
ಆಪರೇಷನ್ ಸಿಂದೂರ ಕುರಿತ ವಿಶೇಷ ಚರ್ಚೆಯಲ್ಲಿ ಲೋಕಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 29th, 05:32 pm
ಈ ಅಧಿವೇಶನದ ಆರಂಭದಲ್ಲೇ ನಾನು ಮಾಧ್ಯಮ ಮಿತ್ರರೊಂದಿಗೆ ಮಾತನಾಡುವಾಗ, ಎಲ್ಲಾ ಸಂಸದರಿಗೂ ಒಂದು ಮನವಿ ಮಾಡಿದ್ದೆ. ಈ ಅಧಿವೇಶನವು ಭಾರತದ ವಿಜಯಗಳ ಆಚರಣೆಯಾಗಿದೆ ಎಂದು ನಾನು ಹೇಳಿದ್ದೆ. ಈ ಸಂಸತ್ತಿನ ಅಧಿವೇಶನವು ಭಾರತದ ಕೀರ್ತಿಯನ್ನು ಬಣ್ಣಿಸುವ ಅಧಿವೇಶನವಾಗಿದೆ.
ʻಆಪರೇಷನ್ ಸಿಂದೂರʼ ಕುರಿತ ವಿಶೇಷ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
July 29th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತದ ದಿಟ್ಟ, ಯಶಸ್ವಿ ಮತ್ತು ನಿರ್ಣಾಯಕ ಕಾರ್ಯಾಚರಣೆ 'ಆಪರೇಷನ್ ಸಿಂದೂರ' ಕುರಿತ ವಿಶೇಷ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಧಿವೇಶನದ ಆರಂಭದಲ್ಲಿ ಮಾಧ್ಯಮಗಳ ಜೊತೆಗಿನ ತಮ್ಮ ಸಂವಾದವನ್ನು ಸ್ಮರಿಸಿದರು, ಅಧಿವೇಶನವನ್ನು ಭಾರತದ ವಿಜಯಗಳ ಆಚರಣೆ ಮತ್ತು ಭಾರತದ ವೈಭವಕ್ಕೆ ಗೌರವ ಎಂದು ಪರಿಗಣಿಸುವಂತೆ ಎಲ್ಲಾ ಗೌರವಾನ್ವಿತ ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದಾಗಿ ಹೇಳಿದರು.
2025ರ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
July 21st, 10:30 am
ಮುಂಗಾರು ಎಂದರೆ ಹೊಸತನ ಮತ್ತು ಸೃಷ್ಟಿಯ ಸಂಕೇತ. ಇಲ್ಲಿಯವರೆಗೆ ಬಂದಿರುವ ವರದಿಗಳ ಪ್ರಕಾರ, ಇಡೀ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ವಲಯಕ್ಕೆ ಲಾಭವಾಗುವ ವಾತಾವರಣ ನಿರ್ಮಾಣವಾಗಿದೆ. ಮಳೆಯು ನಮ್ಮ ರೈತರ ಆರ್ಥಿಕತೆಗೆ ಮಾತ್ರವಲ್ಲದೆ, ದೇಶದ ಆರ್ಥಿಕತೆಗೂ, ಗ್ರಾಮೀಣ ಆರ್ಥಿಕತೆಗೂ ಮತ್ತು ಪ್ರತಿಯೊಂದು ಮನೆಯ ಆರ್ಥಿಕತೆಗೂ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಪಡೆದಿರುವ ಮಾಹಿತಿಯ ಪ್ರಕಾರ, ಈ ವರ್ಷ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವು ಕಳೆದ ಹತ್ತು ವರ್ಷಗಳ ದಾಖಲೆಗಿಂತ ಸುಮಾರು ಮೂರು ಪಟ್ಟು ಹೆಚ್ಚಿದೆ. ಇದು ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
July 21st, 09:54 am
ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ತಮ್ಮ ಹೇಳಿಕೆಗಳಲ್ಲಿ, ಅವರು ಭಯಾನಕ ಪಹಲ್ಗಾಮ್ ಹತ್ಯಾಕಾಂಡವನ್ನು ಪ್ರಸ್ತಾಪಿಸಿದರು ಮತ್ತು ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸುವಲ್ಲಿ ಭಾರತದ ರಾಜಕೀಯ ನಾಯಕತ್ವದ ಒಗ್ಗಟ್ಟಿನ ಧ್ವನಿಯನ್ನು ಶ್ಲಾಘಿಸಿದರು. ಡಿಜಿಟಲ್ ಇಂಡಿಯಾದ, ವಿಶೇಷವಾಗಿ ಯುಪಿಐನ ಜಾಗತಿಕ ಮನ್ನಣೆಯನ್ನು ಪ್ರಧಾನಿ ಗಮನಿಸಿದರು. ನಕ್ಸಲಿಸಂ ಮತ್ತು ಮಾವೋವಾದ ಕ್ಷೀಣಿಸುತ್ತಿದೆ ಎಂದು ಅವರು ದೃಢಪಡಿಸಿದರು ಮತ್ತು ಆಪರೇಷನ್ ಸಿಂಧೂರ್ನ ಯಶಸ್ಸನ್ನು ಸಹ ಶ್ಲಾಘಿಸಿದರು.ಹೀರೋಸ್ ಎಕ್ರೆ ಸ್ಮಾರಕದಲ್ಲಿ ನಮೀಬಿಯಾದ ಸಂಸ್ಥಾಪಕ ಪಿತಾಮಹ ಮತ್ತು ಮೊದಲ ರಾಷ್ಟ್ರಾಧ್ಯಕ್ಷ ಡಾ. ಸ್ಯಾಮ್ ನುಜೋಮಾ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
July 09th, 07:42 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀರೋಸ್ ಎಕ್ರೆ ಸ್ಮಾರಕದಲ್ಲಿ ನಮೀಬಿಯಾದ ಸಂಸ್ಥಾಪಕ ಪಿತಾಮಹ ಮತ್ತು ಪ್ರಥಮ ರಾಷ್ಟ್ರಾಧ್ಯಕ್ಷ ಡಾ. ಸ್ಯಾಮ್ ನುಜೋಮಾ ಅವರಿಗೆ ಗೌರವ ನಮನ ಸಲ್ಲಿಸಿದರು.ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
July 04th, 09:30 pm
ಈ ಐತಿಹಾಸಿಕ 'ರೆಡ್ ಹೌಸ್'ನಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾಗಿರುವುದು ನನಗೆ ದೊರೆತ ವಿನಮ್ರ ಗೌರವ. ಈ ಐತಿಹಾಸಿಕ ಕಟ್ಟಡವು ಟ್ರಿನಿಡಾಡ್ ಮತ್ತು ಟೊಬಾಗೋ ಜನರ ಸ್ವಾತಂತ್ರ್ಯ ಮತ್ತು ಘನತೆಗಾಗಿ ನಡೆದ ಹೋರಾಟ ಹಾಗೂ ತ್ಯಾಗಗಳಿಗೆ ಸಾಕ್ಷಿಯಾಗಿದೆ. ಕಳೆದ ಆರು ದಶಕಗಳಲ್ಲಿ ನೀವು ನ್ಯಾಯನಿಷ್ಠ, ಸರ್ವಸಮ್ಮತ ಹಾಗೂ ಸಮೃದ್ಧಿಯುತ ಪ್ರಜಾಪ್ರಭುತ್ವವನ್ನು ರೂಪಿಸುವಲ್ಲಿ, ಈ ಭವನವು ನಿಮ್ಮ ಪಯಣದ ದೃಢ ಹೆಗ್ಗುರುತಾಗಿ ನಿಂತಿದೆ.ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
July 04th, 09:00 pm
ಸೆನೆಟ್ ಅಧ್ಯಕ್ಷರಾದ ಗೌರವಾನ್ವಿತ ವೇಡ್ ಮಾರ್ಕ್ ಮತ್ತು ಸದನದ ಸ್ಪೀಕರ್ ಗೌರವಾನ್ವಿತ ಜಗದೇವ್ ಸಿಂಗ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದರು. ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನ ಮಂತ್ರಿ ಮೋದಿ ಅವರು, ಈ ಸಂದರ್ಭವು ಭಾರತ-ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು ಗುರುತಿಸಿದೆ ಎಂದರು.ಘಾನಾ ಗಣರಾಜ್ಯದ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಪಠ್ಯ
July 03rd, 03:45 pm
ಪ್ರಜಾಪ್ರಭುತ್ವ, ಘನತೆ ಮತ್ತು ದೃಢತೆಯ ಚೈತನ್ಯವನ್ನು ಹೊರಸೂಸುವ ಘಾನಾದಲ್ಲಿ ಇರುವುದು ಒಂದು ಸೌಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ, ನಾನು 140 ಕೋಟಿ ಭಾರತೀಯರ ಸದ್ಭಾವನೆ ಮತ್ತು ಶುಭಾಶಯಗಳನ್ನು ನನ್ನೊಂದಿಗೆ ತಂದಿದ್ದೇನೆ.ಘಾನಾ ಸಂಸತ್ತನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
