರದಾಯಗಳ ಅನುಭವಗಳನ್ನು ಮತ್ತು ನಿಮ್ಮ ಸಮಾಜಗಳ ಸಮೃದ್ಧ ಆಲೋಚನೆಗಳನ್ನು ತಂದಿದ್ದೀರಿ. ನಿಮ್ಮೆಲ್ಲರನ್ನೂ ಭೇಟಿಯಾಗುವುದು ಇಂದು ವಿಶೇಷ ಸಂದರ್ಭವಾಗಿದೆ. ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಇಂದು ಹೆಣ್ಣುಮಕ್ಕಳ ಧೈರ್ಯ, ಉತ್ಸಾಹ ಮತ್ತು ಸಾಧನೆಗಳನ್ನು ಆಚರಿಸುವ ದಿನ. ಹೆಣ್ಣುಮಕ್ಕಳಿಗೆ ಸಮಾಜ ಮತ್ತು ದೇಶವನ್ನು ಉತ್ತಮಗೊಳಿಸುವ ಸಾಮರ್ಥ್ಯವಿದೆ. ಇತಿಹಾಸದ ವಿವಿಧ ಯುಗಗಳಲ್ಲಿ, ಭಾರತದ ಹೆಣ್ಣುಮಕ್ಕಳು ತಮ್ಮ ಧೈರ್ಯಶಾಲಿ ಉದ್ದೇಶಗಳು ಮತ್ತು ಸಮರ್ಪಣೆಯಿಂದ ಅನೇಕ ದೊಡ್ಡ ಬದಲಾವಣೆಗಳಿಗೆ ಅಡಿಪಾಯ ಹಾಕಿದ್ದಾರೆ. ಸ್ವಲ್ಪ ಸಮಯದ ಹಿಂದೆ ನೀವು ನೀಡಿದ ಪ್ರಸ್ತುತಿಯಲ್ಲಿ ಈ ಭಾವನೆಯ ಒಂದು ನೋಟವಿತ್ತು.

ಪ್ರಧಾನಮಂತ್ರಿಯವರು ಎನ್ ಸಿಸಿ ಕೆಡೆಟ್ ಗಳು ಮತ್ತು ಎನ್ಎಸ್ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು

January 24th, 03:25 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎನ್ ಸಿಸಿ ಕೆಡೆಟ್ ಗಳು ಮತ್ತು ಎನ್ ಎಸ್ ಎಸ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಣಿ ಲಕ್ಷ್ಮಿ ಬಾಯಿಯವರ ಜೀವನವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ಇದು ಇಂದು ಭಾರತದ ಇತಿಹಾಸವನ್ನು ಜೀವಂತಗೊಳಿಸಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಂಡದ ಶ್ರಮವನ್ನು ಶ್ಲಾಘಿಸಿದ ಅವರು ಈಗ ಗಣರಾಜ್ಯೋತ್ಸವ ಪರೇಡ್ ನ ಭಾಗವಾಗಲಿದ್ದಾರೆ ಎಂದು ಹೇಳಿದರು. ಈ ಸಂದರ್ಭವು 75 ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಭಾರತದ ನಾರಿ ಶಕ್ತಿಗೆ ಇದು ಸಮರ್ಪಣೆ ಎನ್ನುವ ಎರಡು ಕಾರಣಗಳಿಂದ ವಿಶೇಷವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತದಾದ್ಯಂತದ ಭಾಗವಹಿಸುವ ಮಹಿಳೆಯರನ್ನು ಉಲ್ಲೇಖಿಸಿ, ಶ್ರೀ ಮೋದಿ ಅವರು ಇಲ್ಲಿ ಒಬ್ಬಂಟಿಯಾಗಿ ಬಂದಿಲ್ಲ ಜೊತೆಗೆ ತಮ್ಮ ರಾಜ್ಯಗಳ ಸತ್ವ, ಅವರ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಅವರ ಸಮಾಜಗಳ ಮುಂದಾಲೋಚನೆಯನ್ನು ತಂದಿದ್ದಾರೆ ಎಂದು ಹೇಳಿದರು. ಇಂದಿನ ಮತ್ತೊಂದು ವಿಶೇಷ ಸಂದರ್ಭವನ್ನು ಗಮನಿಸಿದ ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ (ರಾಷ್ಟ್ರೀಯ ಬಾಲಿಕಾ ದಿವಸ್) ಬಗ್ಗೆ ಪ್ರಸ್ತಾಪಿಸಿದರು, ಇದು ಅವರ ಧೈರ್ಯ, ದೃಢತೆ ಮತ್ತು ಸಾಧನೆಗಳ ಆಚರಣೆಯಾಗಿದೆ. ಭಾರತದ ಹೆಣ್ಣುಮಕ್ಕಳು ಒಳ್ಳೆಯದಕ್ಕಾಗಿ ಸಮಾಜವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದ ಪ್ರಧಾನಮಂತ್ರಿಯವರು ಇಂದಿನ ಸಾಂಸ್ಕೃತಿಕ ಪ್ರದರ್ಶನದಲ್ಲಿ ಕಂಡಂತೆ ವಿವಿಧ ಐತಿಹಾಸಿಕ ಕಾಲಘಟ್ಟಗಳಲ್ಲಿ ಸಮಾಜಕ್ಕೆ ಅಡಿಪಾಯವನ್ನು ಹಾಕುವಲ್ಲಿ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸಿದರು.

