ʻಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ನೈಜರ್ʼ ಪ್ರಶಸ್ತಿ ಸ್ವೀಕಾರ ಕುರಿತು ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
November 17th, 08:30 pm
ನೈಜೀರಿಯಾದ ರಾಷ್ಟ್ರೀಯ ಪ್ರಶಸ್ತಿಯಾದ ʻಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ʼ ಅನ್ನು ನನಗೆ ನೀಡಿ ಗೌರವಿಸಿದ್ದಕ್ಕಾಗಿ ನಾನು ನಿಮಗೆ, ನಿಮ್ಮ ಸರ್ಕಾರಕ್ಕೆ ಮತ್ತು ನೈಜೀರಿಯಾದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನಾನು ಈ ಗೌರವವನ್ನು ನಮ್ರತೆ ಮತ್ತು ಗೌರವದಿಂದ ಸ್ವೀಕರಿಸುತ್ತೇನೆ. ಮತ್ತು ನಾನು ಈ ಗೌರವವನ್ನು ಭಾರತದ 1.4 ಶತಕೋಟಿ ಜನರಿಗೆ ಹಾಗೂ ಭಾರತ ಮತ್ತು ನೈಜೀರಿಯಾ ನಡುವಿನ ಶಾಶ್ವತ ಸ್ನೇಹಕ್ಕೆ ಅರ್ಪಿಸುತ್ತೇನೆ. ಈ ಗೌರವವು ಭಾರತ ಮತ್ತು ನೈಜೀರಿಯಾ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸ್ಫೂರ್ತಿ ನೀಡುತ್ತದೆ.ಪ್ರಧಾನ ಮಂತ್ರಿಯವರಿಗೆ "ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ನೈಜರ್" ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು
November 17th, 08:11 pm
ಸ್ಟೇಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ, ನೈಜೀರಿಯಾ ಫೆಡರಲ್ ರಿಪಬ್ಲಿಕ್ ನ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಬೋಲಾ ಅಹ್ಮದ್ ಟಿನುಬು ಅವರು ಭಾರತ-ನೈಜೀರಿಯಾ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ರಾಜನೀತಿ ಮತ್ತು ಅದ್ಭುತ ಕೊಡುಗೆಗಾಗಿ ಅವರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ನೈಜರ್ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ಶಕ್ತಿಕೇಂದ್ರವಾಗಿ ಸ್ಥಾನ ಪಡೆದಿದ್ದು, ಅವರ ಪರಿವರ್ತನಾತ್ಮಕ ಆಡಳಿತವು ಎಲ್ಲರಿಗೂ ಏಕತೆ, ಶಾಂತಿ ಮತ್ತು ಹಂಚಿಕೆಯ ಪ್ರವೃತ್ತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಪ್ರಶಸ್ತಿಯ ಉಲ್ಲೇಖವು ಹೇಳುತ್ತದೆ.ನೈಜೀರಿಯಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
November 17th, 07:20 pm
ಇಂದು, ನೀವು ನಿಜವಾಗಿಯೂ ಅಬುಜಾದಲ್ಲಿ ಅದ್ಭುತ ವಾತಾವರಣವನ್ನು ಸೃಷ್ಟಿಸಿದ್ದೀರಿ. ನಿನ್ನೆ ಸಂಜೆಯಿಂದ ಎಲ್ಲವನ್ನೂ ನೋಡಿದಾಗ, ನಾನು ಅಬುಜಾದಲ್ಲಿಲ್ಲ ಆದರೆ ಭಾರತದ ನಗರದಲ್ಲಿ ಇದ್ದೇನೆ ಎಂದು ಅನಿಸುತ್ತದೆ. ನಿಮ್ಮಲ್ಲಿ ಅನೇಕರು ಲಾಗೋಸ್, ಕಾನೊ, ಕಡುನಾ ಮತ್ತು ಪೋರ್ಟ್ ಹಾರ್ಕೋರ್ಟ್ ನಿಂದ ಅಬುಜಾಗೆ ಪ್ರಯಾಣಿಸಿದ್ದೀರಿ, ವಿವಿಧ ಸ್ಥಳಗಳಿಂದ ಬಂದಿದ್ದೀರಿ ಮತ್ತು ನಿಮ್ಮ ಮುಖದ ಮೇಲಿನ ಹೊಳಪು, ನೀವು ಹೊರಸೂಸುವ ಶಕ್ತಿ ಮತ್ತು ಉತ್ಸಾಹವು ಇಲ್ಲಿರಲು ನಿಮ್ಮ ಉತ್ಸುಕತೆಯನ್ನು ಪ್ರತಿಬಿಂಬಿಸುತ್ತದೆ. ನಾನು ಕೂಡ ನಿಮ್ಮನ್ನು ಭೇಟಿಯಾಗುವ ಈ ಅವಕಾಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ನನಗೆ ಅಪಾರ ನಿಧಿಯಾಗಿದೆ. ನಿಮ್ಮ ನಡುವೆ ಇದ್ದು, ನಿಮ್ಮೊಂದಿಗೆ ಸಮಯ ಕಳೆಯುವುದರಿಂದ, ಈ ಕ್ಷಣಗಳು ನನ್ನ ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನೈಜೀರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ
November 17th, 07:15 pm
ಪ್ರಧಾನಮಂತ್ರಿಯಾಗಿ ನೈಜೀರಿಯಾಕ್ಕೆ ಇದು ಅವರ ಮೊದಲ ಭೇಟಿ ಎಂದು ಹೇಳಿದ ಶ್ರೀ ಮೋದಿ, ತಮ್ಮೊಂದಿಗೆ ಕೋಟ್ಯಂತರ ಭಾರತೀಯರ ಶುಭ ಹಾರೈಕೆಗಳನ್ನು ತಂದಿರುವೆನು ಎಂದು ಹೇಳಿದರು. ನೈಜೀರಿಯಾದಲ್ಲಿರುವ ಭಾರತೀಯರ ಪ್ರಗತಿಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ ಎಂದು ಅವರು ಹೇಳಿದರು. ಅಧ್ಯಕ್ಷ ಟಿನುಬು ಮತ್ತು ನೈಜೀರಿಯಾದ ಜನರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು ಎಲ್ಲಾ ವಿನಮ್ರತೆಯೊಂದಿಗೆ ಪ್ರಶಸ್ತಿಯನ್ನು ಕೋಟಿಗಟ್ಟಲೆ ಭಾರತೀಯರಿಗೆ ಅರ್ಪಿಸಿದರು.ನೈಜೀರಿಯಾ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅಧಿಕೃತ ಮಾತುಕತೆ
November 17th, 06:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17-18 ನವೆಂಬರ್ 2024 ರಿಂದ ನೈಜೀರಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ನೈಜೀರಿಯಾದ ಅಧ್ಯಕ್ಷ ಶ್ರೀ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ಅವರೊಂದಿಗೆ ಅಧಿಕೃತ ಮಾತುಕತೆ ನಡೆಸಿದರು. ಇಂದು ಅಬುಜಾದಲ್ಲಿ ರಾಜ್ಯ ಭವನಕ್ಕೆ ಆಗಮಿಸಿದ ಪ್ರಧಾನಿಯವರಿಗೆ 21 ಗನ್ ಸೆಲ್ಯೂಟ್‌ನೊಂದಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು.ನೈಜೀರಿಯಾದ ಮರಾಠಿ ಸಮುದಾಯವು ತಮ್ಮ ಸಂಸ್ಕೃತಿ ಮತ್ತು ಮೂಲಸ್ಥಾನದ ಬೇರುಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ
November 17th, 06:05 am
ನೈಜೀರಿಯಾದ ಮರಾಠಿ ಸಮುದಾಯವು ಅವರ ಸಂಸ್ಕೃತಿ ಮತ್ತು ಮೂಲ ಸ್ಥಾನದ ಬೇರುಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು. ಸಮುದಾಯವು ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿತು.PM Modi arrives in Abuja, Nigeria
November 17th, 02:00 am
Prime Minister Narendra Modi arrived in Abuja, Nigeria. This is the Prime Minister's first visit to Nigeria. During the visit, PM Modi will hold talks with President Bola Ahmed Tinubu. He will also interact with the Indian community.