ಜಂಟಿ ಹೇಳಿಕೆ: ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಪ್ರಧಾನಮಂತ್ರಿಯವರ ಭೇಟಿ (ಫೆಬ್ರವರಿ 13-14, 2024)

February 14th, 10:23 pm

ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಮತ್ತು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 13, 2024 ರಂದು ಅಬುಧಾಬಿಯಲ್ಲಿ ಭೇಟಿಯಾದರು. ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಯುಎಇಗೆ ಸ್ವಾಗತಿಸಿದರು ಮತ್ತು ಫೆಬ್ರವರಿ 14, 2024 ರಂದು ದುಬೈನಲ್ಲಿ ನಡೆದ ವಿಶ್ವ ಸರ್ಕಾರದ ಶೃಂಗಸಭೆ 2024 ರಲ್ಲಿ ಮಾತನಾಡಲು ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಯುಎಇಯ ಅಬುಧಾಬಿಯಲ್ಲಿ ಬಿಎಪಿಎಸ್ ಹಿಂದೂ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

February 14th, 07:16 pm

ಶ್ರೀ ಸ್ವಾಮಿ ನಾರಾಯಣ್ ಜೈ ದೇವ್, ಗೌರವಾನ್ವಿತ ಶೇಖ್ ನಹ್ಯಾನ್ ಅಲ್ ಮುಬಾರಕ್, ಗೌರವಾನ್ವಿತ ಮಹಂತ್ ಸ್ವಾಮಿ ಜೀ ಮಹಾರಾಜ್, ಭಾರತ, ಯುಎಇ ಮತ್ತು ವಿಶ್ವದಾದ್ಯಂತದ ವಿವಿಧ ದೇಶಗಳ ಗೌರವಾನ್ವಿತ ಅತಿಥಿಗಳು ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನನ್ನ ಸಹೋದರ ಸಹೋದರಿಯರೇ!

PM Modi inaugurates BAPS Hindu Mandir in Abu Dhabi, UAE

February 14th, 06:51 pm

Prime Minister Narendra Modi inaugurated the BAPS Hindu Mandir in Abu Dhabi, UAE. The PM along with the Mukhya Mahant of BAPS Hindu Mandir performed all the rituals. The PM termed the Hindu Mandir in Abu Dhabi as a symbol of shared heritage of humanity.

ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ

February 14th, 03:49 pm

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಫೆಬ್ರವರಿ 14ರಂದು ಯುಎಇ ಉಪಾಧ್ಯಕ್ಷರು, ಪ್ರಧಾನ ಮಂತ್ರಿಗಳು, ರಕ್ಷಣಾ ಸಚಿವರು ಹಾಗೂ ದುಬೈಯ ಪ್ರಮುಖ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

​​​​​​​ದುಬೈನ ಜೆಬೆಲ್ ಅಲಿಯಲ್ಲಿ ಭಾರತ್ ಮಾರ್ಟ್‌ಗೆ ವರ್ಚ್ಯುಯಲ್‌ ಮೂಲಕ ಶಂಕುಸ್ಥಾಪನೆ

February 14th, 03:48 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ದುಬೈನ ಪ್ರಧಾನಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು 14 ಫೆಬ್ರವರಿ 2024 ರಂದು ದುಬೈನ ಜೆಬೆಲ್ ಅಲಿ ಮುಕ್ತ ವ್ಯಾಪಾರ ವಲಯದಲ್ಲಿ ನಿರ್ಮಿಸಲಾಗುತ್ತಿರುವ ಭಾರತ್ ಮಾರ್ಟ್‌ಗೆ ವರ್ಚ್ಯುಯಲ್‌ ಆಗಿ ಶಂಕುಸ್ಥಾಪನೆ ನೆರವೇರಿಸಿದರು.

ದುಬೈ 2024 ನಡೆದ ವಿಶ್ವ ಸರ್ಕಾರಗಳ ಶೃಂಗಸಭೆಯ ಸಂದರ್ಭದಲ್ಲಿ ಮಡಗಾಸ್ಕರ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

February 14th, 02:55 pm

ದುಬೈನಲ್ಲಿ ಜರುಗಿದ ವಿಶ್ವ ಸರ್ಕಾರಗಳ ಶೃಂಗಸಭೆಯ ಸಂದರ್ಭದಲ್ಲಿ ಮಡಗಾಸ್ಕರ್ ಅಧ್ಯಕ್ಷ ಶ್ರೀ ಆಂಡ್ರಿ ರಾಜೋಲಿನಾ ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು. ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ.

ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

February 14th, 02:30 pm

ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ವಿಶೇಷವಾಗಿ ಎರಡನೇ ಬಾರಿಗೆ ಮುಖ್ಯ ಭಾಷಣ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ. ಈ ಆಮಂತ್ರಣವನ್ನು ನೀಡಿದ್ದಕ್ಕಾಗಿ ಮತ್ತು ಅಂತಹ ಆತ್ಮೀಯ ಸ್ವಾಗತವನ್ನು ನೀಡಿದ್ದಕ್ಕಾಗಿ ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ರಶೀದ್ ಜಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಗೌರವಾನ್ವಿತ ಸಹೋದರ , ಘನತೆವೆತ್ತ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೂ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇತ್ತೀಚೆಗೆ ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿದೆ. ಅವರು ದೂರ ದೃಷ್ಟಿಕೋನ ಹೊಂದಿರುವ ನಾಯಕ ಮಾತ್ರವಲ್ಲದೆ ನಿರ್ಣಯ ಮತ್ತು ಬದ್ಧತೆಯ ನಾಯಕರೂ ಕೂಡಾ ಹೌದು.

ವಿಶ್ವ ಸರ್ಕಾರಗಳ ಶೃಂಗಸಭೆ 2024 ರಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

February 14th, 02:09 pm

ಯು.ಎ.ಇ. ಉಪಾಧ್ಯಕ್ಷ, ಪ್ರಧಾನಮಂತ್ರಿ, ರಕ್ಷಣಾ ಸಚಿವರು ಮತ್ತು ದುಬೈ ಆಡಳಿತಗಾರರಾದ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14 ಫೆಬ್ರವರಿ 2024 ರಂದು ದುಬೈನಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು. ಶೃಂಗಸಭೆಯಲ್ಲಿ ಭವಿಷ್ಯದ ಸರ್ಕಾರಗಳನ್ನು ರೂಪಿಸುವುದು ವಿಷಯದ ಕುರಿತು ಅವರು ಪ್ರಧಾನ ಅಧಿವೇಶನದಲ್ಲಿ ವಿಶೇಷ ಭಾಷಣವನ್ನು ಮಾಡಿದರು. 2018 ರಲ್ಲಿ ವಿಶ್ವ ಸರ್ಕಾರಗಳ ಶೃಂಗಸಭೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪ್ರಧಾನಮಂತ್ರಿಯವರು ಭಾಗವಹಿಸಿದ್ದರು. ಈ ಬಾರಿಯ ಶೃಂಗಸಭೆಯಲ್ಲಿ 10 ರಾಷ್ಟ್ರಾಧ್ಯಕ್ಷರು ಮತ್ತು 10 ದೇಶಗಳ ಪ್ರಧಾನಮಂತ್ರಿಗಳು ಸೇರಿದಂತೆ 20 ವಿಶ್ವ ನಾಯಕರು ಭಾಗವಹಿಸಿದ್ದಾರೆ. ಈ ಜಾಗತಿಕ ಕೂಟದಲ್ಲಿ 120 ದೇಶಗಳ ಸರ್ಕಾರಗಳು ಮತ್ತು ಪ್ರತಿನಿಧಿಗಳು ಭಾಗವಹಿಸಿ ಪ್ರತಿನಿಧಿಸಿದ್ದಾರೆ.

PM Modi arrives in Abu Dhabi, UAE

February 13th, 05:47 pm

Prime Minister Narendra Modi arrived in Abu Dhabi, UAE. He was warmly received by UAE President HH Mohamed bin Zayed Al Nahyan at the airport.

ಯು.ಎ.ಇ. ಭೇಟಿಗೆ ಮುನ್ನ ಭಾರತೀಯ ವಲಸಿಗ ಸಮುದಾಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

February 13th, 10:56 am

ಪ್ರಪಂಚದೊಂದಿಗೆ ಭಾರತದ ವ್ಯವಹಾರಗಳನ್ನು ಗಾಢಗೊಳಿಸಲು ಭಾರತೀಯ ವಲಸಿಗ ಸಮುದಾಯದ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅವರನ್ನು ಶ್ಲಾಘಿಸಿದರು.

