ಜಿ-7ಶೃಂಗಸಭೆಯ ನೇಪಥ್ಯದಲ್ಲಿ ಐರೋಪ್ಯ ಒಕ್ಕೂಟದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಿ.
June 28th, 08:07 am
ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಜರ್ಮನಿಯ ಸ್ಕ್ಲೋಸ್ ಎಲ್ಮಾವ್ ನಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ 2022ರ ಜೂನ್ 27ರಂದು ಐರೋಪ್ಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಉರ್ಸಾಲಾ ವೋನ್ ಡೆರ್ ಲೈನ್ ಅವರನ್ನು ಭೇಟಿ ಮಾಡಿದ್ದರು.ಜರ್ಮನಿಯ ಜಿ-7 ಶೃಂಗಸಭೆಯಲ್ಲಿ ‘ಒಗ್ಗೂಡಿದರೆ ಬಲಿಷ್ಠ: ಆಹಾರ ಭದ್ರತೆ ಮತ್ತು ಲಿಂಗ ಸಮಾನತೆ ನಿಟ್ಟಿನಲ್ಲಿ’’ ಕುರಿತ ಗೋಷ್ಠಿಯನ್ನುದ್ದೇಶಿಸಿ ಪ್ರಧಾನಿ ಅವರು ಮಾಡಿದ ಭಾಷಣದ ಅನುವಾದ.
June 27th, 11:59 pm
ನಾವು ಜಾಗತಿಕ ಉದ್ವಿಗ್ನ ವಾತಾವರಣದ ನಡುವೆ ಭೇಟಿಯಾಗುತ್ತಿದ್ದೇವೆ. ಭಾರತ ಸದಾ ಶಾಂತಿಯ ಪರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿಯೂ ಸಹ ನಾವು ನಿರಂತರವಾಗಿ ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ನಾವು ಕರೆ ನೀಡುತ್ತೇವೆ. ಈ ಭೌಗೋಳಿಕ ರಾಜಕೀಯ ಒತ್ತಡದ ಪರಿಣಾಮವು ಕೇವಲ ಯುರೋಪಿಗೆ ಸೀಮಿತವಾಗಿಲ್ಲ. ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಯು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಇಂಧನ ಭದ್ರತೆ ಮತ್ತು ಸುರಕ್ಷತೆ ವಿಶೇಷವಾಗಿ ಅಪಾಯದಲ್ಲಿದೆ. ಈ ಸವಾಲಿನ ಸಮಯದಲ್ಲಿ, ಭಾರತವು ಅಗತ್ಯವಿರುವ ಅನೇಕ ದೇಶಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಾವು ಸುಮಾರು 35,000 ಟನ್‌ಗಳಷ್ಟು ಗೋಧಿಯನ್ನು ಮಾನವೀಯ ನೆರವಾಗಿ ಆಫ್ಘಾನಿಸ್ತಾನಕ್ಕೆ ರವಾನಿಸಿದ್ದೇವೆ ಮತ್ತು ಅಲ್ಲಿ ಭಾರಿ ಭೂಕಂಪದ ನಂತರವೂ ಭಾರತವು ಪರಿಹಾರ ಸಾಮಗ್ರಿಗಳನ್ನು ತಲುಪಿಸಿದ ಮೊದಲ ದೇಶವಾಗಿದೆ. ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ನಮ್ಮ ನೆರೆಯ ಶ್ರೀಲಂಕಾಕ್ಕೆ ಸಹಾಯ ಮಾಡುತ್ತಿದ್ದೇವೆ.ಜರ್ಮನಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ 'ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ: ಹವಾಮಾನ, ಇಂಧನ, ಆರೋಗ್ಯ' ಕುರಿತ ಗೋಷ್ಠಿಯಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ.
