FIPIC III ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮಾರೋಪ ಹೇಳಿಕೆಯ ಅನುವಾದ
May 22nd, 04:33 pm
ಈಗಾಗಲೇ ನೀವು ನೀಡಿರುವ ಅಭಿಪ್ರಾಯಗಳಿಗೆ ತುಂಬಾ ಧನ್ಯವಾದಗಳು. ಈಗ ನಡೆಯುತ್ತಿರುವ ಚರ್ಚೆಗಳಿಂದ ಹೊರಹೊಮ್ಮಿದ ವಿಚಾರಗಳನ್ನು ನಾವು ಖಂಡಿತವಾಗಿ ಪರಿಗಣಿಸುತ್ತೇವೆ. ಪೆಸಿಫಿಕ್ ದ್ವೀಪ ದೇಶಗಳ ಅಗತ್ಯತೆಗಳನ್ನು ಮತ್ತು ಕೆಲವು ಆದ್ಯತೆಗಳನ್ನು ಈಗಾಗಲೇ ನಾವು ಹಂಚಿಕೊಂಡಿದ್ದೇವೆ. ಈ ಎರಡೂ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವೇದಿಕೆಯ ಮುಖಾಂತರ ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲು ನಾವು ಮುಂದುವರಿಯುತ್ತೇವೆ. ಫೋರಂ ಫಾರ್ ಇಂಡಿಯಾ ಪೆಸಿಫಿಕ್ ಕೋಆಪರೇಷನ್ - FIPIC ಜೊತೆಗಿನ ನಮ್ಮ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು, ನಾನು ಕೆಲವು ಹೇಳಿಕೆಗಳನ್ನು ನೀಡಲು ಬಯಸುತ್ತೇನೆ.ಪ್ರಧಾನಮಂತ್ರಿಯವರಿಗೆ ಪಪುವಾ ನ್ಯೂ ಗಿನಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ
May 22nd, 03:09 pm
ಸರ್ಕಾರಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಪಪುವಾ ನ್ಯೂ ಗಿನಿಯಾ (ಪಿಎನ್.ಜಿ) ಗವರ್ನರ್ ಜನರಲ್ ಮಾನ್ಯ ಸರ್ ಬಾಬ್ ದಾಡೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆರ್ಡರ್ ಆಫ್ ಲೋಗೊಹು (ಜಿಸಿಎಲ್) ಗ್ರ್ಯಾಂಡ್ ಕಂಪಾನಿಯನ್ ಪ್ರಶಸ್ತಿ ಪ್ರದಾನ ಮಾಡಿದರು. ಇದು ಪಿಎನ್.ಜಿಯ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಪ್ರಶಸ್ತಿ ಪಡೆದವರಿಗೆ ಚೀಫ್ ಎಂಬ ಗೌರವ ಶೀರ್ಷಿಕೆ ಲಭಿಸುತ್ತದೆ..ಪಪುವಾ ನ್ಯೂ ಗಿನಿಯಾದಲ್ಲಿ ಐಟಿಇಸಿ ವಿದ್ವಾಂಸರೊಂದಿಗೆ ಪ್ರಧಾನಮಂತ್ರಿ ಸಂವಾದ
May 22nd, 02:58 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಮೇ 22ರಂದು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್ಐಪಿಐಸಿ) 3ನೇ ಶೃಂಗಸಭೆಗಾಗಿ ಪೋರ್ಟ್ ಮೊರೆಸ್ಬಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪೆಸಿಫಿಕ್ ದ್ವೀಪ ರಾಷ್ಟ್ರಗಳಾದ್ಯಂತದ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ಕೋರ್ಸ್ ಗಳ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಿರಿಯ ವಿದ್ಯಾರ್ಥಿಗಳಲ್ಲಿ ಐಟಿಇಸಿ ಅಡಿಯಲ್ಲಿ ಭಾರತದಲ್ಲಿ ತರಬೇತಿ ಪಡೆದ ಹಿರಿಯ ಸರ್ಕಾರಿ ಅಧಿಕಾರಿಗಳು, ಪ್ರಮುಖ ವೃತ್ತಿಪರರು ಮತ್ತು ಸಮುದಾಯದ ಮುಖಂಡರೂ ಸೇರಿದ್ದರು. ಅವರು ಭಾರತದಲ್ಲಿ ಗಳಿಸಿದ ಕೌಶಲ್ಯಗಳನ್ನು ಬಳಸಿಕೊಂಡು ತಮ್ಮ ಸಮಾಜಗಳಿಗೆ ಕೊಡುಗೆ ನೀಡುತ್ತಿದ್ದಾರೆ.ನ್ಯೂಜಿಲ್ಯಾಂಡ್ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿ ಸಭೆ
May 22nd, 02:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್.ಐ.ಪಿ.ಐ.ಸಿ.) 3ನೇ ಶೃಂಗಸಭೆಯ ವೇಳೆ 2023ರ ಮೇ 22ರಂದು ಪೋರ್ಟ್ ಮೊರೆಸ್ಬಿಯಲ್ಲಿ ನ್ಯೂಜಿಲೆಂಡ್ ಪ್ರಧಾನಮಂತ್ರಿ ಮಾನ್ಯ ಶ್ರೀ ಕ್ರಿಸ್ ಹಿಪ್ಕಿನ್ಸ್ ಅವರೊಂದಿಗೆ ಸಭೆ ನಡೆಸಿದರು. ಇದು ಇಬ್ಬರೂ ಪ್ರಧಾನ ಮಂತ್ರಿಗಳ ನಡುವಿನ ಮೊದಲ ಸಂವಾದವಾಗಿತ್ತು.ಫಿಜಿ ಗಣರಾಜ್ಯದ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿಯವರ ಸಭೆ
May 22nd, 02:37 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್ಐಪಿಐಸಿ) 3ನೇ ಶೃಂಗಸಭೆಯ ವೇಳೆ 2023ರ ಮೇ 22ರಂದು ಪೋರ್ಟ್ ಮೊರೆಸ್ಬಿಯಲ್ಲಿ ಫಿಜಿ ಗಣರಾಜ್ಯದ ಪ್ರಧಾನಮಂತ್ರಿ ಮಾನ್ಯ ಶ್ರೀ ಸಿತಿವೇನಿ ಲಿಗಮಮಡ ರಬುಕಾ ಅವರನ್ನು ಭೇಟಿ ಮಾಡಿದರು. ಇದು ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿತ್ತು. 2014ರ ನವೆಂಬರ್ ನಲ್ಲಿ ತಾವು ಫಿಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಫ್.ಐ.ಪಿ.ಐ.ಸಿ.ಯನ್ನು ಆರಂಭಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಂದಿನಿಂದ ಪೆಸಿಫಿಕ್ ದ್ವೀಪ ರಾಷ್ಟ್ರಗಳೊಂದಿಗೆ (ಪಿಐಸಿ) ಭಾರತದ ಸಹಕಾರ ಗಾಢವಾಗುತ್ತಿರುವುದನ್ನು ಉಲ್ಲೇಖಿಸಿದರು.Prime Minister honoured with the highest civilian awards of Papua New Guinea, Fiji and Palau
May 22nd, 02:18 pm
Prime Minister Narendra Modi, during his historic visit to Papua New Guinea, was conferred with three prestigious civilian awards. He was conferred the ‘Grand Companion of the Order of Logohu’ by Papua New Guinea, ‘Companion of the Order of Fiji’ by Republic of Fiji and ‘Ebakl’ Award by Republic of Palau.ಎಫ್ ಐ ಪಿ ಐ ಸಿ ಮೂರನೇ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಯ ಕನ್ನಡ ಅನುವಾದ
May 22nd, 02:15 pm
ಮೂರನೇ ಎಫ್ ಐ ಪಿ ಐ ಸಿ ಶೃಂಗಸಭೆಗೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ! ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ನನ್ನೊಂದಿಗೆ ಈ ಶೃಂಗಸಭೆಯನ್ನು ಆಯೋಜಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಪೋರ್ಟ್ ಮೊರೆಸ್ಬಿಯಲ್ಲಿ ಶೃಂಗಸಭೆಗಾಗಿ ಮಾಡಿರುವ ಎಲ್ಲಾ ವ್ಯವಸ್ಥೆಗಳಿಗಾಗಿ ನಾನು ಅವರಿಗೆ ಮತ್ತು ಅವರ ತಂಡಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 22nd, 08:39 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ 3 ನೇ ಶೃಂಗಸಭೆಯ (ಎಫ್ ಐ ಪಿ ಐ ಸಿ) ಸಂದರ್ಭದಲ್ಲಿ 22 ಮೇ 2023 ರಂದು ಪೋರ್ಟ್ ಮೊರೆಸ್ಬಿಯಲ್ಲಿರುವ ಸರ್ಕಾರಿ ಭವನದಲ್ಲಿ ಪಪುವಾ ನ್ಯೂಗಿನಿ ಗವರ್ನರ್-ಜನರಲ್ ಸರ್ ಬಾಬ್ ದಡಾಯೆ ಅವರನ್ನು ಭೇಟಿ ಮಾಡಿದರು.