ಯು.ಎ.ಇ. ಮತ್ತು ಕತಾರ್ ಗೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿಯವರು ನೀಡಿದ ನಿರ್ಗಮನ ಹೇಳಿಕೆ

February 13th, 10:46 am

ನಾನು ಫೆಬ್ರವರಿ 13-14 , 2024 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮತ್ತು ಫೆಬ್ರವರಿ 14-15, 2024 ರವರೆಗೆ ಕತಾರ್ ಗೆ ಅಧಿಕೃತ ಭೇಟಿಗಾಗಿ ಪ್ರಯಾಣಿಸುತ್ತಿದ್ದೇನೆ. ಇದು ಯು.ಎ.ಇ.ಗೆ ನನ್ನ ಏಳನೇ ಭೇಟಿಯಾಗಿದೆ ಮತ್ತು 2014 ರಿಂದ ಈ ತನಕ ಕತಾರ್ ಗೆ ನನ್ನ ಎರಡನೇ ಭೇಟಿಯಾಗಿದೆ.

ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಸಭೆ

December 01st, 09:36 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 1ರಂದು ಯುಎಇಯಲ್ಲಿ ನಡೆದ ಸಿಒಪಿ-28 ಶೃಂಗಸಭೆಯ ನೇಪಥ್ಯದಲ್ಲಿ ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಶೌಕತ್ ಮಿರ್ಜಿಯೋಯೆವ್ ಅವರನ್ನು ಭೇಟಿ ಮಾಡಿದರು.

​​​​​​​ಮಾಲ್ಡೀವ್ಸ್‌ ಗಣರಾಜ್ಯದ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದ ಪ್ರಧಾನಮಂತ್ರಿ

December 01st, 09:35 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಡಿಸೆಂಬರ್‌ 1 ರಂದು ಯುಎಇಯಲ್ಲಿ ನಡೆದ ಸಿಒಪಿ-28 ಶೃಂಗ ಸಭೆಯ ಸಂದರ್ಭದಲ್ಲಿ ಮಾಲ್ಡೀವ್ಸ್‌ ಅಧ್ಯಕ್ಷರಾದ ಗೌರವಾನ್ವಿತ ಡಾ.ಮೊಹಮದ್‌ ಮುಯಿಝ್ ಅವರೊಂದಿಗೆ ಸಭೆ ನಡೆಸಿದರು.

​​​​​​​ಫ್ರಾನ್ಸ್‌ ಗಣರಾಜ್ಯದ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ

December 01st, 09:32 pm

ಫ್ರಾನ್ಸ್‌ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಮ್ಯಾನ್ಯುಯಲ್‌ ಮ್ಯಾಕ್ರೋನ್‌ ಅವರೊಂದಿಗೆ ಪ್ರಧಾನಮಂತ್ರಿ ‍ಶ್ರೀ ನರೇಂದ್ರ ಮೋದಿ ಅವರು 2023 ರ ಡಿಸೆಂಬರ್‌ 1 ರಂದು ದುಬೈನ ಸಿಒಪಿ ಶೃಂಗಸಭೆ ಸಂದರ್ಭದಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು.

​​​​​​​ಹವಾಮಾನ ಹಣಕಾಸು ವರ್ಗಾವಣೆ ಕುರಿತ ಕಾಪ್-28ರ ಅಧ್ಯಕ್ಷೀಯ ಗೋಷ್ಠಿಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

December 01st, 08:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 1ರಂದು ಯುಎಇನ ದುಬೈನಲ್ಲಿ ಹವಾಮಾನ ಹಣಕಾಸು ವರ್ಗಾವಣೆ ಕುರಿತ ಕಾಪ್-28 ಅಧ್ಯಕ್ಷೀಯ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೆಚ್ಚು ಹವಾಮಾನ ಹಣಕಾಸು ಲಭ್ಯತೆ, ಸುಲಭವಾಗಿ ಹಾಗೂ ಕೈಗೆಟುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಕರಿಸುತ್ತದೆ.

ಸ್ವೀಡನ್ ಸಾಮ್ರಾಜ್ಯದ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿ ಅವರ ಸಭೆ

December 01st, 08:32 pm

ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ವ್ಯಾಪಾರ ಮತ್ತು ಹೂಡಿಕೆ ಮತ್ತು ಹವಾಮಾನ ಸಹಕಾರ ಸೇರಿದಂತೆ ತಮ್ಮ ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಬಗ್ಗೆ ನಾಯಕರು ಫಲಪ್ರದ ಚರ್ಚೆ ನಡೆಸಿದರು. ಇಯು, ನಾರ್ಡಿಕ್ ಕೌನ್ಸಿಲ್ ಮತ್ತು ನಾರ್ಡಿಕ್ ಬಾಲ್ಟಿಕ್ 8 ಗ್ರೂಪ್ ಸೇರಿದಂತೆ ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದರು.

