ರಾಜಸ್ಥಾನದ ಜೈಪುರದಲ್ಲಿ “ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ ಮೆಂಟ್ ಸಮ್ಮಿಟ್ 2024”ರ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 09th, 11:00 am
ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಹರಿಭಾವು ಬಗಡೆ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಜಿ ಶರ್ಮಾ, ರಾಜಸ್ಥಾನ ಸರ್ಕಾರದ ಸಚಿವರೆ, ಸಂಸದರೆ, ವಿಧಾನಸಭೆ ಸದಸ್ಯರೆ, ಉದ್ಯಮ ಸಹೋದ್ಯೋಗಿಗಳೆ, ವಿವಿಧ ರಾಯಭಾರಿಗಳೆ, ರಾಯಭಾರಿ ಪ್ರತಿನಿಧಿಗಳೆ, ಇತರೆ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ,ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 09th, 10:34 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೈಪುರದ ಜೈಪುರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ (ಜೆಇಸಿಸಿ) ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆ 2024 ಮತ್ತು ರಾಜಸ್ಥಾನ ಗ್ಲೋಬಲ್ ಬಿಸಿನೆಸ್ ಎಕ್ಸ್ ಪೋವನ್ನು ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಜಸ್ಥಾನದ ಯಶಸ್ಸಿನ ಪಯಣದಲ್ಲಿ ಇಂದು ಮತ್ತೊಂದು ವಿಶೇಷ ದಿನವಾಗಿದೆ ಎಂದರು. ಪಿಂಕ್ ಸಿಟಿ ಜೈಪುರದಲ್ಲಿ ನಡೆಯುತ್ತಿರುವ ರೈಸಿಂಗ್ ರಾಜಸ್ಥಾನ್ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2024ಕ್ಕೆ ಆಗಮಿಸಿರುವ ಎಲ್ಲ ಉದ್ಯಮ ಮತ್ತು ವಾಣಿಜ್ಯ ಮುಖಂಡರು, ಹೂಡಿಕೆದಾರರು, ಪ್ರತಿನಿಧಿಗಳನ್ನು ಅವರು ಅಭಿನಂದಿಸಿದರು. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ರಾಜಸ್ಥಾನ ಸರ್ಕಾರವನ್ನೂ ಅಭಿನಂದಿಸಿದರು.ಡಿಸೆಂಬರ್ 9 ರಂದು ರಾಜಸ್ಥಾನ ಮತ್ತು ಹರಿಯಾಣಕ್ಕೆ ಪ್ರಧಾನಮಂತ್ರಿ ಭೇಟಿ
December 08th, 09:46 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 9 ರಂದು ರಾಜಸ್ಥಾನ ಮತ್ತು ಹರಿಯಾಣಕ್ಕೆ ಭೇಟಿ ನೀಡಲಿದ್ದಾರೆ. ಅವರು ಜೈಪುರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಬೆಳಿಗ್ಗೆ 10:30 ರ ಸುಮಾರಿಗೆ ಜೈಪುರ ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ (ಜೆಇಸಿಸಿ) ನಲ್ಲಿ ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ 2024 ಅನ್ನು ಉದ್ಘಾಟಿಸಲಿದ್ದಾರೆ. ನಂತರ, ಪ್ರಧಾನಮಂತ್ರಿಯವರು ಪಾಣಿಪತ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 2 ಗಂಟೆಗೆ ಅವರು ಎಲ್‌ಐಸಿಯ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಮತ್ತು ಮಹಾರಾಣಾ ಪ್ರತಾಪ್ ತೋಟಗಾರಿಕಾ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ನ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.