ಪೋಲಿಷ್ ಕಬಡ್ಡಿ ಆಟಗಾರರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ
August 22nd, 09:48 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರ್ಸಾದಲ್ಲಿ ಕಬಡ್ಡಿ ಫೆಡರೇಶನ್ ಆಫ್ ಪೋಲೆಂಡ್‌ನ ಅಧ್ಯಕ್ಷರಾದ ಶ್ರೀ ಮಿಚಲ್ ಸ್ಪಿಸ್ಕೋ ಮತ್ತು ಪೋಲೆಂಡ್ ಕಬಡ್ಡಿ ಫೆಡರೇಶನ್‌ನ ಮಂಡಳಿಯ ಸದಸ್ಯರಾದ ಶ್ರೀಮತಿ ಅನ್ನಾ ಕಲ್ಬರ್ಜಿಕ್ ಅವರನ್ನು ಭೇಟಿ ಮಾಡಿದರು.ಬಿಲ್ಲೆನಿಯಮ್ ಸಿ ಇ ಒ ಶ್ರೀ ಗವೆಲ್ ಲೋಪಿನ್ಸ್ಕಿ ಭೇಟಿ ಮಾಡಿದ ಪ್ರಧಾನ ಮಂತ್ರಿ
August 22nd, 09:22 pm
ಭಾರತದಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣ ಮತ್ತು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಪ್ರಧಾನಮಂತ್ರಿಯವರು ಮಾತುಕತೆ ವೇಳೆ ಉಲ್ಲೇಖಿಸಿದರು. ಗವೆಲ್ ಲೋಪಿನ್ಸ್ಕಿ ಅವರು ಮುಂದಿನ ದಿನಗಳಲ್ಲಿ ಹೊಂದಿರುವ ತಮ್ಮ ವಿಸ್ತರಣಾ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ಮೋದಿಯವರು ಕೇಳಿ ತಿಳಿದುಕೊಂಡರು. ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸೈಬರ್ ಭದ್ರತೆ ಮತ್ತು ಡಿಜಿಟಲ್ ಆರ್ಥಿಕತೆ ಕ್ಷೇತ್ರದಲ್ಲಿ ಭಾರತ-ಪೋಲೆಂಡ್ ನಡುವೆ ಉದ್ಯಮಗಳಲ್ಲಿ ಸಹಯೋಗ ಮಾಡಿಕೊಂಡರೆ ಸಿಗುವ ಮಹತ್ವದ ಅವಕಾಶಗಳನ್ನು ಪ್ರಸ್ತಾಪಿಸಿದರು.ಪ್ರಧಾನ ಮಂತ್ರಿ ಅವರಿಂದ ಟಿ ಝೆಡ್ ಎಂ ಒ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಅಲಿನಾ ಪೋಸ್ಲೂಷ್ನೆ ಅವರ ಭೇಟಿ
August 22nd, 09:20 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈವಿಧ್ಯಮಯ ನೈರ್ಮಲ್ಯ ಉತ್ಪನ್ನಗಳ ಮುಂಚೂಣಿ ತಯಾರಿಕಾ ಕಂಪೆನಿಯಾದ ಟಿ ಝೆಡ್ ಎಂ ಒ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಅಲಿನಾ ಪೋಸ್ಲೂಷ್ನೆ ಅವರನ್ನು ಭೇಟಿಯಾದರು.ಪ್ರಧಾನಮಂತ್ರಿ ಅವರಿಂದ ಪೋಲೆಂಡ್ – ಭಾರತೀಯ ಶಾಸ್ತ್ರಜ್ಞರ ಭೇಟಿ
August 22nd, 09:18 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪೋಲೆಂಡ್ ಭಾರತೀಯ ಶಾಸ್ತ್ರಜ್ಞರತಂಡವನ್ನು ಭೇಟಿ ಮಾಡಿದರು. ಪೋಲೆಂಡ್ ನ ಖ್ಯಾತ ಸಂಸ್ಕೃತ ವಿದ್ವಾನ್ ಪ್ರೊಫೆಸರ್ ಮಾರಿಯಾ ಕ್ರಿಸ್ಟೊಫರ್ ಬರ್ಸ್ಕಿ ಮತ್ತು ವಾರ್ಸಾ ವಿಶ್ವವಿದ್ಯಾಲಯ ಪ್ರೊಫೆಸರ್ ಎಮಿರಿಟಸ್ ಅವರು ಈ ತಂಡದಲ್ಲಿದ್ದರು. ಪ್ರೊಫೆಸರ್ ಬರ್ಸ್ಕಿ ಅವರು 1993 ರಿಂದ 1996ರವರೆಗೆ ಪೋಲೆಂಡ್ ನ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.ಭಾರತ-ಪೋಲೆಂಡ್ ನಡುವೆ ಕಾರ್ಯತಂತ್ರ ಸಹಭಾಗಿತ್ವದ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ (2024-2028)