July 03rd, 03:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘಾನಾ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ, ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಂಸತ್ತಿನ ಸ್ಪೀಕರ್ ಗೌರವಾನ್ವಿತ ಆಲ್ಬನ್ ಕಿಂಗ್ಸ್ಫೋರ್ಡ್ ಸುಮನಾ ಬಾಗ್ಬಿನ್ ಅವರು ಕರೆದಿದ್ದ ಈ ಅಧಿವೇಶನದಲ್ಲಿ ಸಂಸತ್ ಸದಸ್ಯರು, ಸರ್ಕಾರಿ ಅಧಿಕಾರಿಗಳು ಮತ್ತು ಎರಡೂ ರಾಷ್ಟ್ರಗಳ ಗಣ್ಯ ಅತಿಥಿಗಳು ಭಾಗವಹಿಸಿದ್ದರು. ಈ ಭಾಷಣವು ಭಾರತ-ಘಾನಾ ಸಂಬಂಧಗಳಲ್ಲಿ ಮಹತ್ವದ ಕ್ಷಣವನ್ನು ದಾಖಲಿಸಿತು, ಇದು ಎರಡೂ ದೇಶಗಳನ್ನು ಒಂದುಗೂಡಿಸುವ ಪರಸ್ಪರ ಗೌರವ ಮತ್ತು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.ನವದೆಹಲಿಯ ವಿಜ್ಞಾನ ಭವನದಲ್ಲಿ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 28th, 11:15 am
ಶ್ರವಣಬೆಳಗೊಳದ ಸ್ವಾಮಿ ಚಾರುಕೀರ್ತಿ ಜಿ ಮುಖ್ಯಸ್ಥರಾದ ಪರಮ ಶ್ರದ್ಧೆಯ ಆಚಾರ್ಯ ಶ್ರೀ ಪ್ರಜ್ಞಾಸಾಗರ ಮಹಾರಾಜ್ ಜಿ, ನನ್ನ ಸಹೋದ್ಯೋಗಿ ಗಜೇಂದ್ರ ಸಿಂಗ್ ಶೇಖಾವತ್ ಜಿ, ನನ್ನ ಸಹ ಸಂಸದ ನವೀನ್ ಜೈನ್ ಜಿ, ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್ ಅಧ್ಯಕ್ಷ ಪ್ರಿಯಾಂಕ್ ಜೈನ್ ಜಿ, ಕಾರ್ಯದರ್ಶಿ ಮಮತಾ ಜೈನ್ ಜಿ, ಇತರೆ ಗೌರವಾನ್ವಿತ ಗಣ್ಯರೆ, ಪೂಜ್ಯ ಸಾಧು ಸಂತರೆ, ಮಹಿಳೆಯರೆ ಮತ್ತು ಮಹನೀಯರೆ, ಜೈ ಜಿನೇಂದ್ರ!ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
June 28th, 11:01 am
ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಆಚಾರ್ಯ ಶ್ರೀ ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರ ಶತಮಾನೋತ್ಸವ ಆಚರಣೆಯ ಪಾವಿತ್ರ್ಯವನ್ನು ಪ್ರಸ್ತಾಪಿಸಿದ ಅವರು, ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಒಂದು ಮಹತ್ವದ ಸಂದರ್ಭಕ್ಕೆ ದೇಶ ಸಾಕ್ಷಿಯಾಗುತ್ತಿದೆ. ಪೂಜ್ಯ ಆಚಾರ್ಯರ ಅಮರ ಸ್ಫೂರ್ತಿಯಿಂದ ತುಂಬಿರುವ ಈ ಕಾರ್ಯಕ್ರಮವು ಅಸಾಧಾರಣ ಮತ್ತು ಉನ್ನತಿಗೇರಿಸುವ ವಾತಾವರಣವನ್ನು ಸೃಷ್ಟಿಸುತ್ತಿದೆ. ಇಲ್ಲಿ ನೆರೆದಿರುವ ಎಲ್ಲಾ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.ಶ್ರೀ ನಾರಾಯಣ ಗುರು ಮತ್ತು ಗಾಂಧೀಜಿ ನಡುವಿನ ಸಂವಾದದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 24th, 11:30 am
ಬ್ರಹ್ಮಋಷಿ ಸ್ವಾಮಿ ಸಚ್ಚಿದಾನಂದ ಜೀ, ಶ್ರೀಮಠ ಸ್ವಾಮಿ ಶುಭಾಂಗ-ನಂದಾ ಜೀ, ಸ್ವಾಮಿ ಶಾರದಾನಂದ ಜೀ, ಎಲ್ಲಾ ಪೂಜ್ಯ ಸಾಧು ಸಂತರೆ, ಸರ್ಕಾರದ ನನ್ನ ಸಹೋದ್ಯೋಗಿ ಶ್ರೀ ಜಾರ್ಜ್ ಕುರಿಯನ್ ಜೀ, ಸಂಸತ್ತಿನ ನನ್ನ ಸಹೋದ್ಯೋಗಿ ಶ್ರೀ ಅಡೂರ್ ಪ್ರಕಾಶ್ ಜೀ, ಇಲ್ಲಿರುವ ಇತರೆ ಎಲ್ಲ ಹಿರಿಯ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ.ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಅವರ ನಡುವಿನ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
June 24th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಭಾರತದ ಇಬ್ಬರು ಶ್ರೇಷ್ಠ ಆಧ್ಯಾತ್ಮಿಕ ಮತ್ತು ನೈತಿಕ ನಾಯಕರಾದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಐತಿಹಾಸಿಕ ಸಂವಾದದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದು ಈ ಸ್ಥಳವು ರಾಷ್ಟ್ರದ ಇತಿಹಾಸದಲ್ಲಿ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. ಇದು ನಮ್ಮ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕನ್ನು ನೀಡಿದ, ಸ್ವಾತಂತ್ರ್ಯದ ಉದ್ದೇಶಗಳು ಮತ್ತು ಸ್ವತಂತ್ರ ಭಾರತದ ಕನಸಿಗೆ ನಿರ್ದಿಷ್ಟ ಅರ್ಥವನ್ನು ನೀಡಿದ ಐತಿಹಾಸಿಕ ಘಟನೆಯಾಗಿದೆ ಎಂದು ಅವರು ಒತ್ತಿ ಹೇಳಿದರು. 100 ವರ್ಷಗಳ ಹಿಂದೆ ನಡೆದ ಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿಯವರ ಭೇಟಿಯು ಇಂದಿಗೂ ಸ್ಪೂರ್ತಿದಾಯಕ ಮತ್ತು ಪ್ರಸ್ತುತವಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಸಾಮೂಹಿಕ ಗುರಿಗಳಿಗೆ ಶಕ್ತಿಶಾಲಿ ಮೂಲವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ, ಅವರು ಶ್ರೀ ನಾರಾಯಣ ಗುರುಗಳ ಪಾದಗಳಿಗೆ ನಮನ ಸಲ್ಲಿಸಿದರು ಮತ್ತು ಮಹಾತ್ಮ ಗಾಂಧಿ ಅವರಿಗೆ ಗೌರವನಮನ ಸಲ್ಲಿಸಿದರು.ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ನಿಮಿತ್ತ ಪ್ರಧಾನಮಂತ್ರಿ ಗೌರವ ನಮನ
June 23rd, 09:02 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ನಿಮಿತ್ತ ಅವರಿಗೆ ಗೌರವ ನಮನ ಸಮರ್ಪಿಸಿದರು.ಭಾರತದ ಯುವಕರು ಜಾಗತಿಕವಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ, ನಮ್ಮ ಯುವ ಶಕ್ತಿಯು ಚೈತನ್ಯ, ನಾವೀನ್ಯತೆ ಮತ್ತು ದೃಢಸಂಕಲ್ಪವನ್ನು ಹೊಂದಿದೆ: ಪ್ರಧಾನಮಂತ್ರಿ
June 06th, 10:42 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಯುವಕರ ಜಾಗತಿಕ ಸಾಧನೆಗಳನ್ನು ಎತ್ತಿ ತೋರಿಸಿದರು, ಭಾರತದ ಯುವಕರು ಜಾಗತಿಕವಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು. ಅವುಗಳನ್ನು ಚೈತನ್ಯ, ನಾವೀನ್ಯತೆ ಮತ್ತು ದೃಢಸಂಕಲ್ಪದ ಸಂಕೇತಗಳೆಂದು ವಿವರಿಸಿದ ಅವರು, ಕಳೆದ 11 ವರ್ಷಗಳಲ್ಲಿ ಯುವ ಶಕ್ತಿಯ ಅಪ್ರತಿಮ ಶಕ್ತಿ ಮತ್ತು ದೃಢಸಂಕಲ್ಪವು ರಾಷ್ಟ್ರದ ಬೆಳವಣಿಗೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು.Our government is making the vision of women-led development the axis of development: PM Modi in Bhopal, Madhya Pradesh
May 31st, 11:00 am