ರೋಜ್ ಗಾರ್ ಮೇಳದ ಅಡಿಯಲ್ಲಿ 51,000+ ನೇಮಕಾತಿ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
October 29th, 11:00 am
ದೇಶದ ವಿವಿಧ ಭಾಗಗಳಿಂದ ನಮ್ಮ ಜೊತೆಗೆ ಸೇರಿರುವ ನನ್ನ ಸಂಪುಟ ಸಹೋದ್ಯೋಗಿಗಳು, ಸಂಸತ್ ಸದಸ್ಯರು, ವಿಧಾನಸಭೆಗಳ ಸದಸ್ಯರು, ರಾಷ್ಟ್ರದ ಯುವ ಸ್ನೇಹಿತರು, ಮಹಿಳೆಯರೇ ಮತ್ತು ಮಹನೀಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು
October 29th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51,000 ಕ್ಕೂ ಹೆಚ್ಚು ಯುವಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಉದ್ಯೋಗ ಮೇಳ ಬಿಂಬಿಸುತ್ತದೆ. ಇದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ಮೂಲಕ ಯುವಕರನ್ನು ಸಬಲಗೊಳಿಸುತ್ತದೆ.ಸಿ -295 ವಿಮಾನ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
October 28th, 10:45 am
ಗೌರವಾನ್ವಿತ ಪೆಡ್ರೊ ಸ್ಯಾಂಚೆಜ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜೀ, ಭಾರತದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜೀ, ವಿದೇಶಾಂಗ ಸಚಿವರಾದ ಶ್ರೀ ಎಸ್. ಜೈಶಂಕರ್ ಜೀ, ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸ್ಪೇನ್ ಮತ್ತು ರಾಜ್ಯ ಸರ್ಕಾರದ ಸಚಿವರು, ಏರ್ ಬಸ್ ಮತ್ತು ಟಾಟಾ ತಂಡಗಳ ಎಲ್ಲಾ ಸದಸ್ಯರು, ಮಹಿಳೆಯರೇ ಮತ್ತು ಮಹನೀಯರೇ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ಪೇನ್ ದೇಶದ ಪ್ರಧಾನಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು ಗುಜರಾತ್ ನ ವಡೋದರಾದಲ್ಲಿ ಸಿ-295 ವಿಮಾನಗಳನ್ನು ತಯಾರಿಸಲು ಟಾಟಾ ವಿಮಾನ ತಯಾರಿಕಾ ಸಂಕೀರ್ಣವನ್ನು ಜಂಟಿಯಾಗಿ ಉದ್ಘಾಟಿಸಿದರು
October 28th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಮಂತ್ರಿ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು ಇಂದು ಗುಜರಾತ್ ನ ವಡೋದರದಲ್ಲಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕ್ಯಾಂಪಸ್ ನಲ್ಲಿ ಸಿ-295 ವಿಮಾನಗಳನ್ನು ತಯಾರಿಸುವ ಟಾಟಾ ವಿಮಾನ ತಯಾರಿಕಾ ಸಂಕೀರ್ಣ (ಟಾಟಾ ಏರ್ ಕ್ರಾಫ್ಟ್ ಕಾಂಪ್ಲೆಕ್ಸ್) ವನ್ನು ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ವಸ್ತುಪ್ರದರ್ಶನವನ್ನು ಇಬ್ಬರು ಪ್ರಧಾನಿಗಳೂ ವೀಕ್ಷಿಸಿದರು.ಜಂಟಿ ಹೇಳಿಕೆ: 7ನೇ ಭಾರತ ಮತ್ತು ಜರ್ಮನಿ ನಡುವಿನ ಅಂತರ್-ಸರ್ಕಾರಿ ಸಮಾಲೋಚನೆಗಳು(ಐಜಿಸಿ)