August 22nd, 08:22 pm
ಪೋಲೆಂಡ್ ನ ವಾರ್ಸಾದಲ್ಲಿ 2024 ಆಗಸ್ಟ್ 22ರಂದು ಭಾರತ ಮತ್ತು ಪೋಲೆಂಡ್ ಪ್ರಧಾನ ಮಂತ್ರಿಗಳು ನಡೆಸಿದ ಮಾತುಕತೆ ವೇಳೆ ಸಾಧಿಸಿದ ಒಮ್ಮತಾಭಿಪ್ರಾಯದ ಮೇಲೆ ಕಾರ್ಯತಂತ್ರ ಸಹಭಾಗಿತ್ವ ಸ್ಥಾಪನೆಯಿಂದ ಉಂಟಾದ ದ್ವಿಪಕ್ಷೀಯ ಸಹಕಾರದ ಆವೇಗ ಗುರುತಿಸಿ, ಉಭಯ ನಾಯಕರು 5 ವರ್ಷಗಳ ಕ್ರಿಯಾಯೋಜನೆ(2024-2028) ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಪ್ಪಿಕೊಂಡರು. ಕ್ರಿಯಾಯೋಜನೆಯು 5 ವರ್ಷಗಳ ದ್ವಿಪಕ್ಷೀಯ ಸಹಭಾಗಿತ್ವವನ್ನು ಈ ಕೆಳಗಿನ ವಲಯಗಳಲ್ಲಿ ಆದ್ಯತೆಯಾಗಿ ರೂಪಿಸಲು ಮಾರ್ಗದರ್ಶನ ಮಾಡುತ್ತದೆ:"ಕಾರ್ಯತಂತ್ರ ಸಹಭಾಗಿತ್ವದ ಸ್ಥಾಪನೆ" ಕುರಿತು ಭಾರತ-ಪೋಲೆಂಡ್ ಜಂಟಿ ಹೇಳಿಕೆ
August 22nd, 08:21 pm
ಪೋಲೆಂಡ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಆಗಸ್ಟ್ 21-22ರಂದು ಪೋಲೆಂಡ್‌ಗೆ ಅಧಿಕೃತ ಭೇಟಿ ನೀಡಿದರು. ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಈ ಐತಿಹಾಸಿಕ ಭೇಟಿ ನೀಡಿದ್ದಾರೆ.ಪೋಲೆಂಡ್ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ
August 22nd, 08:14 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾರ್ಸಾದ ಬೆಲ್ವೆಡರ್ ಅರಮನೆಯಲ್ಲಿ ಪೋಲೆಂಡ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಆಂಡ್ರೆಜ್ ಸೆಬಾಸ್ಟಿಯನ್ ಡುಡಾ ಅವರನ್ನು ಭೇಟಿ ಮಾಡಿದರು.ವಾರ್ಸಾದಲ್ಲಿ ಅಜ್ಞಾತ ಸೈನಿಕರ ಸಮಾಧಿಗೆ ಭಾರತದ ಪ್ರಧಾನ ಮಂತ್ರಿಯವರಿಂದ ಗೌರವ ನಮನ ಸಲ್ಲಿಕೆ
August 22nd, 08:12 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾರ್ಸಾದಲ್ಲಿ ಅಜ್ಞಾತ ಯೋಧನೊಬ್ಬನ ಸಮಾಧಿಗೆ ಗೌರವ ನಮನ ಸಲ್ಲಿಸಿದರು.ಪೋಲೆಂಡ್ ಗಣರಾಜ್ಯದ ಪ್ರಧಾನ ಮಂತ್ರಿ ಜತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸಭೆ
August 22nd, 06:10 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಸಾದಲ್ಲಿಂದು ಪೋಲೆಂಡ್ ಗಣರಾಜ್ಯದ ಪ್ರಧಾನ ಮಂತ್ರಿ ಶ್ರೀ ಡೊನಾಲ್ಡ್ ಟಸ್ಕ್ ಅವರನ್ನು ಭೇಟಿಯಾದರು. ಫೆಡರಲ್ ಚಾನ್ಸೆಲರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಪೋಲೆಂಡ್ ಪ್ರಧಾನ ಮಂತ್ರಿ ಡೊನಾಲ್ಡ್ ಟಸ್ಕ್ ಅವರು ಬರಮಾಡಿಕೊಂಡು, ವಿಧ್ಯುಕ್ತ ಸ್ವಾಗತ ನೀಡಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪೋಲೆಂಡ್ ಪ್ರಧಾನ ಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ಕನ್ನಡ ಅನುವಾದ
