​​​​​​​ಪ್ಯಾರಿಸ್‌ ನಲ್ಲಿ ಸಿಇಒ ಫೋರಂ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು

July 15th, 07:03 am

ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಭಾರತ ಮತ್ತು ಫ್ರಾನ್ಸ್ ನಡುವಿನ ಆರ್ಥಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಈ ಉದ್ಯಮದ ಪ್ರಮುಖರು ವಹಿಸಿದ ಪಾತ್ರವನ್ನು ಪ್ರಧಾನಿ ಪ್ರಶಂಸಿಸಿದರು. ನವೀಕರಿಸಬಹುದಾದ ವಸ್ತುಗಳು, ಸ್ಟಾರ್ಟ್‌ ಅಪ್‌ಗಳು, ಫಾರ್ಮಾ, ಐಟಿ, ಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯಗಳಲ್ಲಿ ಭಾರತದ ಪ್ರಗತಿ ಮತ್ತು ವ್ಯಾಪಾರವನ್ನು ಉತ್ತೇಜಿಸಲು ಕೈಗೊಂಡ ವಿವಿಧ ಉಪಕ್ರಮಗಳನ್ನು ಅವರು ಪ್ರಸ್ತಾಪಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

July 15th, 01:47 am

ಸುಂದರ ನಗರವಾದ ಪ್ಯಾರಿಸ್ ನಲ್ಲಿ ಈ ಆತ್ಮೀಯ ಸ್ವಾಗತಕ್ಕಾಗಿ ನಾನು ಅಧ್ಯಕ್ಷ ಮ್ಯಾಕ್ರನ್ ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಫ್ರಾನ್ಸ್ ನ ಜನತೆಗೆ ಅವರ ರಾಷ್ಟ್ರೀಯ ದಿನದಂದು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ದಿನವನ್ನು ವಿಶ್ವದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಮೌಲ್ಯಗಳ ಸಂಕೇತವೆಂದು ಪರಿಗಣಿಸಲಾಗಿದೆ. ಈ ಮೌಲ್ಯಗಳು ನಮ್ಮ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಂಬಂಧಗಳ ಅಡಿಪಾಯವೂ ಆಗಿವೆ. ಇಂದು, ಈ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿರಲು ನನಗೆ ಗೌರವವಿದೆ. ಭಾರತೀಯ ಸಶಸ್ತ್ರ ಪಡೆಗಳ ಎಲ್ಲಾ ಮೂರು ಸೇವೆಗಳ ತುಕಡಿಗಳು ಈ ಸಂದರ್ಭಕ್ಕೆ ಅನುಗ್ರಹ ಮತ್ತು ಘನತೆಯನ್ನು ಹೆಚ್ಚಿಸಲು ಭಾಗವಹಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ನಾವು ಭಾರತೀಯ ರಫೇಲ್ ವಿಮಾನದ ಹಾರಾಟಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ನಮ್ಮ ನೌಕಾ ಹಡಗು ಸಹ ಫ್ರಾನ್ಸ್ ಬಂದರಿನಲ್ಲಿತ್ತು. ಸಮುದ್ರ, ಭೂಮಿ ಮತ್ತು ವಾಯು ಕ್ಷೇತ್ರಗಳಲ್ಲಿ ನಮ್ಮ ಹೆಚ್ಚುತ್ತಿರುವ ಸಹಕಾರಕ್ಕೆ ಸಾಕ್ಷಿಯಾಗುವುದು ಒಂದು ಅದ್ಭುತ ದೃಶ್ಯವಾಗಿತ್ತು. ನಿನ್ನೆ, ಅಧ್ಯಕ್ಷ ಮ್ಯಾಕ್ರನ್ ನನಗೆ ಫ್ರಾನ್ಸ್ ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಗೌರವವು 1.4 ಶತಕೋಟಿ ಭಾರತೀಯರ ಗೌರವವಾಗಿದೆ.

ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿ ಮೋದಿ ಸಭೆ

July 15th, 01:42 am

ರಕ್ಷಣೆ ಮತ್ತು ಭದ್ರತೆ, ನಾಗರಿಕ ಪರಮಾಣು, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ವ್ಯಾಪಾರ ಮತ್ತು ಹೂಡಿಕೆ, ಬಾಹ್ಯಾಕಾಶ, ಹವಾಮಾನ ಕ್ರಮಗಳು ಮತ್ತು ಜನರೊಂದಿಗಿನ ಜನರ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದ ವ್ಯಾಪಕ ಶ್ರೇಣಿಯ ಕ್ಷೇತ್ರಗಳ ಕುರಿತು ಇಬ್ಬರೂ ನಾಯಕರು ವ್ಯಾಪಕ ಚರ್ಚೆ ನಡೆಸಿದರು.