ಪಪುವಾ ನ್ಯೂಗಿನಿಯಾದ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 22nd, 08:39 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 22 ಮೇ 2023 ರಂದು ಪೋರ್ಟ್ ಮೊರೆಸ್ಬಿಯಲ್ಲಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್ ಐ ಪಿ ಐ ಸಿ) 3 ನೇ ಶೃಂಗಸಭೆಯ ಸಂದರ್ಭದಲ್ಲಿ ಪಪುವಾ ನ್ಯೂಗಿನಿಯಾದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಜೇಮ್ಸ್ ಮರಾಪೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.ಪಪುವಾ ನ್ಯೂ ಗಿನಿಯಾದ ಪೋರ್ಟ್ ಮೊರೆಸ್ಬಿಗೆ ಆಗಮಿಸಿದ ಪ್ರಧಾನಮಂತ್ರಿ
May 21st, 08:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಮೇ 21ರ ಸಂಜೆ ಪೋರ್ಟ್ ಮೊರೆಸ್ಬಿಗೆ ಆಗಮಿಸಿದರು. ಪಪುವಾ ನ್ಯೂ ಗಿನಿಯಾದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಜೇಮ್ಸ್ ಮರಪೆ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. 19 ಬಂದೂಕುಗಳ ಗೌರವ ವಂದನೆಯನ್ನು (ಗಾರ್ಡ್ ಆಫ್ ಹಾನರ್ ) ಪ್ರಧಾನಿ ಮೋದಿ ಅವರಿಗೆ ನೀಡಲಾಯಿತು.ಜಪಾನ್, ಪಪುವಾ ನ್ಯೂ ಗಿನಿಯಾ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಅಧಿಕೃತ ಭೇಟಿಗಾಗಿ ನಿರ್ಗಮಿಸುವ ಮುನ್ನ ಭಾರತದಲ್ಲಿ ಪ್ರಧಾನಿಯವರ ಹೇಳಿಕೆ
May 19th, 08:38 am
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ಕಿಶಿಡಾ ಅವರನ್ನು ಭಾರತ-ಜಪಾನ್ ಶೃಂಗಸಭೆ ಹಿನ್ನೆಲೆಯಲ್ಲಿ ಮತ್ತೆ ಭೇಟಿಯಾಗಲು ಸಂತೋಷವಾಗುತ್ತಿದೆ. ಭಾರತವು ಈ ವರ್ಷ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವುದರಿಂದ, ಈ ಜಿ-7 ಶೃಂಗಸಭೆಯಲ್ಲಿ ನನ್ನ ಉಪಸ್ಥಿತಿ ವಿಶೇಷವಾಗಿ ಅರ್ಥಪೂರ್ಣವಾಗಿದೆ. ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಸಾಮೂಹಿಕವಾಗಿ ಪರಿಹರಿಸುವ ಅಗತ್ಯದ ಬಗ್ಗೆ ಜಿ-7 ರಾಷ್ಟ್ರಗಳು ಮತ್ತು ಇತರ ಆಹ್ವಾನಿತ ಪಾಲುದಾರರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ಹಿರೋಷಿಮಾ ಜಿ-7 ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ನಾಯಕರೊಂದಿಗೆ ನಾನು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದೇನೆ.