ಪ್ಯಾಲೆಸ್ಟೈನ್ ನ ದಿವಂಗತ ಅಧ್ಯಕ್ಷ ಯಾಸ್ಸರ್ ಅರಾಫತ್ ಅವರಿಗೆ ಪ್ರಧಾನಮಂತ್ರಿ ಗೌರವ ಸಲ್ಲಿಸಿದರು

February 10th, 08:20 pm

ಪ್ಯಾಲೆಸ್ಟೈನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಖ್ಯಾತ ರಾಷ್ಟ್ರಪತಿ ಯಾಸರ್ ಅರಾಫತ್ ಗೆ ಗೌರವ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಅರಾಫತ್ ಸಮಾಧಿಗೆ ಪುಷ್ಪಾಂಜಲಿ ಸಲ್ಲಿಸಿದರು

ಪ್ರಧಾನಮಂತ್ರಿಯವರಿಗೆ ಪ್ಯಾಲೆಸ್ಟೈನ್ 'ಗ್ರಾಂಡ್ ಕಾಲರ್ ' ಸಮ್ಮಾನ ನೀಡಿತು

February 10th, 07:23 pm

ಭಾರತ ಮತ್ತು ಪ್ಯಾಲೆಸ್ತೈನ್ ನಡುವಿನ ಸಂಬಂಧಗಳಿಗೆ ಪ್ರಧಾನಿ ನೀಡಿದ ಕೊಡುಗೆಗೆ ವಿಶೇಷ ಮನ್ನಣೆ ನೀಡಿದ್ದಕ್ಕಾಗಿ, ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರು ಪ್ಯಾಲೇಸ್ಟೈನ್ ರಾಜ್ಯದ ರಾಮಲ್ಲಾಹದಲ್ಲಿ ನಡೆದ ದ್ವಿಪಕ್ಷೀಯ ಸಭೆಯ ಸಮಾಲೋಚನೆಯ ನಂತರ ಪ್ಯಾಲೆಸ್ಟೈನ್ ರಾಜ್ಯದ ಗ್ರ್ಯಾಂಡ್ ಕಾಲರ್ ನೀಡಿದರು.

ಪ್ಯಾಲೆಸ್ಟೈನ್ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರ ಪತ್ರಿಕಾ ಹೇಳಿಕೆ

February 10th, 04:36 pm

ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ಯಾಲೆಸ್ಟೈನ್ ಭೇಟಿಯ ಸಮಯದಲ್ಲಿ ಮಾತನಾಡುತ್ತಾ, ಎರಡೂ ದೇಶಗಳ ನಡುವಿನ ಸಂಬಂಧಗಳು ಎಲ್ಲಾ ಸಮಯದಲ್ಲಿ ದೃಢವಾಗಿದೆ ನಿಂತಿದೆ ಎಂದು ಹೇಳಿದರು. ಪ್ಯಾಲೆಸ್ಟೈನ್ ರಾಷ್ಟ್ರದ ನಿರ್ಮಾಣ ಪ್ರಯತ್ನಗಳಲ್ಲಿ ಭಾರತವು ಅತ್ಯಂತ ಹಳೆಯ ಮಿತ್ರರಾಷ್ಟ್ರ ಎಂದು ಅವರು ಹೇಳಿದರು. ಪ್ಯಾಲೆಸ್ಟೈನ್ ಶೀಘ್ರದಲ್ಲೇ ಶಾಂತಿಯುತ ವಾತಾವರಣದಲ್ಲಿ ಸಾರ್ವಭೌಮ ಮತ್ತು ಸ್ವತಂತ್ರ ರಾಷ್ಟ್ರವಾಗಲಿದೆ ಎಂದು ಭಾರತಕ್ಕೆ ಭರವಸೆ ಇದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಪ್ಯಾಲೆಸ್ಟೈನ್ ಗೆ ಪ್ರಧಾನಮಂತ್ರಿ ಆಗಮನ

February 10th, 03:14 pm

ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ಟೈನ್ ಗೆ ಆಗಮಿಸಿದರು. ಭಾರತದಿಂದ ಪ್ಯಾಲೆಸ್ತೀನ್ ಗೆ ಮೊದಲ ಪ್ರಧಾನ ಮಂತ್ರಿಯ ಐತಿಹಾಸಿಕ ಭೇಟಿಯನ್ನು ಇದು ಸೂಚಿಸುತ್ತದೆ . ಪ್ರಧಾನಮಂತ್ರಿ ರಾಮಾಲ್ಲಾದಲ್ಲಿ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಭೇಟಿಯಾಗಲಿದ್ದಾರೆ.

ಪ್ಯಾಲೆಸ್ಟೈನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ ಗೆ ತೆರಳುವ ಮುನ್ನ ಪ್ರಧಾನಮಂತ್ರಿ ಹೇಳಿಕೆ

February 08th, 11:05 pm

2015 ರಿಂದೀಚೆಗೆ ಐದನೇ ಬಾರಿಗೆ ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ಪ್ರದೇಶವನ್ನು ಭೇಟಿ ಮಾಡಲು ನನಗೆ ಸಂತೋಷವಾಗಿದೆ . ನಮ್ಮ ಬಾಹ್ಯ ಸಂಬಂಧದಲ್ಲಿ ಈ ಪ್ರದೇಶವು ಪ್ರಮುಖ ಆದ್ಯತೆಯಾಗಿದೆ. ಇಲ್ಲಿ ದೇಶಗಳೊಂದಿಗೆ ಸ್ಪಂದನಶೀಲ ಬಹು-ಆಯಾಮದ ಸಂಬಂಧಗಳನ್ನು ನಾವು ಆನಂದಿಸುತ್ತೇವೆ.