ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಿ ಉಪಕ್ರಮವನ್ನು ಬೆಂಬಲಿಸಿದ ಗಯಾನದಾ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಮಂತ್ರಿ

November 25th, 10:39 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ತಮ್ಮ ಉಪಕ್ರಮವನ್ನು ಬೆಂಬಲಿಸಿದ ಗಯಾನ ಅಧ್ಯಕ್ಷರಾದ ಡಾ.ಇರ್ಫಾನ್ ಆಲಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ನಿನ್ನೆಯ ಮನ್ ಕಿ ಬಾತ್ ಆವೃತ್ತಿಯಲ್ಲಿ ಗಯಾನದಲ್ಲಿನ ಭಾರತೀಯ ಸಮುದಾಯದ ಶ್ಲಾಘನೆಯನ್ನು ಪುನರುಚ್ಚರಿಸಿದ್ದಾರೆ.

ಗಯಾನಾದ ಪ್ರಮುಖ ಕ್ರಿಕೆಟ್ ಆಟಗಾರರೊಂದಿಗೆ ಪ್ರಧಾನಮಂತ್ರಿ ಸಂವಾದ

November 22nd, 05:31 am

ಕ್ರಿಕೆಟ್ ಕ್ರೀಡೆಯು ಭಾರತ ಮತ್ತು ಗಯಾನಾವನ್ನು ಹತ್ತಿರವಾಗಿಸಿದೆ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಗಾಢವಾಗಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಯಾನಾದ ಪ್ರಮುಖ ಕ್ರಿಕೆಟ್ ಆಟಗಾರರ ಜೊತೆಗಿನ ಸಂವಾದದಲ್ಲಿ ಬಣ್ಣಿಸಿದ್ದಾರೆ.

ಆರ್ಯ ಸಮಾಜದ ಸ್ಮಾರಕಕ್ಕೆ ಪ್ರಧಾನಮಂತ್ರಿಯವರಿಂದ ಗೌರವ ನಮನ

November 22nd, 03:09 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗಯಾನಾದ ಜಾರ್ಜ್ ಟೌನ್ ನಲ್ಲಿರುವ ಆರ್ಯ ಸಮಾಜದ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಗಯಾನಾದಲ್ಲಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಗಯಾನಾ ಜನರ ಪ್ರಯತ್ನಗಳು ಮತ್ತು ಪಾತ್ರವನ್ನು ಶ್ರೀ ಮೋದಿಯವರು ಶ್ಲಾಘಿಸಿದರು. ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜಯಂತಿಯನ್ನು ನಾವು ಆಚರಿಸುತ್ತಿರುವುದರಿಂದ ಈ ವರ್ಷವು ಬಹಳ ವಿಶೇಷವಾಗಿದೆ ಎಂದು ಅವರು ಹೇಳಿದರು.

ಗಯಾನಾದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ ಪ್ರವರ್ಧಮಾನಕ್ಕೆ ಬರುತ್ತಿವೆ: ಪ್ರಧಾನಮಂತ್ರಿ

November 22nd, 03:06 am

ಭಾರತ-ಗಯಾನ ಸಾಂಸ್ಕೃತಿಕ ಸಂಬಂಧಗಳ ಮತ್ತಷ್ಟು ಬಲವರ್ಧನೆಗೆ ಸ್ವಾಮಿ ಆಕಾಶರಾನಂದಜಿ ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸರಸ್ವತಿ ವಿದ್ಯಾನಿಕೇತನ ಶಾಲೆಗೆ ಭೇಟಿ ನೀಡಿದ್ದರು ಮತ್ತು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯ ಗಯಾನಾದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಹೇಳಿದರು.

India's journey over the past decade has been one of scale, speed and sustainability: PM Modi in Guyana

November 22nd, 03:02 am

PM Modi addressed the Indian community in Georgetown, Guyana, thanking President Dr. Irfaan Ali for the warm welcome and hospitality. He highlighted planting a tree as part of the Ek Ped Maa ke Naam initiative and received Guyana's highest national honor, dedicating it to 1.4 billion Indians and the Indo-Guyanese community. Reflecting on his earlier visit, he praised the enduring bond between India and Guyana.

Prime Minister Shri Narendra Modi addresses the Indian Community of Guyana

November 22nd, 03:00 am

PM Modi addressed the Indian community in Georgetown, Guyana, thanking President Dr. Irfaan Ali for the warm welcome and hospitality. He highlighted planting a tree as part of the Ek Ped Maa ke Naam initiative and received Guyana's highest national honor, dedicating it to 1.4 billion Indians and the Indo-Guyanese community. Reflecting on his earlier visit, he praised the enduring bond between India and Guyana.

PM Modi meets with President of Suriname

November 21st, 10:57 pm

PM Modi met with President Chandrikapersad Santokhi of Suriname on the sidelines of the 2nd India-CARICOM Summit in Georgetown, Guyana. The two leaders reviewed the progress of ongoing bilateral initiatives and discussed enhancing cooperation in defense and security, trade, agriculture, digital initiatives, UPI, ICT, healthcare, pharmaceuticals, capacity building, culture, and people-to-people ties.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಗ್ರೆನಡಾದ ಪ್ರಧಾನಮಂತ್ರಿಯವರ ಭೇಟಿ

November 21st, 10:44 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರೆನಡಾದ ಪ್ರಧಾನಿ ಶ್ರೀ. ಡಿಕನ್ ಮಿಚೆಲ್ ಅವರನ್ನು ನವೆಂಬರ್ 20 ರಂದು ಗಯಾನಾದ ಜಾರ್ಜ್ಟೌನ್ ನಲ್ಲಿ 2ನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯ ಜೊತೆಜೊತೆಗೆ ಭೇಟಿಯಾದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಮಂತ್ರಿಯವರ ಭೇಟಿ

November 21st, 10:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಯಾನಾದ ಜಾರ್ಜ್ಟೌನ್ನಲ್ಲಿ 2 ನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯ ನೇಪಥ್ಯದಲ್ಲಿ ನವೆಂಬರ್ 20 ರಂದು ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯದ ಪ್ರಧಾನಿ ಡಾ ಕೀತ್ ರೌಲಿ ಅವರನ್ನು ಭೇಟಿಯಾದರು.

ಭಾರತೀಯ ಸ್ಮಾರಕಕ್ಕೆ ಪ್ರಧಾನಮಂತ್ರಿ ಭೇಟಿ

November 21st, 10:00 pm

ಅವರ ಜೊತೆಗೆ ಗಯಾನಾ ಪ್ರಧಾನಿ ಬ್ರಿಗೇಡಿಯರ್‌ (ನಿವೃತ್ತ) ಮಾರ್ಕ್ ಫಿಲಿಪ್ಸ್ ಇದ್ದರು. ಈ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಮಂತ್ರಿ ಅವರನ್ನು ಟಾಸ್ಸಾ ಡ್ರಮ್ಸ್‌ನ ಮೇಳ ಸ್ವಾಗತಿಸಿತು.

ಮಹಾತ್ಮಾ ಗಾಂಧಿ ಅವರಿಗೆ ಪ್ರಧಾನಮಂತ್ರಿ ನಮನ

November 21st, 09:57 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಯಾನಾದ ಜಾರ್ಜ್‌ಟೌನ್‌ನಲ್ಲಿರುವ ಐತಿಹಾಸಿಕ ವಾಯುವಿಹಾರ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಮನ ಸಲ್ಲಿಸಿದರು.

ಡೊಮಿನಿಕಾ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

November 21st, 09:29 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೊಮಿನಿಕಾದ ಪ್ರಧಾನಮಂತ್ರಿ ಶ್ರೀ ರೂಸ್‌ವೆಲ್ಟ್ ಸ್ಕೆರಿಟ್ ಅವರನ್ನು ಗಯಾನಾದ ಜಾರ್ಜ್‌ಟೌನ್‌ನಲ್ಲಿ 2 ನೇ ಭಾರತ-ಕಾರಿಕಾಮ್ ಶೃಂಗಸಭೆಯ ನೇಪಥ್ಯದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

The bond between India & Guyana is of soil, of sweat, of hard work: PM Modi

November 21st, 08:00 pm

Prime Minister Shri Narendra Modi addressed the National Assembly of the Parliament of Guyana today. He is the first Indian Prime Minister to do so. A special session of the Parliament was convened by Hon’ble Speaker Mr. Manzoor Nadir for the address.

ಗಯಾನಾ ಸಂಸತ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 21st, 07:50 pm

ಗಯಾನಾ ಸಂಸತ್ತಿನ ರಾಷ್ಟ್ರೀಯ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾಷಣ ಮಾಡಿದರು. ಅಲ್ಲಿನ ಸಂಸತ್‌ ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿಗಳ ಭಾಷಣಕ್ಕಾಗಿ ಮಾನ್ಯ ಸ್ಪೀಕರ್ ಶ್ರೀ ಮಂಜೂರ್ ನಾದಿರ್ ಅವರು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದರು.

ಸೇಂಟ್ ಲೂಸಿಯಾ ಪ್ರಧಾನಮಂತ್ರಿ​​​​​​​ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

November 21st, 10:13 am

ಎರಡನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 20 ರಂದು ಸೇಂಟ್ ಲೂಸಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ. ಫಿಲಿಪ್ ಜೆ. ಪಿಯರ್ ಅವರನ್ನು ಭೇಟಿ ಮಾಡಿ ಫಲಪ್ರದ ಮಾತುಕತೆ ನಡೆಸಿದರು.

