ಬಿಹಾರದ ನಳಂದ ಪುರಾತನ ಅವಶೇಷಗಳ ತಾಣಗಳಿಗೆ ಪ್ರಧಾನಮಂತ್ರಿ ಭೇಟಿ
June 19th, 01:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ನಳಂದದಲ್ಲಿರುವ ಪುರಾತನ ಅವಶೇಷಗಳ ತಾಣಗಳಿಗೆ ಭೇಟಿ ನೀಡಿದರು. ಮೂಲ ನಳಂದಾ ವಿಶ್ವವಿದ್ಯಾಲಯವು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ನಳಂದದ ಪುರಾತನ ಅವಶೇಷಗಳನ್ನು 2016 ರಲ್ಲಿ ವಿಶ್ವಸಂಸ್ಥೆಯ ಪಾರಂಪರಿಕ ತಾಣ ಎಂದು ಘೋಷಿಸಲಾಗಿತ್ತು.ಬಿಹಾರದ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
June 19th, 10:31 am
ಬಿಹಾರದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಈ ರಾಜ್ಯಕ್ಕಾಗಿ ಪರಿಶ್ರಮ ಪಡುವ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ನಮ್ಮ ವಿದೇಶಾಂಗ ಸಚಿವ, ಶ್ರೀ ಎಸ್. ಜೈಶಂಕರ್ ಜಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಪಬಿತ್ರಾ ಜಿ, ವಿವಿಧ ದೇಶಗಳ ಗಣ್ಯರು ಮತ್ತು ರಾಯಭಾರಿಗಳೆ, ನಳಂದ ವಿಶ್ವವಿದ್ಯಾಲಯದ ಉಪ -ಕುಲಪತಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನನ್ನ ಎಲ್ಲಾ ಸ್ನೇಹಿತರೆ!ಬಿಹಾರದ ರಾಜ್ ಗಿರ್ ನಲ್ಲಿ ನಳಂದಾ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಮಂತ್ರಿ
June 19th, 10:30 am
ಬಿಹಾರದ ರಾಜ್ ಗಿರ್ ನ ನಳಂದಾ ವಿಶ್ವವಿದ್ಯಾಲಯದಲ್ಲಿ ಹೊಸ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ [ಇಎಎಸ್] ದೇಶಗಳೊಂದಿಗೆ ಈ ವಿಶ್ವವಿದ್ಯಾಲಯ ಸಹಯೋಗ ಹೊಂದಿದೆ. ಈ ಉದ್ಘಾಟನಾ ಸಮಾರಂಭದಲ್ಲಿ 17 ಪ್ರಮುಖ ದೇಶಗಳ ಮುಖ್ಯಸ್ಥರು ಒಳಗೊಂಡಂತೆ ಹಲವು ಪ್ರಮುಖ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಗಿಡ ನೆಟ್ಟು ನೀರೆರದರು.