ಬ್ರಿಕ್ಸ್-ಆಫ್ರಿಕಾ ಔಟ್ ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದದಲ್ಲಿ ಪ್ರಧಾನಮಂತ್ರಿ
August 25th, 12:12 am
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 24 ಆಗಸ್ಟ್ 2023 ರಂದು ಜೋಹಾನ್ಸ್ಬರ್ಗ್ನಲ್ಲಿ ಬ್ರಿಕ್ಸ್-ಆಫ್ರಿಕಾ ಔಟ್ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಸಂವಾದದಲ್ಲಿ ಭಾಗವಹಿಸಿದರು.ʻಬ್ರಿಕ್ಸ್-ಆಫ್ರಿಕಾ ಔಟ್ರೀಚ್ʼ ಮತ್ತು ʻಬ್ರಿಕ್ಸ್ ಪ್ಲಸ್ʼ ಸಂವಾದದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಗಳ ಕನ್ನಡ ಅನುವಾದ
August 24th, 02:38 pm
ಆಫ್ರಿಕಾದ ನೆಲದಲ್ಲಿ, ನನ್ನೆಲ್ಲಾ ಸ್ನೇಹಿತರ ನಡುವೆ ಇಲ್ಲಿರುವುದು ನನಗೆ ಸಂತೋಷ ತಂದಿದೆ.ಮೈಸೂರಿನಲ್ಲಿ ನಡೆದ ʻಹುಲಿ ಯೋಜನೆಯ 50ನೇ ವರ್ಷಾಚರಣೆʼ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
April 09th, 01:00 pm
ಮೊದಲಿಗೆ, ನಾನು ಒಂದು ಗಂಟೆ ತಡವಾಗಿ ಬಂದಿದ್ದಕ್ಕಾಗಿ ನಿಮ್ಮೆಲ್ಲರ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಬೆಳಗ್ಗೆ ಆರು ಗಂಟೆಗೆ ಹೊರಟೆ; ಕಾಡಿಗೆ ಭೇಟಿ ನೀಡಿದ ನಂತರ ಸಮಯಕ್ಕೆ ಸರಿಯಾಗಿ ಹಿಂತಿರುಗುತ್ತೇನೆ ಎಂದು ನಾನು ಭಾವಿಸಿದ್ದೆ. ನಿಮ್ಮೆಲ್ಲರನ್ನೂ ಕಾಯುವಂತೆ ಮಾಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಹುಲಿಗಳ ಸಂಖ್ಯೆ ಏರಿಕೆ ದೃಷ್ಟಿಯಿಂದ ಇದು ಹೆಮ್ಮೆಯ ಕ್ಷಣವಾಗಿದೆ; ಈ ಕುಟುಂಬವು ವಿಸ್ತರಿಸುತ್ತಿದೆ. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುಲಿಗೆ ಗೌರವ ತೋರುವಂತೆ ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಧನ್ಯವಾದಗಳು!ಕರ್ನಾಟಕದ ಮೈಸೂರಿನಲ್ಲಿ 'ಹುಲಿ ಯೋಜನೆಯ 50ನೇ ವರ್ಷಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ
April 09th, 12:37 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 'ಹುಲಿ ಯೋಜನೆಯ 50ನೇ ವರ್ಷಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ʻಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಮೈತ್ರಿಕೂಟಕ್ಕೆ(ಐಬಿಸಿಎ) ಚಾಲನೆ ನೀಡಿದರು. ʻಹುಲಿ ಸಂರಕ್ಷಣೆಗೆ ಅಮೃತ ಕಾಲದ ದೃಷ್ಟಿಕೋನʼ ಶೀರ್ಷಿಕೆಯ ಹುಲಿ ಮೀಸಲು ಪ್ರದೇಶಗಳ ನಿರ್ವಹಣಾ ಪರಿಣಾಮಕಾರಿತ್ವ ಮೌಲ್ಯಮಾಪನದ 5ನೇ ಸುತ್ತಿನ ಸಾರಾಂಶ ವರದಿಯನ್ನು ಅವರು ಬಿಡುಗಡೆ ಮಾಡಿದರು. ದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಘೋಷಿಸಿದರು. ಜೊತೆಗೆ ʻಅಖಿಲ ಭಾರತ ಹುಲಿ ಅಂದಾಜುʼ(5 ನೇ ಸುತ್ತು) ಸಾರಾಂಶ ವರದಿಯನ್ನು ಬಿಡುಗಡೆ ಮಾಡಿದರು. ಹುಲಿ ಯೋಜನೆ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯವನ್ನೂ ಅವರು ಬಿಡುಗಡೆ ಮಾಡಿದರು.ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಚೀತಾ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ
September 17th, 11:51 am
ಕಾಲ ಚಕ್ರವು ನಮಗೆ ಗತಕಾಲದ ತಪ್ಪುಗಳನ್ನು ಸರಿಪಡಿಸಲು ಮತ್ತು ಹೊಸ ಭವಿಷ್ಯವನ್ನು ರೂಪಿಸಲು ಮಾನವತೆಯ ಮುಂದೆ ಇಂತಹ ಕೆಲವೇ ಅವಕಾಶಗಳನ್ನು ನೀಡುತ್ತದೆ. ಇಂದು ಅದೃಷ್ಟವಶಾತ್ ಅಂತಹ ಒಂದು ಕ್ಷಣವು ನಮ್ಮ ಮುಂದಿದೆ. ದಶಕಗಳ ಹಿಂದೆ, ಜೀವವೈವಿಧ್ಯತೆಯ ಹಳೆಯ ಕೊಂಡಿಯು ಕಡಿದುಹೋಗಿತ್ತು, ಅಳಿದುಹೋಗಿತ್ತು, ಇಂದು ನಾವು ಅದನ್ನು ಮರುಸಂಪರ್ಕಿಸುವ ಅವಕಾಶವನ್ನು ಪಡೆದಿದ್ದೇವೆ. ಇಂದು, ಚೀತಾಗಳು ಭಾರತೀಯ ಮಣ್ಣಿಗೆ ಮರಳಿವೆ. ಮತ್ತು ಈ ಚೀತಾಗಳ ಜೊತೆಗೆ, ಭಾರತದ ಪ್ರಕೃತಿ-ಪ್ರೀತಿಯ ಪ್ರಜ್ಞೆಯೂ ಸಹ ಪೂರ್ಣ ಬಲದಿಂದ ಜಾಗೃತವಾಗಿದೆ ಎಂದು ನಾನು ಹೇಳುತ್ತೇನೆ. ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.PM addresses the nation on release of wild Cheetahs in Kuno National Park in Madhya Pradesh
September 17th, 11:50 am
PM Modi released wild Cheetahs brought from Namibia at Kuno National Park under Project Cheetah, the world's first inter-continental large wild carnivore translocation project. PM Modi said that the cheetahs will help restore the grassland eco-system as well as improve the biopersity. The PM also made special mention of Namibia and its government with whose cooperation, the cheetahs have returned to Indian soil after decades.PM meets African leaders on last day of India-Africa Forum Summit
October 29th, 04:53 pm