ಭಾರತ-ಗ್ರೀಸ್ ಜಂಟಿ ಹೇಳಿಕೆ
August 25th, 11:11 pm
ಭಾರತ ಮತ್ತು ಗ್ರೀಸ್ ಎರಡೂ ಐತಿಹಾಸಿಕ ಸಂಪರ್ಕಗಳನ್ನು ಹಂಚಿಕೊಂಡಿವೆ ಎಂಬುದನ್ನು ಪ್ರಧಾನಮಂತ್ರಿ ಮಿಟ್ಸೊಟಾಕಿಸ್ ಮತ್ತು ಪ್ರಧಾನಿ ನರೇಂದ ಮೋದಿ ಒಪ್ಪಿಕೊಂಡರು ಮತ್ತು ಜಾಗತಿಕ ವ್ಯವಸ್ಥೆಯು ಅಭೂತಪೂರ್ವ ಬದಲಾವಣೆಗಳಿಗೆ ಒಳಗಾಗುತ್ತಿರುವ ಸಮಯದಲ್ಲಿ, ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸಲು ಪುನಶ್ಚೇತನದ ವಿಧಾನದ ಅಗತ್ಯವಿದೆ ಎಂದು ಸಮ್ಮತಿಸಿದರು.ಗ್ರೀಸ್ ನಲ್ಲಿ ಇಸ್ಕಾನ್ ಮುಖ್ಯಸ್ಥ ಗುರು ದಯಾನಿಧಿ ದಾಸ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ
August 25th, 10:55 pm
ಆಗಸ್ಟ್ 25, 2023 ರಂದು ಅಥೆನ್ಸ್ನಲ್ಲಿ ಗ್ರೀಸ್ನಲ್ಲಿ ಇಸ್ಕಾನ್ ಮುಖ್ಯಸ್ಥ ಗುರು ದಯಾನಿಧಿ ದಾಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಯಾದರು.ಖ್ಯಾತ ಗ್ರೀಕ್ ಸಂಶೋಧಕ ಮತ್ತು ಸಂಗೀತಗಾರ ಶ್ರೀ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ
August 25th, 10:41 pm
ಭಾರತದ ಸ್ನೇಹಿತ, ಗ್ರೀಕ್ ಸಂಶೋಧಕ, ಸಂಗೀತಗಾರ ಶ್ರೀ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರನ್ನು ಆಗಸ್ಟ್ 25, 2023 ರಂದು ಅಥೆನ್ಸ್ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿಯಾದರು.ಗ್ರೀಕ್ ಶಿಕ್ಷಣ ತಜ್ಞರೊಂದಿಗೆ ಪ್ರಧಾನಮಂತ್ರಿ ಅವರ ಸಭೆ
August 25th, 10:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 25ರಂದು ಅಥೆನ್ಸ್ ನಲ್ಲಿ ಅಥೆನ್ಸ್ ವಿಶ್ವವಿದ್ಯಾಲಯದ ಇಂಡಾಲಜಿಸ್ಟ್ ಮತ್ತು ಸಂಸ್ಕೃತ ಮತ್ತು ಹಿಂದಿ ಪ್ರಾಧ್ಯಾಪಕ ಪ್ರೊಫೆಸರ್ ಡಿಮಿಟ್ರಿಯಸ್ ವಾಸ್ಸಿಲಿಡಿಸ್ ಮತ್ತು ಅಥೆನ್ಸ್ ವಿಶ್ವವಿದ್ಯಾಲಯದ ಸಾಮಾಜಿಕ ದೇವತಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅಪೊಸ್ಟೊಲೋಸ್ ಮಿಖೈಲಿಸ್ ಅವರನ್ನು ಭೇಟಿಯಾದರು.ಗ್ರೀಸ್ನ ಅಥೆನ್ಸ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
August 25th, 09:30 pm
ಸಂಭ್ರಮದ ವಾತಾವರಣ, ಹಬ್ಬದ ಉತ್ಸಾಹ ಇದ್ದಾಗ, ಥಟ್ಟನೆ ಯಾರೊಬ್ಬರೂ ತಮ್ಮ ಕುಟುಂಬ ಸದಸ್ಯರ ನಡುವೆ ಇರಲು ಬಯಸುತ್ತಾರೆ. ನಾನು ಕೂಡ ಇಂದು ನನ್ನ ಕುಟುಂಬ ಸದಸ್ಯರ ನಡುವೆ ಬಂದಿದ್ದೇನೆ. ಇದು ಶ್ರಾವಣ ಮಾಸ. ಒಂದು ರೀತಿಯಲ್ಲಿ ಶಿವನ ತಿಂಗಳು ಎಂದು ಪರಿಗಣಿಸಲಾಗಿದೆ, ಮತ್ತು ನಮ್ಮ ದೇಶವು ಈ ಪವಿತ್ರ ತಿಂಗಳಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಚಂದ್ರನ ಕತ್ತಲ ವಲಯವಾದ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ, ಭಾರತ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದೆ. ಪ್ರಪಂಚದಾದ್ಯಂತ ಅಭಿನಂದನಾ ಸಂದೇಶಗಳು ಹರಿದು ಬರುತ್ತಿವೆ. ಜನರು ತಮ್ಮ ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದಾರೆ. ಜನರು ನಿಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ, ಹೌದಲ್ಲವೇ? ನೀವು ಸಹ ಅನೇಕ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದೀರಿ, ಅಲ್ಲವೇ? ಪ್ರತಿಯೊಬ್ಬ ಭಾರತೀಯನಿಗೂ ಅಭಿನಂದನೆಗಳು ಹರಿದುಬರುತ್ತಿವೆ. ಇಡೀ ಸಾಮಾಜಿಕ ಮಾಧ್ಯಮವು ಅಭಿನಂದನಾ ಸಂದೇಶಗಳಿಂದ ತುಂಬಿ ಹೋಗಿದೆ. ಯಶಸ್ಸು ತುಂಬಾ ಮಹತ್ವದ್ದಾಗಿದ್ದಾಗ, ಆ ಯಶಸ್ಸಿನ ಉತ್ಸಾಹವು ಎಲ್ಲೆಡೆ ಸಮಾನವಾಗಿರುತ್ತದೆ. ನೀವು ವಿಶ್ವದ ಯಾವ ಮೂಲೆಯಲ್ಲಾದರೂ ವಾಸಿಸಬಹುದು, ಆದರೆ ಭಾರತವು ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ ಎಂದು ನಿಮ್ಮ ಮುಖವೇ ನನಗೆ ಹೇಳುತ್ತಿದೆ. ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಹೃದಯದಲ್ಲಿ ಮಿಡಿಯುತ್ತದೆ, ಭಾರತ ನಿಮ್ಮ ಮನದಲ್ಲಿ ಮಿಡಿಯುತ್ತದೆ. ಇಂದು, ನಾನು ನಿಮ್ಮೆಲ್ಲರ ನಡುವೆ ಗ್ರೀಸ್ನಲ್ಲಿದ್ದೇನೆ, ಮತ್ತೊಮ್ಮೆ, ಚಂದ್ರಯಾನದ ಅದ್ಭುತ ಯಶಸ್ಸಿಗಾಗಿ ನಾನು ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಅಥೆನ್ಸ್ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನಮಂತ್ರಿ ಅವರ ಸಂವಾದ
August 25th, 09:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಆಗಸ್ಟ್ 25ರಂದು ಅಥೆನ್ಸ್ ನ ಅಥೆನ್ಸ್ ಕನ್ಸರ್ವೇಟರಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಿದರು.ಗ್ರೀಸ್ ನ ಪ್ರಧಾನಮಂತ್ರಿಯವರು ಆಯೋಜಿಸಿದ್ದ ವ್ಯಾಪಾರ ಭೋಜನಕೂಟದಲ್ಲಿ ಸಂವಾದ ನಿರತ ಪ್ರಧಾನಮಂತ್ರಿ
August 25th, 08:33 pm
ಆಗಸ್ಟ್ 25 , 2023 ರಂದು ಅಥೆನ್ಸ್ ನಲ್ಲಿ ಗ್ರೀಸ್ ನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್ ಆಯೋಜಿಸಿದ್ದ ವ್ಯಾಪಾರ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಂಡರು.ಗ್ರೀಸ್ ಪ್ರಧಾನ ಮಂತ್ರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ
August 25th, 05:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 25 ರಂದು ಅಥೆನ್ಸ್ನಲ್ಲಿ ಗ್ರೀಸ್ನ ಪ್ರಧಾನ ಮಂತ್ರಿ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್.‘ಅಜ್ಞಾತ ಸೈನಿಕನ ಸಮಾಧಿ’ಗೆ ಗೌರವ ಸಲ್ಲಿಸಿದ ಪ್ರಧಾನಿ
August 25th, 03:53 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗ್ರೀಸ್ ರಾಜಧಾನಿ ಅಥೆನ್ಸ್ನಲ್ಲಿರುವ ‘ಅಜ್ಞಾತ ಸೈನಿಕನ ಸಮಾಧಿ’ಗೆ ಗೌರವ ಸಲ್ಲಿಸಿದರು.ಪ್ರಧಾನಮಂತ್ರಿ ಅವರಿಗೆ ಗ್ರೀಸ್ ಅಧ್ಯಕ್ಷರಿಂದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ಪ್ರಶಸ್ತಿ ಪ್ರದಾನ
August 25th, 03:04 pm
ಗ್ರೀಸ್ ಅಧ್ಯಕ್ಷೆ ಕ್ಯಾಟರಿನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ಪ್ರಶಸ್ತಿ ಪ್ರದಾನ ಮಾಡಿದರು.ಗ್ರೀಸ್ ಪ್ರಧಾನ ಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ
August 25th, 02:45 pm
ಮೊದಲನೆಯದಾಗಿ, ಗ್ರೀಸ್ ನಲ್ಲಿ ಕಾಡ್ಗಿಚ್ಚಿನ ದುರಂತ ಘಟನೆಗಳಲ್ಲಿ ಜೀವಹಾನಿಗಾಗಿ ಭಾರತದ ಎಲ್ಲಾ ಜನರ ಪರವಾಗಿ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.PM Modi arrives in Greece
August 25th, 10:57 am
PM Modi arrived at the Athens International Airport, Greece. During his visit cooperation in perse sectors such as trade and investment, defence, and cultural and people-to-people contacts will be facilitated between the two countries.