ಭಾರತ-ಫ್ರಾನ್ಸ್ ಇಂಡೋ-ಪೆಸಿಫಿಕ್ ಮಾರ್ಗಸೂಚಿ

July 14th, 11:10 pm

ಭಾರತ ಮತ್ತು ಫ್ರಾನ್ಸ್ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಪಾಲನ್ನು ಹೊಂದಿರುವ ನಿವಾಸಿ ಶಕ್ತಿಗಳು ಮತ್ತು ಪ್ರಮುಖ ಪಾಲುದಾರರು. ಹಿಂದೂ ಮಹಾಸಾಗರದಲ್ಲಿ ಇಂಡೋ-ಫ್ರೆಂಚ್ ಸಹಭಾಗಿತ್ವವು ನಮ್ಮ ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಕೇಂದ್ರಬಿಂದುವಾಗಿದೆ. 2018 ರಲ್ಲಿ, ಭಾರತ ಮತ್ತು ಫ್ರಾನ್ಸ್ 'ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ-ಫ್ರಾನ್ಸ್ ಸಹಕಾರದ ಜಂಟಿ ಕಾರ್ಯತಂತ್ರದ ದೃಷ್ಟಿಕೋನ'ಕ್ಕೆ ಒಪ್ಪಿಕೊಂಡವು. ನಾವು ಈಗ ನಮ್ಮ ಜಂಟಿ ಪ್ರಯತ್ನಗಳನ್ನು ಪೆಸಿಫಿಕ್ ಗೆ ವಿಸ್ತರಿಸಲು ಸಿದ್ಧರಿದ್ದೇವೆ.

ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮಾಲಿನ್ಯ ತೊಡೆದುಹಾಕುವ ಜಂಟಿ ಬದ್ಧತೆ

July 14th, 11:00 pm

ಒಮ್ಮೆ ಬಳಸಿದ ನಂತರ ಎಸೆಯುವ ಮತ್ತು ಮರುಬಳಕೆಗೆ ಕಳುಹಿಸುವ‌ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳು ಎಂದು ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ಆಹಾರ ಪ್ಯಾಕೇಜಿಂಗ್, ಬಾಟಲಿಗಳು, ಸ್ಟ್ರಾಗಳು, ಕಂಟೈನರ್‌ಗಳು, ಕಪ್‌ಗಳು, ಚಾಕು ಕತ್ತರಿಗಳು ಮತ್ತು ಶಾಪಿಂಗ್ ಬ್ಯಾಗ್‌ಗಳು ಸೇರಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿ ಕುರಿತ ಜಂಟಿ ಹೇಳಿಕೆ

July 14th, 10:45 pm

ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಫ್ರಾನ್ಸ್ ಕಾರ್ಯತಂತ್ರ ಸಹಭಾಗಿತ್ವದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಫ್ರೆಂಚ್ ಗಣರಾಜ್ಯದ ರಾಷ್ಟ್ರೀಯ ದಿನದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಐತಿಹಾಸಿಕ ಭೇಟಿಯನ್ನು ಸಮಾಪನಗೊಳಿಸಿದರು. 1998 ಜನವರಿಯಲ್ಲಿ, ಬದಲಾವಣೆ ಮತ್ತು ಅನಿಶ್ಚಯ ಜಗತ್ತಿನಲ್ಲಿ, ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಫ್ರಾನ್ಸ್ ಅಧ್ಯಕ್ಷ ಜಾಕ್ವೆಸ್ ಚಿರಾಕ್ ಅವರು ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಕೊಂಡೊಯ್ದರು - ಇದು ಯಾವುದೇ ದೇಶದೊಂದಿಗೆ ಭಾರತ ಹೊಂದಿರುವ ಮೊದಲ ಕಾರ್ಯತಂತ್ರ ಸಹಭಾಗಿತ್ವವಾಗಿದೆ.

ಫ್ರೆಂಚ್ ಗಗನಯಾತ್ರಿ, ಪೈಲಟ್ ಮತ್ತು ನಟ ಥಾಮಸ್ ಪೆಸ್ಕ್ವೆಟ್ ಅವರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿಯವರು

July 14th, 10:24 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಜುಲೈ 14ರಂದು ಪ್ಯಾರಿಸ್ ನಲ್ಲಿ ಫ್ರೆಂಚ್ ಏರೋಸ್ಪೇಸ್ ಎಂಜಿನಿಯರ್, ಪೈಲಟ್, ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗಗನಯಾತ್ರಿ ಮತ್ತು ನಟ ಶ್ರೀ ಥಾಮಸ್ ಪೆಸ್ಕ್ವೆಟ್ ಅವರನ್ನು ಭೇಟಿ ಮಾಡಿದರು.

ಶನೆಲ್ ನ ಜಾಗತಿಕ ಸಿಇಒ ಶ್ರೀಮತಿ ಲೀನಾ ನಾಯರ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿಯವರು

July 14th, 10:18 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಜುಲೈ 14ರಂದು ಪ್ಯಾರಿಸ್ ನಲ್ಲಿ ಫ್ರೆಂಚ್ ಐಷಾರಾಮಿ ಫ್ಯಾಶನ್ ಹೌಸ್, ಶನೆಲ್ ನ ಜಾಗತಿಕ ಸಿಇಒ ಶ್ರೀಮತಿ ಲೀನಾ ನಾಯರ್ ಅವರನ್ನು ಭೇಟಿ ಮಾಡಿದರು.

ಫಲಿತಾಂಶಗಳ ಪಟ್ಟಿ: ಫ್ರಾನ್ಸ್‌ ಗೆ ಪ್ರಧಾನಮಂತ್ರಿ ಅವರ ಭೇಟಿ

July 14th, 10:00 pm

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಮತ್ತು ಟೋಟಲ್ ಎನರ್ಜಿಸ್ ಗ್ಯಾಸ್ ಮತ್ತು ಪವರ್ ಲಿಮಿಟೆಡ್ (ಟೋಟಲ್ ಎನರ್ಜಿಸ್ ) ಸಂಸ್ಥೆಗಳ ನಡುವೆ ದೀರ್ಘಾವಧಿಯ ಎಲ್.ಎನ್.ಜಿ. ಮಾರಾಟ ಮತ್ತು ಖರೀದಿ ಒಪ್ಪಂದವನ್ನು ಸ್ಥಾಪಿಸಲು ಹೆಡೆ ಆಫ್‌ ಎಗ್ರಿಮೆಂಟ್‌

ಫ್ರಾನ್ಸ್ ನ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಸಭೆ

July 14th, 09:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 14ರಂದು ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷೆ ಮತ್ತು ಅಸೆಂಬ್ಲಿಯ ಹಿರಿಯ ನಾಯಕರಾದ ಘನತೆವೆತ್ತ ಶ್ರೀಮತಿ ಯಾಲ್ ಬ್ರಾನ್-ಪಿವೆಟ್ ಅವರನ್ನು ಅವರ ಅಧಿಕೃತ ನಿವಾಸ ಪ್ಯಾರಿಸ್ ನ ಹೋಟೆಲ್ ಡಿ ಲಾಸ್ಸೆಯಲ್ಲಿ ಭೋಜನ ಸಮಯದಲ್ಲಿ ಭೇಟಿಯಾದರು.

ಬಾಸ್ಟಿಲ್ಲೆ ಡೇ ಪೆರೇಡ್ ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಪ್ರಧಾನ ಮಂತ್ರಿ

July 14th, 05:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 14ರಂದು ಚಾಂಪ್ಸ್-ಎಲಿಸೀಸ್ ನಲ್ಲಿ ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಬಾಸ್ಟಿಲ್ ಡೇ ಪೆರೇಡ್ ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು.

ಪ್ರಧಾನ ಮಂತ್ರಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿ ಪ್ರದಾನ

July 13th, 11:56 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್ ನ್ನು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ಪ್ರದಾನ ಮಾಡಿದರು.

ಹೊಸ ದಿಗಂತ 2047: ಭಾರತ-ಫ್ರಾನ್ಸ್ ವ್ಯೂಹಾತ್ಮಕ ಸಹಭಾಗಿತ್ವದ 25ನೇ ವಾರ್ಷಿಕೋತ್ಸವ, ಶತಮಾನದತ್ತ ಭಾರತ-ಫ್ರಾನ್ಸ್ ಸಂಬಂಧಗಳು

July 13th, 11:30 pm

ಭಾರತ-ಫ್ರೆಂಚ್ ಸಹಭಾಗಿತ್ವದ 25ನೇ ವಾರ್ಷಿಕೋತ್ಸವದ ಅಂಗವಾಗಿ, 2047ರವರೆಗೆ ದ್ವಿಪಕ್ಷೀಯ ಸಂಬಂಧದ ಹಾದಿಯನ್ನು ನಿಗದಿಪಡಿಸಲು ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಎರಡೂ ದೇಶಗಳು ಸಮ್ಮತಿಸಿವೆ. 2047ನೇ ವರ್ಷವು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಶತಮಾನೋತ್ಸವ ಮತ್ತು ಕಾರ್ಯತಂತ್ರದ ಸಹಭಾಗಿತ್ವದ 50 ವರ್ಷಗಳನ್ನು ಆಚರಿಸುವ ವರ್ಷವಾಗಿರುವುದು ವಿಶೇಷ.

ಫ್ರಾನ್ಸ್ ಗಣರಾಜ್ಯದ ಪ್ರಧಾನ ಮಂತ್ರಿಯವರೊಂದಿಗೆ ಭಾರತದ ಪ್ರಧಾನ ಮಂತ್ರಿಯವರ ಸಭೆ

July 13th, 11:05 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 13ರಂದು ಫ್ರಾನ್ಸ್ ಪ್ರಧಾನಿ ಘನತೆವೆತ್ತ ಶ್ರೀಮತಿ ಎಲಿಜಬೆತ್ ಬೋರ್ನ್ ಅವರನ್ನು ಭೇಟಿ ಮಾಡಿದರು.

PM Modi arrives in Paris, France

July 13th, 04:38 pm

PM Modi arrived in Paris, France and will be the Guest of Honour at the Bastille Day Parade on 14 July 2023, where a tri-services Indian armed forces contingent would be participating. PM Modi will hold formal talks with President Macron and will also attend a banquet and a private dinner.

ಫ್ರಾನ್ಸ್ ಮತ್ತು ಯುಎಇಗೆ ಪ್ರಧಾನ ಮಂತ್ರಿಯವರ ಭೇಟಿ (ಜುಲೈ 13-15, 2023)

July 12th, 02:19 pm

ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿಯವರು ಔಪಚಾರಿಕ ಮಾತುಕತೆ ನಡೆಸಲಿದ್ದಾರೆ. ಅಧ್ಯಕ್ಷ ಮ್ಯಾಕ್ರನ್ ಅವರು ಪ್ರಧಾನ ಮಂತ್ರಿಯವರ ಗೌರವಾರ್ಥವಾಗಿ ಔತಣಕೂಟ ಮತ್ತು ಖಾಸಗಿ ಭೋಜನ ಕೂಟವನ್ನು ಆಯೋಜಿಸುತ್ತಾರೆ.

ಪ್ರಧಾನಮಂತ್ರಿಗಳ ಫ್ರಾನ್ಸ್ ಭೇಟಿ ವೇಳೆ ಬಿಡುಗಡೆ ಮಾಡಲಾದ ಭಾರತ-ಫ್ರಾನ್ಸ್ ಜಂಟಿ ಹೇಳಿಕೆ

May 04th, 10:44 pm

ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಶ್ರೀ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು 2022ರ ಮೇ 4ರಂದು ಪ್ಯಾರಿಸ್‌ಗೆ ಕೆಲ ಕಾಲ ಭೇಟಿ ನೀಡಿದ್ದ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆತಿಥ್ಯ ನೀಡಿದರು.

ಫ್ರಾನ್ಸ್ ಗೆ ಫಲಪ್ರದ ಭೇಟಿ

May 04th, 09:16 pm

ಜರ್ಮನಿ ಮತ್ತು ಡೆನ್ಮಾರ್ಕ್‌ಗೆ ಉತ್ಪಾದಕ ಭೇಟಿಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ಗೆ ಆಗಮಿಸಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದರು. ಅವರು ಆಗಮಿಸಿದ ಕೂಡಲೇ ಪ್ರಧಾನಿ ಮೋದಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು.

PM Modi's meetings on the sidelines of G-7 Summit in Biarritz

August 25th, 10:59 pm

On the sidelines of the ongoing G-7 Summit, PM Modi held meetings with world leaders.

PM Modi interacts with Indian community in France

August 23rd, 01:45 pm

PM Modi addressed Indian community in France. Speaking about India’s growth trajectory, he highlighted the initiatives taken in the last five years. He further said that India-France ties were based on trust and principles of liberty, equality and fraternity and coined an acronym for the partnership between both the countries and said, “Today in the 21st century we talk of INFRA. I would like to say that for me it is IN+FRA, which means the alliance between India and France.”