ಸಿಒಪಿ-28ರಲ್ಲಿ ಕೈಗಾರಿಕಾ ಪರಿವರ್ತನೆಗಾಗಿ ನಾಯಕತ್ವ ಗುಂಪಿನ ಎರಡನೇ ಹಂತಕ್ಕೆ ಭಾರತ ಮತ್ತು ಸ್ವೀಡನ್ ಜಂಟಿಯಾಗಿ ಆತಿಥ್ಯ ವಹಿಸಿವೆ

December 01st, 08:29 pm

ಭಾರತ ಮತ್ತು ಸ್ವೀಡನ್ ಉದ್ಯಮ ಪರಿವರ್ತನೆ ವೇದಿಕೆಯನ್ನು ಸಹ ಪ್ರಾರಂಭಿಸಿವೆ, ಇದು ಎರಡೂ ದೇಶಗಳ ಸರ್ಕಾರಗಳು, ಕೈಗಾರಿಕೆಗಳು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧಕರು ಮತ್ತು ಚಿಂತಕರ ಚಾವಡಿಗಳನ್ನು ಸಂಪರ್ಕಿಸುತ್ತದೆ.

​​​​​​​ಕಾಪ್-28ರಲ್ಲಿ ಜಾಗತಿಕ ಗ್ರೀನ್ ಕ್ರೆಡಿಟ್ ಉಪಕ್ರಮದಲ್ಲಿ ಯುಎಇ ಜತೆ ಸಹ ಆತಿಥ್ಯವಹಿಸಿದ ಭಾರತ

December 01st, 08:28 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ 2023ರ ಡಿಸೆಂಬರ್ 1 ರಂದು ದುಬೈನಲ್ಲಿ ಕಾಪ್-28 ನಲ್ಲಿ ‘ಗ್ರೀನ್ ಕ್ರೆಡಿಟ್ಸ್ ಪ್ರೋಗ್ರಾಂ’ ಕುರಿತು ಉನ್ನತ ಮಟ್ಟದ ಕಾರ್ಯಕ್ರಮದ ಸಹ ಆತಿಥ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ವೀಡನ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಉಲ್ಫ್ ಕ್ರಿಸ್ಟರ್ಸನ್, ಮೊಜಾಂಬಿಕ್ ಅಧ್ಯಕ್ಷ ಗೌರವಾನ್ವಿತ ಶ್ರೀ ಫಿಲಿಪ್ ನ್ಯುಸಿ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಗೌರವಾನ್ವಿತ ಶ್ರೀ ಚಾರ್ಲ್ಸ್ ಮೈಕೆಲ್ ಭಾಗವಹಿಸಿದ್ದರು.

ಇಸ್ರೇಲ್ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

December 01st, 06:44 pm

ಇಸ್ರೇಲ್ ಹಮಾಸ್ ಸಂಘರ್ಷದ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಕ್ಟೋಬರ್ 7 ರ ಭಯೋತ್ಪಾದಕ ದಾಳಿಯಲ್ಲಿನ ಜೀವಹಾನಿಯ ಬಗ್ಗೆ ಪ್ರಧಾನಮಂತ್ರಿಯವರು ಸಂತಾಪ ವ್ಯಕ್ತಪಡಿಸಿದರು ಮತ್ತು ಒತ್ತೆಯಾಳುಗಳ ಬಿಡುಗಡೆಯನ್ನು ಸ್ವಾಗತಿಸಿದರು.

​​​​​​​ಹವಾಮಾನ ಬದಲಾವಣೆಯ ಶೃಂಗಸಭೆ(ಸಿಒಪಿ)-28ರ ರಾಷ್ಟ್ರಗಳ ಮುಖ್ಯಸ್ಥ(ಎಚ್ಒಎಸ್)ರು ಮತ್ತು ಸರ್ಕಾರಗಳ ಮುಖ್ಯಸ್ಥ(ಎಚ್ಒಜಿ)ರು ಪಾಲ್ಗೊಂಡಿದ್ದ ಉನ್ನತ ಮಟ್ಟದ ಸಭೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ವಿಶೇಷ ಭಾಷಣ

December 01st, 03:55 pm

140 ಕೋಟಿ ಭಾರತೀಯರ ಪರವಾಗಿ ನಿಮಗೆಲ್ಲರಿಗೂ ನಮಸ್ಕಾರಗಳು! ಇಂದು, ಮೊದಲನೆಯದಾಗಿ ನಾನು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.