ಲಾವೊ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಮಧ್ಯಂತರ ಭಾಷಣದ ಕನ್ನಡ ಅವತರಣಿಕೆ

October 11th, 08:15 am

ಭಾರತವು ಆಸಿಯಾನ್‌ ನ ಏಕತೆ ಮತ್ತು ಕೇಂದ್ರೀಕರಣವನ್ನು ಸತತವಾಗಿ ಬೆಂಬಲಿಸುತ್ತಿದೆ. ಭಾರತದ ಇಂಡೋ-ಪೆಸಿಫಿಕ್ ದೃಷ್ಟಿಕೋನ ಮತ್ತು ಕ್ವಾಡ್ ಸಹಕಾರಕ್ಕೆ ಆಸಿಯಾನ್ ಪ್ರಮುಖ ಆಧಾರವಾಗಿದೆ. ಭಾರತದ ಇಂಡೋ-ಪೆಸಿಫಿಕ್ ಓಷನ್ಸ್ ಇನಿಶಿಯೇಟಿವ್ ಮತ್ತು ಇಂಡೋ-ಪೆಸಿಫಿಕ್ ಮೇಲಿನ ಆಸಿಯಾನ್ ಔಟ್‌ಲುಕ್ ನಡುವೆ ಪ್ರಮುಖ ಸಾಮ್ಯತೆಗಳಿವೆ. ಸಂಪೂರ್ಣ ಪ್ರದೇಶದ ಸಮಗ್ರ ಶಾಂತಿ ಮತ್ತು ಪ್ರಗತಿಗೆ ಮುಕ್ತ, ತೆರೆದ, ಅಂತರ್ಗತ, ಸಮೃದ್ಧ ಮತ್ತು ನಿಯಮಗಳ-ಆಧಾರಿತ ಇಂಡೋ-ಪೆಸಿಫಿಕ್ ನಿರ್ಣಾಯಕಗಳು ಅಗತ್ಯವಾಗಿದೆ.

19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಗವಹಿಸುವಿಕೆ

October 11th, 08:10 am

ಪ್ರಧಾನಮಂತ್ರಿ ಅವರು 2024ರ ಅಕ್ಟೋಬರ್ 11ರಂದು ಲಾವೋ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ (ಇಎಎಸ್) ಭಾಗವಹಿಸಿದ್ದರು.

ಬಿಹಾರದ ಅರಾರಿಯಾ ಮತ್ತು ಮುಂಗರ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು

April 26th, 12:45 pm

ಬಿಹಾರದ ಅರಾರಿಯಾ ಮತ್ತು ಮುಂಗರ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ನಡೆಯುತ್ತಿರುವ ಚುನಾವಣೆಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸಿದರು.

Our govt is engaged in enhancing the capabilities of every poor, tribal, dalit & deprived person of country: PM

March 02nd, 03:00 pm

Prime Minister Narendra Modi dedicated to the nation and laid the foundation stone for multiple development projects worth Rs 21,400 crores in Aurangabad, Bihar. Addressing the gathering, the Prime Minister said that a new chapter of Bihar’s development is being written today on the land of Aurangabad which has given birth to many freedom fighters and great personalities such as Bihar Vibhuti Shri Anugrah Narayan.

ಬಿಹಾರದ ಔರಂಗಾಬಾದ್ ನಲ್ಲಿ ಸುಮಾರು 21,400 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

March 02nd, 02:30 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಔರಂಗಾಬಾದ್ ನಲ್ಲಿ ಇಂದು ಸುಮಾರು 21,400 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ರಸ್ತೆ, ರೈಲ್ವೆ ಮತ್ತು ನಮಾಮಿ ಗಂಗೆ ಮತ್ತಿತರ ಯೋಜನೆಗಳು ಸೇರಿವೆ. ಪ್ರಧಾನಮಂತ್ರಿ ಅವರು ಫೋಟೋ ಗ್ಯಾಲರಿಯಲ್ಲಿ ಓಡಾಡಿ ವೀಕ್ಷಿಸಿದರು.

​​​​​​​ತಿರುಚಿರಾಪಳ್ಳಿಯ ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ

January 02nd, 11:30 am

ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಆರ್. ಎನ್. ರವಿ ಅವರೇ, ತಮಿಳುನಾಡಿನ ಮುಖ್ಯಮಂತ್ರಿ ಶ್ರೀ ಎಂ.ಕೆ.ಸ್ಟಾಲಿನ್ ಅವರೇ, ಭಾರತಿದಾಸನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀ ಎಂ. ಸೆಲ್ವಂ ಅವರೇ, ನನ್ನ ಯುವ ಸ್ನೇಹಿತರೇ, ಶಿಕ್ಷಕ ಮಿತ್ರರೇ ಮತ್ತು ವಿಶ್ವವಿದ್ಯಾಲಯದ ಸಹಾಯಕ ಸಿಬ್ಬಂದಿಗಳೇ…

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

January 02nd, 10:59 am

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಭಾರತಿದಾಸನ್ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭವು 2024ರ ಹೊಸ ವರ್ಷದಲ್ಲಿ ನನ್ನ ಮೊದಲ ಸಾರ್ವಜನಿಕ ಸಂವಾದ ಆಗಿರುವುದರಿಂದ ಇದು ಅತ್ಯಂತ ವಿಶೇಷವಾಗಿದೆ. ಸುಂದರ ತಮಿಳುನಾಡಿನಲ್ಲಿ ಮತ್ತು ಯುವಜನರ ನಡುವೆ ಇರುವುದಕ್ಕೆ ನನಗೆ ಸಂತಸ ತಂದಿದೆ. ಭಾರತಿದಾಸನ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ಸಂದರ್ಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು, ಅವರ ಶಿಕ್ಷಕರು ಮತ್ತು ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ವರ್ಣವೇದ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

December 18th, 12:00 pm

ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಮಹೇಂದ್ರ ನಾಥ್ ಪಾಂಡೆ ಜೀ, ಉತ್ತರ ಪ್ರದೇಶ ಸರ್ಕಾರದ ಸಚಿವ ಅನಿಲ್ ಜೀ, ಸದ್ಗುರು ಆಚಾರ್ಯ ಪೂಜ್ಯ ಶ್ರೀ ಸ್ವತಂತ್ರ ದೇವ್ ಜೀ ಮಹಾರಾಜ್, ಪೂಜ್ಯ ಶ್ರೀ ವಿಜ್ಞಾನ್ ದೇವ್ ಜೀ ಮಹಾರಾಜ್, ಇತರ ಗಣ್ಯ ವ್ಯಕ್ತಿಗಳು, ದೇಶಾದ್ಯಂತ ನೆರೆದಿರುವ ಎಲ್ಲಾ ಭಕ್ತರು ಮತ್ತು ನನ್ನ ಕುಟುಂಬ ಸದಸ್ಯರೇ!

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸ್ವರ್ವೇದ್ ಮಹಾಮಂದಿರ ಉದ್ಘಾಟಿಸಿದ ಪ್ರಧಾನ ಮಂತ್ರಿ

December 18th, 11:30 am

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಇಂದು ಕಾಶಿಗೆ ಭೇಟಿ ನೀಡುತ್ತಿರುವ ಎರಡನೇ ದಿನವಾಗಿದೆ. ಕಾಶಿಯಲ್ಲಿ ಕಳೆದ ಪ್ರತಿ ಕ್ಷಣವೂ ಅಭೂತಪೂರ್ವ ಅನುಭವಗಳಿಂದ ತುಂಬಿದೆ. 2 ವರ್ಷಗಳ ಹಿಂದೆ ಅಖಿಲ ಭಾರತೀಯ ವಿಹಂಗಮ ಯೋಗ ಸಂಸ್ಥಾನದ ವಾರ್ಷಿಕ ಆಚರಣೆ ನೆನಪಿಸಿಕೊಂಡ ಪ್ರಧಾನಿ, ಈ ವರ್ಷದ ಶತಮಾನೋತ್ಸವ ಆಚರಣೆಯ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ವಿಹಂಗಮ ಯೋಗ ಸಾಧನವು 100 ವರ್ಷಗಳ ಅವಿಸ್ಮರಣೀಯ ಪ್ರಯಾಣ ಸಾಧಿಸಿದೆ. ಹಿಂದಿನ ಶತಮಾನದಲ್ಲಿ ಜ್ಞಾನ ಮತ್ತು ಯೋಗದ ಕಡೆಗೆ ಮಹರ್ಷಿ ಸದಾಫಲ್ ದೇವ್ ಜೀ ಅವರ ಕೊಡುಗೆಗಳನ್ನು ಸ್ಮರಿಸಿದರು. ದೈವಿಕ ಬೆಳಕು ವಿಶ್ವಾದ್ಯಂತ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ. ಈ ಸುಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು 25,000 ಕುಂಡಿಯ ಸ್ವರ್ವೇದ್ ಜ್ಞಾನ ಮಹಾಯಜ್ಞದ ಸಂಘಟನೆ ಗಮನಿಸಿ, ಮಹಾಯಜ್ಞದ ಪ್ರತಿ ಅರ್ಪಣೆಯೂ ವಿಕ್ಷಿತ್ ಭಾರತ್ ಸಂಕಲ್ಪವನ್ನು ಬಲಪಡಿಸುತ್ತದೆ. ಮಹರ್ಷಿ ಸದಾಫಲ್ ದೇವ್ ಜೀ ಅವರ ಮುಂದೆ ತಲೆಬಾಗಿ ತಮ್ಮ ದರ್ಶನ ಪಡೆದ ಎಲ್ಲಾ ಸಂತರಿಗೆ ನಮನ ಸಲ್ಲಿಸಿದರು.

