ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಅವರ ಉಗಾಂಡ ಭೇಟಿ ವೇಳೆ ಬಿಡುಗಡೆ ಮಾಡಲಾದ ಭಾರತ-ಉಗಾಂಡ ಜಂಟಿ ಹೇಳಿಕೆ

July 25th, 06:54 pm

ಉಗಾಂಡ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಯೊವೇರಿ ಕಗುತ ಮುಸೆವೇನಿ ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 2018ರ ಜುಲೈ 24 ರಿಂದ 25ರ ವರೆಗೆ ಉಗಾಂಡ ಪ್ರವಾಸ ಕೈಗೊಂಡಿದ್ದರು. ಅವರೊಂದಿಗೆ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ನಿಯೋಗ ಹಾಗೂ ವಾಣಿಜ್ಯೋದ್ಯಮಿಗಳ ನಿಯೋಗವೂ ಕೂಡ ಇತ್ತು. ಕಳೆದ 21 ವರ್ಷಗಳಲ್ಲಿ ಭಾರತೀಯ ಪ್ರಧಾನಮಂತ್ರಿಯೊಬ್ಬರು ಉಗಾಂಡಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಗಾಂಡ ಭೇಟಿ ವೇಳೆ ಉಗಾಂಡ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ

July 25th, 01:00 pm

ಈ ಘನತೆವೆತ್ತ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಆಹ್ವಾನ ನನಗೆ ಲಭಿಸಿರುವುದು ತುಂಬಾ ಗೌರವ ತಂದಿದೆ. ನನಗೆ ಇತರೆ ಸಂಸತ್ ಗಳಲ್ಲೂ ಭಾಷಣ ಮಾಡುವ ಇಂತಹುದೇ ಅವಕಾಶ ದೊರೆತಿದೆ. ಆದರೆ ಇದು ಅತ್ಯಂತ ವಿಶೇಷದ್ದು. ಭಾರತದ ಪ್ರಧಾನಮಂತ್ರಿ ಒಬ್ಬರಿಗೆ ಮೊದಲ ಬಾರಿಗೆ ಇಂತಹ ಗೌರವ ದೊರೆತಿದೆ. ಇದು ಭಾರತದ 125 ಕೋಟಿ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. ನಾನು ಭಾರತದ ಎಲ್ಲ ಜನರ ಹಾರ್ದಿಕ ಶುಭಾಶಯಗಳು ಮತ್ತು ಅವರ ಗೆಳೆತನದ ಶುಭಹಾರೈಕೆಗಳನ್ನು ನನ್ನೊಂದಿಗೆ ತಂದು ಇಲ್ಲಿನ ಸದನದ ಮೂಲಕ ಉಗಾಂಡದ ಎಲ್ಲ ಜನರಿಗೆ ತಿಳಿಸುತ್ತಿದ್ದೇನೆ. ಮೇಡಂ ಸ್ಪೀಕರ್, ನಿಮ್ಮ ಉಪಸ್ಥಿತಿ ನನಗೆ ನಮ್ಮ ಲೋಕಸಭೆಯನ್ನು ನೆನಪು ಮಾಡುತ್ತದೆ, ಕಾರಣ ನಮ್ಮ ದೇಶದಲ್ಲೂ ಲೋಕಸಭೆಯ ಸ್ಪೀಕರ್ ಆಗಿರುವುದು ಓರ್ವ ಮಹಿಳೆ. ನಾನು ಈ ಸಂಸತ್ತಿನಲ್ಲಿ ಬಹು ಸಂಖ್ಯೆಯ ಯುವ ಸದಸ್ಯರನ್ನು ನೋಡುತ್ತಿದ್ದೇನೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಶುಭ ಸಮಾಚಾರವಾಗಿದೆ. ನಾನು ಉಗಾಂಡಾಗೆ ಬಂದಾಗಲೆಲ್ಲ ಇದು 'ಆಫ್ರಿಕಾದ ಮುತ್ತು' ಎಂದು ಪಠಿಸುತ್ತೇನೆ. ಈ ರಾಷ್ಟ್ರ ಸೌಂದರ್ಯದ ಘನಿ. ಇಲ್ಲಿ ಶ್ರೇಷ್ಠ ಸಂಪನ್ಮೂಲವಿದೆ ಮತ್ತು ಶ್ರೀಮಂತ ಪರಂಪರೆಯಿದೆ. ಇಲ್ಲಿನ ನದಿಗಳು ಮತ್ತು ಕೊಳ್ಳಗಳು ಪ್ರಾಂತ್ಯದಾದ್ಯಂತ ನಾಗರಿಕತೆಗಳನ್ನು ಪೋಷಿಸಿವೆ. ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದ ಪ್ರಧಾನಿಯೊಬ್ಬರು ಮತ್ತೊಂದು ಸಾರ್ವಭೌಮತ್ವ ಹೊಂದಿರುವ ರಾಷ್ಟ್ರದ ಸಂಸತ್ತಿನ ಚುನಾಯಿತ ಸದಸ್ಯರನ್ನುದ್ದೇಶಿಸಿ ಮಾತನಾಡುವ ಈ ಅವಕಾಶದ ಹಿಂದಿನ ಇತಿಹಾಸದ ಅರಿವಿದೆ. ನಮ್ಮ ಹಿಂದಿನ ಕಡಲ ಸಂಬಂಧಗಳು, ವಸಾಹತುಷಾಹಿ ಆಡಳಿತದ ಕತ್ತಲೆಯುಗ, ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿ ಹೋರಾಟ ನಡೆಸಿದ್ದು, ವಿಭಜಿತ ವಿಶ್ವದಲ್ಲಿ ಸ್ವತಂತ್ರ ರಾಷ್ಟ್ರಗಳಾಗಿ ಅನಿಶ್ಚಿತತೆಯ ಮಾರ್ಗದಲ್ಲಿ ನಡೆಯುತ್ತಿರುವುದು, ಹೊಸ ಅವಕಾಶಗಳ ಅನ್ವೇಷಣೆ ಮತ್ತು ನಮ್ಮ ಯುವ ಜನಾಂಗದ ಏಕತೆಯ ಆಶೋತ್ತರಗಳು ಇವೆಲ್ಲ ನಮ್ಮನ್ನು ಬೆಸೆದಿವೆ.