June 27th, 07:47 pm
ದುರದೃಷ್ಟವಶಾತ್, ವಿಶ್ವದ ಅಭಿವೃದ್ಧಿಯ ಗುರಿಗಳು ಮತ್ತು ಪರಿಸರ ಸಂರಕ್ಷಣೆಯ ನಡುವೆ ಮೂಲಭೂತ ಘರ್ಷಣೆ ಇದೆ ಎಂದು ನಂಬಲಾಗಿದೆ. ಬಡ ದೇಶಗಳು ಮತ್ತು ಬಡ ಜನರು ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಾರೆ ಎಂಬ ಮತ್ತೊಂದು ತಪ್ಪು ಕಲ್ಪನೆಯೂ ಇದೆ. ಆದರೆ, ಸಾವಿರಾರು ವರ್ಷಗಳ ಭಾರತದ ಇತಿಹಾಸವು ಈ ದೃಷ್ಟಿಕೋನವನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಪ್ರಾಚೀನ ಭಾರತವು ಅಪಾರ ಸಮೃದ್ಧಿಯ ಕಾಲವನ್ನು ಕಂಡಿದೆ; ಆ ನಂತರ ನಾವು ಶತಮಾನಗಳ ಗುಲಾಮಗಿರಿಯನ್ನೂ ಸಹಿಸಿಕೊಂಡಿದ್ದೇವೆ, ಮತ್ತು ಈಗ ಸ್ವತಂತ್ರ ಭಾರತವು ಇಡೀ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆ ಎನಿಸಿದೆ. ಆದರೆ ಈ ಇಡೀ ಅವಧಿಯಲ್ಲಿ, ಭಾರತವು ಪರಿಸರಕ್ಕೆ ಸಂಬಂಧಿಸಿದಂತೆ ತನ್ನ ಬದ್ಧತೆಯಲ್ಲಿ ಎಳ್ಳಷ್ಟೂ ರಾಜಿಗೆ ಅವಕಾಶ ನೀಡಿಲ್ಲ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.17ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ನಮ್ಮ ಕೊಡುಗೆ ಕೇವಲ 5% ಮಾತ್ರ. ಇದರ ಹಿಂದಿನ ಮುಖ್ಯ ಕಾರಣವೆಂದರೆ ನಮ್ಮ ಜೀವನಶೈಲಿ. ನಮ್ಮ ಜೀವನ ಶೈಲಿಯು ಪ್ರಕೃತಿಯೊಂದಿಗೆ ಸಹಬಾಳ್ವೆಯ ಸಿದ್ಧಾಂತವನ್ನು ಆಧರಿಸಿದೆ.ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅರ್ಜೆಂಟೀನಾ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ.
June 27th, 09:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅರ್ಜೆಂಟೀನಾ ಅಧ್ಯಕ್ಷ ಶ್ರೀ ಆಲ್ಬರ್ಟೊ ಫೆರ್ನಾಂಡಿಸ್ ಅವರನ್ನು 26 ಜೂನ್ 2022 ರಂದು ಮ್ಯೂನಿಚ್‌ನಲ್ಲಿ ಭೇಟಿ ಮಾಡಿದರು.Democracy is in DNA of every Indian: PM Modi
June 26th, 06:31 pm
PM Modi addressed and interacted with the Indian community in Munich. The PM highlighted India’s growth story and mentioned various initiatives undertaken by the government to achieve the country’s development agenda. He also lauded the contribution of diaspora in promoting India’s success story and acting as brand ambassadors of India’s success.ಜರ್ಮನಿಯ ಮ್ಯೂನಿಚ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನ ಮಂತ್ರಿಯವರ ಸಂವಾದ.
June 26th, 06:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮ್ಯೂನಿಚ್‌ನ ಆಡಿ ಡೋಮ್ನಲ್ಲಿ ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮತ್ತು ಸಂವಾದ ನಡೆಸಿದರು. ಜರ್ಮನಿಯ ಅತ್ಯಂತ ಕ್ರಿಯಾಶೀಲ ಮತ್ತು ಉತ್ಸಾಹಿ ಭಾರತೀಯ ಸಮುದಾಯದ ಸಾವಿರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಜರ್ಮನಿಯ ಮ್ಯೂನಿಚ್‌ಗೆ ಆಗಮಿಸಿದ ಪ್ರಧಾನಿ ಮೋದಿ
June 26th, 09:00 am
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಮ್ಯೂನಿಚ್‌ಗೆ ಆಗಮಿಸಿದರು. ಅವರು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂದು ಸಂಜೆ, ಅವರು ಮ್ಯೂನಿಚ್‌ನಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಜರ್ಮನಿ ಮತ್ತು ಯುಎಇಗೆ ಭೇಟಿ ನೀಡುವ ಮುನ್ನ ಪ್ರಧಾನ ಮಂತ್ರಿಗಳ ಪ್ರವಾಸ ಪೂರ್ವ ಹೇಳಿಕೆ (ಜೂನ್ 26-28, 2022).
June 25th, 03:51 pm
ನಾನು ಜರ್ಮನಿಯ ಚಾನ್ಸೆಲರ್ ಗೌರವಾನ್ವಿತ ಶ್ರೀ ಓಲಾಫ್ ಸ್ಕೋಲ್ಜ್, ಅವರ ಆಹ್ವಾನದ ಮೇರೆಗೆ ಜರ್ಮನಿಯ ಶ್ಚೋಲೋಸ್ ಎಲ್ಮೋಗೆ ಭೇಟಿ ನೀಡಲಿದ್ದೇನೆ. ಜರ್ಮನ್ ಅಧ್ಯಕ್ಷತೆಯಲ್ಲಿ ನಡೆಯುವ ಜಿ 7 ಶೃಂಗಸಭೆಗಾಗಿ ಅಲ್ಲಿಗೆ ತೆರಳುತ್ತಿದ್ದೇನೆ. ಕಳೆದ ತಿಂಗಳು ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಗಳ (ಐ.ಜಿ.ಸಿ.) ಯಶಸ್ಸಿನ ನಂತರ ಮತ್ತೊಮ್ಮೆ ಚಾನ್ಸೆಲರ್ ಸ್ಕೋಲ್ಜ್ ಅವರನ್ನು ಭೇಟಿಯಾಗಲು ನನಗೆ ಬಹಳ ಸಂತೋಷವಿದೆ.India ended three decades of political instability with the press of a button: PM Modi in Berlin
May 02nd, 11:51 pm
PM Narendra Modi addressed and interacted with the Indian community in Germany. PM Modi said that the young and aspirational India understood the need for political stability to achieve faster development and had ended three decades of instability at the touch of a button.ಜರ್ಮನಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
May 02nd, 11:50 pm
ಬರ್ಲಿನ್ ನ ಆಮ್ ಪೋಟ್ಸ್ಡಾಮರ್ ಪ್ಲಾಟ್ಸ್ ನ ರಂಗಮಂದಿರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು ಮತ್ತು ಸಂವಾದ ನಡೆಸಿದರು.ಬರ್ಲಿನ್ ನಲ್ಲಿ ದುಂಡು ಮೇಜಿನ ವ್ಯಾಪಾರ ಸಭೆಯ ಸಹ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
May 02nd, 11:40 pm
ಗೌರವಾನ್ವಿತ ಚಾನ್ಸಲರ್ ಶ್ರೀ ಒಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವ್ಯಾಪಾರ ಕುರಿತ ದುಂಡು ಮೇಜಿನ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು, ಸರ್ಕಾರ ಕೈಗೊಂಡಿರುವ ವಿಸ್ತೃತ ಸುಧಾರಣೆಗಳ ಬಗ್ಗೆ ಒತ್ತಿ ಹೇಳಿದರು ಮತ್ತು ಭಾರತದಲ್ಲಿ ನವೋದ್ಯಮಗಳು ಮತ್ತು ಯೂನಿಕಾರ್ನ್ ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಭಾರತದ ಯುವ ಸಮೂಹದ ಮೇಲೆ ಹೂಡಿಕೆ ಮಾಡುವಂತೆ ಅವರು ಉದ್ಯಮ ವಲಯದ ನಾಯಕರನ್ನು ಆಹ್ವಾನಿಸಿದರು.ಜಂಟಿ ಹೇಳಿಕೆ: 6ನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಗಳು
May 02nd, 08:28 pm
ಇಂದು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಮತ್ತು ಭಾರತ ಗಣರಾಜ್ಯದ ಸರ್ಕಾರಗಳು, ಫೆಡರಲ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಹ-ಅಧ್ಯಕ್ಷತೆಯಲ್ಲಿ ಆರನೇ ಸುತ್ತಿನ ಅಂತರ-ಸರ್ಕಾರಿ ಸಮಾಲೋಚನೆಗಳನ್ನು ನಡೆಸಿದವು. ಈ ಇಬ್ಬರು ನಾಯಕರಲ್ಲದೆ, ಎರಡೂ ನಿಯೋಗಗಳಲ್ಲಿ ಮಂತ್ರಿಗಳು ಮತ್ತು ಅನುಬಂಧದಲ್ಲಿ ಉಲ್ಲೇಖಿಸಲಾದ ಸಾಲು-ಸಚಿವಾಲಯಗಳ ಇತರ ಉನ್ನತ ಪ್ರತಿನಿಧಿಗಳು ಇದ್ದರು.6ನೇ ಭಾರತ-ಜರ್ಮನಿ ಅಂತರ-ಸರ್ಕಾರೀಯ ಸಮಾಲೋಚನೆಗಳ ಮಹಾಧಿವೇಶನದ ಸಹ-ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ
May 02nd, 08:23 pm
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಭಾರತ-ಜರ್ಮನಿ ಅಂತರ-ಸರ್ಕಾರೀಯ ಸಮಾಲೋಚನೆಗಳ (ಐಜಿಸಿ) ಮಹಾಧಿವೇಶನದ ಸಹ ಅಧ್ಯಕ್ಷತೆಯನ್ನು ಜರ್ಮನಿಯ ಒಕ್ಕೂಟ ಗಣರಾಜ್ಯದ ಚಾನ್ಸಲರ್ ಮಾನ್ಯ ಶ್ರೀ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವಹಿಸಿದ್ದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶಗಳನ್ನು ಒತ್ತಿ ಹೇಳಿದರು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವಿನಿಮಯಮಾಡಿಕೊಂಡ ದೃಷ್ಟಿಕೋನಗಳನ್ನೂ ಹಂಚಿಕೊಂಡರು. ಭಾರತ-ಜರ್ಮನಿ ಸಹಭಾಗಿತ್ವವು ಸಂಕೀರ್ಣ ಜಗತ್ತಿನಲ್ಲಿ ಯಶಸ್ಸಿಗೆ ಒಂದು ಉದಾಹರಣೆಯಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತದ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜರ್ಮನಿಗೆ ಅವರು ಆಹ್ವಾನಿಸಿದರು. ಎರಡೂ ಕಡೆಯಿಂದ ಭಾಗವಹಿಸಿದ್ದ ಸಚಿವರು ಮತ್ತು ಅಧಿಕಾರಿಗಳು ಐ.ಜಿ.ಸಿ.ಯ ವಿವಿಧ ಮಾರ್ಗೋಪಾಯಗಳ ಬಗ್ಗೆ ತಮ್ಮ ಸಂಕ್ಷಿಪ್ತ ವರದಿಗಳನ್ನು ಮಂಡಿಸಿದರು:ಫೆಡರಲ್ ರಿಪಬ್ಲಿಕ್ (ಸಂಯುಕ್ತ ಗಣರಾಜ್ಯ) ಆಫ್ ಜರ್ಮನಿ ಚಾನ್ಸೆಲರ್ ಅವರೊಂದಿಗಿನ ಪ್ರಧಾನ ಮಂತ್ರಿಯವರ ಭೇಟಿಯ ಕುರಿತು ಪತ್ರಿಕಾ ಪ್ರಕಟಣೆ
May 02nd, 06:15 pm
ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ ಘನತೆವೆತ್ತ ಶ್ರೀ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದ್ವಿಪಕ್ಷೀಯ ಸಭೆ ನಡೆಸಿದರು. ಭಾರತ ಮತ್ತು ಜರ್ಮನಿ ನಡುವಿನ ದ್ವೈವಾರ್ಷಿಕ ಅಂತರ ಸರ್ಕಾರಿ ಸಮಾಲೋಚನೆಗಳ (ಐ.ಜಿ.ಸಿ) ಆರನೇ ಸುತ್ತಿನ ಸಭೆಗೆ ಮುನ್ನ ಈ ದ್ವಿಪಕ್ಷೀಯ ಸಭೆ ನಡೆಯಿತು.ಜರ್ಮನಿಯ ಬರ್ಲಿನ್‌ಗೆ ಆಗಮಿಸಿದ ಪ್ರಧಾನಿ ಮೋದಿ
May 02nd, 10:04 am
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಲ್ಪ ಸಮಯದ ಹಿಂದೆ ಬರ್ಲಿನ್ ತಲುಪಿದ್ದಾರೆ, ಅಲ್ಲಿ ಅವರು ಜರ್ಮನ್ ಚಾನ್ಸೆಲರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಇತರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.PM Modi holds talks with German Chancellor Merkel
April 21st, 12:44 am
Prime Minister Narendra Modi met German Chancellor Angela Merkel during his brief visit to Germany. The two leaders held wide ranging talks to further strengthen India-Germany cooperation in host of sectors."ಪ್ರಧಾನಿ ಮೋದಿ ಮತ್ತು ಚಾನ್ಸಲರ್ ಮರ್ಕೆಲ್ ಬರ್ಲಿನ್ ನಲ್ಲಿ ನಡೆದ ನಾಲ್ಕನೇ ಭಾರತ ಜರ್ಮನಿ ಅಂತರ್ -ಸರ್ಕಾರ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದರು "
May 30th, 07:57 pm
ಪ್ರಧಾನಿ ಮೋದಿ ಮತ್ತು ಚಾನ್ಸಲರ್ ಮರ್ಕೆಲ್ ಬರ್ಲಿನ್ ನಲ್ಲಿ ನಡೆದ ನಾಲ್ಕನೇ ಭಾರತ ಜರ್ಮನಿ ಅಂತರ್ -ಸರ್ಕಾರ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದರು . ಪ್ರಜಾಪ್ರಭುತ್ವದ ಆಧಾರದ ಮೇಲೆ ಒಂದು ಜಾಗತಿಕ ಕ್ರಮವು ಪರಸ್ಪರ ಸಂಬಂಧಿಸಿರುವ ಮತ್ತು ಪರಸ್ಪರ ಅವಲಂಬಿತ ಪ್ರಪಂಚದಲ್ಲಿ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಎರಡೂ ದೇಶಗಳು ಪರಸ್ಪರ ಭಯೋತ್ಪಾದನೆಯನ್ನು ಎದುರಿಸಲು ಉಪಕ್ರಮಗಳನ್ನು ಬಲಪಡಿಸಲು ನಿರ್ಧರಿಸಿದೆ."ಪ್ರಧಾನಿ ಜರ್ಮನಿಯ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು "
May 30th, 07:42 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೇನ್ಮರ್ ಅವರನ್ನು ಭೇಟಿಯಾದರು. ಎರಡೂ ನಾಯಕರು ಪರಸ್ಪರ ಆಸಕ್ತಿ ಮತ್ತು ಜಾಗತಿಕ ದೃಷ್ಟಿಕೋನಗಳ ವಿಶಾಲವಾದ ವಿಷಯಗಳ ಬಗ್ಗೆ ಚರ್ಚಿಸಿ ಭಾರತ ಮತ್ತು ಜರ್ಮನಿ ನಡುವಿನ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಒಪ್ಪಿಕೊಂಡರು .ಜಾಗತಿಕ ಸನ್ನಿವೇಶದಲ್ಲಿ ಜರ್ಮನಿಯು ಭಾರತದ ಪ್ರಮುಖ ಪಾಲುದಾರರಲ್ಲಿ ಒಂದು : ಪ್ರಧಾನಿ ಮೋದಿ
May 30th, 06:17 pm
ಬರ್ಲಿನ್ ಇಂಡೋ-ಜರ್ಮನ್ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ದ್ವಿಪಕ್ಷೀಯ ಮತ್ತು ಜಾಗತಿಕ ಸನ್ನಿವೇಶದಲ್ಲಿ ಭಾರತದ ಪ್ರಮುಖ ಪಾಲುದಾರರಲ್ಲಿ ಜರ್ಮನಿ ಒಂದು ಎಂದು ಹೇಳಿದ್ದಾರೆ. ಭಾರತವು ಆರ್ಥಿಕ ಮುಂಚೂಣಿಯಲ್ಲಿ ಹಲವಾರು ಅವಕಾಶಗಳನ್ನು ನೀಡಿತು ಮತ್ತು ಜರ್ಮನ್ ಕಂಪನಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಪ್ರಧಾನಿ ಹೇಳಿದರು.ಜರ್ಮನಿಯ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಅವರ ಪತ್ರಿಕಾ ಹೇಳಿಕೆ
May 30th, 02:54 pm
ಭಾರತ ಮತ್ತು ಜರ್ಮನಿ ಇಂದು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಒಪ್ಪಂದಗಳಿಗೆ ಸಹಿ ಮಾಡಿದೆ . ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ-ಜರ್ಮನಿಯ ಪ್ರಬಲ ಪಾಲುದಾರಿಕೆಯು ವಿಶ್ವದಾದ್ಯಂತ ಪ್ರಯೋಜನವನ್ನು ಪಡೆಯಬಹುದೆಂದು ಹೇಳಿದ್ದಾರೆ.