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

June 30th, 11:20 am

ದೆಹಲಿ ವಿಶ್ವವಿದ್ಯಾಲಯದ ಈ ಸುವರ್ಣ ಸಮಾರಂಭದಲ್ಲಿ ಉಪಸ್ಥಿತರಿರುವ ನನ್ನ ಸಂಪುಟ ಸಹೋದ್ಯೋಗಿ, ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಜಿ, ದೆಹಲಿ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಯೋಗೇಶ್ ಸಿಂಗ್ ಜಿ, ಎಲ್ಲಾ ಪ್ರಾಧ್ಯಾಪಕರು, ಶಿಕ್ಷಕರು ಮತ್ತು ನನ್ನ ಎಲ್ಲಾ ಯುವ ಸ್ನೇಹಿತರೆ... ನೀವು ನನಗೆ ಈ ಆಹ್ವಾನ ನೀಡಿದಾಗ, ನಾನು ಇಲ್ಲಿಗೆ ಬರಬೇಕು ಎಂದು ಅದಕ್ಕೂ ಮೊದಲೇ ನಿರ್ಧರಿಸಿದ್ದೆ. ಇಲ್ಲಿಗೆ ಬರುವುದೆಂದರೆ ಪ್ರೀತಿ-ಪಾತ್ರರನ್ನು ಭೇಟಿಯಾಗಲು ಬಂದಂತೆ ಭಾಸವಾಗುತ್ತದೆ.

ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

June 30th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ದೆಹಲಿ ವಿಶ್ವವಿದ್ಯಾಲಯದ ಕ್ರೀಡಾ ಸಂಕೀರ್ಣದ ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನಲ್ಲಿ ನಿರ್ಮಾಣವಾಗಲಿರುವ ತಂತ್ರಜ್ಞಾನ ವಿಭಾಗ, ಕಂಪ್ಯೂಟರ್ ಕೇಂದ್ರ ಮತ್ತು ಅಕಾಡೆಮಿಕ್ ಬ್ಲಾಕ್ ಕಟ್ಟಡಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಶತಮಾನೋತ್ಸವ ಆಚರಣೆಗಳ ಸಂಕಲನವಾದ ಶತಮಾನೋತ್ಸವ ಸಂಪುಟವನ್ನು ಬಿಡುಗಡೆ ಮಾಡಿದರು. ಜೊತೆಗೆ, ʻದೆಹಲಿ ವಿಶ್ವವಿದ್ಯಾಲಯ ಮತ್ತು ಅದರ ಕಾಲೇಜುಗಳ ಲೋಗೋ ಪುಸ್ತಕ; ಹಾಗೂ ಹೌರಾ - ದೆಹಲಿ ವಿಶ್ವವಿದ್ಯಾಲಯದ 100 ವರ್ಷಗಳುʼ ಪುಸ್ತಕವನ್ನೂ ಲೋಕಾರ್ಪಣೆ ಮಾಡಿದರು.

ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನದ 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ..