PM Modi addresses India-Uganda Business Forum

July 25th, 12:41 pm

Addressing the India-Uganda Business Forum, PM Modi said that India was ready to work with Uganda in the fields of capacity building, HRD, skill development, innovation and also in adding value to the abundant natural resources available in this country. The PM also highlighted India’s growth trajectory and the transformative changes taking place in the country.

ಉಗಾಂಡಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ

July 24th, 08:58 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉಗಾಂಡಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಉಗಾಂಡಾದ ಅಧ್ಯಕ್ಷರಾದ ಮುಸೆವೇನಿ ಅವರು ಕಂಪಾಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

India has always been a partner in Africa's development journey and will remain so: PM Modi

July 24th, 08:58 pm

At the interaction with Indian community in Uganda, Prime Minister Narendra Modi highlighted the strong ties between both the countries as well as India and Africa. The PM spoke at length about India's growth trajectory and cited that the country was now the fastest growing major economy in the world.

PM Modi holds talks with President Kaguta Museveni of Uganda

July 24th, 08:36 pm

Prime Minister Narendra Modi today held fruitful talks with President Kaguta Museveni of Uganda. The leaders co-chaired the delegation level talks and comprehensively reviewed all aspects of bilateral relations.

ಪ್ರಧಾನ ಮಂತ್ರಿ ಅವರ ಉಗಾಂಡಾ ಭೇಟಿಯಲ್ಲಿ ಭಾರತ ಮತ್ತು ಉಗಾಂಡಾ ನಡುವೆ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಗಳ ಪಟ್ಟಿ

July 24th, 05:52 pm

ಪ್ರಧಾನ ಮಂತ್ರಿ ಅವರ ಉಗಾಂಡಾ ಭೇಟಿಯಲ್ಲಿ ಭಾರತ ಮತ್ತು ಉಗಾಂಡಾ ನಡುವೆ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆಗಳ ಪಟ್ಟಿ

PM Modi with President of Uganda Yoweri Museveni at a Joint Press Meet

July 24th, 05:49 pm

At the joint press meet with President Museveni of Uganda, PM Modi highlighted the deep rooted ties between both our countries. He highlighted how in areas such as training, capacity building, technology and infrastructure, both the countries would further enhance their partnership. The PM also announced two lines of credit worth $200 million.

PM Modi arrives in Uganda

July 24th, 05:12 pm

Prime Minister Narendra Modi arrived at Entebbe, Uganda marking the start of second leg of his three-nation tour. During his visit, PM Modi would hold talks with President of Uganda, address a community event and also deliver a Keynote address at the Parliament of Uganda.