​​​​​​​ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಹೆಣ್ಣು ಮಕ್ಕಳ ಅದಮ್ಯ ಚೇತನ ಮತ್ತು ಸಾಧನೆಗಳಿಗೆ ಪ್ರಧಾನಿ ವಂದನೆ

January 24th, 09:19 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಹೆಣ್ಣು ಮಕ್ಕಳ ಅದಮ್ಯ ಚೇತನ ಮತ್ತು ಸಾಧನೆಗಳಿಗೆ ವಂದನೆ ಸಲ್ಲಿಸಿದ್ದಾರೆ. ಶ್ರೀ ಮೋದಿಯವರು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರತಿ ಹೆಣ್ಣು ಮಗುವಿನ ಸಾಮರ್ಥ್ಯವನ್ನು ಗುರುತಿಸಿದ್ದಾರೆ. ಕಳೆದ ದಶಕದಲ್ಲಿ ನಮ್ಮ ಸರ್ಕಾರವು ಪ್ರತಿ ಹೆಣ್ಣು ಮಗು ಕಲಿಯಲು, ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಅನೇಕ ಅವಕಾಶಗಳನ್ನು ನೀಡುವ ಪ್ರಯತ್ನವನ್ನು ನಿರಂತರವಾಗಿ ಮಾಡಿದೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದದಲ್ಲಿ ಪ್ರಧಾನಮಂತ್ರಿಯವರ ಭಾಷಣ

January 24th, 03:11 pm

Prime Minister Modi interacted with Pradhan Mantri Rashtriya Bal Puraskar awardees. He lauded that the children of India have shown their modern and scientific thinking towards vaccination programme. The PM also appealed to them to be an ambassador for Vocal for Local and lead the campaign of Aatmanirbhar Bharat.

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದ

January 24th, 11:53 am

Prime Minister Modi interacted with Pradhan Mantri Rashtriya Bal Puraskar awardees. He lauded that the children of India have shown their modern and scientific thinking towards vaccination programme. The PM also appealed to them to be an ambassador for Vocal for Local and lead the campaign of Aatmanirbhar Bharat.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ದೇಶದ ಹೆಣ್ಣು ಮಗಳಿಗೆ ವಂದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

January 24th, 01:26 pm

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ದೇಶದ ಹೆಣ್ಣು ಮಕ್ಕಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಂದಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಕಾರ್ನರ್ 24 ಜನವರಿ 2018

January 24th, 07:35 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಹೆಣ್ಣು ಮಕ್ಕಳ ಕೌಶಲ, ಶಕ್ತಿ ಮತ್ತು ದೃಢತೆಗೆ ನಮಿಸಿದ ಪ್ರಧಾನಿ

January 24th, 01:59 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು, ಹೆಣ್ಣು ಮಕ್ಕಳ ಕೌಶಲ, ಶಕ್ತಿ ಮತ್ತು ದೃಢತೆಗೆ ನಮನ ಸಲ್ಲಿಸಿದ್ದಾರೆ.

ಸೋಶಿಯಲ್ ಮೀಡಿಯಾ ಕಾರ್ನರ್ - ಜನವರಿ 24

January 24th, 07:09 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

ರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂದೇಶ

January 24th, 09:55 am

PM Narendra Modi today said, National Girl Child Day is a day to celebrate the exceptional achievements of the girl child, whose excellence in many fields makes us proud. It is imperative to reject discrimination against the girl child and ensure equal opportunities for the girl child.

PM salutes the strengths, skills and achievements of the girl child, on National Girl Child Day

January 24th, 01:27 pm



PM salutes the unparalleled accomplishments of the girl child,on National Girl Child Day

January 24th, 11:55 am

PM salutes the unparalleled accomplishments of the girl child,on National Girl Child Day