ಪ್ರಧಾನಮಂತ್ರಿಯವರಿಂದ ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಿಯವರ ಭೇಟಿ

November 21st, 09:37 am

ಅಭಿವೃದ್ಧಿ ಹೊಂದುತ್ತಿರುವ ಕಿರು ದ್ವೀಪ ರಾಷ್ಟ್ರಗಳು (ಎಸ್ ಐ ಡಿ ಎಸ್) ಗಾಗಿ ಸಾಮರ್ಥ್ಯ ನಿರ್ಮಾಣ ಹಾಗೂ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಕುರಿತು ಉಭಯ ನಾಯಕರು ಚರ್ಚಿಸಿದರು. ಭಾರತ- ಕ್ಯಾರಿಕಾಮ್ ಪಾಲುದಾರಿಕೆಯನ್ನು ಬಲಪಡಿಸಲು ಪ್ರಧಾನಮಂತ್ರಿಗಳ ಏಳು ಅಂಶಗಳ ಯೋಜನೆಯನ್ನು ಪ್ರಧಾನಿ ಬ್ರೌನ್ ಶ್ಲಾಘಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲವನ್ನು ಅವರು ಪುನರುಚ್ಚರಿಸಿದರು.

ಬಹಾಮಾಸ್ ಪ್ರಧಾನಿಯವರನ್ನು ಭೇಟಿಯಾದ ಪ್ರಧಾನಮಂತ್ರಿ

November 21st, 09:25 am

ಇಬ್ಬರೂ ನಾಯಕರು ಆರ್ಥಿಕ ಸಹಕಾರ, ಹಸಿರು ಪಾಲುದಾರಿಕೆ ಮತ್ತು ಜನರಿಂದ ಜನರ ಬಾಂಧವ್ಯಗಳ ಕುರಿತು ಫಲಪ್ರದ ಮತ್ತು ಫಲಿತಾಂಶದಾಯಲ ಚರ್ಚೆಗಳನ್ನು ನಡೆಸಿದರು. ಭಾರತದಿಂದ 1 ದಶಲಕ್ಷ ಅಮೆರಿಕನ್ ಡಾಲರ್ ನೆರವಿನೊಂದಿಗೆ ಯು ಎನ್ ಡಿ ಪಿ ಅನುಷ್ಠಾನಗೊಳಿಸುತ್ತಿರುವ ಚಂಡಮಾರುತ ಆಶ್ರಯ ಯೋಜನೆಯಾದ ಅಬಾಕೊ ಹರಿಕೇನ್ ಶೆಲ್ಟರ್ ಪ್ರಾಜೆಕ್ಟ್ ನಲ್ಲಿನ ಸ್ಥಿರ ಪ್ರಗತಿಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

PM Modi meets with the Prime Minister of Barbados

November 21st, 09:13 am

PM Modi met Barbados PM Mia Amor Mottley during the India-CARICOM Summit, discussing cooperation in health, pharma, climate action, and cultural ties. They reviewed bilateral relations, global institutional reforms, and India’s leadership in the Global South.

PM Modi conferred with The Order of Excellence of Guyana

November 21st, 07:41 am

PM Modi was conferred Guyana's highest national award, The Order of Excellence, by President Dr. Mohamed Irfaan Ali for his visionary leadership and efforts to strengthen India-Guyana ties. The PM dedicated the honor to the people of India and the deep historical bond between the nations.

ಪ್ರಧಾನಮಂತ್ರಿ ಅವರಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

November 21st, 05:39 am

ಡೊಮಿನಿಕಾಗೆ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ನೀಡಿದ ಬೆಂಬಲ ಹಾಗೂ ಭಾರತ ಮತ್ತು ಡೊಮಿನಿಕಾ ಬಾಂಧವ್ಯವನ್ನು ಬಲಪಡಿಸುವ ಬದ್ಧತೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕಾಮನ್ವೆಲ್ತ್ ಆಫ್ ಡೊಮಿನಿಕಾದ ಅಧ್ಯಕ್ಷರಾದ ಗೌರವಾನ್ವಿತ ಸಿಲ್ವಾನಿ ಬರ್ಟನ್ ಅವರು ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಡೊಮಿನಿಕಾ ಅವಾರ್ಡ್ ಆಫ್ ಆನರ್ (ಗೌರವ ಪ್ರಶಸ್ತಿ) ಯನ್ನು ನೀಡಿ ಗೌರವಿಸಿದರು. ಡೊಮಿನಿಕಾದ ಪ್ರಧಾನಿ ಶ್ರೀ.ರೂಸ್ವೆಲ್ಟ್ ಸ್ಕೆರಿಟ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಯಾನಾ ಅಧ್ಯಕ್ಷ ಡಾ. ಇರ್ಫಾನ್ ಅಲಿ, ಬಾರ್ಬಡೋಸ್ ಪ್ರಧಾನಿ ಮಿಯಾ ಅಮೋರ್ ಮೊಟ್ಲಿ, ಗ್ರೆನಡಾದ ಪ್ರಧಾನಿ ಶ್ರೀ ಡಿಕಾನ್ ಮಿಚೆಲ್, ಸೇಂಟ್ ಲೂಸಿಯಾ ಪ್ರಧಾನಿ ಫಿಲಿಪ್ ಜೆ. ಪೈರ್ರೆ ಹಾಗೂ ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಿ ಶ್ರೀ ಗ್ಯಾಸ್ಟನ್ ಬ್ರೌನೆ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಕ್ಷಿಯಾದರು.