PM Modi participated in the Devi Ahilyabai Mahila Sashaktikaran Mahasammelan and launched multiple projects in Bhopal, Madhya Pradesh. Quoting Devi Ahilyabai, he reiterated that true governance means serving the people and improving their lives. Emphasising the government’s commitment to increasing women's participation in policymaking, the PM highlighted the progressive steps taken over the past decade.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಶಕ್ತೀಕರಣ ಮಹಾಸಮ್ಮೇಳನ ಉದ್ದೇಶಿಸಿ ಭಾಷಣ ಮಾಡಿದರು
May 31st, 10:27 am
ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತೀಕರಣ ಮಹಾಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಿದರು. ಅವರು ಭೋಪಾಲ್ ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಮಾ ಭಾರತಿ'ಗೆ ಗೌರವ ಸಲ್ಲಿಸುವ ಮೂಲಕ ಮತ್ತು ಭಾರತದ ಮಹಿಳೆಯರ ಶಕ್ತಿಯನ್ನು ಅಂಗೀಕರಿಸುವ ಮೂಲಕ ಪ್ರಾರಂಭಿಸಿದರು. ಈ ಕಾರ್ಯಕ್ರಮವನ್ನು ಆಶೀರ್ವದಿಸಲು ಬಂದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ದೊಡ್ಡ ಗುಂಪಿಗೆ ಅವರು ಕೃತಜ್ಞತೆ ಸಲ್ಲಿಸಿದರು, ಅವರ ಉಪಸ್ಥಿತಿಯಿಂದ ತಮಗೆ ಗೌರವವಿದೆ ಎಂದು ಹೇಳಿದರು. ಇಂದು ಲೋಕಮಾತಾ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ, ಇದು 140 ಕೋಟಿ ಭಾರತೀಯರಿಗೆ ಸ್ಫೂರ್ತಿಯ ಸಂದರ್ಭ ಮತ್ತು ರಾಷ್ಟ್ರ ನಿರ್ಮಾಣದ ಸ್ಮರಣೀಯ ಪ್ರಯತ್ನಗಳಿಗೆ ಕೊಡುಗೆ ನೀಡುವ ಕ್ಷಣವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೇವಿ ಅಹಲ್ಯಾಬಾಯಿ ಅವರನ್ನು ಉಲ್ಲೇಖಿಸಿದ ಅವರು, ನಿಜವಾದ ಆಡಳಿತ ಎಂದರೆ ಜನರ ಸೇವೆ ಮತ್ತು ಅವರ ಜೀವನವನ್ನು ಸುಧಾರಿಸುವುದು ಎಂದು ಪುನರುಚ್ಚರಿಸಿದರು. ಇಂದಿನ ಕಾರ್ಯಕ್ರಮವು ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ ಮತ್ತು ಅವರ ಆದರ್ಶಗಳನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. ಇಂದೋರ್ ಮೆಟ್ರೋಗೆ ಚಾಲನೆ ನೀಡಿರುವುದನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು, ಜೊತೆಗೆ ದಾತಿಯಾ ಮತ್ತು ಸತ್ನಾಕ್ಕೆ ವಾಯು ಸಂಪರ್ಕವನ್ನು ಸೇರಿಸಲಾಯಿತು. ಈ ಯೋಜನೆಗಳು ಮಧ್ಯಪ್ರದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುತ್ತವೆ, ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಹಾಜರಿದ್ದ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದರು.ಗುಜರಾತ್ನ ದಾಹೋದ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
May 26th, 11:45 am