October 25th, 08:28 pm
ನವದೆಹಲಿಯಲ್ಲಿ 2024 ಅಕ್ಟೋಬರ್ 25ರಂದು ಆಯೋಜಿತವಾಗಿದ್ದ 7ನೇ ಸುತ್ತಿನ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನಾ(7ನೇ ಐಜಿಸಿ) ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಮಾತುಕತೆ ನಡೆಸಿದರು. ಭಾರತದ ನಿಯೋಗದಲ್ಲಿ ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆಗಳು, ಕಾರ್ಮಿಕ ಮತ್ತು ಉದ್ಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ(ಎಂಒಎಸ್) ಮತ್ತು ಕೌಶಲ್ಯ ಅಭಿವೃದ್ಧಿ(ಎಂಒಎಸ್) ಸಚಿವಾಲಯಗಳು ಭಾಗವಹಿಸಿದ್ದವು. ಜರ್ಮನಿಯ ನಿಯೋಗದಲ್ಲಿ ಆರ್ಥಿಕ ವ್ಯವಹಾರಗಳು ಮತ್ತು ಹವಾಮಾನ ಕ್ರಮ, ವಿದೇಶಾಂಗ ವ್ಯವಹಾರಗಳು, ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳು ಮತ್ತು ಶಿಕ್ಷಣ ಮತ್ತು ಸಂಶೋಧನೆ ಸಚಿವಾಲಯಗಳು ಭಾಗವಹಿಸಿದ್ದವು. ಅಲ್ಲದೆ, ಜರ್ಮನಿಯ ಹಣಕಾಸು, ಪರಿಸರ, ಪ್ರಕೃತಿ ಸಂರಕ್ಷಣೆ, ಪರಮಾಣು ಸುರಕ್ಷತೆ ಮತ್ತು ಗ್ರಾಹಕರ ರಕ್ಷಣೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಇಲಾಖೆಗಳ ಸಂಸದೀಯ ಕಾರ್ಯದರ್ಶಿಗಳು ಹಾಗೂ ಎರಡೂ ಕಡೆಯ ಹಿರಿಯ ಅಧಿಕಾರಿಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.ಎನ್ ಡಿ ಟಿ ವಿ ವಿಶ್ವ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ
October 21st, 10:25 am
ನಾವು ಹಿಂದಿನ 4-5 ವರ್ಷಗಳ ಚರ್ಚೆಗಳನ್ನು ನೋಡಿದರೆ ಬಹುತೇಕ ಚರ್ಚೆಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ ಎಂಬುದನ್ನು ಗಮನಿಸಬಹುದು. ಅದುವೇ ಭವಿಷ್ಯದ ಬಗ್ಗೆ ಕಾಳಜಿ/ಕಳವಳ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಇತ್ತು. ಕೋವಿಡ್ ಹರಡುತ್ತಿದ್ದಂತೆ, ಜಾಗತಿಕ ಆರ್ಥಿಕತೆಯ ಬಗ್ಗೆ ಕಳವಳಗಳು ಹೆಚ್ಚಾದವು. ಸಾಂಕ್ರಾಮಿಕ ರೋಗವು ಹಣದುಬ್ಬರ, ನಿರುದ್ಯೋಗ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಚಿಂತೆಗಳನ್ನು ಹೆಚ್ಚಿಸಿತು. ನಂತರ, ಭುಗಿಲೆದ್ದ ಯುದ್ಧಗಳು ಈ ಕುರಿತಾದ ಚರ್ಚೆಗಳು ಮತ್ತು ಆತಂಕಗಳನ್ನು ತೀವ್ರಗೊಳಿಸಿತು. ಜಾಗತಿಕ ಪೂರೈಕೆ ಸರಪಳಿಗೆ ಅಡೆತಡೆಗಳು ಮತ್ತು ಅನೇಕ ಅಮಾಯಕ ಜೀವಿಗಳು ಪ್ರಾಣ ಕಳೆದುಕೊಳ್ಳಬೇಕಾದ ಬಗ್ಗೆ ಆತಂಕ ಉಂಟಾಗಿತ್ತು. ಜಾಗತಿಕ ಶೃಂಗಸಭೆಗಳು ಮತ್ತು ಉಪನ್ಯಾಸಗಳಲ್ಲಿ ಉದ್ವಿಗ್ನತೆಗಳು, ಸಂಘರ್ಷಗಳು ಮತ್ತು ಒತ್ತಡಗಳು ಚರ್ಚಾ ವಿಷಯಗಳಾದವು. ಜಾಗತಿಕವಾಗಿ ಪ್ರಸ್ತುತದ ಚರ್ಚೆಗಳು ಈ ಕಳವಳದ ಬಗ್ಗೆ ಕೇಂದ್ರೀಕೃತವಾಗಿರುವಾಗ, ಭಾರತದಲ್ಲಿ ಯಾವ ರೀತಿಯ ಚಿಂತನೆ ನಡೆಯುತ್ತಿದೆ? ಇದು ಜಾಗತಿಕ ಚಿಂತೆಗೆ ವ್ಯತಿರಿಕ್ತವಾಗಿದೆ. ಭಾರತದಲ್ಲಿ ನಾವು ಈ ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ “ಭಾರತೀಯ ಶತಮಾನ”ದ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತ ಆಶಾಕಿರಣವಾಗಿದೆ. ಜಗತ್ತು ಚಿಂತೆಯಲ್ಲಿ ಮುಳುಗಿರುವಾಗ, ಭಾರತವು ಭರವಸೆಯನ್ನು ಹರಡುತ್ತಿದೆ. ಹಾಗೆಂದ ಮಾತ್ರಕ್ಕೆ ಜಾಗತಿಕ ಸನ್ನಿವೇಶಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದಲ್ಲ – ಅದು ಪ್ರಭಾವವನ್ನು ಖಂಡಿತವಾಗಿಯೂ ಬೀರಲಿದೆ. ಭಾರತವು ಸವಾಲುಗಳನ್ನು ಎದುರಿಸುತ್ತಿದೆ, ಆದರೆ ಇಲ್ಲಿ ಸಕಾರಾತ್ಮಕತೆಯ ಭಾವವಿದೆ, ನಾವೆಲ್ಲರೂ ಅದರ ಅನುಭೂತಿ ಪಡೆಯಬಹುದು. ಹೀಗಾಗಿ 'ದಿ ಇಂಡಿಯನ್ ಸೆಂಚುರಿ – (ಭಾರತದ ಶತಮಾನದ)' ದ ಬಗ್ಗೆ ಮಾತು ಕೇಳಿಬರುತ್ತಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು
October 21st, 10:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಎನ್ ಡಿ ಟಿ ವಿ ವಿಶ್ವ ಶೃಂಗಸಭೆ 2024 ಅನ್ನು ಉದ್ದೇಶಿಸಿ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಶೃಂಗಸಭೆಯಲ್ಲಿ ಹಲವು ವಿಷಯಗಳನ್ನು ಕುರಿತು ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ವಿವಿಧ ವಲಯಗಳ ಜಾಗತಿಕ ನಾಯಕರ ಉಪಸ್ಥಿತಿಯನ್ನು ಅವರು ಶ್ಲಾಘಿಸಿದರು.ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ – ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆ 2024 ರಲ್ಲಿ ಉದ್ಯಮ ದಿಗ್ಗಜರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಶ್ಲಾಘನೆ
October 15th, 02:23 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ – ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆ (ITU-WTSA) 2024 ರ ಸಂದರ್ಭದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ನ 8 ನೇ ಆವೃತ್ತಿಯನ್ನು ಉದ್ಘಾಟಿಸಿದರು. ಡಬ್ಲ್ಯು ಟಿ ಎಸ್ ಎ ಎಂಬುದು ಡಿಜಿಟಲ್ ತಂತ್ರಜ್ಞಾನಗಳಿಗಾಗಿನ ವಿಶ್ವ ಸಂಸ್ಥೆಯ ಏಜೆನ್ಸಿಯಾದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಮಾಣೀಕರಣ ಕಾರ್ಯಕ್ಕಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಆಡಳಿತ ಸಮ್ಮೇಳನವಾಗಿದೆ. ಇದೇ ಮೊದಲ ಬಾರಿಗೆ ಐಟಿಯು – ಡಬ್ಲ್ಯುಟಿಎಸ್ಎ ಅನ್ನು ಭಾರತ ಮತ್ತು ಏಷ್ಯಾ-ಪೆಸಿಫಿಕ್ನಲ್ಲಿ ಆಯೋಜಿಸಲಾಗಿದೆ. ಇದು ದೂರಸಂಪರ್ಕ, ಡಿಜಿಟಲ್ ಮತ್ತು ಐಸಿಟಿ ವಲಯಗಳನ್ನು ಪ್ರತಿನಿಧಿಸುತ್ತಿರುವ 190 ಕ್ಕೂ ಹೆಚ್ಚು ದೇಶಗಳ 3,000 ಕ್ಕೂ ಹೆಚ್ಚು ಉದ್ಯಮ ನಾಯಕರು, ನೀತಿ-ನಿರೂಪಕರು ಮತ್ತು ತಂತ್ರಜ್ಞಾನ ತಜ್ಞರನ್ನು ಒಟ್ಟುಗೂಡಿಸಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ
October 07th, 09:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಕಾಲವನ್ನು ನೆನಪಿಸಿಕೊಂಡು, ಗುಜರಾತ್ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಪರಿಕಲ್ಪನೆಯ ಉಜ್ವಲ ಉದಾಹರಣೆಯಾಗಿ ಹೊರಹೊಮ್ಮಿತು. ಸಮಾಜದ ಎಲ್ಲಾ ವರ್ಗಗಳಿಗೆ ಸಮೃದ್ಧಿಯನ್ನು ಖಾತ್ರಿಪಡಿಸಿತು ಎಂದು ಹೇಳಿದರು. ಕಳೆದ ದಶಕವನ್ನು ನೆನಪಿಸಿಕೊಳ್ಳುತ್ತಾ, ಭಾರತದ ಅಭಿವೃದ್ಧಿಯ ಹೆಜ್ಜೆಗಳು ನಮ್ಮ ದೇಶವನ್ನು ಜಾಗತಿಕವಾಗಿ ಅತ್ಯಂತ ಆಶಾವಾದದಿಂದ ನೋಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಕಸಿತ ಭಾರತದ ಸಾಮೂಹಿಕ ಗುರಿ ಸಾಧಿಸುವವರೆಗೆ ತಾವು ಅವಿರತವಾಗಿ ದುಡಿಯುತ್ತೇನೆ ಮತ್ತು ವಿಶ್ರಮಿಸುವುದಿಲ್ಲ ಎಂದು ಅವರು ನಾಗರಿಕರಿಗೆ ಭರವಸೆ ನೀಡಿದರು.'ಮನ್ ಕಿ ಬಾತ್' ಕೇಳುಗರು ಈ ಕಾರ್ಯಕ್ರಮದ ನಿಜವಾದ ನಿರೂಪಕರು: ಪ್ರಧಾನಿ ಮೋದಿ
September 29th, 11:30 am
ನನ್ನ ಪ್ರೀತಿಯ ದೇಶವಾಸಿಗಳೆ ನಮಸ್ಕಾರ. ಮತ್ತೊಮ್ಮೆ ನಾವೆಲ್ಲರೂ 'ಮನದ ಮಾತಿನ' ಮೂಲಕ ಒಗ್ಗೂಡುವ ಅವಕಾಶ ಲಭಿಸಿದೆ. ಇಂದಿನ ಈ ಕಂತು ನನ್ನನ್ನು ಬಹಳ ಭಾವುಕನನ್ನಾಗಿಸಲಿದೆ, ಅನೇಕ ಹಳೆಯ ನೆನಪುಗಳು ನನ್ನನ್ನು ಮುತ್ತಿವೆ - ಕಾರಣ ಏನೆಂದರೆ 'ಮನದ ಮಾತಿನ' ನಮ್ಮ ಈ ಪಯಣಕ್ಕೆ 10 ವರ್ಷಗಳು ತುಂಬುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3 ರಂದು ವಿಜಯದಶಮಿಯ ದಿನದಂದು 'ಮನದ ಮಾತು’ ಪ್ರಾರಂಭವಾಗಿತ್ತು ಮತ್ತು ಈ ವರ್ಷ ಅಕ್ಟೋಬರ್ 3 ರಂದು 'ಮನದ ಮಾತಿಗೆ ' 10 ವರ್ಷತುಂಬುವ ಸಂದರ್ಭ ನವರಾತ್ರಿಯ ಮೊದಲ ದಿನವಾಗಿದೆ. 'ಮನದ ಮಾತಿನ’ ಈ ಸುದೀರ್ಘ ಪಯಣದಲ್ಲಿ ನಾನು ಎಂದೂ ಮರೆಯಲಾಗದ ಇಂತಹ ಹಲವಾರು ಮೈಲಿಗಲ್ಲುಗಳಿವೆ, ನಮ್ಮ ಈ ಪಯಣದಲ್ಲಿ ನಿರಂತರ ಸಹಯೋಗವನ್ನು ನೀಡಿದಂತಹ ' ಮನದ ಮಾತಿನ' ಕೋಟ್ಯಂತರ ಶ್ರೋತೃ ಬಾಂಧವರಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಅವರು ಮಾಹಿತಿಯನ್ನು ಒದಗಿಸಿದರು. ಮನದ ಮಾತಿನ ಶ್ರೋತೃಗಳೇ ಈ ಕಾರ್ಯಕ್ರಮದ ನಿಜವಾದ ರೂವಾರಿಗಳು. ಸಾಮಾನ್ಯವಾಗಿ ಎಲ್ಲಿಯವರೆಗೆ ರೋಚಕ ವಿಷಯಗಳನ್ನು ಮಾತನಾಡುವುದಿಲ್ಲವೋ, ನಕಾರಾತ್ಮಕ ವಿಷಯಗಳನ್ನು ಮಾತನಾಡುವುದಿಲ್ಲವೋ ಅಲ್ಲಿವರೆಗೆ ಅದು ಹೆಚ್ಚಿನ ಗಮನ ಸೆಳೆಯುವುದಿಲ್ಲ ಎನ್ನಲಾಗುತ್ತದೆ. ಆದರೆ ಮನದ ಮಾತು ದೇಶದ ಜನರು ಸಕಾರಾತ್ಮಕ ಮಾಹಿತಿಗಾಗಿ , ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಸಕಾರಾತ್ಮಕ ಮಾತು, ಪ್ರೇರಣಾತ್ಮಕ ಉದಾಹರಣೆಗಳು, ಸ್ಫೂರ್ತಿದಾಯಕ ಕಥೆಗಳು ಜನರಿಗೆ ಬಹಳ ಇಷ್ಟವಾಗುತ್ತವೆ. ಕೇವಲ ಮಳೆಹನಿಗಳನ್ನು ಮಾತ್ರ ಕುಡಿಯುವಂತಹ ಚಾತಕ ಪಕ್ಷಿಯಂತೆ ಜನರು ದೇಶದ ಸೌಲಭ್ಯಗಳ ಬಗ್ಗೆ, ಜನರ ಸಾಮೂಹಿಕ ಸಾಧನೆಗಳ ಬಗ್ಗೆ ಮನದ ಮಾತಿನ ಮೂಲಕ ಎಷ್ಟು ಹೆಮ್ಮೆಯಿಂದ ಕೇಳುತ್ತಾರೆ. ಮನದ ಮಾತಿನ 10 ವರ್ಷಗಳ ಪಯಣ ಎಷ್ಟು ಅದ್ಭುತವಾದ ಹಾರವನ್ನು ಸಿದ್ಧಗೊಳಿಸಿದೆ ಎಂದರೆ ಪ್ರತಿ ಸಂಚಿಕೆಯೊಂದಿಗೆ ಹೊಸ ಯಶೋಗಾಥೆಗಳು, ಹೊಸ ಕೀರ್ತಿವಂತರು ಮತ್ತು ಹೊಸ ವ್ಯಕ್ತಿತ್ವಗಳನ್ನು ಸೇರಿಸುತ್ತಾ ಸಾಗಿದೆ. ನಮ್ಮ ಸಮಾಜದಲ್ಲಿ ಸಾಮಾಜಿಕ ಹಿತದೃಷ್ಟಿಯ ಭಾವನೆಯಿಂದ ಯಾವುದೇ ಕೆಲಸ ಮಾಡಿದರೂ ಅವರಿಗೆ 'ಮನದ ಮಾತಿನ' ಮೂಲಕ ಗೌರವ ಲಭಿಸುತ್ತದೆ. 'ಮನದ ಮಾತಿ'ಗೆ ಬಂದ ಪತ್ರಗಳನ್ನು ನಾನು ಓದಿದಾಗ ನನ್ನ ಮನವೂ ಹೆಮ್ಮೆಯಿಂದ ಬೀಗುತ್ತದೆ. ನಮ್ಮ ದೇಶದಲ್ಲಿ ಅದೆಷ್ಟೋ ಪ್ರತಿಭಾವಂತರಿದ್ದಾರೆ, ಅವರು ತಮ್ಮ ಇಡೀ ಜೀವನವನ್ನು ಜನರ ನಿಸ್ವಾರ್ಥ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಅವರ ಬಗ್ಗೆ ತಿಳಿಯುವುದು ನನ್ನಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ. 'ಮನದ ಮಾತಿನ' ಈ ಸಂಪೂರ್ಣ ಪ್ರಕ್ರಿಯೆಯು ನನಗೆ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುವಂತಿದೆ. ಮನದ ಮಾತಿನ ಪ್ರತಿ ವಿಷಯ, ಪ್ರತಿ ಘಟನೆ, ಪ್ರತಿ ಪತ್ರವನ್ನು ನೆನಪಿಸಿಕೊಂಡಾಗ, ನನಗೆ ಭಗವಂತನ ರೂಪದಲ್ಲಿರುವ ಜನತಾ ಜನಾರ್ದನನ ದರ್ಶನ ಪಡೆದಂತೆ ಭಾಸವಾಗುತ್ತದೆ.3 ಪರಮ್ ರುದ್ರ ಸೂಪರ್‌ಕಂಪ್ಯೂಟರ್‌ಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಪ್ರಧಾನ ಮಂತ್ರಿ ಭಾಷಣ
September 26th, 05:15 pm
ಸನ್ಮಾನ್ಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರೆ, ರಾಷ್ಟ್ರದಾದ್ಯಂತ ವಿವಿಧ ಸಂಶೋಧನಾ ಸಂಸ್ಥೆಗಳ ಗೌರವಾನ್ವಿತ ನಿರ್ದೇಶಕರೆ, ಗಣ್ಯ ಹಿರಿಯ ವಿಜ್ಞಾನಿಗಳೆ, ಎಂಜಿನಿಯರ್ ಗಳೆ, ಸಂಶೋಧಕರೆ, ವಿದ್ಯಾರ್ಥಿಗಳೆ, ಇತರೆ ಗಣ್ಯರೆ, ಮತ್ತು ಮಹಿಳೆಯರು ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ದೇಶಕ್ಕೆ ಸಮರ್ಪಿಸಿದರು
September 26th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುಮಾರು 130 ಕೋಟಿ ರೂಪಾಯಿ ಮೌಲ್ಯದ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (NSM) ಅಡಿಯಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಈ ಸೂಪರ್ ಕಂಪ್ಯೂಟರ್ ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಪ್ರಮುಖ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವಂತೆ ನಿಯೋಜಿಸಲಾಗಿದೆ. ಪ್ರಧಾನ ಮಂತ್ರಿಯವರು ಹವಾಮಾನ ಮತ್ತು ತಾಪಮಾನ ಸಂಶೋಧನೆಗಾಗಿ ವಿಶೇಷವಾಗಿ ರೂಪಿಸಲಾದ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ವ್ಯವಸ್ಥೆಯನ್ನು ಕೂಡ ಉದ್ಘಾಟಿಸಿದರು.ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ 'ಪಿಎಂ ವಿಶ್ವಕರ್ಮ' ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 20th, 11:45 am
2 ದಿನಗಳ ಹಿಂದೆಯಷ್ಟೇ ವಿಶ್ವಕರ್ಮ ಜಯಂತಿ ಆಚರಿಸಿದ್ದೆವು. ಇಂದು ನಾವು ವಾರ್ಧಾದ ಪವಿತ್ರ ಭೂಮಿಯಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಯಶಸ್ಸನ್ನು ಆಚರಿಸುತ್ತಿದ್ದೇವೆ. 1932ರ ಇದೇ ದಿನದಂದು ಮಹಾತ್ಮ ಗಾಂಧೀಜಿ ಅವರು ಅಸ್ಪೃಶ್ಯತೆಯ ವಿರುದ್ಧ ತಮ್ಮ ಅಭಿಯಾನ ಆರಂಭಿಸಿದ್ದರು ಎಂಬುದು ಇಂದಿನ ವಿಶೇಷ. ಈ ಹಿನ್ನೆಲೆಯಲ್ಲಿ ವಿನೋಬಾ ಭಾವೆ ಅವರ ಪುಣ್ಯಭೂಮಿ, ಮಹಾತ್ಮ ಗಾಂಧಿ ಅವರ ‘ಕರ್ಮಭೂಮಿ’ ಮತ್ತು ವಾರ್ಧಾ ಭೂಮಿಯಲ್ಲಿ ವಿಶ್ವಕರ್ಮ ಯೋಜನೆಯ 1 ವರ್ಷದ ಸಂಭ್ರಮಾಚರಣೆಯು ನಮ್ಮ ‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ)ದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡುವ ಸಾಧನೆ ಮತ್ತು ಸ್ಫೂರ್ತಿಯ ಸಂಗಮವಾಗಿದೆ. ವಿಶ್ವಕರ್ಮ ಯೋಜನೆ ಮೂಲಕ ನಾವು ಶ್ರಮದ ಮೂಲಕ ಸಮೃದ್ಧಿ ಮತ್ತು ಕೌಶಲ್ಯದ ಮೂಲಕ ಉತ್ತಮ ಭವಿಷ್ಯದ ಬದ್ಧತೆ ಹೊಂದಿದ್ದೇವೆ. ವಾರ್ಧಾದಲ್ಲಿ ಬಾಪು ಅವರ ಸ್ಫೂರ್ತಿಗಳು ಈ ಬದ್ಧತೆಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಈ ಉಪಕ್ರಮಕ್ಕೆ ಸಂಬಂಧಿಸಿದ ಎಲ್ಲರಿಗೂ ಮತ್ತು ದೇಶಾದ್ಯಂತದ ಎಲ್ಲಾ ಫಲಾನುಭವಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