August 22nd, 03:00 pm
ಘನತೆವೆತ್ತ ಪ್ರಧಾನ ಮಂತ್ರಿ ಡೊನಾಲ್ಡ್ ಟಸ್ಕ್ ಅವರೇ, ಎರಡೂ ದೇಶಗಳ ಪ್ರತಿನಿಧಿಗಳೇ, ಮಾಧ್ಯಮ ಮಿತ್ರರೇ,ಮಾಂಟೆ ಕ್ಯಾಸಿನೊ ಕದನದ ಸ್ಮಾರಕದಲ್ಲಿ ಪ್ರಧಾನ ಮಂತ್ರಿಯವರು ಗೌರವ ಸಲ್ಲಿಸಿದರು
August 21st, 11:55 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರ್ಸಾದಲ್ಲಿನ ಮಾಂಟೆ ಕ್ಯಾಸಿನೊ ಕದನದ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸಿ ಗೌರವ ಸಲ್ಲಿಸಿದರು.ಪೋಲೆಂಡ್ ನ ವಾರ್ಸಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
August 21st, 11:45 pm
ಈ ನೋಟ ನಿಜಕ್ಕೂ ಅದ್ಭುತ. ಮತ್ತು ನಿಮ್ಮ ಉತ್ಸಾಹವೂ ಅದ್ಭುತವಾಗಿದೆ. ನಾನು ಇಲ್ಲಿಗೆ ಕಾಲಿಟ್ಟ ಕ್ಷಣದಿಂದ, ನೀವು ದಣಿದಿಲ್ಲ. ನೀವೆಲ್ಲರೂ ಪೋಲೆಂಡ್ ನ ವಿವಿಧ ಭಾಗಗಳಿಂದ, ವಿಭಿನ್ನ ಭಾಷೆಗಳು, ಉಪಭಾಷೆಗಳು ಮತ್ತು ಪಾಕಪದ್ಧತಿಗಳ ಹಿನ್ನೆಲೆಯಿಂದ ಬಂದಿದ್ದೀರಿ. ಆದರೆ ಪ್ರತಿಯೊಬ್ಬರೂ ಭಾರತೀಯತೆಯ ಪ್ರಜ್ಞೆಯಿಂದ ಪರಸ್ಪರ ಸಂಪರ್ಕ ಹೊಂದಿದ್ದೀರಿ. ನೀವು ಇಲ್ಲಿ ನನಗೆ ಅದ್ಭುತ ಸ್ವಾಗತವನ್ನು ನೀಡಿದ್ದೀರಿ, ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮತ್ತು ಪೋಲೆಂಡ್ ಜನರಿಗೆ ಈ ಸ್ವಾಗತಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ.ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
August 21st, 11:30 pm
ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್‌ನ ವಾರ್ಸಾದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಪ್ರಸ್ತುತ ಜಾಗತಿಕ ಕಾರ್ಯತಂತ್ರವು ಬಲವಾದ ಅಂತರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸಲು ಮತ್ತು ಶಾಂತಿಯನ್ನು ಪೋಷಿಸಲು ಒತ್ತು ನೀಡುತ್ತದೆ ಎಂದು ಪ್ರಧಾನಿ ವ್ಯಕ್ತಪಡಿಸಿದರು. ಪ್ರತಿ ರಾಷ್ಟ್ರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಭಾರತದ ವಿಧಾನವು ಬದಲಾಗಿದೆ. ಜಾಗತಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಭಾರತದ ಐತಿಹಾಸಿಕ ಮೌಲ್ಯಗಳಾದ ಏಕತೆ ಮತ್ತು ಸಹಾನುಭೂತಿಯ ಮೇಲೆ ಗಮನ ಕೇಂದ್ರೀಕರಿಸಿದೆ.PM Modi pays tributes to Kolhapur Memorial in Warsaw, Poland
August 21st, 10:31 pm