ಗುಜರಾತ್ನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ, ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಗುಜರಾತ್ ಸಚಿವ ಸಂಪುಟದ ನನ್ನ ಎಲ್ಲಾ ಸಹೋದ್ಯೋಗಿಗಳೆ, ಸಂಸತ್ ಸದಸ್ಯರೆ, ವಿಧಾನಸಭೆ ಸದಸ್ಯರೆ, ಇತರೆ ಗಣ್ಯರೆ, ದಾಹೋದ್ನ ನನ್ನ ಪ್ರೀತಿಯ ಸಹೋದರ ಸಹೋದರಿಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ದಾಹೋಡ್ ನಲ್ಲಿ 24,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿದರು ಮತ್ತು ಸಮರ್ಪಿಸಿದರು
May 26th, 11:40 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ದಾಹೋಡ್ ನಲ್ಲಿ 24,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ಮೇ 26 ವಿಶೇಷ ಮಹತ್ವವನ್ನು ಹೊಂದಿದೆ, ಏಕೆಂದರೆ ಇದು 2014 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವಾಗಿದೆ. ರಾಷ್ಟ್ರವನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಮಗೆ ವಹಿಸಿದ ಗುಜರಾತ್ ಜನತೆಯ ಅಚಲ ಬೆಂಬಲ ಮತ್ತು ಆಶೀರ್ವಾದವನ್ನು ಅವರು ಒಪ್ಪಿಕೊಂಡರು. ಈ ನಂಬಿಕೆ ಮತ್ತು ಪ್ರೋತ್ಸಾಹವು ಹಗಲು ರಾತ್ರಿ ದೇಶ ಸೇವೆ ಮಾಡುವ ಅವರ ಸಮರ್ಪಣೆಗೆ ಉತ್ತೇಜನ ನೀಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಹಲವು ವರ್ಷಗಳಿಂದ, ಭಾರತವು ಅಭೂತಪೂರ್ವ ಮತ್ತು ಊಹಿಸಲಾಗದ ನಿರ್ಧಾರಗಳನ್ನು ತೆಗೆದುಕೊಂಡಿದೆ, ದಶಕಗಳಷ್ಟು ಹಳೆಯ ನಿರ್ಬಂಧಗಳಿಂದ ಮುಕ್ತವಾಗಿದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ. ಇಂದು, ರಾಷ್ಟ್ರವು ಹತಾಶೆ ಮತ್ತು ಕತ್ತಲೆಯ ಯುಗದಿಂದ ಆತ್ಮವಿಶ್ವಾಸ ಮತ್ತು ಆಶಾವಾದದ ಹೊಸ ಯುಗಕ್ಕೆ ಹೊರಹೊಮ್ಮಿದೆ, ಎಂದು ಅವರು ಹೇಳಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 25.05.2025 ರಂದು ಮಾಡಿದ ‘ಮನ್ ಕಿ ಬಾತ್’ – 122ನೇ ಸಂಚಿಕೆಯ ಕನ್ನಡ ಅವತರಣಿಕೆ
May 25th, 11:30 am
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಸಂಪೂರ್ಣ ದೇಶ ಭಯೋತ್ಪಾದನೆಯ ವಿರುದ್ಧ ಒಗ್ಗೂಡಿ ನಿಂತಿದೆ. ಆಕ್ರೋಶದಿಂದ ಕೂಡಿದೆ ಮತ್ತು ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲೇಬೇಕು ಎಂಬುದು ಇಂದು ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಿದೆ. ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಸಮಯದಲ್ಲಿ ನಮ್ಮ ಸೇನಾ ಪಡೆಗಳು ಪ್ರದರ್ಶಿಸಿದ ಶೌರ್ಯ ಪ್ರತಿಯೊಬ್ಬ ಹಿಂದೂಸ್ತಾನಿಯನ್ನೂ ಹೆಮ್ಮೆಪಡುವಂತೆ ಮಾಡಿದೆ. ಗಡಿಯಾಚೆಗಿನ ಭಯೋತ್ಪಾದಕ ಅಡಗುತಾಣಗಳನ್ನು ನಮ್ಮ ಪಡೆಗಳು ನಿಖರತೆಯಿಂದ ಕರಾರುವಾಕ್ಕಾಗಿ ನಾಶಪಡಿಸಿರುವುದು ಅದ್ಭುತವಾಗಿದೆ. 'ಆಪರೇಷನ್ ಸಿಂಧೂರ್' ಪ್ರಪಂಚದಾದ್ಯಂತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಹೊಸ ಭರವಸೆ ನೀಡಿದೆ ಮತ್ತು ಉತ್ಸಾಹ ತುಂಬಿದೆ.