September 20th, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ವಾರ್ಧಾದಲ್ಲಿ ರಾಷ್ಟ್ರೀಯ ಪ್ರಧಾನಮಂತ್ರಿ ವಿಶ್ವಕರ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ‘ಆಚಾರ್ಯ ಚಾಣಕ್ಯ ಕೌಶಲ್ಯ ಅಭಿವೃದ್ಧಿ’ಯೋಜನೆ ಮತ್ತು ‘ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಮಹಿಳಾ ಸ್ಟಾರ್ಟಪ್ ಯೋಜನೆʼಗೆ ಚಾಲನೆ ನೀಡಿದರು. ಪ್ರಧಾನಮಂತ್ರಿ ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣಪತ್ರಗಳು ಮತ್ತು ಸಾಲಗಳನ್ನು ಬಿಡುಗಡೆ ಮಾಡಿದರು ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಒಂದು ವರ್ಷದ ಪ್ರಗತಿಯನ್ನು ಗುರುತಿಸುವ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಅಂಡ್ ಅಪಾರಲ್ (ಪಿಎಂ ಮಿತ್ರಾ) ಪಾರ್ಕ್ ಗೆ ಶ್ರೀ ಮೋದಿಯವರು ಶಂಕುಸ್ಥಾಪನೆ ಮಾಡಿದರು. ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನವನ್ನು ಪ್ರಧಾನಿಯವರು ವೀಕ್ಷಿಸಿದರು.ವರ್ಲ್ಡ್ ಫುಡ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಸಂದೇಶ
September 19th, 12:30 pm
ವರ್ಲ್ಡ್ ಫುಡ್ ಇಂಡಿಯಾ ಕಾರ್ಯಕ್ರಮದಲ್ಲಿ ತಮ್ಮ ಸಂದೇಶದಲ್ಲಿ, ಪ್ರಧಾನಿ ಮೋದಿ ಅವರು, ಭಾರತವು ರೋಮಾಂಚಕ ಮತ್ತು ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿದೆ. ಭಾರತೀಯ ಆಹಾರ ಪರಿಸರ ವ್ಯವಸ್ಥೆಯ ಬೆನ್ನೆಲುಬು ರೈತ. ಇದು ಪಾಕಶಾಲೆಯ ಉತ್ಕೃಷ್ಟತೆಯ ಪೌಷ್ಟಿಕ ಮತ್ತು ರುಚಿಕರವಾದ ಸಂಪ್ರದಾಯಗಳ ರಚನೆಯನ್ನು ಖಾತ್ರಿಪಡಿಸಿದ ರೈತರು. ನಾವೀನ್ಯತೆ ನೀತಿಗಳು ಮತ್ತು ಕೇಂದ್ರೀಕೃತ ಅನುಷ್ಠಾನದೊಂದಿಗೆ ನಾವು ಅವರ ಕಠಿಣ ಪರಿಶ್ರಮವನ್ನು ಬೆಂಬಲಿಸುತ್ತಿದ್ದೇವೆ.“ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್” ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣ
August 31st, 10:39 pm
“ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್” ನ ಈ ನೂತನ ಆವೃತ್ತಿಯಲ್ಲಿ ಭಾಗವಹಿಸುತ್ತಿರುವಾಗ, ಹಲವಾರು ಪರಿಚಿತ ಮುಖಗಳನ್ನು ನೋಡಲು ನನಗೆ ಸಂತೋಷವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯದ ಬಗ್ಗೆ ಇಲ್ಲಿ ಅತ್ಯುತ್ತಮ ಚರ್ಚೆಗಳು ನಡೆದಿವೆ ಎಂದು ನನಗೆ ವಿಶ್ವಾಸವಿದೆ, ಅದರಲ್ಲೂ ವಿಶೇಷವಾಗಿ ಇಡೀ ಜಗತ್ತು ಭಾರತದ ಬಗ್ಗೆ ವಿಶ್ವಾಸ ಹೊಂದಿರುವ ಈ ಸಮಯದಲ್ಲಿ ಚರ್ಚೆಗಳು ನಡೆದಿವೆ ಎಂಬುದು ವಿಶೇಷ.ನವದೆಹಲಿಯಲ್ಲಿ ಎಕನಾಮಿಕ್ ಟೈಮ್ಸ್ ಜಾಗತಿಕ ನಾಯಕರ ವೇದಿಕೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
August 31st, 10:13 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಎಕನಾಮಿಕ್ ಟೈಮ್ಸ್ ವಿಶ್ವ ನಾಯಕರ ವೇದಿಕೆ(ವರ್ಲ್ಡ್ ಲೀಡರ್ಸ್ ಫೋರಂ) ಉದ್ದೇಶಿಸಿ ಭಾಷಣ ಮಾಡಿದರು.