December 24th, 11:10 am

ಪೂಜ್ಯ ಶಾಸ್ತ್ರೀಜಿ ಮಹಾರಾಜ್ ಶ್ರೀ ಧರ್ಮಜೀವನ್ ದಾಸ್ಜಿ ಸ್ವಾಮಿಗಳ ಪ್ರೇರಣೆಯಿಂದ, ಅವರ ಆಶೀರ್ವಾದದೊಂದಿಗೆ, ರಾಜ್‌ಕೋಟ್ ಗುರುಕುಲವು 75 ವರ್ಷಗಳನ್ನು ಪೂರೈಸುತ್ತಿದೆ. ರಾಜ್‌ಕೋಟ್ ಗುರುಕುಲದ 75 ವರ್ಷಗಳ ಈ ಪಯಣಕ್ಕೆ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಭಗವಾನ್ ಶ್ರೀ ಸ್ವಾಮಿ ನಾರಾಯಣ, ಅವರ ಹೆಸರನ್ನು ಸ್ಮರಿಸುವುದರ ಮೂಲಕ ಮಾತ್ರ ಹೊಸ ಪ್ರಜ್ಞೆಯು ಸಂವಹನಗೊಳ್ಳುತ್ತದೆ ಮತ್ತು ಇಂದು ನಿಮ್ಮೆಲ್ಲ ಸಂತರ ಸಹವಾಸದಲ್ಲಿ ಸ್ವಾಮಿನಾರಾಯಣನ ಹೆಸರನ್ನು ಸ್ಮರಿಸುವುದು ಒಂದು ಅದೃಷ್ಟದ ಅವಕಾಶವಾಗಿದೆ. ಈ ಐತಿಹಾಸಿಕ ಸಂಸ್ಥೆಯ ಮುಂಬರುವ ಭವಿಷ್ಯವು ಇನ್ನಷ್ಟು ಯಶಸ್ವಿಯಾಗಲಿದೆ . ಅದರ ಕೊಡುಗೆ ಇನ್ನಷ್ಟು ಅದ್ಭುತವಾಗಿರುತ್ತದೆ ಎಂಬ ವಿಶ್ವಾಸ ನನಗಿದೆ.

ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್‌ ಸಂಸ್ಥಾನದ ಅಮೃತ ಮಹೋತ್ಸವ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

December 24th, 11:00 am

ಪ್ರಧಾನ ಮಂತ್ರಿ. ಶ್ರೀ ನರೇಂದ್ರ ಮೋದಿ ಅವರು ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನದ ಅಮೃತ ಮಹೋತ್ಸವವನ್ನು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದರು.

ಬಿಹಾರ್ ಜ್ಞಾನ ಮತ್ತು ಗಂಗೆಯಿಂದ ಆಶೀರ್ವದಿಸಲ್ಪಟ್ಟಿದೆ : ಪ್ರಧಾನಿ ನರೇಂದ್ರ ಮೋದಿ

October 14th, 11:29 am

ಪಾಟ್ನಾ ವಿಶ್ವವಿದ್ಯಾನಿಲಯದಲ್ಲಿ ಇಂದು ಶತಮಾನೋತ್ಸವದ ಆಚರಣೆಯ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರವು 'ಜ್ಞಾನ' ಮತ್ತು'ಗಂಗಾ' ಎರಡರಿಂದ ಆಶೀರ್ವದಿಸಿದೆ ಎಂದು ಹೇಳಿದರು. ಪ್ರಧಾನಿ ಬೋಧನೆಯಲ್ಲಿ ನಾವೀನ್ಯತೆಗಳ ಬಗ್ಗೆ ಒತ್ತು ನೀಡಿದರು ಮತ್ತು ಸಾಂಪ್ರದಾಯಿಕ ಬೋಧನೆಯಿಂದ, ನಮ್ಮ ವಿಶ್ವವಿದ್ಯಾಲಯಗಳು ನವೀನ ಕಲಿಕೆಯ ಕಡೆಗೆ ಚಲಿಸಬೇಕಾಗುತ್ತದೆ, ಎಂದು ಹೇಳಿದರು

ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಿ ಭಾಷಣ

October 14th, 11:28 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. ಪಾಟ್ನಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದು ಮತ್ತು ವಿದ್ಯಾರ್ಥಿಗಳೊಂದಿಗೆ ಇರುವುದು ತಮ್ಮ ಸೌಭಾಗ್ಯ ಎಂದು ಪರಿಗಣಿಸುವುದಾಗಿ ಹೇಳಿದರು. “ನಾನು ಬಿಹಾರದ ಭೂಮಿಗೆ ನಮಿಸುತ್ತೇನೆ. ಈ ವಿಶ್ವವಿದ್ಯಾಲಯವು ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ವಿದ್ಯಾರ್ಥಿಗಳನ್ನು ಬೆಳೆಸಿದೆ,” ಎಂದು ಪ್ರಧಾನಿ ತಿಳಿಸಿದರು.

The More Mud You Spread, More the Lotus Will Bloom: PM Modi at Parivartan Rally in Nalanda, Bihar

October 25th, 02:00 pm



Our Vision for Bihar-Bijli, Pani, Sadak: PM Modi addresses Parivartan Rallies in Bihar

October 25th, 12:49 pm