PM Modi paid tributes to Kolhapur Memorial in Warsaw, Poland. He said that this Memorial is a tribute to the great Royal Family of Kolhapur. This Royal Family was at the forefront of giving shelter to Polish women and children displaced due to the horrors of World War II, Shri Modi further added.ಪೋಲೆಂಡ್‌ನ ವಾರ್ಸಾದಲ್ಲಿರುವ ನವನಗರ ಸ್ಮಾರಕದ ಜಾಮ್ ಸಾಹೇಬ್‌ಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು
August 21st, 10:27 pm
ಪೋಲೆಂಡ್‌ನ ವಾರ್ಸಾದಲ್ಲಿರುವ ನವನಗರ ಸ್ಮಾರಕದ ಜಾಮ್ ಸಾಹೇಬ್‌ಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ಪೋಲೆಂಡ್‌ನ ವಾರ್ಸಾದಲ್ಲಿರುವ ನವನಗರ ಸ್ಮಾರಕದ ಜಾಮ್ ಸಾಹೇಬ್, ಎರಡನೇ ಮಹಾಯುದ್ಧದಿಂದ ನಿರಾಶ್ರಿತರಾದ ಪೋಲಿಷ್ ಮಕ್ಕಳಿಗೆ ಆಶ್ರಯ ಮತ್ತು ಆರೈಕೆಯನ್ನು ಒದಗಿಸಿದ ಜಾಮ್ ಸಾಹೇಬ್ ದಿಗ್ವಿಜಯ್‌ಸಿಂಹಜಿ ರಂಜಿತ್‌ಸಿಂಹಜಿ ಜಡೇಜಾ ಅವರ ಮಾನವೀಯ ಕೊಡುಗೆಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.ಪೋಲೆಂಡ್‌ನ ವಾರ್ಸಾಗೆ ಆಗಮಿಸಿದ ಪ್ರಧಾನಿ ಮೋದಿ
August 21st, 06:11 pm
ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್‌ನ ವಾರ್ಸಾಗೆ ಆಗಮಿಸಿದರು. 45 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ. ಅವರು ಅಧ್ಯಕ್ಷ ಎಚ್.ಇ. ಶ್ರೀ ಆಂಡ್ರೆಜ್ ಸೆಬಾಸ್ಟಿಯನ್ ದುಡಾ ಹಾಗೂ ಪ್ರಧಾನ ಮಂತ್ರಿ ಹೆಚ್.ಇ. ಶ್ರೀ ಡೊನಾಲ್ಡ್ ಟಸ್ಕ್, ಮತ್ತು ಪೋಲೆಂಡ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಿ.ಪೋಲೆಂಡ್ ಗಣರಾಜ್ಯ ಮತ್ತು ಉಕ್ರೇನ್ ಭೇಟಿಗೆ ಮುನ್ನ ಪ್ರಧಾನ ಮಂತ್ರಿ ಅವರ ನಿರ್ಗಮನ ಹೇಳಿಕೆ
August 21st, 09:07 am
ನಮ್ಮ ರಾಜತಾಂತ್ರಿಕ ಸಂಬಂಧಗಳ 70 ವರ್ಷಗಳನ್ನು ನಾವು ಆಚರಿಸುತ್ತಿರುವ ಸಂದರ್ಭದಲ್ಲಿ ನನ್ನ ಪೋಲೆಂಡ್ ಭೇಟಿ ಬಂದಿದೆ. ಪೋಲೆಂಡ್ ಮಧ್ಯ ಯುರೋಪಿನ ಪ್ರಮುಖ ಆರ್ಥಿಕ ಪಾಲುದಾರ. ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ನಮ್ಮ ಪರಸ್ಪರ ಬದ್ಧತೆ ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸಲು ನನ್ನ ಸ್ನೇಹಿತ ಪ್ರಧಾನಿ ಡೊನಾಲ್ಡ್ ಟಸ್ಕ್ ಮತ್ತು ಅಧ್ಯಕ್ಷ ಆಂಡ್ರೆಜ್ ಡುಡಾ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ನಾನು ಪೋಲೆಂಡ್ ನ ರೋಮಾಂಚಕ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದೇನೆ.