ಈಜಿಪ್ಟ್ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
June 25th, 08:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ ನ ಗೌರವಾನ್ವಿತ ಅಧ್ಯಕ್ಷ ಶ್ರೀ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಅಲ್-ಇತ್ತಿಹಾದಿಯಾ ಅರಮನೆಯಲ್ಲಿ ಬರಮಾಡಿಕೊಂಡರು.ಪ್ರಧಾನಮಂತ್ರಿ ಅವರಿಗೆ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಪದಾನ ಮಾಡಿದರು
June 25th, 08:29 pm
25 ಜೂನ್ 2023 ರಂದು ಕೈರೋದ ಅರಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ ನ ಅಧ್ಯಕ್ಷ ಘನತೆವೆತ್ತ ಶ್ರೀ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ನೈಲ್’ ಪ್ರದಾನಿಸಿ ಗೌರವಿಸಿದರು.ಹೆಲಿಯೋಪೊಲಿಸ್ ಯುದ್ಧ ಸ್ಮಾರಕಕ್ಕೆ ಪ್ರಧಾನಮಂತ್ರಿ ಅವರ ಭೇಟಿ
June 25th, 04:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಪ್ಟ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಕೈರೋದಲ್ಲಿನ ಹೆಲಿಯೋಪೊಲಿಸ್ ಕಾಮನ್ ವೆಲ್ತ್ ಯುದ್ಧ ಸಮಾಧಿ ಸ್ಮಶಾನಕ್ಕೆ ಭೇಟಿ ನೀಡಿದರು.ಅಲ್-ಹಕೀಮ್ ಮಸೀದಿಗೆ ಪ್ರಧಾನಮಂತ್ರಿ ಅವರ ಭೇಟಿ
June 25th, 04:04 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಪ್ಟ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಕೈರೋದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದರು.ಹಸನ್ ಅಲ್ಲಂ ಹೋಲ್ಡಿಂಗ್ ಕಂಪನಿಯ ಸಿಇಒ ಶ್ರೀ ಹಸನ್ ಅಲ್ಲಂ ಅವರನ್ನು ಪ್ರಧಾನಮಂತ್ರಿಯವರು ಭೇಟಿ ಮಾಡಿದರು
June 25th, 05:22 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಜೂನ್ 2023 ರಂದು ಕೈರೋದಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಈಜಿಪ್ಟ್ನ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಹಾಸನ ಅಲ್ಲಂ ಹೋಲ್ಡಿಂಗ್ ಕಂಪನಿಯ ಸಿಇಒ ಶ್ರೀ ಹಸನ್ ಅಲ್ಲಂ ಅವರನ್ನು ಭೇಟಿ ಮಾಡಿದರು.ಈಜಿಪ್ಟ್ ನಲ್ಲಿ ಪ್ರಮುಖ ಯೋಗ ಶಿಕ್ಷಕರಾಗಿರುವ ಶ್ರೀಮತಿ ರೀಮಾ ಜಾಕಬ್ ಮತ್ತು ಶ್ರೀಮತಿ ನಡಾ ಅದೆಲ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
June 25th, 05:21 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಬ್ಬರು ಪ್ರಮುಖ ಯೋಗ ಶಿಕ್ಷಕರಾದ ಶ್ರೀಮತಿ ರೀಮಾ ಜಾಕಬ್ ಮತ್ತು ಶ್ರೀಮತಿ ನಡಾ ಅದೆಲ್ ಅವರನ್ನು ಕೈರೋದಲ್ಲಿ 2023 ರ ಜೂನ್ 24 ರಂದು ಭೇಟಿ ಮಾಡಿದರು.ಈಜಿಪ್ಟಿನ ಖ್ಯಾತ ಲೇಖಕ ಮತ್ತು ಪೆಟ್ರೋಲಿಯಂ ತಂತ್ರಜ್ಞ ಶ್ರೀ ತಾರೆಕ್ ಹೆಗ್ಗಿ ಅವರನ್ನು ಪ್ರಧಾನಮಂತ್ರಿಯವರು ಭೇಟಿ ಮಾಡಿದರು
June 25th, 05:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಜೂನ್ 2023 ರಂದು ಕೈರೋದಲ್ಲಿ ಖ್ಯಾತ ಈಜಿಪ್ಟ್ ಲೇಖಕ ಮತ್ತು ಪೆಟ್ರೋಲಿಯಂ ತಂತ್ರಜ್ಞರಾದ ಶ್ರೀ ತಾರೆಕ್ ಹೆಗ್ಗಿ ಅವರನ್ನು ಭೇಟಿ ಮಾಡಿದರು.ಈಜಿಪ್ಟ್ ನ ಗ್ರ್ಯಾಂಡ್ ಮುಫ್ತಿ ಅವರನ್ನು ಭೇಟಿ ಮಾಡಿದ ಪ್ರಧಾನಿ
June 25th, 05:18 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಈಜಿಪ್ಟ್ ರಾಷ್ಟ್ರದ ಪ್ರವಾಸ ವೇಳೆ ಈಜಿಪ್ಟ್ ನ ಗ್ರ್ಯಾಂಡ್ ಮುಫ್ತಿ, ಗೌರವಾನ್ವಿತ ಡಾ.ಶ್ವಾಕಿ ಇಬ್ರಾಹಿಂ ಅಲಂ ಅವರನ್ನು 2023ರ ಜೂನ್ 24ರಂದು ಭೇಟಿಯಾಗಿದ್ದರು.ಈಜಿಪ್ಟ್ ನಲ್ಲಿ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
June 25th, 05:16 am
ಈಜಿಪ್ಟ್ ಪ್ರವಾಸ ಸಂದರ್ಭದಲ್ಲಿ ಅಲ್ಲಿನ ಕೈರೋದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಜೂನ್ 24 ರಂದು ಸಂವಾದ ನಡೆಸಿದರು.ಈಜಿಫ್ಟ್ ನ ಪ್ರಧಾನಮಂತ್ರಿ ನೇತೃತ್ವದ ಈಜಿಫ್ಟ್ ಸಂಪುಟದ “ಭಾರತೀಯ ಘಟಕ’ವನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
June 25th, 05:13 am
ಕೈರೋ ರಾಷ್ಟ್ರ ಪ್ರವಾಸಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಫ್ಟ್‌ನ ಪ್ರಧಾನಮಂತ್ರಿ ನೇತೃತ್ವದ ಈಜಿಫ್ಟ್ ಸಂಪುಟದ “ಭಾರತೀಯ ಘಟಕ’ವನ್ನು 2023ರ ಜೂನ್ 24ರಂದು ಭೇಟಿ ಮಾಡಿದ್ದರು. 2023ರ ಗಣರಾಜ್ಯೋತ್ಸವಕ್ಕೆ ಭಾರತಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಈಜಿಫ್ಟ್ ಅಧ್ಯಕ್ಷ ಘನತೆವೆತ್ತ ಶ್ರೀ ಅಬ್ದೆಲ್ ಫತ್ಹಾ ಇಲ್ ಸಿಸಿ ಅವರು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ನಂತರ ಈ ಭಾರತೀಯ ಘಟಕವನ್ನು ಸ್ಥಾಪಿಸಿದ್ದರು. ಈ ಭಾರತೀಯ ಘಟಕದ ನೇತೃತ್ವವನ್ನು ಈಜಿಫ್ಟ್ ಪ್ರಧಾನಮಂತ್ರಿ ಗೌರವಾನ್ವಿತ ಮುಸ್ತಾಫಾ ಮಡ್ ಬೌಲಿ ವಹಿಸಿದ್ದು, ಅದರಲ್ಲಿ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳಿದ್ದಾರೆ.Prime Minister Modi arrives in Cairo, Egypt
June 24th, 06:30 pm
Prime Minister Narendra Modi arrived in Cairo, Egypt a short while ago. In a special gesture he was received by the Prime Minister of Egypt at the airport. PM Modi was given a ceremonial welcome upon arrival.ಅಮೆರಿಕ ಮತ್ತು ಈಜಿಪ್ಟ್ ಭೇಟಿಗೆ ಮುನ್ನ ಪ್ರಧಾನಿ ಅವರ ನಿರ್ಗಮನ ಹೇಳಿಕೆ
June 20th, 07:00 am
ನಾನು ನ್ಯೂಯಾರ್ಕ್‌ನಿಂದ ನನ್ನ ಪ್ರವಾಸ ಆರಂಭಿಸುತ್ತೇನೆ. ಅಲ್ಲಿ ನಾನು ಜೂನ್ 21ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತೇನೆ. 2014 ಡಿಸೆಂಬರ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಗುರುತಿಸುವ ಭಾರತದ ಪ್ರಸ್ತಾಪವನ್ನು ಬೆಂಬಲಿಸಿದ ಸ್ಥಳದಲ್ಲೇ ನಾನು ಈ ವಿಶೇಷ ಆಚರಣೆಯನ್ನು ಎದುರು ನೋಡುತ್ತಿದ್ದೇನೆ.