PM Modi greets the people of Nagaland on their Statehood Day

December 01st, 12:28 pm

The Prime Minister Shri Narendra Modi today greeted the people of Nagaland on their Statehood Day. He remarked that Naga culture was known for its spirit of duty and compassion.

ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿ ಮಾಡಿದ ನಾಗಲ್ಯಾಂಡ್ ರಾಜ್ಯಪಾಲರು

August 29th, 12:41 pm

ನಾಗಾಲ್ಯಾಂಡ್ ರಾಜ್ಯಪಾಲರಾದ ಶ್ರೀ ಲಾ ಗಣೇಶನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು.

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ನಾಗಾಲ್ಯಾಂಡ್ ಮುಖ್ಯಮಂತ್ರಿ

August 09th, 02:23 pm

ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ನಾಗಾಲ್ಯಾಂಡ್ ಮುಖ್ಯಮಂತ್ರಿ ಶ್ರೀ ನೈಫಿಯು ರಿಯೊ ಭೇಟಿ ಮಾಡಿದರು.

The dreams of crores of women, poor and youth are Modi's resolve: PM Modi

February 18th, 01:00 pm

Addressing the BJP National Convention 2024 at Bharat Mandapam, Prime Minister Narendra Modi said, “Today is February 18th, and the youth who have reached the age of 18 in this era will vote in the country's 18th Lok Sabha election. In the next 100 days, you need to connect with every new voter, reach every beneficiary, every section, every community, and every person who believes in every religion. We need to gain the trust of everyone.

PM Modi addresses BJP Karyakartas during BJP National Convention 2024

February 18th, 12:30 pm

Addressing the BJP National Convention 2024 at Bharat Mandapam, Prime Minister Narendra Modi said, “Today is February 18th, and the youth who have reached the age of 18 in this era will vote in the country's 18th Lok Sabha election. In the next 100 days, you need to connect with every new voter, reach every beneficiary, every section, every community, and every person who believes in every religion. We need to gain the trust of everyone.

ನಾಗಾಲ್ಯಾಂಡ್ ಮುಖ್ಯಮಂತ್ರಿಯವರಿಂದ ಪ್ರಧಾನಮಂತ್ರಿ ಭೇಟಿ

December 19th, 02:17 pm

ನಾಗಾಲ್ಯಾಂಡ್ ಮುಖ್ಯಮಂತ್ರಿ ಶ್ರೀ ನೆಫಿಯು ರಿಯೊ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ನಾಗಾಲ್ಯಾಂಡ್ ಸಂಸ್ಥಾಪನಾ ದಿನಕ್ಕೆ ಶುಭ ಕೋರಿದ ಪ್ರಧಾನಿ

December 01st, 10:15 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ಜನತೆಗೆ ಶುಭ ಕೋರಿದ್ದಾರೆ.

2023 ಆಗಸ್ಟ್ 10ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ(ಗೊತ್ತುವಳಿ)ಕ್ಕೆ ಪ್ರಧಾನ ಮಂತ್ರಿ ಉತ್ತರ

August 10th, 04:30 pm

ಕಳೆದ 3 ದಿನಗಳಿಂದ ಗೌರವಾನ್ವಿತ ಹಲವು ಹಿರಿಯ ಸದಸ್ಯರು ತಮ್ಮ ಆಲೋಚನೆ, ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. ಅವರ ಬಹುತೇಕ ಎಲ್ಲಾ ಅಭಿಪ್ರಾಯಗಳು ನನಗೆ ವಿವರವಾಗಿ ಮುಟ್ಟಿವೆ. ಕೆಲವು ಭಾಷಣಗಳನ್ನು ನಾನೇ ಕೇಳಿದ್ದೇನೆ. ಗೌರವಾನ್ವಿತ ಸಭಾಧ್ಯಕ್ಷರೇ, ಇಂದು, ನಮ್ಮ ಸರ್ಕಾರದ ಮೇಲೆ ಪದೇಪದೆ ಅಪಾರ ನಂಬಿಕೆ ತೋರಿಸುತ್ತಿರುವ ಈ ದೇಶದ ಕೋಟ್ಯಂತರ ನಾಗರಿಕರಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸಲು ನಾನು ಇಲ್ಲಿದ್ದೇನೆ. ಗೌರವಾನ್ವಿತ ಸ್ಪೀಕರ್, ದೇವರು ತುಂಬಾ ಕರುಣಾಮಯಿ ಎಂದು ಹೇಳಲಾಗುತ್ತದೆ. ಅವನು ತನ್ನ ಆಸೆಗಳನ್ನು ಯಾರಾದರೂ ಅಥವಾ ಇನ್ನೊಬ್ಬರ ಮೂಲಕ ಪೂರೈಸುತ್ತಾನೆ, ಯಾರನ್ನಾದರೂ ಮಾಧ್ಯಮವನ್ನಾಗಿ ಮಾಡುವುದು ದೇವರ ಇಚ್ಛೆಯಾಗಿದೆ. ದೇವರ ಇಚ್ಛೆಯಂತೆ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ. 2018ರಲ್ಲಿ ವಿರೋಧ ಪಕ್ಷದ ನನ್ನ ಸಹೋದ್ಯೋಗಿಗಳು ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ ದೇವರ ಆಜ್ಞೆಯೂ ಇದೇ ಆಗಿತ್ತು. ಅವಿಶ್ವಾಸ ಗೊತ್ತುವಳಿಯು ನಮ್ಮ ಸರ್ಕಾರಕ್ಕೆ ಸದನದ ಪರೀಕ್ಷೆ ಅಲ್ಲ, ಬದಲಿಗೆ ಅದು ಅವರ ಸ್ವಂತ ಅಂತಸ್ತಿನ ಪರೀಕ್ಷೆ ಎಂದು ನಾನು ಆ ಸಮಯದಲ್ಲಿ ಹೇಳಿದ್ದೆ. ಆ ದಿನವೂ ಹೇಳಿದ್ದೆ. ಮತ್ತು ಅದು ಬದಲಾದಂತೆ, ಪ್ರತಿಪಕ್ಷಗಳು ಮತದಾನ ನಡೆದಾಗ ಅವರು ಹೊಂದಿದ್ದಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ನಾವು ಜನರ ಬಳಿಗೆ (ಮತ ಕೇಳಲು) ಹೋದಾಗ, ಜನರು ಪೂರ್ಣ ಬಲದಿಂದ ಅವರ ಮೇಲೆ ಅವಿಶ್ವಾಸ ಘೋಷಿಸಿದರು. ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತು. ಚುನಾವಣೆಯಲ್ಲಿ ಬಿಜೆಪಿಯೂ ಸಹ ಹೆಚ್ಚು ಸ್ಥಾನಗಳನ್ನು ಗಳಿಸಿತು. ಒಂದು ರೀತಿಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ನಮಗೆ ಮಂಗಳಕರವಾಗಿದ್ದು, 2024ರ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಬಿಜೆಪಿ ಜನರ ಆಶೀರ್ವಾದದೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಅಭೂತಪೂರ್ವ ಗೆಲುವು ಸಾಧಿಸಲು ನೀವೆಲ್ಲಾ ನಿರ್ಧರಿಸಿದ್ದೀರಿ ಎಂದು ನಾನು ಇಂದೇ ನೋಡುತ್ತಿದ್ದೇನೆ.

ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿಗೆ ಪ್ರಧಾನಿಗಳಿಂದ ಉತ್ತರ

August 10th, 04:00 pm

ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸರ್ಕಾರದ ಮೇಲೆ ತಮ್ಮ ನಂಬಿಕೆಯನ್ನು ಪದೇ ಪದೇ ತೋರಿಸಿದ್ದಕ್ಕಾಗಿ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಂದಿದ್ದೇನೆ ಎಂದರು. 2018ರಲ್ಲಿ ಪ್ರತಿಪಕ್ಷಗಳು ಅವಿಶ್ವಾಸ ನಿಲುವಳಿ ತಂದಿದ್ದನ್ನು ಸ್ಮರಿಸಿದ ಪ್ರಧಾನಿಯವರು, ಇದು ಸರ್ಕಾರದ ಪಾಲಿಗೆ ವಿಶ್ವಾಸಮತ ನಿರ್ಣಯವಲ್ಲ, ಬದಲಿಗೆ ಸದನದಲ್ಲಿ ಅದನ್ನು ಮಂಡಿಸಿದವರ ಪಾಲಿಗೇ ಅವಿಶ್ವಾಸ ನಿರ್ಣಯ ಎಂದರು. ನಾವು 2019ರಲ್ಲಿ ಚುನಾವಣೆಗೆ ಹೋದಾಗ, ಪ್ರತಿಪಕ್ಷಗಳ ಮೇಲೆ ಜನರು ಅತ್ಯಂತ ಬಲವಾದ ಅವಿಶ್ವಾಸವನ್ನು ಪ್ರದರ್ಶಿಸಿದರು ಎಂದು ಪ್ರಧಾನಿ ಹೇಳಿದರು. ಎನ್‌ಡಿಎ ಮತ್ತು ಬಿಜೆಪಿ ಎರಡೂ ಹೆಚ್ಚಿನ ಸ್ಥಾನಗಳನ್ನು ಗೆದ್ದಿವೆ ಎಂದು ಒತ್ತಿ ಹೇಳಿದರು. ಒಂದು ರೀತಿಯಲ್ಲಿ, ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಸರ್ಕಾರದ ಪಾಲಿಗೆ ಅದೃಷ್ಟ ಎಂದು ಪ್ರಧಾನಿ ಬಣ್ಣಿಸಿದರು. ಜನರ ಆಶೀರ್ವಾದದಿಂದ ಎನ್‌ಡಿಎ ಮತ್ತು ಬಿಜೆಪಿ ಎಲ್ಲಾ ದಾಖಲೆಗಳನ್ನು ಮುರಿಯುತ್ತವೆ ಮತ್ತು 2024ರಲ್ಲಿ ವಿಜಯಶಾಲಿಯಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಸ್. ಫಾಂಗ್ನಾನ್ ಕೊನ್ಯಾಕ್ ಅವರು ನಾಗಾಲ್ಯಾಂಡ್ ನ ಮೊದಲ ರಾಜ್ಯಸಭೆ ಸದಸ್ಯೆ ಉಪಾಧ್ಯಕ್ಷ ಸಮಿತಿಗೆ ಸೇರ್ಪಡೆಯಾಗಿರುವುದಕ್ಕೆ ಪ್ರಧಾನ ಮಂತ್ರಿ ಸಂತಸ

July 25th, 08:16 pm

ಕಳೆದ ವಾರ ರಾಜ್ಯಸಭೆ ಸಭಾಪತಿ ಜಗದೀಪ್ ಧಂಖರ್ ಅವರು ಉಪಾಧ್ಯಕ್ಷರ ಸಮಿತಿಗೆ ಎಸ್ ಫಾಂಗ್ನಾನ್ ಕೊನ್ಯಾಕ್ ಅವರನ್ನು ನಾಮನಿರ್ದೇಶನ ಮಾಡಿದರು. ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನಾಗಾಲ್ಯಾಂಡ್‌ ಮೂಲದ ಮೊದಲ ಸದಸ್ಯೆ ಎಸ್. ಫಾಂಗ್ನಾನ್ ಕೊನ್ಯಾಕ್ ಅವರಾಗಿದ್ದು ಅವರ ನಾಮನಿರ್ದೇಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ನಾಗಾಲ್ಯಾಂಡ್‌ನ ಸಂಪದ್ಭರಿತ ಸಾವಯವ ಉತ್ಪನ್ನಗಳನ್ನು ಕಂಡು ಸಂತಸವಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ

June 12th, 06:42 pm

ನಾಗಾಲ್ಯಾಂಡ್‌ನ ಸಮೃದ್ಧ ಸಂಪದ್ಭರಿತ ಸಾವಯವ ಉತ್ಪನ್ನಗಳು ಪ್ರಕೃತಿ ಮತ್ತು ಸಂಸ್ಕೃತಿಯ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸಾಂನ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

May 29th, 12:22 pm

ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ ಜೀ, ಮುಖ್ಯಮಂತ್ರಿ ಭಾಯ್ ಹಿಮಂತ ಬಿಸ್ವಾ ಶರ್ಮಾ ಜೀ, ಕೇಂದ್ರ ಸಚಿವ ಸಂಪುಟದ ಸದಸ್ಯರಾದ ಅಶ್ವಿನಿ ವೈಷ್ಣವ್ ಜೀ, ಸರ್ಬಾನಂದ ಸೋನೊವಾಲ್ ಜಿ, ರಾಮೇಶ್ವರ್ ತೆಲಿ ಜಿ, ನಿಸಿತ್ ಪ್ರಮಾಣಿಕ್ ಜಿ, ಜಾನ್ ಬಾರ್ಲಾ ಜೀ, ಇತರ ಎಲ್ಲ ಸಚಿವರು, ಸಂಸದರು, ಶಾಸಕರು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ!

ಗುವಾಹಟಿ ಮತ್ತು ʻನ್ಯೂ ಜಲ್‌ಪಾಯಿಗುರಿʼಯನ್ನು ಸಂಪರ್ಕಿಸುವ ಅಸ್ಸಾಂನ ಮೊದಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಹಸಿರು ನಿಶಾನೆ ತೋರಿದ ಪ್ರಧಾನಿ

May 29th, 12:21 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸಾಂನ ಚೊಚ್ಚಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼಗೆ ಹಸಿರು ನಿಶಾನೆ ತೋರಿದರು. ಈ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ರೈಲು ಗುವಾಹಟಿಯನ್ನು ʻನ್ಯೂ ಜಲ್‌ಪಾಯಿಗುರಿʼಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಪ್ರಯಾಣವು ಕೇವಲ 5 ಗಂಟೆ 30 ನಿಮಿಷ ಹಿಡಿಯುತ್ತದೆ. ಪ್ರಧಾನಮಂತ್ರಿಯವರು 182 ರೂಟ್ ಕಿಲೋಮೀಟರ್‌ಗಳ ಹೊಸ ವಿದ್ಯುದ್ದೀಕರಣಗೊಂಡ ವಿಭಾಗಗಳನ್ನು ಸೇವೆಗೆ ಸಮರ್ಪಿಸಿದರು ಜೊತೆಗೆ, ಅಸ್ಸಾಂನ ʻಲುಮ್‌ಡಿಂಗ್‌ʼನಲ್ಲಿ ಹೊಸದಾಗಿ ನಿರ್ಮಿಸಲಾದ ʻಡೆಮುʼ/ ʻಮೆಮುʼ ಶೆಡ್ ಅನ್ನು ಉದ್ಘಾಟಿಸಿದರು.

PM appreciates work done under Swachh Bharat Mission in Tuensang, Nagaland

April 17th, 10:06 am

The Prime Minister, Shri Narendra Modi has appreciated the work done under Swachh Bharat Mission in Tuensang, Nagaland.

ನಾಗಾಲ್ಯಾಂಡ್ ನ ವಾನ್ಸೋಯಿ ಗ್ರಾಮದ ಜನತೆಗೆ ಪ್ರಧಾನಮಂತ್ರಿ ಅಭಿನಂದನೆ

April 15th, 10:16 am

ಪ್ರಗತಿಪರ ಲಿಂಗತ್ವ ನೀತಿಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ನಾಗಾಲ್ಯಾಂಡ್ ನ ವಾನ್ಸೋಯ್ ಗ್ರಾಮದ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

We should increase efforts to improve the ease of justice for the common citizen through AI: PM Modi

April 14th, 03:00 pm

PM Modi addressed the Platinum Jubilee Celebrations of the Guwahati High Court, stating that the High Court had it's own heritage and identity. He also launched the Assam Cop app which would facilitate accused and vehicle searches from the CCTNS and VAHAN national register.

ಅಸ್ಸಾಂನ ಗುವಾಹಟಿಯ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದಲ್ಲಿ ಗುವಾಹಟಿ ಹೈಕೋರ್ಟ್ ನ ಅಮೃತ ಮಹೋತ್ಸವ ಆಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

April 14th, 02:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯ ಶ್ರೀಮಂತ ಶಂಕರದೇವ್ ಕಲಾಕ್ಷೇತ್ರದಲ್ಲಿ ಗುವಾಹಟಿ ಹೈಕೋರ್ಟ್ ನ ಅಮೃತ ಮಹೋತ್ಸವ ಆಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಅಸ್ಸಾಂ ಪೊಲೀಸರು ವಿನ್ಯಾಸಗೊಳಿಸಿದ 'ಅಸ್ಸಾಂ ಕಾಪ್' ಮೊಬೈಲ್ ಅಪ್ಲಿಕೇಷನ್ ಗೆ ಚಾಲನೆ ನೀಡಿದರು. ಅಪರಾಧ ಮತ್ತು ಕ್ರಿಮಿನಲ್ ಜಾಲ ಪತ್ತೆ ವ್ಯವಸ್ಥೆ (ಸಿಸಿಟಿಎನ್ಎಸ್) ಮತ್ತು ವಾಹನ್ ರಾಷ್ಟ್ರೀಯ ನೋಂದಣಿ ದತ್ತಾಂಶದಿಂದ ಆರೋಪಿಗಳು ಮತ್ತು ವಾಹನ ಶೋಧಕ್ಕೆ ಈ ಆಪ್ ಅನುಕೂಲ ಮಾಡಿಕೊಡುತ್ತದೆ.

ಏಪ್ರಿಲ್ 14ರಂದು ಅಸ್ಸಾಂಗೆ ಪ್ರಧಾನ ಮಂತ್ರಿ ಭೇಟಿ

April 12th, 09:45 am

ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಧಾನ ಮಂತ್ರಿ ಅವರು ಏಮ್ಸ್ ಗುವಾಹಟಿ ತಲುಪಿ, ಹೊಸದಾಗಿ ನಿರ್ಮಿಸಿರುವ ಕ್ಯಾಂಪಸ್ ಪರಿಶೀಲಿಸಲಿದ್ದಾರೆ. ತರುವಾಯ ಅವರು ಸಾರ್ವಜನಿಕ ಸಮಾರಂಭದಲ್ಲಿ, ಏಮ್ಸ್ ಗುವಾಹಟಿ ಮತ್ತು ಇತರೆ 3 ವೈದ್ಯಕೀಯ ಕಾಲೇಜುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಅಸ್ಸಾಂ ಅಡ್ವಾನ್ಸ್ಡ್ ಹೆಲ್ತ್ ಕೇರ್ ಇನ್ನೋವೇಶನ್ ಇನ್ ಸ್ಟಿಟ್ಯೂಟ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಂತರ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಕಾರ್ಡ್‌ಗಳನ್ನು ವಿತರಿಸುವ ಮೂಲಕ 'ಆಪ್ಕೆ ದ್ವಾರ ಆಯುಷ್ಮಾನ್' ಅಭಿಯಾನ ಪ್ರಾರಂಭಿಸಲಿದ್ದಾರೆ.

Naga culture is synonymous with vibrancy, valour and respect towards nature: PM

April 06th, 11:24 am

Responding to the tweet thread by PHED and Cooperation Minister in Government of Nagaland, Shri Jacob Zhimomi, the Prime Minister said A good thread on the spectacular Naga culture on display during one of the G20 programmes. Naga culture is synonymous with vibrancy, valour and respect towards nature.

'ಏಕ್ ಭಾರತ್, ಶ್ರೇಷ್ಠ ಭಾರತ'ದ ಮನೋಭಾವವು ನಮ್ಮ ರಾಷ್ಟ್ರವನ್ನು ಬಲಪಡಿಸುತ್ತದೆ: 'ಮನ್ ಕಿ ಬಾತ್' ಸಂದರ್ಭದಲ್ಲಿ ಪ್ರಧಾನಿ ಮೋದಿ

March 26th, 11:00 am

ನನ್ನ ಪ್ರಿಯ ದೇಶಬಾಂಧವರೆ. ಮನದ ಮಾತಿನಲ್ಲಿ ಬೇರೆಯವರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂಥ ಸಾವಿರಾರು ಜನರ ಬಗ್ಗೆ ಚರ್ಚಿಸಿದ್ದೇವೆ. ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಪೂರ್ಣ ಪಿಂಚಣಿಯನ್ನೇ ಮುಡಿಪಾಗಿಟ್ಟವರು ಹಲವರಿದ್ದರೆ, ಇನ್ನೂ ಎಷ್ಟೋ ಜನರು ತಮ್ಮ ಜೀವನವದ ಸಂಪೂರ್ಣ ಗಳಿಕೆಯನ್ನು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಸೇವೆಗೆ ಸಮರ್ಪಿಸಿಬಿಡುತ್ತಾರೆ. ನಮ್ಮ ದೇಶದಲ್ಲಿ ಪರಮಾರ್ಥವನ್ನು ಎಷ್ಟು ಉತ್ತುಂಗದಲ್ಲಿರಿಸಿದ್ದಾರೆಂದರೆ ಬೇರೆಯವರ ಸುಖಕ್ಕಾಗಿ ತಮ್ಮ ಸರ್ವಸ್ವವನ್ನೂ ದಾನ ಮಾಡಲು ಹಿಂಜರಿಯುವುದಿಲ್ಲ. ಹಾಗಾಗಿ ಬಾಲ್ಯದಿಂದಲೂ ನಮಗೆ ಶಿಬಿ ಮತ್ತು ದಧೀಚಿಯಂತಹ ದೇಹ ದಾನ ಮಾಡಿದವರ ಕಥೆಗಳನ್ನು ಹೇಳುತ್ತಾರೆ.